ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆನ್‍ಲೈನ್ ನಲ್ಲಿ ಹುಡುಗಿ ಸಿಗುತ್ತಾಳೆ ಎಂದು ಹುಡುಗರು ಚಾಟ್ ಮಾಡುತ್ತಾ ಸ್ವಲ್ಪ ಯಾಮಾರಿದ್ರೂ ಲಕ್ಷ ಲಕ್ಷ ಹಣ ದೋಚುವವರು ಇದ್ದಾರೆ. ಇಂತಹ ಆನ್‍ಲೈನ್ ದೋಖಾ ಪ್ರಕರಣಗಳ ಉದಾಹರಣೆಗಳು ಸಾಕಷ್ಟಿದ್ದರೂ ಮತ್ತೆ ಕೆಲವರು ಆನ್‍ಲೈನ್ ನಲ್ಲಿ ಪರಿಚಯವಾದವರಿಂದ ಪದೇ ಪದೇ ಮೋಸ ಹೋಗುತ್ತಿರುತ್ತಾರೆ.
ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬೆಂಗಳೂರಿನ ನಿವಾಸಿ ಆನಂದ್ ರಾವ್ ಆನ್‍ಲೈನ್ ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬರಿಂದ ಮೋಸ ಹೋಗಿದ್ದಾರೆ. ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ಚಾಟ್ ಮಾಡುತ್ತಾ ಆನಂದ್ ರಾವ್ ಸ್ನೇಹ ಸಂಪಾದಿಸಿದ್ದಾಳೆ. ಹೀಗೆ ಸ್ನೇಹ ವಾಟ್ಸಪ್ ನಲ್ಲಿಯೂ ಮುಂದುವರೆದು, ಹಲವು ದಿನಗಳವರೆಗೂ ಇಬ್ಬರೂ ಚಾಟ್ ಮಾಡಿಕೊಂಡಿದ್ದಾರೆ.
ಯುವತಿ ಇಂಗ್ಲೆಂಡ್ ನಿಂದ ಬೆಂಗಳೂರು ಬರುತ್ತಿದ್ದೇನೆ ಅಂತಾ ಆನಂದ್ ರಾವ್ ಗೆ ಮೆಸೇಜ್ ಹಾಕಿದ್ದಾಳೆ. ಸ್ವಲ್ಪ ಸಮಯದ ಬಳಿಕ ಯುವತಿ ತಾನು ದೆಹಲಿಗೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ಹಿಡಿದಿದ್ದಾರೆ ಅಂತಾ ಮೆಸೇಜ್ ಕಳುಹಿಸಿದ್ದಾಳೆ. ಕಸ್ಟಮ್ಸ್ ಅಧಿಕಾರಿಗಳು ಒಂದೂವರೆ ಲಕ್ಷ ರೂ. ಹಣ ನೀಡಿದ್ರೆ ನನ್ನನ್ನು ಬಿಡ್ತಾರೆ ಅಂತಾ ಸುಳ್ಳು ಹೇಳಿದ್ದಾಳೆ.
ಇತ್ತ ಗೆಳತಿ ತೊಂದರೆಯಲ್ಲಿ ಸಿಲುಕಿದ್ದಾಳೆ ಎಂದು ಆನಂದ್‍ರಾವ್ ಯುವತಿಯ ಖಾತೆಗೆ ಒಂದು ಲಕ್ಷದ ಐದು ಸಾವಿರ ರೂ. ಹಣ ಜಮಾ ಮಾಡಿದ್ದಾರೆ. ಹಣ ಖಾತೆಗೆ ಬಂದ ಕೂಡಲೇ ಯುವತಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾಳೆ.
ತಾನು ಮೋಸ ಹೋಗಿದ್ದೇನೆ ಎಂದು ಅರಿತ ಕೂಡಲೇ ಆನಂದ್‍ರಾವ್ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ ಜಿಲ್ಲಾ ಮಟ್ಟದ ಸಾವಯವ ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಚಾಲನೆ ನೀಡಿದರು. ಶುಕ್ರವಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ-೨೦೨೩ ಸಚಿವ ಮುನಿರತ್ನ ಉದ್ಘಾಟಿಸಿದರು. ಮೇಳದಲ್ಲಿ ಹೂ ಮತ್ತು ತರಕಾರಿಗಳಿಂದ…
ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು, ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ…
ಕಾಡಿನಲ್ಲಿ ಹುಲಿ ಎದುರಾದರೆ ಯಾರಾದರೂ ಜೀವಭಯದಿಂದ ಓಡಿ ದಿಕ್ಕಾಪಾಲಾಗುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಹುಲಿ ಎದುರಾದರೂ ಕದಲದೇ ನಿಂತು ಅದನ್ನು ದಿಟ್ಟಿಸಿ ಹಿಮ್ಮೆಟ್ಟಿಸಿದ್ದಾಳೆ. ಝೂಗಳಲ್ಲಿ ಬಂಧಿಯಾಗಿರುವ ಹುಲಿಗಳನ್ನು ನೋಡಿದರೇ ಮೈ ಜುಮ್ಮೆನ್ನುತ್ತದೆ. ಅಂಥದ್ದರಲ್ಲಿ ಕಾಡಿಗೆ ಹೋದಾಗ ಕಣ್ಣೆದುರೇ ಬಂದ ಹುಲಿಯನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಒಂದೂವರೆ ಗಂಟೆಗಳ ಕಾಲ ದಿಟ್ಟಿಸಿ ನೋಡುತ್ತಾ, ಹುಲಿಯನ್ನೇ ಹೆದರಿಸಿ ಓಡಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶ ಸಾತ್ಪುರ ಹುಲಿ ರಕ್ಷಿತಾರಣ್ಯದಲ್ಲಿ ನಡೆದಿದೆ. ಇತ್ತೀಚೆಗೆ ಹುಲಿ ಗಣತಿಗೆಂದು ಮಹಿಳಾ ಅರಣ್ಯಾಧಿಕಾರಿಯೊಬ್ಬರು, ಇಬ್ಬರು ಪುರುಷ ಗಾರ್ಡ್‌ಗಳ…
ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು
ಮಲಯಾಳಂನ ಖ್ಯಾತ ನಟ ದೇವನ್ ಅವರ ಬಳಿ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತನ್ನ ಹಳೆ ಪ್ರೇಮವನ್ನು ನೆನೆದು ಕಣ್ಣೀರಿಟ್ಟಿರಿಟ್ಟಿದ್ದಾರಂತೆ. ತೆರೆಯ ಮೇಲೆ ಲವರ್ ಬಾಯ್ ಅಗಿ ಮಿಂಚುತ್ತಿದ್ದ ರಜನಿ ಅವರ ನಿಜ ಜೀವನದಲ್ಲಿ ತನ್ನ ಮೊದಲ ಪ್ರೇಮ ವಿಫಲವಾಗಿತ್ತು. ಬೆಂಗಳೂರು ಟ್ರಾನ್ಸ್‌ಪೋರ್ಟ್ ಸರ್ವಿಸ್ ಬಸ್ ಕಂಡಕ್ಟರ್ ಆಗಿದ್ದ ಸಮಯದಲ್ಲಿ ರಜನಿ, ರೂಟ್ ನಂಬರ್ 10ಎ ಬಸ್ ನಲ್ಕಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಎಂಬಿಬಿಎಸ್ ಓದುತ್ತಿರುವ ನಿರ್ಮಲಾ ಎಂಬುವವರನ್ನು ಪ್ರೀತಿಸುತ್ತಿದ್ದರು. ನಿರ್ಮಲಾ…
ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.