ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ತಡೆಗೆ ಚುನಾವಣಾ ಆಯೋಗ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ.
ಎಲ್ಲಾ ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ಗೌರಿಬಿದನೂರು ಬಳಿ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಚೆಕ್ ಪೋಸ್ಟ್ ನಲ್ಲಿ ಇದ್ದ ಸಿಬ್ಬಂದಿಗೆ ಅಚ್ಚರಿಯಾಗಿದೆ.
ಚುನಾವಣಾ ಸಿಬ್ಬಂದಿ ರಾಜ್ಯ ಹೆದ್ದಾರಿಯಲ್ಲಿ ಬಂದ ಕಾರು ತಡೆದು ಪರಿಶೀಲನೆ ನಡೆಸಲು ಮುಂದಾದಾಗ, ಕಾರಿನಲ್ಲಿ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಇರುವುದು ಕಂಡುಬಂದಿದೆ. ಕಾರು ನಿಲ್ಲಿಸಿದ ಕೂಡಲೇ ಕಾರಿನಿಂದ ಇಳಿದ ಶಿವಣ್ಣ ಅವರನ್ನು ಕಂಡು ಚೆಕ್ ಪೋಸ್ಟ್ ಅಧಿಕಾರಿಗಳು ಅಚ್ಚರಿಯಾಗಿದ್ದಾರೆ.
ಬಳಿಕ ಕಾರು ಪರಿಶೀಲನೆ ನಡೆಸಿದ್ದಾರೆ. ಬಿಗ್ ಸ್ಟಾರ್ ಆಗಿದ್ದರೂ ಕೂಡ ಶಿವಣ್ಣ ಜನಸಾಮಾನ್ಯರಂತೆ ಚುನಾವಣಾ ಸಿಬ್ಬಂದಿ ಕಾರು ತಪಾಸಣೆ ಮಾಡಲು ಸಹಕರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ. ಶಿವಣ್ಣ ಅವರನ್ನು ಕಂಡು ಖುಷಿಯಾದ ಚುನಾವಣಾ ಸಿಬ್ಬಂದಿ ಅವರೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಶಿವಣ್ಣ ಚಿತ್ರೀಕರಣಕ್ಕಾಗಿ ತೆರಳಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಶಿವಣ್ಣ ಪ್ರಚಾರ ನಡೆಸಿದ್ದರು. ಈ ಬಾರಿ ಅವರು ಚುನಾವಣೆ ಪ್ರಚಾರದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿರುವ ಘಟನೆ ಹಾವೇರಿಯ ಭಗತ್ ಪಿಯುಸಿ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷಾ ಹಾಲ್ ನಲ್ಲಿ ವಿದ್ಯಾರ್ಥಿಗಳು ಕಾಪಿ ಹೊಡೆಯದಂತೆ ಕಾವಲುಗಾರನಾಗಿ ಸಿಸಿಟಿವಿ ಕ್ಯಾಮೆರಾ ನೋಡಿದ್ದೆವೆ. ಆದರೆ ಹಾವೇರಿಯ ನಗರದ ದನದ ಮಾರುಕಟ್ಟೆಯ ಎದುರಿಗಿರುವ ಭಗತ್ ಪಿಯುಸಿ ಕಾಲೇಜಿನಲ್ಲಿ ಮಕ್ಕಳು ಕಾಪಿ ಮಾಡಬಾರದು ಎಂದು ತಲೆಗೆ ಡಬ್ಬ ಕಟ್ಟಿ ಪರೀಕ್ಷೆ ಬರೆಸಿದ್ದಾರೆ. ಗುರುವಾರ ನಡೆದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ಕಟ್ಟಿ…
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಮಾತನಾಡಿ, ರಾಜ್ಯದಲ್ಲಿ ಹೊಸ ಮುಖಗಳಿಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ ಎಂದರು. 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ, 16 ಎಸ್ಸಿ, ಎಸ್ಟಿ ಅಭ್ಯರ್ಥಿಗಳು, 32 ಒಬಿಸಿ, 9…
ಜನ ಸೇವೆಗೆಂದು ತೆರೆಯುವ ಆಸ್ಪತ್ರೆಗಳು ಈಗ ತೀರಾ ವಿರಳ. ಯಾವುದಾದರು ಕಾಯಿಲೆ ಎಂದು ಖಾಸಗಿ ಆಸ್ಪತ್ರೆಗೆ ಸೇರಿದರೆ ರೋಗಿಯು, ರೋಗದಿಂದಲ್ಲ, ಆಸ್ಪತೆರ್ಗಳು ನೀಡುವ ಬಿಲ್ಲಿನಿಂದ ಸಾಯುತ್ತಾನೆ. ಇನ್ನು ಆಸ್ಪತ್ರೆ ಯಾವ ರೀತಿ ವ್ಯವಹಾರ ಮಾಡುತ್ತಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮಹದಾಯಿ ವಿವಾದ ಬಗೆ ಹರಿಸಲು ಜನವರಿ 25ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸಲು ಕರೆ ನೀಡಿದರೆ. ಈ ನಡುವೆ ಜ.30 ರಂದು ಸಾರಿಗೆ ಬಂದ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ವಿಯೆಟ್ನಾಂನ ವಿಯರ್ ಜೆಟ್ ಸದ್ಯದಲ್ಲೇ ಭಾರತಕ್ಕೂ ಬರುತ್ತಿದೆ. ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿದೆ. ಈ ವಿವಾದಾತ್ಮಕ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆ ವಿಮಾನ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಬಿಕಿನಿ ಸುಂದರಿಯರು ಭಾರತಕ್ಕೂ ಬರುತ್ತಿದ್ದಾರೆ. ಬಿಕಿನಿ ಸುಂದರಿಯರು… ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸುತ್ತಿರುವುದು ಪ್ರಯಾಣಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.ವಾರದಲ್ಲಿ ನಾಲ್ಕು ದಿನಗಳ ಕಾಲ ಈ ವಿಮಾನ ಹಾರಾಟ…
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಆಸ್ತಿಗಾಗಿ 21ವರ್ಷದ ಯುವತಿಗೆ 10 ವರ್ಷದ ಬಾಲಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದೆ. ಇಲ್ಲಿನ ಪಿಂದಿ ಭಟಿಯಾನ್ ನಗರದ ಭಾಂಗ್ಸಿಕ್ ಗ್ರಾಮದಲ್ಲಿ ಇಂತಹದ್ದೊಂದು ಮದುವೆ ನಡೆದಿದೆ.