ಆರೋಗ್ಯ

ಹಸುವಿನ ಹಾಲಿಗಿಂತ ಕತ್ತೆ ಹಾಲೇ ಉತ್ತಮನಾ..?ತಿಳಿಯಲು ಈ ಲೇಖನ ಓದಿ…

514

“ನಾಯಿ ಮೊಲೆಯಲ್ಲಿ ಕಂಡುಗ ಹಾಲಿದ್ದರೇನು ಪ್ರಯೋಜನ” ಎಂಬ ಗಾದೆ ಮಾತಿದೆ. ಅದೇ ರೀತಿ ಕತ್ತೆ ಹಾಲಿಗೂ ಅದೇ ರೀತಿ ಹೇಳುವವರೂ ಇದ್ದಾರೆ. ಆದರೆ ಹಸುವಿನ ಹಾಲಿಗಿಂತ ಕತ್ತೆ ಹಾಲೇ ಉತ್ತಮ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಆ ಹಾಲಿನ ಮೇಲೆ ಪ್ರಯೋಗ ಮಾಡಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಕತ್ತೆಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್‌, ಚಿಕ್ಕೋರ್‌ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅವರ ಕರೆಂಟ್ ಫಾರ್ಮಾಸೂಟಿಕಲ್ ಡಿಸೈನ್ ಪ್ರಕಾರ, ಜರ್ನಲ್ ಆಫ್ ಫುಡ್ ಸೈನ್ಸ್ ಲೇಖನದಲ್ಲಿ ಕತ್ತೆ ಹಾಲಿನ ಬಗೆಗಿನ ಸಂಗತಿಗಳನ್ನು ಹೊರಹಾಕಿದ್ದಾರೆ.

ಕತ್ತೆ ಹಾಲಿನ ಮೇಲೆ ವಿಜ್ಞಾನಿಗಳು ಮಾಡಿದ ಪ್ರಯೋಗಗಳು ಏನು ಹೇಳುತ್ತಿವೆ ಎಂದರೆ….ಹಸುವಿನ ಹಾಲಿಗಿಂತಲೂ ಕತ್ತೆ ಹಾಲಿನಲ್ಲಿ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ ಇರುತ್ತದಂತೆ. ಇನ್ನೊಂದು ಆಸಕ್ತಿಕರವಾದ ಸಂಗತಿ ಎಂದರೆ…ಕತ್ತೆ ಹಾಲು ಹೆಚ್ಚುಕಡಿಮೆ ಮನುಷ್ಯನ ಹಾಲಿನಷ್ಟೇ ಶ್ರೇಷ್ಠವಂತೆ.

ಆದರೆ ಹಸು ಮತ್ತು ಎಮ್ಮೆ ಹಾಲಿಗೆ ಹೋಲಿಸಿದರೆ ಕತ್ತೆ ಹಾಲಿನ ಬೆಲೆ ತುಂಬಾ ದುಬಾರಿ. ಎಷ್ಟು ಎಂದರೆ 15 ಎಂಎಲ್ ಕತ್ತೆ ಹಾಲಿನ ಬೆಲೆ ರೂ.50ರವರೆಗೂ ಇರುತ್ತದೆ. ಅಂದರೆ ಸಾಮಾನ್ಯವಾಗಿ ನಾವು ಕೊಳ್ಳುವ ಲೀಟರ್ ಹಾಲಿನ ಬೆಲೆಗೆ ಸಮ. ಒಂದು ಲೀಟರ್ ಕತ್ತೆ ಹಾಲಿನ ಬೆಲೆ ರೂ.3,300ವರೆಗೂ ಇರುತ್ತದೆ. ಇನ್ನು ಕತ್ತೆಗಳು ಹಸು, ಎಮ್ಮೆ ತರಹ ಲೀಟರ್‌ಗಟ್ಟಲೆ ಹಾಲು ಕೊಡಲ್ಲ.

ಒಂದೊಂದು ಕತ್ತೆ ಕೇವಲ 250 ಎಂಎಲ್ ಪ್ರಮಾಣದಲ್ಲಿ ಮಾತ್ರ ಹಾಲು ಕೊಡುತ್ತದೆ. ಅದು ಸಹ ವರ್ಷದಲ್ಲಿ ಕೇವಲ 7 ರಿಂದ 8 ತಿಂಗಳು ಮಾತ್ರ. ಆ ಸಮಯ ಮುಗಿಯಿತು ಎಂದರೆ ಮತ್ತೆ 3 ವರ್ಷ ಕಾಯಬೇಕು. ಆ ಬಳಿಕವಷ್ಟೇ ಕತ್ತೆ ಮರಿಹಾಕಿ ಮತ್ತೆ ಹಾಲು ಕೊಡುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಮೆದುಳಿನ ಕ್ಯಾನ್ಸರ್

    – MAYOON N  ಮೆದುಳಿನ ಕ್ಯಾನ್ಸರ್ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ…

  • inspirational

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ

    ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ 2 ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ 202ರನ್‌ಗಳಿಗೆ ಸರ್ವ ಪತನವಾಗಿದೆ.ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು.ನಂತರ ಬಂದ ಪುಜಾರ (3), ರಹಾನೆ (0) ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ನವೇ ವಿಕೆಟ್ ಕೈಚೆಲ್ಲಿದರು.ಹನಮ ವಿಹಾರಿ ರಾಹುಲ್ ಜೊತೆಗೂಡಿ ಉತ್ತಮ ಜೊತೆಯಾಟ ಪ್ರಾರಂಬಿಸುವ ಮುನ್ಸೂಚನೆ ನೀಡುವಾಗ ವಿಹಾರಿ (20) ಔಟಾದರು. ನಂತರ…

    Loading

  • ಸುದ್ದಿ

    ತಾನು ಜೀವಂತವಿರುವಾಗಲೇ ತನ್ನ ಸಮಾಧಿ ಸ್ಥಳ ಖರೀದಿಸಿದ ನಟಿ…ಯಾರು ಗೊತ್ತೇ,?

    ಈ ನಟಿ ನಿಮಗೆ ನೆನಪಿದ್ದಾರಾ..? ಕನ್ನಡ ನನ್ನ ಶತ್ರು, ಪೂರ್ಣಚಂದ್ರ, ಪ್ರೇಮಖೈದಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಅಂಬರೀಶ ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಸರು ರೇಖಾ. ಇವರ ಮೊದಲ ಹೆಸರು ಜೋಸೆಫೆನ್. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದ ರೇಖಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ. ಈ ನಟಿ ಸಿನಿಮಾಗಳ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾವು ಬದುಕಿರುವಾಗಲೇ ತಮ್ಮ ಸಮಾಧಿ ಸ್ಥಳವನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇಂತಹ ಘಟನೆಗಳು ಬಹಳ…

  • ಸೌಂದರ್ಯ

    ಚಳಿಗಾಲದಲ್ಲಿ ಫೇಶಿಯಲ್ ಮಾಡಿಸುವುದರಿಂದಾಗುವ ಆ 7 ಪ್ರಯೋಜನಗಳೇನು ಗೊತ್ತಾ?

    ಚಳಿಗಾಲ ಬಂತೆಂದರೆ ಸಾಕು ಒಂದೆಲ್ಲಾ ಒಂದು ತ್ವಚೆ ಸಮಸ್ಯೆ ಶುರುವಾಗುವುದು. ಮೈಯನ್ನು ಉಣ್ಣೆ ಬಟ್ಟೆ, ಸ್ವೆಟರ್, ಕೋಟ್ ಇವುಗಳಿಂದ ರಕ್ಷಣೆ ಮಾಡಿದರೂ ಮುಖವನ್ನು ಹಾಗೇ ಬಿಡುವುದರಿಂದ ಮುಖದ ತ್ವಚೆ ಒಡೆಯಲಾರಂಭಿಸುತ್ತದೆ. ಇದರಿಂದ ಮುಖದ ತ್ವಚೆ ಡ್ರೈಯಾಗಿ ಮುಖದ ಕಾಂತಿ ಕಡಿಮೆಯಾಗುವುದು. ತುಟಿ ಒಡೆಯಲಾರಂಭಿಸುತ್ತದೆ, ಇದರಿಂದ ಮುಖ ಮತ್ತಷ್ಟು ಮಂಕಾಗಿ ಆಗಿ ಕಾಣುವುದು. ಚಳಿಯ ಪರಿಣಾಮ ನಿಮ್ಮ ಮುಖದ ಮೇಲೆ ಬೀರದಂತೆ ತಡೆಗಟ್ಟಲು ಫೇಶಿಯಲ್ ಮಾಡಿಸುವುದು ಒಳ್ಳೆಯದು. ಫೇಶಿಯಲ್ ಮಾಡಿಸುವುದರಿಂದ ಚಳಿಯಿಂದ ಒಡೆದು ಮುಖ ಕಪ್ಪಾಗುವುದಿಲ್ಲ, ಎಂದಿನಂತೆ ನಿಮ್ಮ…

  • ಸುದ್ದಿ

    15,000 ಕೆಜಿ ಕಾಗದ ತ್ಯಾಜ್ಯ ಸಂಗ್ರಹಿಸಿ ಪ್ರಶಸ್ತಿಯನ್ನು ಗೆದ್ದ ಭಾರತೀಯ ಹುಡುಗಿ…!

    ದುಬೈ: 8 ವರ್ಷದ ಭಾರತೀಯ ಬಾಲಕಿಯೊಬ್ಬಳು ಬರೋಬ್ಬರಿ 15 ಸಾವಿರ ಕಿಲೋಗ್ರಾಂ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾಳೆ.ಭಾರತೀಯ ಮೂಲದ ನಿಯಾ ಟೋನಿ 15 ಸಾವಿರ ಕೆಜಿ ತೂಕದ ಪೇಪರ್ ತ್ಯಾಜ್ಯ ಸಂಗ್ರಹಿಸಿದ್ದಾಳೆ. ಈಕೆ ಪೋಷಕರ ಜೊತೆ ದುಬೈನಲ್ಲಿ ನೆಲೆಸಿದ್ದಾಳೆ. ಟೋನಿ ಎಮಿರೇಟ್ಸ್ ಎನ್ವಿರಾನ್ಮೆಂಟಲ್ ಗ್ರೂಪ್‍ನ ರಾಷ್ಟ್ರವ್ಯಾಪಿ ಮರುಬಳಕೆ ಅಭಿಯಾನದ ಭಾಗವಾಗಿ ವೇಸ್ಟ್ ಪೇಪರ್‌ಗಳನ್ನು ಸಂಗ್ರಹಿಸಿದ್ದಾಳೆ. ಇತ್ತೀಚೆಗಷ್ಟೆ ದುಬೈಯ ಎಮಿರೇಟ್ಸ್ ರಿಸೈಕ್ಲಿಂಗ್ ಅವಾರ್ಡ್ಸ್ ನ 22ನೇ ಆವೃತ್ತಿಯಲ್ಲಿ ಬಾಲಕಿಯ ಅಸಾಮಾನ್ಯ ಸಾಧನೆಗೆ ಆಕೆಯನ್ನು ಗೌರವಿಸಲಾಗಿದೆ. ಇಂಗಾಲದ…