ಸುದ್ದಿ

ಅಮ್ಮ ನೀನು ಎಲ್ಲಿರುವೆ.?ನಿನ್ನ ಕಂದ ಜೀವಂತವಾಗಿರುವನು..ನನ್ನ ಬಳಿಗೆ ಬಾ..ಮುಂದೆ ಓದಿ ಆ ತಾಯಿಗೆ ತಲಪುವವರೆಗೂ ಶೇರ್ ಮಾಡಿ…

247

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ನಾವು ಮನುಷ್ಯರು ಇಷ್ಟೊಂದು ಕ್ರೂರಿಗಳಾಗಿ ಬಿಟ್ಟಿದ್ದೇವೆಯೇ.?ಯಾಕಂದ್ರೆ ಇಲ್ಲೊಬ್ಬ ಮಹಾ ತಾಯಿ ತನ್ನ ಹಸುಗೂಸು ಕಂದಮ್ಮನನ್ನು, ಕರುಣೆಯಿಲ್ಲದೆ  ಜೀವಂತವಾಗಿಯೇ ಮಣ್ಣಲ್ಲಿ ಮುಚ್ಚಿ ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಮ್ಮಲ್ಲಿ ಎಷ್ಟೋ ಜನಕ್ಕೆ ಮಕ್ಕಳಿಲ್ಲದೆ, ಮಕ್ಕಳಿಗಾಗಿ ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ.ಆದರೆ ಸಂತಾನ ಭಾಗ್ಯ ಇರುವ ಕೆಲವರು ಹೀಗೆ ಮಕ್ಕಳನ್ನು ಮಣ್ಣಲ್ಲಿ ಹುತು ಬಿಡುವುದೋ, ಎಲ್ಲೋ ಬಿಸಾಡಿ ಹೋಗುವುದೋ ಮಾಡುತ್ತಾರೆ.

ಅಮ್ಮ ನಿನಗೆ ಕರುಣೆನೇ ಇಲ್ವ..?

ಆಗತಾನೆ ಕಣ್ಬಿಟ್ಟ ನನಗೆ ನಿನ್ನ ನೋಡೋ ಆಸೆ ,
ನಿನ್ನ ಬೆಚ್ಚಗಿನ ಮಡಿಲಲ್ಲಿ ಮಲಗಿ ನಿದ್ರಿಸೋ ಆಸೆ ಆದ್ರೆ ನೀನ್ಯಾಕಮ್ಮ ನನ್ನನ್ನು ಮಣ್ಣಿನೊಳಗೆ ಮಲಗಿಸಿದೆ ..ಹೊಟ್ಟೆಯಲ್ಲಿದ್ದಾಗ ನಿಂಗೆ ಭಾರ ಅನಿಸದ ನಾನು ಭೂಮಿಗೆ ಬರ್ತಿದಂತೆ ಭಾರ ಆದ್ನ ಅಮ್ಮಾ ??
ಉಸಿರುಗಟ್ಟೋ ಮಣ್ಣಿನೊಳಗೂ ನಿನ್ನನ್ನ ನೋಡ್ಬೇಕು , ನಿನ್ನ ಮಡಿಲು ಸೇರಬೇಕು , ಈ ಪ್ರಪಂಚಕ್ಕೆ ಕಾಲಿಡ್ಬೇಕು ಅಂತ ಪರಿತಪಿಸಿ ಕೂಗಾಡಿ ಕೊನೆಗೂ ಸಾವನ್ನ ಜಯಿಸಿದ್ದೀನಿ ಅಮ್ಮಾ ??

ಆ ಹೃದಯವಿದ್ರಾವಕ ವಿಡಿಯೋ ನೋಡಿ ಕಣ್ಣೀರು ಬರ್ದೇ ಇರಲ್ಲ…

ನೀನೇ ಹೆತ್ತ ಕಂದಮ್ಮನ ಹಿಡಿ ಹಿಡಿ ಮಣ್ಣಾಕುವಾಗ ನಿಂಗೆ ಕಿಂಚಿತ್ತೂ ಪಶ್ಚಾತ್ತಾಪ ಆಗ್ಲೇ ಇಲ್ವಾ..?

ಹೆತ್ತವಳ ಮಡಿಲಲ್ಲಿ ಇರಬೇಕಿದ್ದ ನಾನು ಇನ್ಯಾರದ್ದೋ ಮಾತೃಹೃದಯದ ಮಡಿಲು ಸೇರಿದ್ದೀನಿ…
ಈ ಘಟನೆ ಚಿಂತಾಮಣಿ ತಾಲೂಕಿನ ಚಿಕ್ಕದಾಸನಹಳ್ಳಿಯಲ್ಲಿ ನಡೆದಿದೆ. ಆಗತಾನೇ ಜನಿಸಿದ ಜೀವಂತ ಗಂಡು ಮಗುವನ್ನು ಕ್ರೂರ ಹೃದಯದ ಪಾಪಿಗಳು ಹೂತು ಹಾಕಿ ಹೋಗಿದ್ರು.

ಆ ಮಗು ಜೀವಂತವಾಗಿದೆ…

ಮಗುವಿನ ಕರುಳಬಳ್ಳಿಯೂ ಸಹ ಹಾಗೇ ಇದೆ. ಆದ್ರೆ  ಪವಾಡ ಸದೃಶ್ಯ‌‌ರೀತಿಯಲ್ಲಿ ಮಗು ಜೀವಂತವಾಗಿದೆ. ಮಗುವಿನ ಚೀರಾಟವನ್ನು ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿ ಕುರುಬೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಸದ್ಯ ಮಗು ಸ್ಥಳೀಯ ಆಶಾ ಕಾರ್ಯಕರ್ತೆ ರಾಧ , ಮತ್ತು ಆಸ್ಪತ್ರೆಯ ವೈದ್ಯೆ ಪೂರ್ಣಿಮಾ ಅವರ ಹಾರೈಕೆಯಲ್ಲಿ ಬೆಳೆಯುತ್ತಿದೆ..

ಸ್ನೇಹಿತರೇ ಆ ತಾಯಿಗೆ ತಲಪುವವರೆಗೂ, ನಿಮ್ಮ ಕೈಲಾದಷ್ಟು ಶೇರ್ ಮಾಡಿ..ಆಕೆಗೆ ಕರುಣೆ ಏನಾದ್ರೂ ಇದ್ರೆ, ಬಂದು ಆ ಮಗುವನ್ನು ತೆಗೆದುಕೊಂಡು ಸಾಕಿ ದೊಡ್ಡವನಾಗಿ ಮಾಡಲಿ..ಇದು ನಿಮ್ಮಲ್ಲಿ ನಾವು ಮಾಡುವ ವಿನಂತಿ…

ಮೂಲ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    SSLC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ನೇಮಕಾತಿ, 20 ಸಾವಿರ ರೂ. ವೇತನದ ಉದ್ಯೋಗಾವಕಾಶ,..!!

    ರೈಲ್ವೆ ಇಲಾಖೆಯಲ್ಲಿನ ಸಹಾಯಕ ಲೊಕೊ ಪೈಲಟ್ (ALP) ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 306 ಹುದ್ದೆಗಳು ಖಾಲಿ ಇದ್ದು, ಆಸಕ್ತರು ನವೆಂಬರ್ 11ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ರೈಲ್ವೆ ನೇಮಕಾತಿ ಸೆಲ್ (ಆರ್‌ಆರ್‌ಸಿ) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ. ಒಟ್ಟು ಹುದ್ದೆಗಳ ಸಂಖ್ಯೆ – 306ಸಹಾಯಕ ಲೊಕೊ ಪೈಲಟ್ – 85 ಹುದ್ದೆಗಳುತಂತ್ರಜ್ಞ (ಟೆಕ್ನಿಷಿಯನ್) – 221 ಹುದ್ದೆಗಳು ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ…

  • ಸಿನಿಮಾ

    ಕನ್ನಡ ಚಿತ್ರಗಳ ಹಿಂದಿನ ಎಲ್ಲಾ ದಾಖಲೆಗಳು ದೂಳಿಪಟ!ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

    ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…

  • ಸುದ್ದಿ

    ಕೇವಲ 13 ವಯಸ್ಸಿನಲ್ಲೆ 135 ಪುಸ್ತಕ ಬರೆದು 4 ವಿಶ್ವದಾಖಲೆ ನಿರ್ಮಿಸಿದ ಪೋರ…..!

    ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ…

  • ಸಿನಿಮಾ

    ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಚಿತ್ರದ ಆಫರ್ ತಿರಸ್ಕರಿಸಿದ ರಿಯಲ್ ಸ್ಟಾರ್?ಈ ಸುದ್ದಿ ನೋಡಿ

    ತಮ್ಮ ಪ್ರಜಾಕೀಯ ಪಕ್ಷದ ಮೂಲಕ ಲೋಕಸಭಾ ಚುನಾವಣಾ ಸಮರಕ್ಕೆ ಸಿದ್ಧರಾಗಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ಚಿತ್ರದ ಆಫರ್ ಗೆ ನೋ ಎಂದು ಹೇಳಿದ್ದಾರೆ. ಹೌದು.. ಪ್ರಸ್ತುತ ಪ್ರಜಾಕೀಯದಲ್ಲಿ ಬಿಸಿಯಾಗಿರುವ ನಟ ಉಪೇಂದ್ರ ಚಿತ್ರೀಕರಣಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದು, ಇದೇ ಕಾರಣಕ್ಕೆ ತಮ್ಮದೇ ಚಿತ್ರಗಳನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪ್ರಜಾಕೀಯದತ್ತ ಗಮನ ಕೇಂದ್ರೀಕರಿಸುವ ನಟ ಉಪೇಂದ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ನೂತನ…

  • ಉಪಯುಕ್ತ ಮಾಹಿತಿ

    ಡ್ರೈವಿಂಗ್ ಲೈಸೆನ್ಸ್ ರಿನಿವಲ್ ಅಗಲಿ ಅಡ್ರೆಸ್ ಚೇಂಜ್ ಆಗಲಿ ಈಗ ತುಂಬಾ ಸುಲಭ!ತಿಳಿಯಲು ಈ ಮಾಹಿತಿ ನೋಡಿ..

    ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….

  • ಸುದ್ದಿ

    ಅವನ್ಯಾವನೋ ಯಶ್ ಅಂತೆ.. ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ? ಎಂದು HDKಯಿಂದ ಧಮಕಿ..!

    ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ. ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ. ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ…