ಸೌಂದರ್ಯ

ಹಳದಿ ಕಟ್ಟಿದ ಹಲ್ಲಿಗೆ, ನಿಮ್ಮ ಮನೆಯಲ್ಲಿರುವ ಈ ವಸ್ತುಗಳನ್ನೇ ಬಳಸಿ, ಬಿಳಿಯಾಗಿ ಫಳ ಫಳ ಹೊಳೆಯುವಂತೆ ಮಾಡಿ…

225

ಹಲ್ಲು ಮನುಷ್ಯನ ದೇಹದ ಪ್ರಮುಖ ಅಂಗವಾಗಿದ್ದು, ಕೇವಲ ತಿನ್ನುವುದಕ್ಕೆ ಮಾತ್ರವಲ್ಲ, ನಮ್ಮ ಮುಖದ ಸೌಂದರ್ಯದಲ್ಲಿ ಹಲ್ಲು ವಹಿಸುವ ಪಾತ್ರವನ್ನು ನಾವು ಕೇರ್ಲೆಸ್ ಮಾಡೋ ಅಂಗಿಲ್ಲ. ಯಾಕಂದ್ರೆ ಬಿಳಿ ಬಿಳಿಯಾಗಿ ಪಳ ಪಳ ಅಂತ ಹೊಳೆಯುವ ಹಲ್ಲು ನಮ್ಮ ಮುಖದ ಚಂದವನ್ನು ಜಾಸ್ತಿ ಮಾಡುತ್ತೆ. ನೀವು ಸ್ವಲ್ಪ ಜನರನ್ನು ಗಮನಿಸಿ ನೋಡಿ, ಅವ್ರ ಹಲ್ಲುಗಳು ಬಿಳಿಯಾಗಿ ಹೊಳೆಯುತ್ತಿದ್ರೆ, ಪಟ ಪಟ ಅಂತ ಮಾತಾಡ್ತಾರೆ, ಆದ್ರೆ ಹಳದಿ ಹಲ್ಲುಗಳೇನಾದ್ರೂ ಇದ್ರೆ ಅವ್ರು ಸರಿಯಾಗಿ ಬಾಯಿಬಿಟ್ಟು ಮಾತೊಡೋಕೆ ಸಂಕೋಚ ಪಡ್ತಾರೆ.

ಹಾಗಾದ್ರೆ, ನಿಮ್ಮಲ್ಲಿ ಹಳದಿ ಹಲ್ಲುಗಳು ಏನಾದ್ರೂ ಇದ್ರೆ ದಂಕೊಚ ಬೇಡ, ನಿಮ್ಮ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ಹಲ್ಲುಗಳನ್ನು ಪಳ ಪಳ ಹೊಳೆಯುವಂತೆ ಮಾಡಿಕೊಳ್ಳಿ. ಹೇಗೆಂದು ತಿಳಿಯಲು ಕೆಳಗೆ ಕೊಟ್ಟಿರುವ ಸರಳ ಕ್ರಮಗಳನ್ನು ಪಾಲಿಸಿ ಅಷ್ಟೇ…

ಮನೆ ಮದ್ದಿಗೆ ಬೇಕಾಗುವ ವಸ್ತುಗಳು:-

ಅಡುಗೆ ಸೋಡಾ : 1 ಚಮಚ,

ಉಪ್ಪು : ಎರಡುವರೆ ಚಮಚ,

ನೀರು : ನಾಲ್ಕು ಕಪ್,

ಒಂದು ಬ್ರಷ್,

ಹೈಡ್ರೋಜನ್ ಪೆರಾಕ್ಸೈಡ್ : 1 ಕಪ್

ಎಂಟಿಸೆಪ್ಟಿಕ್ ಮೌತ್ವಾಶ್.

 ಇದನ್ನು ಬಳಸೋದು ಹೇಗೆ..?

ಒಂದು ಚಮಚ ಅಡುಗೆ ಸೋಡಾ ಹಾಗೂ ಅರ್ಧ ಚಮಚ  ಉಪ್ಪನ್ನು ಒಂದು ಬಟ್ಟಲಿಗೆ  ಹಾಕಿ ಬೆರೆಸಿಕೊಳ್ಳಿ. ನಂತರ ಎರಡು  ಬಟ್ಟಲು  ನೀರನ್ನು ಬಿಸಿ ಮಾಡಿ ಅದರಲ್ಲಿ  ಬ್ರಷ್  ಅದ್ದಿಕೊಳ್ಳಿ . ಆನಂತರ ಈ ಮಿಶ್ರಣವನ್ನು ಹಲ್ಲಿಗೆ ಹಚ್ಚಿ ಹುಜ್ಜಬೇಕು.ನಂತರ  ಬಿಸಿ ನೀರಿನಿಂದ  ಹಲ್ಲುಗಳನ್ನು ತೊಳೆಯಬೇಕು.

ಮತ್ತೊಂದು   ಪಾತ್ರೆಗೆ  ಹೈಡ್ರೋಜನ್ ಪೆರಾಕ್ಸೈಡ್  ಮತ್ತು  ಅರ್ಧ  ಬಟ್ಟಲು  ನೀರನ್ನು ಹಾಕಿ ಮಿಶ್ರಣ  ಮಾಡಬೇಕು.ಹಲ್ಲುಗಳನ್ನು  ಒಂದು  ನಿಮಿಷದವರೆಗೆ  ಇದನ್ನು ಹಾಕಿ ತೊಳೆಯಿರಿ. ನಂತರ  ತಣ್ಣನೆ  ನೀರಿನಿಂದ  ಬಾಯಿಯನ್ನು  ಸ್ವಚ್ಛಗೊಳಿಸಿಕೊಳ್ಳಿ.

ನಂತರ  ಮೌತ್ವಾಶ್ ನಿಂದ ಬಾಯಿಯನ್ನು ಮುಕ್ಕಳಿಸಿ. ದಿನನಿತ್ಯ  ಇದೆ ರೀತಿ  ಮಾಡುತ್ತ ಬಂದರೆ  ಕೆಲವೇ  ಕೆಲವು  ದಿನಗಳಲ್ಲಿ ಹಳದಿ ಹಲ್ಲಿನ  ಸಮಸ್ಯೆ ನಿವಾಹರಣೆಯಾಗುತ್ತದೆ.

ಇನ್ನೇನು ಇಂದಿನಿಂದಲೇ ಶುರು ಮಾಡ್ಕೊಳ್ಳಿ. ಯಾರೇ ಬಂದರು ಮನಬಿಚ್ಚಿ ಬಾಯಿ ಬಿಟ್ಟು ಸಂಕೋಚವಿಲ್ಲದೇ ಮಾತನಾಡಿ…

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ