ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಂತೂ ಜಿಮ್’ಗೆ ಹೋಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸುವುದು ಸಾಮಾನ್ಯ. ಇದರಲ್ಲಿ 6 ಪ್ಯಾಕ್ ,8 ಪ್ಯಾಕ್ ಹೀಗೆ ಏನೇನೋ ಇದೆ. ಈ ವಿಷಯ ಯಾಕೆ ಈಗ ಅಂತೀರಾ! ವಿಷಯ ಇದೆ. ಏನು ಗೊತ್ತಾ? ಏಳು ವರ್ಷದ ಪುಟ್ಟ ಬಾಲಕನೊಬ್ಬ ತನನ ಚಿಕ್ಕ ವಯಸ್ಸಿನಲ್ಲೇ ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ.
ಇದೇನಪ್ಪ ಏಳು ವರ್ಷದ ಪೋರ 8 ಪ್ಯಾಕ್ ಮಾಡೋದು ಅಂದ್ರೆ ಏನು ಸುಮ್ನೆ ತಮಾಷೆ ವಿಚಾರ ಅಲ್ಲ ಆದ್ರೂ ಈ ಪೋರ ಇಂತ ದಾಖಲೆ ಮಾಡಿ ವಿಶ್ವದ ಗಮನ ಸೆಳೆದ ಪುಟ್ಟ ಪೋರ ಯಾರು ಅಂತೀರಾ ಇಲ್ಲಿದೆ ನೋಡಿ.
ಹೌದು ನಿಜಾವಾಗಿ ಅಶ್ಚರ್ಯ ಮೂಡಿಸುವಂತಹದ್ದು, ಏಳು ವರ್ಷದ ಚೀನಿ ಹುಡುಗ ತನ್ನ ದೇಹ ಸ್ವರೂಪ ಮತ್ತು ಎಂಟು-ಪ್ಯಾಕ ಗಳಿಸಿ ಎಲ್ಲರ ಗಮನ ಎಳೆದು ಸಮಾಜಿಕ ಜಾಲತಾಣಗಳಲ್ಲಿ ಹಿರೋ ಆಗಿದ್ದಾನೆ.
ಈ ಬಾಲಕನ 8 ಪ್ಯಾಕ್ ಮಾಡಿದ್ದು ಹೇಗೆ ಗೊತ್ತಾ ?
ಈ ಬಾಲಕ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್ಝೌ ನಿವಾಸಿಯಾಗಿದ್ದಾನೆ. ವ್ಯಾಯಾಮಶಾಲೆಯಲ್ಲಿ 2 ವರ್ಷಗಳವರೆಗೆ ಜಿಮ್ನಾಸ್ಟಿಕ್ ತರಬೇತಿಯನ್ನು ಪಡೆದಿದ್ದಾನೆ. ಈ ಬಾಲಕನ ಹೆಸರು ಚೆನ್ ಯಿ ಆಗಿದೆ.
ಒಂದು ಖಾಸಗಿ ಚಾನಲ್ ವರದಿಯ ಪ್ರಕಾರ, ಚೆನ್ ಯಿ ಅವರ ಚಿತ್ರಗಳನ್ನು ಜೂಲೈ 2 ರಂದು ಜಿಮ್ನಾಸ್ಟಿಕ್ ಆಟದ ಸಂದರ್ಭದಲ್ಲಿ ಅವರ ದೈನಂದಿನ ಬಟ್ಟೆಗೆ ಬದಲಾಗುತ್ತಿರುವಾಗ ತೆಗೆದಿದ್ದು ಎಂದು ವರದಿಯಾಗಿದೆ.
ಇವನ 8 ಪ್ಯಾಕ್ ದೇಹವನ್ನು ನೋಡಿದ ಜನರು ಅಚ್ಚರಿಗೊಂದಿದ್ದಾರೆ. ಯಾಕೆಂದ್ರೆ 7 ವರ್ಷದ ಹುಡುಗರು ಆಟ ಪಾಟಗಳಲ್ಲಿ ಕಾಲ ಕಳೆಯುವುದು ಹೆಚ್ಚು. ಹಾಗಾಗಿ ಈ ಪುಟ್ಟ ಬಾಲಕನ ದೇಹವನ್ನು ಹುರಿಗಳಿಸಿರುವ ಸಾಧನೆ ಅಚ್ಚರಿ ತರವಂತದ್ದೆ ಆಗಿದೆ.
ಈಗ ಈ ಪುಟ್ಟ ಬಾಲಕನ ಸಾಧನೆಯನ್ನು ಮೆಚ್ಚಿ ‘ultimate muscle boy’ ಎಂಬ ಬಿರುದನ್ನು ಕೊಟ್ಟಿದ್ದಾರೆ.
ಪದಕ ವೀರ ಈ ಬಾಲಕ!
ಕೆಲವೊಂದು ವರದಿಗಳ ಪ್ರಕಾರ, 19 ನೇ ಹ್ಯಾಂಗ್ಝೌ ಸಿಟಿ ಸ್ಪೋರ್ಟ್ಸ್ ಗೇಮ್ಸ್ ನಲ್ಲಿ ಆರು ಚಿನ್ನದ ಪದಕಗಳನ್ನು ಮತ್ತು ಒಂದು ಬೆಳ್ಳಿ ಪದಕವನ್ನು ಒಳಗೊಂಡಂತೆ ಎಲ್ಲ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಈ ಹೇಳಿಕೆ ಬರಬಾರದಿತ್ತು. ಅವರು ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತ, ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಪಕ್ಷ ಹಾಗೂ ಆರ್.ಎಸ್.ಎಸ್ ಮತ್ತು ಭಜರಂಗದಳ ಸಂಘಟನೆಗಳು “ಉಗ್ರಗಾಮಿಗಳು” ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಜೊತೆಗೆ ತಾವು ಏನು ಕಡಿಮೆ ಇಲ್ಲ ಎನ್ನುವಂತೆ ದಿನೇಶ್ ಗುಂಡೂರಾವ್ ಅವರು ಬಿಜೆಪಿ ನಾಯಕರನ್ನು ‘ಜಿಹಾದಿಗಳು’ ಎಂದು ಕರೆದಿದ್ದಾರೆ.
ಚಿಕ್ಕಬಳ್ಳಾಪುರ: ಕಾಮುಕ ತಂದೆಯೊಬ್ಬ ಮದ್ಯದ ಅಮಲಿನಲ್ಲಿ ಸ್ವಂತ ಮಗಳ ಮೇಲೆಯೇ ಅತ್ಯಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ತಾಲೂಕಿನಲ್ಲಿ ಗುರುವಾರ ಘಟನೆ ನಡೆದಿದೆ. ತಂದೆಯ ಹೇಯ ಕೃತ್ಯದಿಂದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತನ್ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಿಂದ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ತಂದೆಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು…
ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ. ಅಲ್ಲದೆ, ಈ ಮಕ್ಕಳ ಹೋಂ ವರ್ಕ್ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ…
ವಿರಾಟ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿರೋ ಕಿಸ್ ಸಿನಿಮ ಬಿಡುಗಡೆಯಾಗಿದೆ.ತುಂಟ ತುಟಿಗಳ ಆಟೋಗ್ರಾಫ್ ಅಂತ ಟ್ಯಾಗ್ಲೈನ್ ಇಟ್ಕೊಂಡು ,ರಾಜ್ಯಾದ್ಯಂತ ಸಿನಿಪ್ರಿಯರಿಂದ ಮುತ್ತಿನ ಸುರಿಮಳೆನೇ ಪಡೆದುಕೊಳ್ತಿರೋ ಈ ಹೊಸ ಜೋಡಿಗೆ,ಸಾಥ್ ಕೊಡಲು ಬರ್ತಿದಾರೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸ್ಟಾರ್ ನಟ. ನರಾಚಿಯಿಂದ ಪ್ರೇಮಿಗಳತ್ತ ಪಯಣ ಬೆಳೆಸಿದ ನಮ್ಮ ರಾಕಿಂಗ್ ಸ್ಟಾರ್, ರಾಕಿಭಾಯ್ ಯಶ್ ಈ ಹೊಸ ಜೋಡಿಗೆ, ಇದೀಗ ರಾಕಿಂಗ್ ಸ್ಟಾರ್ ಯಶ್ ಸಾಥ್ ಕೊಡ್ತಿದ್ದಾರೆ. ಕೆಜಿಎಫ್ ಸೆಟ್ನಿಂದ ಡೈರೆಕ್ಟಾಗಿ ಕಿಸ್ ಜೋಡಿಯನ್ನ ನೋಡೋಕ್ಕೆ ಥಿಯೇಟರ್ಗೆ ಬರ್ತಿದ್ದಾರೆ. ಕಿಸ್..ಟೈಟಲ್ ಮತ್ತು…
ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ. ಮಧುಮೇಹ : ಮೆಂತ್ಯ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಇದು ಟೈಪ್ 1, ಟೈಪ್ 2 ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೊಪ್ಪು. ಕೊಲೆಸ್ಟ್ರಾಲ್ : ಮೆಂತ್ಯ ಸೊಪ್ಪು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ, ಲಿವರ್ ನಲ್ಲಿ ಕೊಬ್ಬಿನಂಶ ಹೆಚ್ಚು ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತದೆ. ಇದು ಒಳ್ಳೆಯ ಕೊಬ್ಬಿನಂಶ ಬಿಡುಗಡೆ ಮಾಡಲು…