ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏಡಿಗಳು ಹೆಚ್ಚು ಕಾಲ ಬಾಳುವುದು ತೀರ ಅಪರೂಪ ವಿಚಾರ. ಆದರೆ ನ್ಯೂಯಾರ್ಕ್ ನಲ್ಲಿ ಏಡಿಯೊಂದು ಬರೋಬ್ಬರಿ 132 ವರ್ಷ ಬದುಕಿದೆ.
ಕ್ಲಾಮ್ ಬಾರ್ ವೊಂದರಲ್ಲಿ ಕಳೆದ 20 ವರ್ಷಗಳಿಂದ ಆಕ್ವೇರಿಯಂನಲ್ಲಿದ್ದ ಈ ಏಡಿಯನ್ನು ಈಗ ಬಿಡುಗಡೆಗೊಳಿಸಲಾಗಿದೆ. ಆ್ಯಂಥೋನಿ ಎಂಬುವವರು 20 ವರ್ಷಗಳ ಹಿಂದೆ ಕ್ಲಾಮ್ ಬಾರ್ ಆರಂಭಿಸಿದ್ದರು.
ಈ ವೇಳೆ ಹಣ ನೀಡಿ ಲೂಯಿ ಹೆಸರಿನ ಏಡಿ ತಂದಿದ್ದರು. ಬಾರ್ ನಲ್ಲಿಯೇ ಆಕ್ವೇರಿಯಂ ಸಿದ್ದಪಡಿಸಿ, ಅದರಲ್ಲಿ ಏಡಿ ಸಾಕಿದ್ದರು. ಏಡಿಗೆ ಈಗ 132 ವರ್ಷಆಗಿರಬಹುದು ಎಂದು ಅಂದಾಜಿಸಲಾಗಿದೆ. ಲೂಯಿ ತೂಕ ಬರೋಬ್ಬರಿ 10 ಕೆ.ಜಿ. ಇದೆ ಎನ್ನುತ್ತಾರೆ ಆ್ಯಂಥೋನಿ.
ಕಳೆದ ವಾರ ಇಲ್ಲಿಗೆ ಆಗಮಿಸಿದ ಕೆಲವರು ಇದನ್ನು ತಮಗೆ ಮಾರುವಂತೆ ಕೋರಿದ್ದರು. ಈ ಮೊದಲು ಕೂಡ ಹಲವಾರು ಇದೇ ಬೇಡಿಕೆ ಇಟ್ಟಿದ್ದರು. ಆದರೆ ನನಗೆ ಆತನನ್ನು ಮಾರುವ ಇಚ್ಛೆ ಇರಲಿಲ್ಲ. ಈತ ನಮ್ಮ ಮನೆಯ ಸದಸ್ಯರಲ್ಲೊಬ್ಬನಾಗಿದ್ದ. ಆತನಿಗೆ ಸ್ವಾತಂತ್ರ್ಯ ನೀಡಲು ನಾವು ಇಚ್ಛಿಸಿದ್ದೆವು. ಹೀಗಾಗಿ ಲುಯಿಯನ್ನು ಸಮುದ್ರದಲ್ಲಿ ಬಿಟ್ಟು ಬಂದಿದ್ದೇವೆ ಎಂದು ಆ್ಯಂಥೋನಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೌಢ್ಯಾಚರಣೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂಬ ಸರ್ಕಾರದ ಪ್ರಯತ್ನ ವಿಫಲವಾಯಿತು. ಆದರೆ ಕೋಟೆನಾಡಿನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠ ಮಾತ್ರ ಮೌಢ್ಯ ನಿಷೇಧದ ವಿಚಾರದಲ್ಲಿ ತನ್ನ ಗುರಿಯನ್ನು ಮೊಟಕುಗೊಳಿಸದೇ ಆಷಾಢದಲ್ಲೂ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮೌಢ್ಯಾಚರಣೆ ವಿರುದ್ಧ ಸಮರ ಸಾರಿದೆ. ಮುರುಘಾ ಮಠದ ಆಶ್ರಯದಲ್ಲಿ ಅಲ್ಲಮಪ್ರಭು ಭವನದಲ್ಲಿ ಆಯೋಜಿಸಿದ್ದ 29ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಿದೆ. ಆಷಾಢ ಶುಕ್ರವಾರವಾದರೂ ಸಹ ಮುರುಘಾಮಠ ನುಡಿದಂತೆ ನಡೆಯುತ್ತಿದೆ. ಮೌಢ್ಯಾಚರಣೆ ನಿಷೇಧಕ್ಕಾಗಿ ಟೊಂಕಕಟ್ಟಿ ನಿಂತಿರುವ ಡಾ. ಶಿವಮೂರ್ತಿ ಮುರುಘಾ ಶರಣರು…
ಬಿಗ್ ಬಾಸ್ ಸೀಸನ್-13 ಹಿಂದಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಬ್ಬರು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಿದ್ದು, ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯವನ್ನು ಮತ್ತೊಬ್ಬ ಸ್ಪರ್ಧಿ ಶೆಹ್ನಾಜ್ ಗಿಲ್ ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಇದು ಟಾಸ್ಕ್ ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೆಹ್ನಾಜ್ ನಿರ್ದೇಶಕರಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಅವರಿಗೆ ರೊಮ್ಯಾನ್ಸ್ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾರೆ.ಪ್ರೋಮೋದಲ್ಲಿ ಧಾರವಾಹಿಗಾಗಿ ಕೆಲವು…
ಈಗಾಗಲೇ ನಗರದಲ್ಲಿ ವಿದ್ಯುತ್ ತಗಲಿ ಮಕ್ಕಳು ಸೇರಿದಂತೆ ವಯಸ್ಕರು ಮೃತಪಟ್ಟಿದ್ದಾರೆ. ಇಂದು ಕೂಡ ವಿದ್ಯುತ್ ತಗಲಿ ಮತ್ತೊಬ್ಬ ಬಾಲಕ ಮೃತಪಟ್ಟಿದ್ದಾನೆ. ಬೆಂಗಳೂರಿನ ಜೆ.ಪಿ ನಗರದ ಜಂಬೂಸವಾರಿ ದಿಣ್ಣೆ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನಿರಾಜು ಎಂಬವರ ಪುತ್ರ ಅಕ್ಷಯ್ (8) ಮೃತ ದುರ್ದೈವಿ. ಬಾಲಕ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಿದ್ದನು. ಈ ವೇಳೆ ಸ್ಟೇರ್ ಕೇಸ್ ಹತ್ತುವಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ…
ಸದ್ಯ ಪಿತೃಪಕ್ಷ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಜನರು ಗಯಾಕ್ಕೆ ಬಂದು ಪಿಂಡದಾನ ಮಾಡ್ತಾರೆ. ಒಡಿಸಾದ ಕಠ್ಮಂಡುವಿನಿಂದ ಬಂದ ಪಿಂಡದಾನಿಗಳ ತಂಡವೊಂದು ಗಮನ ಸೆಳೆದಿದೆ. ಅವ್ರು ರೈಲಿನಲ್ಲಿ ಪೂರ್ವಜರಿಗೂ ಟಿಕೆಟ್ ಬುಕ್ ಮಾಡಿದ್ದಾರೆ. ಪೂರ್ವಜರ ಬಗ್ಗೆ ಇವರಿಗೆ ನಂಬಿಕೆಯಿಂದೆಯಂತೆ. ಪಿಂಡದಾನಕ್ಕೆ ಬರುವ ಏಳು ದಿನಗಳ ಮೊದಲು ಭಗವದ್ಗೀತೆ ಪಠಣ ಮಾಡ್ತಾರಂತೆ. ನಂತ್ರ ಪೂರ್ವಜರ ವಸ್ತುಗಳನ್ನು ಕಟ್ಟಿ ಪಿತೃದಂಡ ಸಿದ್ಧಪಡಿಸುತ್ತಾರಂತೆ….
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ, ಇಷ್ಟು ದಿನ ಸ್ಯಾಂಡಲ್ವುಡ್ನಲ್ಲಿ ಮಿಂಚಿದವರು. ಈಗ ಅವರು ಮಾಲಿವುಡ್ಗೆ ಕಾಲಿಡುತ್ತಿದ್ದಾರೆ. ಹಾಗಂತ ಅವರು ಯಾವುದೇ ಮಲಯಾಳಂ ಸಿನಿಮಾ ಮಾಡುತ್ತಿದ್ದಾರೆ ಅಂತ ಅಲ್ಲ , ಅವರು ಯಾವ ಸಿನಿಮಾ ಮಾಡಲು ಒಪ್ಪಿಕೊಂಡಿಲ್ಲ . ಅಸಲಿ ವಿಚಾರ ಏನೆಂದರೆ, ‘ಕುರಕ್ಷೇತ್ರ’ ಸಿನಿಮಾ ಮಲಯಾಳಂನಲ್ಲಿ ನಾಳೆ ತೆರೆಕಾಣುತ್ತಿರುವ ಕಾರಣಕ್ಕಾಗಿ ಈ ಸಮಾಚಾರ ಹುಟ್ಟುಹಾಕಿದೆ. ದರ್ಶನ್, ಹಿರಿಯ ನಟ ಅಂಬರೀಶ್, ನಟ ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್ ಸೇರಿ ಅನೇಕರು ಈ…
ಓದು ಮುಗಿದ ನಂತರ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುವುದು ಸಾಮಾನ್ಯವಾಗಿದೆ, ಓದು ಮುಗಿದ ನಂತರ ಏನಾದರು ಸಾಧನೆ ಮಾಡುವ ಬದಲು ಓದುವಾಗಲೇ ಏನಾದರು ಸಾಧನೆ ಮಾಡೋಣ ಅನುವ ಛಲಕ್ಕೆ ಬಿದ್ದು ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶದವರು ಮೆಚ್ಚುವ ಕೆಲಸವನ್ನ ಮಾಡಿದ 16 ವರ್ಷದ ಹುಡುಗಿಯ ಈ ಕಥೆಯನ್ನ ಕೇಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಿ. ಸಾಮಾನ್ಯವಾಗಿ ಒಂದು AC ಖರೀದಿ ಮಾಡಬೇಕು ಅಂದರೆ ಏನಿಲ್ಲ ಅಂದರೆ 25 ಸಾವಿರ ರೂಪಾಯಿ…