ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು ಆದರೆ ಒಂದು ಎಚ್ಚರಿಕೆ, ಏನೆಂದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷ ವೆನ್ನುವಂತೆ ತುಪ್ಪದ ಅತಿಸೇವನೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಿಸಲು ಕಾರಣ ವಾಗುತ್ತದೆ. ತುಪ್ಪವನ್ನು ತುಪ್ಪದಂತೆಯೇ ತಿನ್ನಬೇಕು ಎನ್ನುವ ಕಾರಣಕ್ಕೆ ಚಮಚಕ್ಕಿಂತಲೂ ಚಿಕ್ಕದಾದ ಮಿಳ್ಳೆ ಎಂಬ ಉಪ ಕರಣವನ್ನು ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿ ದ್ದಾರೆ. ಇದರ ಆಳ ಕಡಿಮೆ ಇದ್ದು, ಅಗಲ ಕೊಂಚ ಜಾಸ್ತಿ ಇರುವ ಕಾರಣ ಹೆಚ್ಚು ತುಪ್ಪ ಸುರಿದಂತೆ ಅತಿಥಿಗಳಿಗೆ ಅನ್ನಿಸಿದರೂ ನಿಜವಾಗಿ ಕೊಂಚವೇ ತುಪ್ಪ ತಟ್ಟೆಗೆ ಬಿದ್ದಿರುತ್ತದೆ! ಮಿಳ್ಳೆ ಈಗ ಅದೃಶ್ಯವಾಗಿರುವ ಕಾರಣ ತುಪ್ಪದ ಸೇವನೆಯ ಪ್ರಮಾಣ ಮತ್ತು ನಿಮ್ಮ ಇಂದಿನ ದೇಹಸ್ಥಿತಿಯನ್ನು ಪರಿಗಣಿಸಿ ಎಷ್ಟು ಸೇವಿಸ ಬಹುದು ಎಂಬುದನ್ನು ನಿಮ್ಮ ಕುಟುಂಬ ವೈದ್ಯರು ಸಲಹೆ ನೀಡಬಲ್ಲರು. ಆ ಪ್ರಕಾರವೇ ಸೇವಿಸಿದರೆ ಉತ್ತಮ.
ಆರೋಗ್ಯದ ವಿಷಯಕ್ಕೆ ಬಂದಾಗ ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ:–

ಜಿಡ್ಡಿನ ಪದಾರ್ಥಗಳಲ್ಲೇ ಅತಿ ಆರೋಗ್ಯಕರವಾದ ತುಪ್ಪ ಹಲವು ಉತ್ತಮ ಗುಣಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣ ದಲ್ಲಿರುವ ಕ್ಯಾಲೋರಿಗಳು,ಇ ಪೋಷಕಾಂಶ ಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ ನಿವಾರಕ ಗುಣಗಳು ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವೂ ಇವೆ. ಆದರೆ ಎಮ್ಮೆಯ ಹಾಲಿನಿಂದ ತಯಾರಿಸಿದ ತುಪ್ಪದಲ್ಲೂ ಬಹುತೇಕ ಈ ಗುಣಗಳಿದ್ದರೂ ಕೊಬ್ಬಿನ ಪ್ರಮಾಣ ಅಪಾರ ವಾದುದರಿಂದ ಎಮ್ಮೆ ಹಾಲಿನ ತುಪ್ಪಕ್ಕಿಂತ ಹಸುವಿನ ಹಾಲಿನ ತುಪ್ಪವೇ ಉತೃಷ್ಕವಾಗಿದೆ. ಸಾಮಾನ್ಯವಾಗಿ ಅನ್ನ, ಚಪಾತಿ, ಸಿಹಿ ಮೊದಲಾದ ಯಾವುದೇ ಆಹಾರದೊಂದಿಗೆ ಕೊಂಚ ತುಪ್ಪವನ್ನು ಬೆರೆಸಿ ತಿಂದರೆ ಆ ಖಾದ್ಯದ ರುಚಿ ಬಹಳಷ್ಟು ಹೆಚ್ಚುತ್ತದೆ. ಅಷ್ಟೆ ಅಲ್ಲ, ಹಸುವಿನ ತುಪ್ಪವನ್ನು ಉಪಯೋಗಿಸಿ ಮೈಯನ್ನು ಮಸಾಜ್ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಸುಟ್ಟ ಗಾಯಕ್ಕೆ, ಚಿಕ್ಕ ಪುಟ್ಟ ತರಚು ಗಾಯಗಳಿಗೆ ತುಪ್ಪವನ್ನು ಹಚ್ಚುವ ಮೂಲಕ ಗಾಯಗಳು ಬೇಗನೇ ಮಾಗುತ್ತವೆ. ಅಷ್ಟೆ ಅಲ್ಲ ಇದರ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲೂ ಸಾಧ್ಯವಾಗುತ್ತದೆ. ಜೀವರಾಸಾಯನಿಕ ಕ್ರಿಯೆ ಹೆಚ್ಚಿಸುವುದು, ಕೂದಲು ಉದುರುವುದನ್ನು ತಡೆಗಟ್ಟುವುದು, ಹೃದಯ ಕ್ಷಮತೆಯನ್ನು ಹೆಚ್ಚಿಸುವುದು ಮೊದಲಾದ ಆರೋಗ್ಯ ಕರ ಪ್ರಯೋಜನಗಳಿವೆ.

ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಪ್ರತಿ ಊಟದೊಂದಿಗೆ ಸೇವಿಸಿದರೆಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ತುಪ್ಪ ಜೀರ್ಣಕ್ರಿಯೆಗೆ ಪ್ರಚೋದಕದ ರೂಪದಲ್ಲಿ ನೆರವಾಗುತ್ತದೆ.ಕೆಲವು ಸಂಶೋಧನೆಗಳ ಪ್ರಕಾರ ತುಪ್ಪದ ಸೇವನೆಯಿಂದ ಕ್ಯಾನ್ಸರ್ ಬೆಳವಣಿಕೆ ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ ತುಪ್ಪವನ್ನು ನಿತ್ಯವೂ ಸೇವಿಸುತ್ತಾ ಬಂದಿರು ವವರಲ್ಲಿ ಕ್ಯಾನ್ಸರ್ ಪ್ರಮಾಣ ಅತಿ ಕಡಿಮೆ ಇರುವುದಕ್ಕೆ ಇದೇ ಕಾರಣವಿರಬಹುದು.

ರಾತ್ರಿ ಮಲಗುವ ಮುನ್ನ ಬಿಸಿಬಿಸಿ ಹಾಲಿಗೆ ಕೊಂಚವೇ ಕೊಂಚ ತುಪ್ಪವನ್ನು ಸೇರಿಸಿ ಕುಡಿಯುವ ಮೂಲಕ ಉತ್ತಮ ನಿದ್ದೆ ಬರುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಬೆಳಿಗ್ಗೆ ಕಲ್ಮಶಗಳು ಸುಲಭವಾಗಿ ಹೊರ ಹೋಗಲು ಸಾಧ್ಯವಾಗುತ್ತದೆ. ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚಲು ತುಪ್ಪ ನೆರವಾಗುತ್ತದೆ ಎಂದು ಬಹಳ ಹಿಂದಿಂದಲೂ ಭಾರತ ದಲ್ಲಿ ನಂಬಿಕೊಂಡು ಬರಲಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿ ಗಳಿಗೆ ತುಪ್ಪದ ತಿಂಡಿಗಳನ್ನು ಆಗಾಗ ನೀಡಲಾಗುತ್ತಿತ್ತು. ಮೂಗಿನಿಂದ ರಕ್ತ ಬರುತ್ತಿದ್ದರೆ ವೈದ್ಯರಿಗೆ ತೋರಿಸುವ ಮೊದಲು ತುಪ್ಪವನ್ನು ಪ್ರಯೋಗಿಸಿ ಒಂದು ಕೈ ನೋಡಬಹುದು. ಇದಕ್ಕಾಗಿ ಕರಗಿದ ತುಪ್ಪವನ್ನು ಮೂಗಿನ ತುದಿ ಮತ್ತು ಹೊಳ್ಳೆಗಳ ಒಳಗೆ, ವಿಶೇಷವಾಗಿ ರಕ್ತ ಒಸರುವೆಡೆ ದಿನಕ್ಕೆ ಮೂರು ನಾಲ್ಕು ಬಾರಿಯಂತೆ ಎರಡರಿಂದ ಮೂರು ದಿನ ಹಚ್ಚಬೇಕು.

ಇಂದು ದುಬಾರಿ ತುಪ್ಪದೊಂದಿಗೆ ಅಗ್ಗದ ಡಾಲ್ಡಾವನ್ನು ಬೆರೆಸಿ ಮಾರಾಟ ಮಾಡುವ ಖದೀಮರಿದ್ದಾರೆ. ಆದರೆ ತುಪ್ಪವನ್ನು ತಕ್ಷಣ ಪರೀಕ್ಷಿಸಲು ಕೆಲವು ಸುಲಭ ವಿಧಾನಗಳಿವೆ.
ಶುದ್ಧ ತುಪ್ಪ ಬಿಸಿ ಅಂಗೈಯಲ್ಲಿ ತಕ್ಷಣ ಕರಗುತ್ತದೆ. ಇದಕ್ಕಾಗಿ ಎರಡೂ ಹಸ್ತಗಳನ್ನು ಸುಮಾರು ಇಪ್ಪತ್ತು ಸೆಕೆಂಡ್ ಉಜ್ಜಿ ತಕ್ಷಣ ಒಂದು ಚಿಕ್ಕ ಪ್ರಮಾಣದ ಗಟ್ಟಿ ತುಪ್ಪವನ್ನು ಕೈ ಮೇಲೆ ಇಟ್ಟಾಕ್ಷವೇ ಕರಗಲು ಪ್ರಾರಂಭವಾಗಬೇಕು. ಹಾಗೂ ಕೆಲವೇ ಸೆಕೆಂಡುಗಳಲ್ಲಿ ದ್ರವವಾಗಬೇಕು. ಒಂದು ವೇಳೆ ಕರಗಲು ಹೆಚ್ಚು ಸಮಯ ತೆಗೆದುಕೊಂಡರೆ ಇದು ಅಪ್ಪಟವಲ್ಲ ಎಂದು ಖಾತ್ರಿಯಾಗುತ್ತದೆ. ಹಿರಿಯರು ಪರೀಕ್ಷಿಸಲು ಇನ್ನೊಂದು ವಿಧಾನ ಅನು ಸರಿಸುತ್ತಿದ್ದರು. ಇದಕ್ಕೆ ಶುದ್ದ ತುಪ್ಪದ ಪರಿಮಳ ನಿಮ್ಮ ನೆನಪಿನಲ್ಲಿರಬೇಕು. ಕೊಂಚ ತುಪ್ಪವನ್ನು ಹಸ್ತದ ಹಿಂಬದಿಗೆ ಸವರಿ ನಾಲ್ಕಾರು ಬಾರಿ ಉಜ್ಜಿ ಒರೆಸಿಬಿಡಬೇಕು. ಅಪ್ಪಟ ತುಪ್ಪವಾದರೆ ತುಪ್ಪದ ವಾಸನೆ ಹೆಚ್ಚು ಹೊತ್ತು ಉಳಿದಿರುತ್ತದೆ. ಡಾಲ್ಡಾ ಸೇರಿಸಿದ್ದರೆ ಈ ಪರಿಮಳ ಒಂದು ನಿಮಿಷದೊಳಗ ಖಾಲಿಯಾಗುತ್ತದೆ.

ಶುದ್ಧ ತುಪ್ಪದ ಬಾಟಲಿಯ ಮೇಲ್ಭಾಗದಲ್ಲಿ ಕರಗಿದ್ದು ಇದರ ಕೊಂಚವೇ ಕೆಳಗೆ ತುಪ್ಪ ಮರಳು ಮರಳಾಗಿರುತ್ತದೆ. ಆದರೆ ಇದು ಹಸುವಿನ ಮತ್ತು ಎಮ್ಮೆ ಹಾಲಿನ ತುಪ್ಪದಲ್ಲಿ
ಎರಡರಲ್ಲೂ ಕಂಡುಬರುತ್ತದೆ. ಒಂದು ವೇಳೆ ಡಾಲ್ಡಾ ಬೆರೆಸಿದ್ದರೆ ಮೇಲ್ಭಾಗ ಕರಗುವುದಿಲ್ಲ, ಗಟ್ಟಿಯಾಗಿಯೇ ಇರುತ್ತದೆ. ಶುದ್ಧ ತುಪ್ಪದ ದೀಪ ಯಾವುದೇ ಚಿಟಿಪಿಟಿಯಿಲ್ಲದೇ ಉರಿಯುತ್ತದೆ. ತುಪ್ಪವನ್ನು ಹತ್ತಿಯ ಬತ್ತಿಗೆ ಸವರಿ ಬೆಂಕಿ ಕೊಟ್ಟು ಉರಿಸಿ ಸೂಕ್ಷ್ಮವಾಗಿ ಗಮನಿಸಿ. ಶುದ್ದ ತುಪ್ಪವಾದರೆ ಜ್ವಾಲೆ ನೇರವಾಗಿ, ಏಕಪ್ರಕಾರವಾಗಿ ಹೊಗೆಯಿಲ್ಲದೇ ಉರಿಯುತ್ತದೆ. ಡಾಲ್ಡಾ ಬೆರೆಸಿದ್ದರೆ ಜ್ವಾಲೆ ಕೊಂಚ ಚಿಟಿಪಿಟಿ ಎನ್ನುವುದು ಅಥವಾ ವೇಗವಾಗಿ ಚಿಕ್ಕದೊಡ್ಡದಾಗುವುದು ಮತ್ತು ಜ್ವಾಲೆಯ ತುದಿಯಲ್ಲಿ ಕೊಂಚ ಕಪ್ಪು ಹೊಗೆಯಂತಿರುವುದು ಕಂಡುಬರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು, ಅವು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ. ಹೌದು. ಚೀನಾದ ವುಹಾನ್ ನಗರದಲ್ಲಿ ಮುದ್ದಿನಿಂದ ಸಾಕಿದ ಶ್ವಾನವೊಂದು ತನ್ನ ಯಜಮಾನನನ್ನು ಕಾಯುತ್ತಾ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಶ್ವಾನ ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿದೆ. ಹೀಗಾಗಿ ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತು ಆತನ ಬರುವಿಕೆಗಾಗಿ ಕಾಯುತ್ತಾ ಕುಳಿತಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ,…
ಕಣ್ಣಿನ ಸುತ್ತ ಕಪ್ಪು ವರ್ತುಲ ನಿಜಕ್ಕೂ ಹಲವರ ಪಾಲಿಗೆ ತೀರಾ ಕಿರಿಕಿರಿಯ ಸಮಸ್ಯೆ. ಎಷ್ಟೇ ಮೇಕಪ್ ಮಾಡಿದ್ರೂ ಕಪ್ಪು ಕಲೆಯನ್ನು ಮಾತ್ರ ಹೋಗಲಾಡಿಸೋದು ಕಷ್ಟ. ಏಕೆಂದರೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ. ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು…
ದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.
ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.
ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಇಬ್ಬರೂ ಕನಸುಗಳನ್ನು ಕಾಣುತ್ತಾರೆ. ಆದರೆ…ತಮ್ಮ ಇಚ್ಚೆಗೆ ವಿರುದ್ಧವಾಗಿ ಮದುವೆಯಾದಲ್ಲಿ ಜೀವನ ಪರ್ಯಂತ ಚಿಂತಿಸುತ್ತಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ನವಂಬರ್ 1 ರಂದು ತೆರೆಕಾಣಲಿದೆ ಎನ್ನಲಾಗಿದೆ. ಹಿರಿಯ ನಟ ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿ 50 ವರ್ಷಗಳಾಗಿವೆ. ಡಾ. ರಾಜ್ ಕುಮಾರ್ ಅಭಿನಯದ ‘ಮೇಯರ್ ಮುತ್ತಣ್ಣ’ ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಣ ಸಂಸ್ಥೆ ಆರಂಭಿಸಿದ ದ್ವಾರಕೀಶ್ ಈಗ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ನಿರ್ಮಾಣ ಮಾಡಿದ್ದಾರೆ. ನಾಯಕಿಯರಾಗಿ ರಚಿತರಾಮ್, ನಿಧಿ ಸುಬ್ಬಯ್ಯ ಮೊದಲಾದವರು ಅಭಿನಯಿಸಿರುವ ‘ಆಯುಷ್ಮಾನ್ ಭವ’ ಚಿತ್ರವನ್ನು ಪಿ. ವಾಸು ನಿರ್ದೇಶಿಸಿದ್ದಾರೆ….