ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಶಿವಜಿನಗರದ ತಿಮ್ಮಯ್ಯ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ದನದ ಕೊಟ್ಟಿಗೆಯಂತಿರುವ ಕಟ್ಟಡ, ಉಸಿರುಕಟ್ಟುವ ವಾತಾವರಣ, ನೊಣ-ಸೊಳ್ಳೆಗಳ ಕಾಟ, ಇನ್ನು ಮಳೆ ಬಂದಾಗಲೆಲ್ಲ ಕಿಟಕಿ- ಬಾಗಿಲು, ಹೆಂಚುಗಳ ಮೂಲಕ ಸೋರುವ ಮಳೆ ನೀರಿನ ಜತೆಗೆ ಪಕ್ಕದಲ್ಲೇ ಹರಿಯುವ ಚರಂಡಿಯ ದುರ್ವಾಸನೆ. ಇದರ ಜತೆಗೆ ನೊಣ-ಸೊಳ್ಳೆಗಳ ಕಾಟ. ಇದು ಶಿವಾಜಿನಗರ ಸರ್ಕಾರಿ ಶಾಲೆ ಅನುಭವಿಸುತ್ತಿರುವ ಸಮಸ್ಯೆಯಾಗಿದೆ..
ಅಷ್ಟೇ ಅಲ್ಲದೆ ಶಾಲೆಯಲ್ಲಿ ಒಂದು ಸುಸಜ್ಜಿತ ಶೌಚಾಲಯವಿಲ್ಲ. ಮಕ್ಕಳಿಗೆ ಕುಡಿವ ನಿರಿನ ವ್ಯವಸ್ಥೆ ಕೂಡ ಇಲ್ಲ. ಹೆಣ್ಣು ಮಕ್ಕಳು ಶೌಚಲಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಶಾಲೆಯ ಆವರಣದಲ್ಲಿರುವ ಶಿಥಿಲಗೊಂಡ ಕಟ್ಟಡ ತೆರವುಗೊಳಿಸದೆ ಇರುವ ಪರಿಣಾಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿಥಿಲಗೊಂಡಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯ ನವೀಕರಣ ಕಾರ್ಯಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿಕೊಳ್ಳುತ್ತಲೇ ಇದ್ದರೂ ಯಾವೊಬ್ಬ ರಾಜಕಾರಣಿಗಳು ಕೂಡ ಇತ್ತ ಗಮನ ಹರಿಸಿರಲಿಲ್ಲ. ಇದೀಗ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಶಾಲೆಯ ಪುನರ್ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ..
ಮೂಲ ಭೂತ ಸೌಕರ್ಯಗಳು ಇಲ್ಲದ ಈ ಶಾಲೆಯನ್ನು ಪುನರ್ ನಿರ್ಮಾಣ ಮಾಡಿ ಮಾದರಿ ಶಾಲೆಯನ್ನಾಗಿ ಮಾಡಲು ಸಂಸದ ಜಿಸಿ ಚಂದ್ರಶೇಖರ್ ನಿರ್ಧರಿಸಿದ್ದಾರೆ. ಈ ಕಾರ್ಯಕ್ಕಾಗಿ ತಗಲುವ ವೆಚ್ಚವನ್ನು ನಮ್ಮ ಸಂಸದರ ನಿಧಿಯಿಂದ ಬರಿಸಲು ತೀರ್ಮಾನಿಸಿದ್ದು ಈ ನಿರ್ಬಂಧಗಳನ್ನು ಹೊರಡಿಸುವಂತೆ ಜಿ.ಸಿ.ಚಂದ್ರಶೇಖರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸರ್ಕಾರೀ ಶಾಲೆಗಳ ಉಳಿವಿಗೆ ಕೈ ಜೋಡಿಸಿದ್ದಾರೆ.
ಇನ್ನು ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೂಡ ಬರೆದುಕೊಂಡಿರುವ ಸಂಸದರು “ಬೆಂಗಳೂರು ಕೇಂದ್ರ ಭಾಗದಲ್ಲಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆ ಆಗರ , ಸೋಶಿಯಲ್ ಮೀಡಿಯಾದಲ್ಲಿ ಕಂಡ ಗೆಳೆಯ ಸಯ್ಯದ್ ಹುಸೆನ್ನ್ ನನ್ನ ಗಮನಕ್ಕೆ ತಂದಿದ್ದು , ಈ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡಲು ತಗಲುವ ವೆಚ್ಚವನ್ನು ನಮ್ಮ ಸಂಸದರ ನಿಧಿಯಿಂದ ಬರಿಸಲು ನಿರ್ಧರಿಸಿದ್ದೇನೆ.” ಎಂದು ಟ್ವೀಟ್ ಮಾಡಿದ್ದಾರೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಮೊಸಳೆಗಳು, ಅವು ತನ್ನದೇ ಮರಿಗಳ ದ್ವನಿಯಿಂದ ನಿಖರವಾಗಿ ಗ್ರಹಿಸುತ್ತವೆ. ಇನ್ನೊಂದು ಮೊಸಳೆಯ ಮರಿಗಳನ್ನ ಹೊತ್ತೊಯ್ಯುವುದಿಲ್ಲ .
ಕೊರೊನಾ ಮಹಾಮಾರಿ ದೇಶ ಅದರಲ್ಲೂ ರಾಜ್ಯವನ್ನು ವಕ್ಕರಿಸಿದ ಬಳಿಕ ಅನೇಕ ಅಮಾನವೀಯ ಘಟನೆಗಳು ಬೆಳಕಿಗೆ ಬಂದಿವೆ. ಕೆಲವೊಂದು ಮಾನವೀಯ ಕೆಲಸಗಳು ಕೂಡ ನಡೆದಿವೆ. ಈ ಮಧ್ಯೆ ಸಿಲಿಕಾನ್ ಸಿಟಿಯಲ್ಲಿ ಪೌರಕಾರ್ಮಿಕರ ಮೇಲೆ ಮಹಿಳೆಯೊಬ್ಬರು ಅಮಾನವೀಯವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ಹೌದು. ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡ ಮಹಿಳೆ ಅವರನ್ನು ನಿಂದಿಸಿದ್ದಲ್ಲದೇ, ಬಾಟಲಿಯಲ್ಲಿ ನೀರು ತುಂಬಿಸಿ ನಂತರ ಅದನ್ನು ರಸ್ತೆ ಮಧ್ಯದಲ್ಲಿಟ್ಟು ಬಂದಿದ್ದಾರೆ. ಈ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ಇದನ್ನು ಅಲ್ಲೆ ಇದ್ದ ಕೆಲವರು ತಮ್ಮ ಮೊಬೈಲ್…
ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು. ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ…
ಕೆಲವೊಮ್ಮೆ ಒಳ್ಳೆಯ ವಿಚಾರಗಳಿಂದ ಕೆಟ್ಟ ವಿಚಾರಗಳಿಗೆ ಹೆಚ್ಚಿನ ಮಾನ್ಯತೆ ಹಾಗೂ ಪಬ್ಲಿಸಿಟಿ ಸಿಗುತ್ತದೆ. ಇದೀಗ ಪ್ರಪಂಚದ ಏಳನೇ ಅದ್ಭುತ ಎನ್ನಿಸಿರುವ ದೆಹಲಿಯ ತಾಜ್ಮಹಲ್ ವಿಚಾರದಲ್ಲೂ ಹೀಗೆ ಆಗಿದೆ. ಹೌದು ತಾಜಮಹಲ್ಗಿಂತ ಮುಂಬೈನ ಧಾರವಿ ಸ್ಲಂಗೆ ಹೆಚ್ಚಿನ ಮಹತ್ವ ಸಿಗತೊಡಗಿದ್ದು, ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ ಹಿಂದೆ ಮುಂಬೈನಲ್ಲಿರುವ ಧಾರವಿ ಸ್ಲಂಗೆ ಜನ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೀಗಾ ಇದೇ ಧಾರವಿ ಸ್ಲಂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೌದು ತಾಜ್ ಮಹಲ್ ನನ್ನೇ ಸೆಡ್ಡು ಹೊಡೆದು ಕೊಳಚೇರಿ…
ಮಾನವನ ದೇಹದೊಳಗೆ ಪ್ರವೇಶಿಸಿದ ಮಾತ್ರೆಯು ಅಲ್ಲಿ ತಾನು ನಡೆಯುವ ಕ್ರಿಯೆಗಳನ್ನು ವೈದ್ಯನಿಗೆ ಕಳುಹಿಸಿಕೊಡುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಅನುಮತಿ ನೀಡಿದೆ.! ವಿಶ್ವದಲ್ಲಿಯೇ ಇಂತಹದೊಂದು ಡಿಜಿಟಲ್ ಮಾತ್ರೆ ಇದೀಗ ಜನ ಬಳಕೆಗೆ ಬಂದಿದ್ದು, ಇದು ಎಲ್ಲರಿಗೂ ಆಶ್ಚರ್ಯವಾಗಿದೆ.!
ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.