ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.

ನಿಮ್ಮ ನೆಚ್ಚಿನ ಪಾದರಕ್ಷೆ ಯನ್ನು ತೊಡಲು ಹಿಂದೇಟು ಹಾಕುತ್ತಿದ್ದೀರಾ? ಒಡೆದ ಹಿಮ್ಮಡಿಗಳೇ ಇದಕ್ಕೆ ಕಾರಣವೇ? ಇದು ಕಾಣಿಸಬಾರದೆಂದು ಎಷ್ಟೇ ಪ್ರಯತ್ನ ಪಟ್ಟರೂ ಯಾವುದೋ ಸಂದ ರ್ಭದಲ್ಲಿ ಕಾಣಿಸಿಕೊಂಡು ಮುಜುಗರ ಅನುಭವಿಸಿದ್ದೀರಾ?
ಹಿಮ್ಮಡಿಗಳ ಬಿರುಕಿನ ಕಾರಣ ಎದುರಾಗುವ ನೋವಿನಿಂದ ಕೆಲವು ಪಾದ ರಕ್ಷೆಗಳನ್ನು ತೊಡಲೂ ಸಾಧ್ಯವಾಗುತ್ತಿಲ್ಲವೇ? ಬಿರುಕು ಮುಚ್ಚಿಕೊಳ್ಳಲು ಕಾಲುಚೀಲ ಧರಿಸುತ್ತಿದ್ದೀರಾ? ಈ ಬಿರುಕು ಗಳನ್ನು ತುಂಬುವ ವಿಧಾನಗಳೆಲ್ಲವೂ ಕೈ ಕೊಟ್ಟಿವೆಯೇ? ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.

ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಪಾದಗಳು ಇಡಿಯ ಶರೀರದ ಭಾರವನ್ನು ಹೊರಬೇಕಾದುದರಿಂದ ಇಲ್ಲಿಯ ಚರ್ಮ ಅತ್ಯಂತ ದಪ್ಪನಾಗಿರುತ್ತದೆ.
ಅದರಲ್ಲಿಯೂ ಅಂಚುಗಳಲ್ಲಿ ಹೆಚ್ಚು ದಪ್ಪನಾಗಿರುತ್ತದೆ. ಈ ದಪ್ಪನಾದ ಪಡೆ ಜೀವಕೋಶಗಳು ಸತ್ತರೂ ಸುಲಭವಾಗಿ ನಿವಾರಣೆಯಾಗದೇ ಅಂಟಿಕೊಂಡೇ ಇರುತ್ತವೆ.
ಕ್ರಮೇಣ ಇವು ಒಣಗಿ ಸೆಳೆತ ಹೆಚ್ಚಾಗುವ ಕಾರಣ ಚಿಕ್ಕ ಬಿರುಕು ಉಂಟಾಗುತ್ತದೆ. ಒಣಗುವ ಪ್ರಮಾಣ ಹೆಚ್ಚಾದಂತೆ ಬಿರುಕು ಆಳವಾಗುತ್ತಾ ಹೋಗುತ್ತದೆ. ಆದ್ದರಿಂದ ಈ ಭಾಗವನ್ನು ಆಗಾಗ ಉಜ್ಜಿಕೊಂಡು ಈ ಸತ್ತ ಜೀವಕೋಶಗಳನ್ನು ನಿವಾರಿಸುತ್ತಾ ಇರಬೇಕು. ಒಣಚರ್ಮ, ದೇಹದ ಭಾರ ವನ್ನು ಸಮರ್ಪಕವಾಗಿ ಹರಡದ ವಿನ್ಯಾಸದ ಪಾದ ರಕ್ಷೆಗಳು, ಶಿಲೀಂಧ್ರದ ಸೋಂಕು, ಸ್ಥೂಲ ಕಾಯ, ಸ್ವಚ್ಛತೆಯಲ್ಲಿ ಕೊರತೆ ಮೊದಲಾದ ಕಾರಣ ಗಳಿಂದ ಈ ಬಿರುಕುಗಳು ಇನ್ನಷ್ಟು ಆಳಕ್ಕೆ ಇಳಿದು ಜವಾದ ಚರ್ಮವನ್ನು ಹರಿದು ರಕ್ತಬರಿಸಬಹುದು.
ಸಾಮಾನ್ಯವಾಗಿ ಬಿರುಕುಗಳು ಕಾಣಿಸಿಕೊಂಡ ಬಳಿಕವೂ ಇದರಲ್ಲಿ ತಕ್ಷಣಕ್ಕೆ ಯಾವುದೇ ನೋವು ಇರದ ಕಾರಣ ನಾವೆಲ್ಲರೂ ಇದನ್ನು ಅಲಕ್ಷಿಸಿಬಿಡುತ್ತೇವೆ.

ಅಯ್ಯೋ ನಾಳೆ ಸ್ನಾನ ಮಾಡಿಕೊಂಡಾಗ ಉಜ್ಜಿಕೊಂಡರಾಯಿತು ಎಂಬ ಅಸಡ್ಡೆಯಿಂದಲೇ ಹೆಚ್ಚಿನವರಿಗೆ ಈ ತೊಂದರೆ ಉಲ್ಬಣಾವಸ್ಥೆಗೆ ಅಂದರೆ ಸೋರಿಯಾಸಿಸ್ (psoriasis) ಎಂಬ ಸ್ಥಿತಿಗೆ ತಲುಪಲೂ ಕಾರಣವಾಗಬಹುದು.
ಆದ್ದರಿಂದ ಈ ಬಿರುಕುಗಳನ್ನು ಮುಚ್ಚುವತ್ತ ಎಷ್ಟು ಬೇಗನೇ ಮನಸ್ಸು ಮಾಡುತ್ತೀರೋ ಅಷ್ಟೇ ಉತ್ತಮ.

* ಓಟ್ಸ್ ಅಥವಾ ಓಟ್ ಮೀಲ್ – ಎರಡು ದೊಡ್ಡ ಚಮಚ
* ಲಿಂಬೆ ರಸ – ಒಂದು ದೊಡ್ಡ ಚಮಚ
* ಉಪ್ಪು- ಎರಡು ಚಿಕ್ಕ ಚಮಚ
ಈ ಮೂರೂ ಪರಿಕರಗಳು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸುವಲ್ಲಿ ಸಮರ್ಥವಾಗಿವೆ. ಲಿಂಬೆರಸ ಚರ್ಮದ ಜೀವಕೋಶಗಳನ್ನು ತೇವಗೊಳಿಸಿ ಪ್ರತಿ ಜೀವ ಕೋಶವನ್ನು ಬೇರೆ ಬೇರೆ ಯಾಗಿಸಲು ನೆರವಾಗುತ್ತದೆ ಹಾಗೂ ಬಿರುಕುಗಳಲ್ಲಿ ಆಶ್ರಯ ಪಡೆದಿದ್ದ ಕ್ರಿಮಿ, ಧೂಳು, ಕೀಟಾಣುಗಳನ್ನು ನಿವಾರಿಸಲು ನೆರವಾಗುತ್ತದೆ.
ಉಪ್ಪು ಮತ್ತು ಓಟ್ಸ್ ಸಡಿಲವಾದ ಈ ಜೀವಕೋಶ ಗಳನ್ನು ತಮ್ಮೊಂದಿಗೆ ಅಂಟಿಸಿ ಕೊಂಡು ಹೊರ ಹೋಗಲು ನೆರವಾಗುತ್ತವೆ. ಇದರಿಂದ ಬಿರುಕಿನ ಅಕ್ಕಪಕ್ಕದಲ್ಲಿದ್ದ ದಪ್ಪನೆಯ ಚರ್ಮದ ಭಾಗ ನಿಧಾನವಾಗಿ ನಿವಾರಣೆಯಾಗುತ್ತದೆ ಹಾಗೂ ಬಿರುಕಿನ ಆಳ ದಲ್ಲಿ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಬಿರುಕುಗಳು ಕಾಣದಂತೆ ಮಾಯವಾಗುತ್ತವೆ.

* ಒಂದು ಚಿಕ್ಕ ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಕೊಂಚವೇ ಬಿಸಿ ನೀರಿನಲ್ಲಿ ಕೊಂಚ ಉಪ್ಪು ಹಾಕಿ (ನಿಮ್ಮ ಪಾದಗಳು ಸಹಿಸುವಷ್ಟು) ಹಾಕಿ ಕೊಂಚ ಕಾಲ ಈ ನೀರಿನಲ್ಲಿ ಎರಡೂ ಪಾದಗಳನ್ನು ಮುಳುಗಿಸಿಡಿ.
* ಬಳಿಕ ಪಾದಗಳನ್ನು ನೀರಿನಿಂದ ಹೊರ ತೆಗೆದು ಟವೆಲ್‌ನಿಂದ ಒರೆಸಿಕೊಳ್ಳಿ.
* ಕಾಲುಗಳ ಕೆಳಗೆ ದಿಂಬೊಂದನ್ನು ಇಟ್ಟು ಪಾದಗಳಿಗೆ ಈ ಲೇಪನವನ್ನು ದಪ್ಪನಾಗಿ ಹಚ್ಚಿ. ಬಿರುಕುಗಳಿರುವಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ.
* ಈ ಲೇಪನವನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ.
* ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದು ಕೊಳ್ಳಿ.
* ನಂತರವೂ ಪಾದಗಳನ್ನು ಸುಮಾರು ಹತ್ತು ನಿಮಿಷಗಳು ಬಿಸಿ ನೀರಿನಲ್ಲಿ ಮುಳುಗಿಸಿಡಿ.
* ಬಳಿಕ ಸ್ಕ್ರಬರ್ ಉಪಯೋಗಿಸಿ ಅಂಚಿನ ಭಾಗಗಳನ್ನು ಕೆರೆದು ತೆಗೆಯಿಸಿ. ಸ್ಕ್ರಬರ್ ಇಲ್ಲದಿದ್ದರೆ ಒರಟಾದ ಕಲ್ಲಿಗೆ ಉಜ್ಜಿಕೊಳ್ಳಲೂಬಹುದು.
* ಒಂದು ವಾರದ ಕಾಲ ಸತತವಾಗಿ ಈ ವಿಧಾನ ಅನುಸರಿಸಿದರೆ ಬಿರುಕುಗಳು ಇಲ್ಲವಾಗುತ್ತವೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೆರಿನಾ ಗಾರ್ಡನ್ ದಕ್ಷಿಣ ಮುಂಬಯಿಯ ಶ್ರೀಮಂತರ ದುರಹಂಕಾರದ ವರ್ತನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿಷ್ಠಿತ ಗಾರ್ಡನ್ಗೆ ಸ್ಲಮ್ ಮಕ್ಕಳು ಆಡಲು ಬರಬಾರದೆಂದು ಕಫ್ ಪರೇಡ್ ಪ್ರದೇಶದ ನಿವಾಸಿಗಳು ಪೊಲೀಸ್ ಕಂಪ್ಲೇಂಟ್ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ನಾವು ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ
‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.
ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.
ತನಗೆ ಮೆದುಳಿನ ಕ್ಯಾನ್ಸರ್ ಗಡ್ದೆ ಇದೆ ಎಂಬುದನ್ನು ಅರಿಯದ ಮಹಿಳೆಯೊಬ್ಬಳಿಗೆ ಸಾಕಿದ ಕುದುರೆಯೇ ನೆರವಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ತನ್ನ ಮಾಲಕಿಯ ಕ್ಯಾನ್ಸರ್ ವಾಸನೆಯನ್ನು ಮೂಗಿನಿಂದಲೇ ಕಂಡುಹಿಡಿದು ಅವಳನ್ನು ಚಿಕಿತ್ಸೆಗೆ ಪ್ರೇರೇಪಿಸಿದ ಮನಕಲಕುವ ಸ್ಟೋರಿ ಇದು. ಇಂಗ್ಲೆಂಡ್ ಲ್ಯಾಂಚ್ಶೈರ್ನ ಬ್ಲ್ಯಾಕ್ಬರ್ನ್ ಮೂಲದವರಾದ ಕೆಲ್ಲಿ ಅನ್ನಾ ಅಲೆಕ್ಸಾಂಡರ್(43) ತನ್ನ ಕುದುರೆ ಅಲಿಯಾನ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದ್ದಕ್ಕಿಂದಂತೆ ರೋಗದಿಂದ ಬಳಲು ಆರಂಭಿಸಿದ ಬಳಿಕ ತನ್ನ ಅಲಿಯಾನ ಕುದುರೆ ಆಕೆಯ ತಲೆಯ ಭಾಗದ ವಾಸನೆಯನ್ನು ಗ್ರಹಿಸುತ್ತಿತ್ತು ಎಂದು…
ಸಿರಿಯಾ’ ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ.ಪಶ್ಚಿಮ ಏಷ್ಯಾದ ಸಿರಿಯಾ ಕಳೆದ ಏಳು ವರ್ಷಗಳಿಂದ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ. ಏಕೆ ಈ ಯುದ್ದ..? ಕಳೆದ 18 ವರ್ಷಗಳಿಂದ ಬಷರ್ ಅಲ್ ಅಸ್ಸಾದ್ ಅವರು ಸಿರಿಯಾ ಅಧ್ಯಕ್ಷರಾಗಿದ್ದಾರೆ. ಇವರು ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು…