ವಿಚಿತ್ರ ಆದರೂ ಸತ್ಯ

34 ಬಾರಿ ಹಾವು ಕಚ್ಚಿದರೂ ಬದುಕುಳಿದ 18ರ ಯುವತಿ ..!ತಿಳಿಯಲು ಈ ಲೇಖನ ಓದಿ..

376

ಒಂದು ಸಲ ಹಾವು ಕಚ್ಚಿದರೂ ಇಹ ಲೋಕ ಸೇರುವವರ ಮಧ್ಯೆ ಇಲ್ಲೊಬ್ಬಳು ಹುಡುಗಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಅದೆಷ್ಟು ಬಾರಿ ಹಾವು ಕಚ್ಚಿದ್ದರೂ ಈಕೆ ಸಾವನ್ನಪ್ಪಿಲ್ಲ. ಹಿಮಾಚಲ ಪ್ರದೇಶದ 18ರ ಕಿಶೋರಿ ಮನೀಷಾ 3 ವರ್ಷದ ಅಂತರದಲ್ಲಿ ವಿಷಕಾರಿ ಹಾವುಗಳಿಂದ 34 ಬಾರಿ ಕಚ್ಚಿಸಿಕೊಂಡಿದ್ದರೂ ಈಕೆಗೆ ಏನೂ ಆಗಿಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮನೀಷಾ ಅಪ್ಪ ಸುಮೀರ್ ವರ್ಮಾ ಇದೆಲ್ಲಾ ಆಕೆಗೆ ಮಾಮೂಲಿ ಎನ್ನುತ್ತಾರೆ.

‘ಕಳೆದ ಮೂರು ವರ್ಷಗಳ ಅಂತರದಲ್ಲಿ 30ಕ್ಕೂ ಹೆಚ್ಚು ಬಾರಿ ನನಗೆ ಹಾವು ಕಚ್ಚಿದೆ. ನಾನು ಹಾವು ಕಂಡ ತಕ್ಷಣ ಅದರ ಜತೆ ಆಟವಾಡಲು ಆರಂಭಿಸುತ್ತೇನೆ. ತಕ್ಷಣ ಹಾವು ನನಗೆ ಕಚ್ಚುತ್ತದೆ. ನಾನು ಶಾಲಾ ದಿನಗಳಲ್ಲಿ ಓದುತ್ತಿದ್ದಾಗ ಹಲವು ಹಾವುಗಳು ನನಗೆ ಕಚ್ಚಿವೆ. ಒಮ್ಮೊಮ್ಮೆ ದಿನಕ್ಕೆ ಎರಡು ಮೂರು ಬಾರಿ ಹಾವುಗಳೂ ಕಚ್ಚಿದ್ದಿದೆ.

ಜ್ಯೋತಿಷಿಗಳು ನನಗೆ ದೇವರ ಜತೆ ಸಂಬಂಧ ಇದೆ ಎನ್ನುತ್ತಾರೆ,’ ಎಂದು ಹೇಳುತ್ತಾಳೆ ಯುವತಿ. ವಿವಿಧ ಆಸ್ಪತ್ರೆಗಳಲ್ಲಿರುವ ದಾಖಲೆಗಳ ಪ್ರಕಾರ ಇದೇ ಫೆಬ್ರವರಿ 18ಕ್ಕೆ ಆಕೆ 34ನೇ ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾಳೆ. ಆದರೆ ಇದಕ್ಕೆ ವೈದ್ಯರು ಹೇಳುವುದೇ ಬೇರೆ. ಹಲವು ಬಾರಿ ವಿಷವಿಲ್ಲದ ಹಾವುಗಳು ಆಕೆಗೆ ಕಚ್ಚಿವೆ.

ಕೆಲವೊಮ್ಮೆ ವಿಷ ಕಡಿಮೆ ಇರುವ ಹಾವುಗಳು ಕಚ್ಚಿದ್ದರಿಂದ ಇವಳಿಗೆ ಏನೂ ಆಗಿಲ್ಲ ಎನ್ನುತ್ತಾರೆ. ಒಟ್ಟಾರೆ ಯುವತಿ ಮಾತ್ರ ಇನ್ನೂ ಬದುಕಿದ್ದಾಳೆ.

ವೈದ್ಯಕೀಯ ದಾಖಲೆಗಳ ಪ್ರಕಾರ ಆಕೆಗೆ 34 ಬಾರಿ ಹಾವು ಕಚ್ಚಿದ್ದಂತೂ ನೂರಕ್ಕೆ ನೂರು ಸತ್ಯ. ಇನ್ನು ಕೆಲವರು ನಿರಂತರವಾಗಿ ಹಾವು ಕಚ್ಚುತ್ತಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಉತ್ಪತ್ತಿಯಾಗಿ ಮುಂದಿನ ಬಾರಿ ಕಚ್ಚಿದಾಗ ಏನೂ ಆಗದಂತೆ ತಡೆಯುತ್ತದೆ. ಇದರಿಂದ ಆಕೆಗೆ ಏನೂ ಆಗುತ್ತಿಲ್ಲ ಎನ್ನುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಣ್ಣನಿಗೆ ಬಿಸಿಲು ತಾಗಬಾರದೆಂದು ಮಂಟಪವನ್ನು ಕಟ್ಟಿಸಿದ ಧ್ರುವ ಸರ್ಜಾ.

    ನಟ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ಇದ್ದರು. ಆದರೆ ಚಿರು ಅಣ್ಣನ ಹಠಾತ್ ನಿಧನದಿಂದ ನೊಂದಿರುವ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ಇದೀಗ ತನ್ನ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ. ರಾಮನಗರ ಬಳಿ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರದ್ದು ಆದರೆ ಚೀರುಸರ್ಜಾ ಗೆ ಈ ಫಾರ್ಮ್ ಹೌಸ್ ತುಂಬಾ ಇಷ್ಟವಾಗಿತ್ತಂತೆ. ದ್ರುವ ಸರ್ಜಾ…

  • ಸುದ್ದಿ

    ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು….!

    ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಂದಿ ಮೂರ್ತಿಗೆ ಯಾರೋ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಇಂದು ಬೆಳಗ್ಗಿನ ಜಾವ ಪೂಜಾ ವಿಧಿ-ವಿಧಾನದ ಮಾಡುವಾಗ ಚಪ್ಪಲಿ ಹಾರ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಪೂಜೆ ಮಾಡಿದ ಬಳಿಕ ದೇವಸ್ಥಾನಕ್ಕೆ ಬಾಗಿಲು ಹಾಕಲಾಗಿತ್ತು. ಆದರೆ ಇಂದು ಬೆಳಗ್ಗೆ ಮತ್ತೆ ದೇವಾಲಯದ ಬಾಗಿಲು ತೆರೆದಾಗ ನಂದಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡು ಬಂದಿದೆ. ರಾತ್ರಿ ದೇವಸ್ಥಾನದಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಿಡಿಗೇಡಿಗಳು ನಂದಿ ವಿಗ್ರಹಕ್ಕೆ ಚಪ್ಪಲಿ…

  • ಸಿನಿಮಾ

    ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ ‘ಪ್ರೇಮಂ’ ಬೆಡಗಿ ‘ಸಾಯಿಪಲ್ಲವಿ’..!ತಿಳಿಯಲು ಈ ಲೇಖನ ಓದಿ …

    ‘ಸಾಯಿಪಲ್ಲವಿ’ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ ‘ಪ್ರಜ್ವಲ್ ದೇವರಾಜ್’ ಜೊತೆಯಲ್ಲಿ ‘ಪ್ರೇಮಂ’ ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ.

  • ಸುದ್ದಿ

    ವಿಘ್ನ ವಿನಾಯಕ,ಗಣೇಶನಿಗೇ ಇನ್ಸೂರೆನ್ಸ್..ಇದನ್ನೊಮ್ಮೆ ನೋಡಿ ….!

    ಹಿಂದೂಗಳ ಯುನಿವರ್ಸಲ್ ಹಬ್ಬ ಗಣೇಶ ಚತುರ್ಥಿಗೆ ಇನ್ನೇನು ಮೂರೇ ದಿನ. ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಕಡೆ, ಗಣೇಶನ ವಿವಿಧ ಭಂಗಿಯ ವಿಗ್ರಹಗಳು ಈಗಾಗಲೇ ಪೆಂಡಾಲ್ ಗೆ ಬಂದು ಸೇರುತ್ತಿವೆ. ದೇಶದ ಎಲ್ಲ ಕಡೆ ಗಣೇಶ ಹಬ್ಬ ಆಚರಿಸಿದರೂ, ಮಹಾರಾಷ್ಟ್ರದಲ್ಲಿ ಒಂದು ಕೈಮೇಲು. ಇಲ್ಲಿ ಕೆಲವೊಂದು ಕಡೆ, ಗಣೇಶನಿಗೆ ವಿಮೆ ಮಾಡಿಸುವ ಪದ್ದತಿಯನ್ನು ರೂಢಿಸಿಕೊಂಡು ಬರಲಾಗಿದೆ. ಗಣೇಶ ಚತುರ್ಥಿ; ಪರಿಸರಸ್ನೇಹಿ ಗಣಪನ ಹಬ್ಬಕ್ಕೆ ದಾವಣಗೆರೆಯಲ್ಲಿ ತಯಾರಿ ಮುಂಬೈ ಸೆಂಟ್ರಲ್ ಭಾಗದ ಕಿಂಗ್ಸ್ ಸರ್ಕಲ್ ನಲ್ಲಿ ಗೌಡ ಸಾರಸ್ವತ ಬ್ರಾಹಣ…

  • ಸಿನಿಮಾ

    ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ರೂ,ಈ ನಟನ ಜನಪರ ಕಾಳಜಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..!ತಿಳಿಯಲು ಈ ಲೇಖನಿ ಓದಿ…

    ಇವರನ್ನು ಬಿಟ್ಟರೆ ಬೇರೆ ಯಾರಾದರೂ, ಸಿನಿಮಾ ನಟ ಸಮಾಜ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ರೆ ತೋರಿಸಿ. ಮತ್ತೊಂದು ವಿಚಾರ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು ಇದುವರೆಗೆ ಯಾವ ಸಿನಿಮಾ ನಟನ ಬಾಯಿಂದ ಅಂಬೇಡ್ಕರ್,ಬುದ್ದರ ,ಬಸವಣ್ಣ ಟಿಪ್ಪು, ರವರ ಹೆಸರನ್ನು ವೇದಿಕೆ ಮೇಲೆ ಅಲ್ಲ ಸಿನಿಮಾದಲ್ಲು ಕೂಡ, ಹೇಳಿರುವ ಯಾವ ನಟರನ್ನು ನಾನು ನೋಡಿಲ್ಲ ಇಂಥಹ ನಾಯಕನನ್ನು ಪಡೆದ ನಾವೇ ಪುಣ್ಯ ವಂತರು. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ…

  • ದೇಶ-ವಿದೇಶ

    ಉಗ್ರ ಸಂಘಟನೆಯ ಮುಕಂಡನನ್ನು ಅಟ್ಟಾಡಿಸಿ ಕೊಂದ ನಮ್ಮ ಹೆಮ್ಮೆಯ ಭಾರತೀಯ ಸೇನೆ

    ಭಾರತೀಯ ಸೇನೆ ಶನಿವಾರ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‍ ಮುಜಾಹಿದ್ದೀನ್ ಮುಖಂಡ ಸಬ್ಜಾರ್‍ ಅಹ್ಮದ್‍ ಸೇರಿದಂತೆ 7 ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ. ಬುಹ್ರಾನ್‍ ವಾನಿ ನಂತರ ಸಬ್ಜಾರ್ ಅಹ್ಮದ್‍ ಹಿಜ್ಬುಲ್‍ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಎಂದು ಸೇನಾ ಮೂಲಗಳು ಹೇಳಿವೆ.