News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಆರೋಗ್ಯ, ಜೀವನಶೈಲಿ

ಫುಡ್ ಪಾಯಿಸನ್’ಗೆ ಇಲ್ಲಿದೆ ಸುಲಭ ಪರಿಹಾರ..!ತಿಳಿಯಲು ಈ ಲೇಖನ ಓದಿ…

512

ತಿಂದ ಆಹಾರ ಸರಿಯಾಗ ಜೀರ್ಣವಾಗದೇ ವಿಷಮಯವಾಗುವುದನ್ನು ಫುಡ್ ಪಾಯಿಸನ್ ಎಂದು  ಕರೆಯಲಾಗುತ್ತದೆ.  ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು, ಕೀಟಾಣುಗಳು ಸೇರಿಕೊಂಡಿರುವ ಆಹಾರವನ್ನು ತಿಂದ್ರೆ ಅದು ಜೀರ್ಣವಾಗದೇ ಫುಡ್ ಪಾಯಿಸನ್ ಉಂಟಾಗುತ್ತದೆ.

 

ಫುಡ್ ಪಾಯಿಸನ್ ಉಂಟು ಮಾಡುವ ತೊಂದರೆಗಳು:-

ವಾಂತಿ, ಭೇದಿ, ಹೊಟ್ಟೆ ನೋವು ಉಂಟಾಗಿ, ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುತ್ತದೆ.

ಕಾರಣಗಳು:-

  • ನಮ್ಮ ಜೀವನ ಶೈಲಿಯೇ, ನಮ್ಮ ಈ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ.
  • ಅನಿಯಮಿತವಾಗಿ ಆಹಾರ ಸೇವಿಸುವುದು.
  • ರಸ್ತೆ ಬದಿಯ ತಿಂಡಿಗಳನ್ನು ತಿನ್ನುವುದು.
  • ಕುರುಕಲು ಪದಾರ್ಥಗಳನ್ನು ಮಿತಿಮೀರಿ ಸೇವಿಸುವುದು.

ಫುಡ್ ಪಾಯಿಸನ್ ಆಗದಂತೆ ತಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ…

  • ಅಡುಗೆ ಮಾಡುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ.
  • ಮಾಂಸದ ಅಡುಗೆಯನ್ನು ಮಾಡುವಾಗ ಶುಚಿತ್ವದ ಕಡೆ ಗಮನ ಕೊಡಿ.
  • ಅಡುಗೆ ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳಿ. ಅಡುಗೆ ಮನೆಯಲ್ಲಿ ಕಿಟಾಣುಗಳು ಇರದಂತೆ ನೋಡಿಕೊಳ್ಳಿ.
  • ತರಕಾರಿ ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ.
  • ಅಡುಗೆಗೆ ಬಳಸುವ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿರಿ.
  • ಭೇದಿ, ಹೊಟ್ಟೆ ನೋವಿನ ಸಮಸ್ಯೆ ಉಂಟಾದರೆ ಆಹಾರವನ್ನು ತಿನ್ನುವಾಗ ಸ್ಪೂನನ್ನು ಬಳಸಿ .
  • ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸೋಪು ಹಾಕಿ ತೊಳೆಯಿರಿ.
  •  ಆಹಾರವನ್ನು ಸಂಗ್ರಹಿಸಿಡುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ.
  • ಅಡುಗೆ ಉಳಿದಿದ್ದರೆ ಕೂಡಲೇ ಅದನ್ನು ಫ್ರಿಜ್‌ನಲ್ಲಿಡಿ, ಇಲ್ಲದಿದ್ದರೆ ಚೆನ್ನಾಗಿ ಬಿಸಿ ಮಾಡಿ.
  •  ಕಾಲಾವಧಿ ಮುಗಿದಿರುವ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ಬಳಸಬೇಡಿ.
  • ಹಳಸಿದ ಆಹಾರವನ್ನು ತಿನ್ನಲೇಬೇಡಿ.

ಫುಡ್ ಪಾಯಿಸನ್’ಗೆ ಪರಿಹಾರಗಳು:-

  • ಅತಿ ಹೆಚ್ಚು ನೀರನ್ನು ಸೇವಿಸಿ.
  • ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
  • ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ, ಸ್ವಲ್ಪ ಉಪ್ಪನ್ನು ಹಾಕಿ ಕುಡಿಯಿರಿ.
  • ಘನ ಆಹಾರವನ್ನು ಸೇವಿಸಬೇಡಿ.
  • ಆದಷ್ಟೂ ಗಂಜಿ ಮತ್ತು ಹಣ್ಣಿನ ರಸವನ್ನು ಸೇವಿಸಿ.ಇದರಿಂದ ನಿಮ್ಮ ದೇಹದಲ್ಲಿ ನೀರಿನಾಂಶ  ಜಾಸ್ತಿಯಾಗುತ್ತದೆ.
  • ಬ್ಲಾಕ್ ಟೀ ಕುಡಿಯಿರಿ.
  • ಒಂದು ಚಮಚ ಮೆಂತೆ ಪುಡಿಯನ್ನು ಒಂದು ಲೋಟ ನೀರು ಅಥವಾ ಮೊಸರಲ್ಲಿ ಮಿಕ್ಸ್ ಮಾಡಿ ಕುಡಿಯಿರಿ.
  • ದಾಳಿಂಬೆ ಸಿಪ್ಪೆಯ ಕಷಾಯ ಕುಡಿಯಿರಿ.
  • ದೇಹಕ್ಕೆ ನಿಶ್ಯಕ್ತಿ ಬರದಂತೆ ನೋಡಿಕೊಳ್ಳಿ. ಬೇಗನೆ ಕಡಿಮೆಯಾಗದಿದ್ದರೆ, ಡಾಕ್ಟರ್ ಅನ್ನು ಕಾಣವುದೇ ಉತ್ತಮ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ