ಸುದ್ದಿ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೆ ತಪ್ಪಾಯಿತು : 19ರ ಯುವಕನ ದುರ್ಮರಣ…..!

225

ಸಾರ್ವಜನಿಕ ಸ್ಥಳದಲ್ಲಿ ಯುವಕ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ 19 ವರ್ಷದ ಅಂಕಿತ್ ಎನ್ನುವ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ದೆಹಲಿಯ ತಿಲಕ್ ನಗರದಲ್ಲಿ ಈ‌ ಘಟನೆ ಶನಿವಾರ ನಡೆದಿದ್ದು, ಮೃತ ಅಂಕಿತ್ ರಿಪೇರಿಗೆ ನೀಡಿದ್ದ ಮೊಬೈಲ್ ತೆಗೆದುಕೊಂಡು ಬರುವಾಗ‌ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಲ್ಲಿದ್ದ ರವಿ ಎನ್ನುವ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರವಿ ಹಾಗೂ ಆತನ ಸ್ನೇಹಿತರು ಸೇರಿ ಎಲ್ಲರ ಮುಂದೆ ಅಂಕಿತ್‌ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ‌.

ಅಂಕಿತ್ ತಡರಾತ್ರಿಯಾದರೂ ಮನೆಗೆ ವಾಪಸಾಗದಿರುವುದನ್ನ ಗಮನಿಸಿದ ಅಂಕಿತ್ ಸಹೋದರ ಹುಡುಕಿಕೊಂಡು ಬಂದಾಗ ವಿಷಯ ಬೆಳಕಿಗೆ ಬಂದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿ ರವಿಯನ್ನು ಬಂಧಿಸಿದ್ದು, ಆತನ ಸ್ನೇಹಿತರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಹಳದಿ ಬಟ್ಟೆ ಹಾಕಿರೋ ಹುಡುಗಿ ನಿಮ್ಮ ಕಣ್ಣಿಗೆ ಬಿದ್ರೆ ಏನಾಗುತ್ತೆ ಗೊತ್ತಾ?

    ಹಿಂದೂ ಧರ್ಮದಲ್ಲಿ ಬಣ್ಣಕ್ಕೂ, ಶಕುನಕ್ಕೂ ಸಂಬಂಧವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಬಣ್ಣಕ್ಕೂ ಅದ್ರದೇ ಆದ ಮಹತ್ವ, ಪ್ರಾಮುಖ್ಯತೆಯಿರುತ್ತದೆ. ವಾರದಲ್ಲಿ ಏಳು ದಿನ ಏಳು ದೇವತೆಗಳ ಆಧಾರದ ಮೇಲೆ ಬಣ್ಣಕ್ಕೆ ಶುಭ-ಅಶುಭ ಸ್ಥಾನ ನೀಡಲಾಗಿದೆ. ಶಾಸ್ತ್ರಗಳ ಪ್ರಕಾರ, ಗುರುವಾರ ಹಳದಿ ಬಣ್ಣ ಶ್ರೇಷ್ಠ. ಗುರುವಾರ ಹಳದಿ ಬಟ್ಟೆ ಧರಿಸಿದ ಹುಡುಗಿ ಕಣ್ಣ ಮುಂದೆ ಬಂದ್ರೆ ಶೀಘ್ರವೇ ಜೀವನದಲ್ಲಿ ಧನಪ್ರಾಪ್ತಿಯಾಗಲಿದೆ ಎಂದರ್ಥ. ಇನ್ನು ಶುಕ್ರವಾರದ ದಿನ ಅಂಗೈ ತುರಿಸಿದ್ರೆ ಹಣ ಪ್ರಾಪ್ತಿಯಾಗಲಿದೆ ಎಂದರ್ಥ. ಆದಷ್ಟು ಬೇಗ ಆರ್ಥಿಕ ಸಮಸ್ಯೆ…

  • ಗ್ಯಾಜೆಟ್

    ನಿಮ್ಮ ಮೊಬೈಲ್ ನೀರಿಗೆ ಬಿದ್ರೆ,ಏನ್ ಮಾಡಬೇಕು..?ಏನ್ ಮಾಡಬಾರದು..?ತಿಳಿಯಲು ಈ ಲೇಖನ ನೋಡಿ…

    ತುಂಬಾ ದುಡ್ಡು ಕೊಟ್ಟು ಸ್ಮಾರ್ಟ್’ಫೋನ್ ಕೊಂಡುಕೊಂಡಿದ್ದೇವೆಂದು ಬಹಳ ಜೋಪಾನ ಮಾಡುತ್ತಿರುತ್ತೇವೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ. ಆದರೆ, ಎಂದಾದರೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಕೆಳಗೆ ಬೀಳುವುದೋ, ನೀರಿಗೆ ತಾಕುವುದೋ ಅಥವಾ ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ.

  • ರಾಜಕೀಯ

    ಚಾಮರಾಜ ಕ್ಷೇತ್ರದಿಂದ ಈ ಬಾರಿ ಹರೀಶ್ ಗೌಡರು!ಇದುವರೆಗೂ ನಡೆದ ಚುನಾವಣೆಯಲ್ಲಿ ಗೆದ್ದವರು,ಸೋತವರ ವಿವರ ಇಲ್ಲಿದೆ ನೋಡಿ…

    ಇತ್ತೀಚೆಗೆ #CHS ಸಮೀಕ್ಷೆ ಹೊರಬಂದಿದ್ದು ಈ ಸಮೀಕ್ಷೆಯಲ್ಲಿ ಮೈಸೂರಿನ #11_ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಾಗಿದೆ.

  • ಸುದ್ದಿ

    ಸಲ್ಮಾನ್ ಖಾನ್ ಆಸೆ ತಿಳಿದರೆ ಕನ್ನಡಿಗರು ಶಾಕ್ ಆಗುವುದು ಖಚಿತ..!ಅಷ್ಟಕ್ಕೂ ಆ ಆಸೆ ಏನು ಗೊತ್ತಾ.?

    ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇದೀಗ ದಬಾಂಗ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಕಾತರ ಮೂಡಿಸಿರೋ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇದೀಗ ಈ ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಈ ಕುರಿತಾದ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್ ಕನ್ನಡದಲ್ಲಿಯೇ ಮಾತಾಡೋ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಲೂ ಉತ್ಸುಕರಾಗಿರೋದರ ಬಗ್ಗೆಯೂ ಮಾತಾಡಿದ್ದಾರೆ. ಬೆಂಗಳೂರಿನಲ್ಲಿ ದಬಾಂಗ್ 3 ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೀಡಿಯೋ…

  • ಸಿನಿಮಾ

    ಅರ್ಜುನ್ ಸರ್ಜಾ ಶ್ರುತಿ ಹರಿಹರನ್ ಮೀಟೂ ಪ್ರಕರಣಕ್ಕೆ ಈಗ ರಾಜಕೀಯ ಪ್ರವೇಶ..!

    ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರು ಇಂದು ವಿಚಾರಣೆಗೆ ಹಾಜರಾಗಿದ್ದು, ಇದೀಗ ಈ ಪ್ರಕರಣಕ್ಕೆ ರಾಜಕೀಯ ಪ್ರವೇಶ ಕೂಡ ಆಗಿದೆ. ನಟ ಅರ್ಜುನ್ ಸರ್ಜಾ ಪೋಲಿಸ್ ವಿಚಾರಣೆ ವೇಳೆ ಬಿಜೆಪಿಯ ತೇಜಸ್ವಿನಿ ರಮೇಶ್ ಕೂಡ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ತಂದೆಯವರು ಮೂಲತಃ ಆರ್‍ಎಸ್‍ಎಸ್ ನವರಾಗಿದ್ದು ಎಡಪಂಥಿಯರು ಸರ್ಜಾ ಮೂಲಕ ಮೋದಿಯನ್ನು ಟಾರ್ಗೆಟ್…

  • ಸುದ್ದಿ

    ಶಾಲೆಯ ಬಾಗಿಲಿನ ಬಳಿ ನಿಂತ ಬಾಲಕಿ. ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ಅಡ್ಮಿಶನ್.

    ಈಚೆ ಶಾಲೆಯ ಬಾಗಿಲಿನ ಬಳಿ ಬಾಲಕಿಯೊಬ್ಬಳು ತನ್ನ ಕೈಯಲ್ಲಿ ಖಾಲಿ ಬಟ್ಟಲು ಹಿಡಿದುಕೊಂಡು ತರಗತಿ ಹೊರಗೆ ನಿಂತು ಇಣುಕಿ ನೋಡುತ್ತಿರುವ ಫೋಟೋವೊಂದು ತುಂಬಾ ವೈರಲ್ ಆಗಿತ್ತು. ಫೋಟೋ ವೈರಲ್ ಆದ ಬಳಿಕ ಬಾಲಕಿಗೆ ಅದೇ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. ದಿವ್ಯಾ ಗುಡಿಸುವವನ ಮಗಳಾಗಿದ್ದು, ಶಾಲೆಯ ಹತ್ತಿರದಲ್ಲಿಯೇ ಇರುವ ಸ್ಲಂನಲ್ಲಿ ವಾಸಿಸುತ್ತಿದ್ದಳು. ಪೋಷಕರು ಆಕೆಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋದಾಗ ದಿವ್ಯಾ ಊಟ ಸಿಗಬಹುದೆಂಬ ಭರವಸೆಯಿಂದ ಪ್ರತಿದಿನ ಶಾಲೆಯ ಬಳಿ ಹೋಗುತ್ತಿದ್ದಳು. ಈ ಸಮಯದಲ್ಲಿ  ಅವುಲಾ ಶ್ರೀನಿವಾಸ್  ಎಂಬುವವರು…