Breaking News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಜ್ಯೋತಿಷ್ಯ

ಶುಕ್ರವಾರದ ಶುಭದಿನದೊಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ನಿಮ್ಮವರಿಗೂ ಶೇರ್ ಮಾಡಿ…

0 689

ಶುಕ್ರವಾರ, 23/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಹೆತ್ತವರನ್ನು ತೀರ್ಥಯಾತ್ರೆಗೆ ಕಳುಹಿಸುವ ಸಂಕಲ್ಪ ಮಾಡಲಿದ್ದೀರಿ. ಹಿರಿಯರಿಗೆ ಆಗಾಗ ದೇಹಾರೋಗ್ಯ ಏರುಪೇರಾಗಲಿದೆ. ಸಾಮಾಜಿಕ ರಂಗದಲ್ಲಿ ಆಗಾಗ ಸಮಾರಂಭಕ್ಕಾಗಿ ಓಡಾಟ ವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಂತಸ ತರಲಿದೆ. ರಾಜಕೀಯ ಧುರೀಣರೊಬ್ಬರ ಸಹಕಾರದಿಂದ ಮಹತ್ತರ ಕೆಲಸವೊಂದನ್ನು ಮಾಡಿಸಿಕೊಳ್ಳಲಿದ್ದೀರಿ. ವ್ಯಾಪಾರದಿಂದ ಅಧಿಕ ಲಾಭ.

ವೃಷಭ:-

ಮಕ್ಕಳ ಬಗ್ಗೆ ಗಮನ ಹರಿಸಬೇಕು. ಉನ್ನತ ಅಧಿಕಾರಿಗಳ ಬೆಂಬಲದಿಂದ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿದ್ದೀರಿ. ಮೇಲ್ದರ್ಜೆ ಗುತ್ತಿಗೆದಾರರಿಗೆ ಉತ್ತಮ ಕಾಮಗಾರಿಗಳು ದೊರಯುವ ಲಕ್ಷಣಗಳು ಕಂಡುಬರುವವು. ಅಧಿಕಾರಿಗಳ ಅಭಿವೃದ್ಧಿ ಸಂತಸ ತರುತ್ತದೆ. ಶತ್ರುಭಯ ಕಲಹಾದಿಗಳಿಂದ ಮುಕ್ತಿಯಿದೆ. ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ.

 

ಮಿಥುನ:

ಕೆಲಸಗಳು ನಿಧಾನವಾಗಿ ಆದರೂ ಒಂದೇ ರೀತಿಯ ಪ್ರಗತಿಯಲ್ಲಿರುವವು. ಗೃಹ ಸೌಕರ್ಯಗಳನ್ನು ಹೊಂದುವಿರಿ. ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಹರಿಸಿರಿ. ಆರ್ಥಿಕಸ್ಥಿತಿ ವೃದ್ಧಿಸಿ ಆದಾಯವು ಹೆಚ್ಚಲಿದೆ. ಅವಿವಾಹಿತರಿಗೆ ಕಂಕಣಬಲವಿರುತ್ತದೆ. ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸಲಿದ್ದೀರಿ. ಮನೆಯ ಮಂದಿಯ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದೀತು.

ಕಟಕ :-

ಮಾನಸಿಕ ಸಮ ಚಿತ್ತತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಪ್ರಸಿದ್ಧಿಯ ಗರಿ ಮುಡಿಗೇರಲಿದೆ. ಪಾರಮಾರ್ಥಿಕ ವಿಚಾರಗಳು ಮನಸ್ಸಿನಲ್ಲಿ ಮೂಡಲಿವೆ. ಸುಬ್ರಹ್ಮಣ್ಯ ದೇವರ ದರ್ಶನ ಸಾಧ್ಯತೆ. ಸ್ನೇಹಿತರ ಸಹವಾಸದಿಂದ ನೆಮ್ಮದಿ. ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾದೀತು. ಆಗಾಗ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದಿನಾಂತ್ಯ ಶುಭವಿದೆ.

 

 ಸಿಂಹ:

ನಿಮ್ಮ ಮಾತಿಗೆ ಈಗ ಹೆಚ್ಚಿನ ಮಹತ್ವ ಬರುವುದರಲ್ಲಿ ಸಂಶಯವಿಲ್ಲ. ಅನಾವಶ್ಯಕ ಕೋಪ ತಾಪಗಳಿಂದ ಉದ್ವೇಗಕ್ಕೆ ಒಳಗಾಗುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ತಪ್ಪಿ ಹೋದಾವು. ಶ್ರೀದೇವತಾದರ್ಶನ ಭಾಗ್ಯಕ್ಕೆ ಆಸಕ್ತಿ ತೋರಿ ಬಂದೀತು. ಮುಂದುವರಿಯಬೇಕು. ಆತ್ಮೀಯರೊಬ್ಬರಿಗೆ ಬದುಕಿನ ದಾರಿ ಕಲ್ಪಿಸಿಕೊಡುವಿರಿ. ಉತ್ತಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲಿದ್ದೀರಿ.

ಕನ್ಯಾ :-

ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉತ್ಸಾಹಭರಿತರಾದಾರು. ಪುಸ್ತಕ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೀರಿ. ನೆರೆಯವರೊಂದಿಗಿನ ಸಂಬಂಧ ವೃದ್ಧಿಯಾಗಲಿದೆ. ಕುಟುಂಬಕ್ಕೆ ಹೊಸಬರೊಬ್ಬರ ಆಗಮನ ಸಾಧ್ಯತೆ. ವ್ಯಾಪಾರ, ವ್ಯವಹಾರಗಳನ್ನು ಚೆನ್ನಾಗಿ ನಡೆಸಿಕೊಂಡು ಹೋಗಬಹುದಾಗಿದೆ. ಸಾಂಸಾರಿಕವಾಗಿ ಮನದನ್ನೆಯ ಸಲಹೆಗೆ ಸ್ಪಂದಿಸಬೇಕು.

ತುಲಾ:

ಸಾಮರ್ಥ್ಯಕ್ಕೆ ತಕ್ಕುದಾದ ಉದ್ಯೋಗ ದೊರಕಲಿದೆ. ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ನಿರೀಕ್ಷಿತ ಕಾರ್ಯಸಾಧನೆಗೆ ಪ್ರಯತ್ನಬಲ ಅಗತ್ಯ. ಬಂಧುಮಿತ್ರರ ಸಹಕಾರದಿಂದ ಮುನ್ನಡೆಗೆ ಸಾಧಕವಾಗಲಿದೆ. ನಿರುದ್ಯೋಗಿಗಳಿಗೆ ಕುಜನ ಲಾಭದಿಂದ ತಾತ್ಕಾಲಿಕ ಉದ್ಯೋಗದ ಸಾಧ್ಯತೆ ತಂದೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ. ದೇವತಾ ದರ್ಶನದಿಂದ ನೆಮ್ಮದಿ.

ವೃಶ್ಚಿಕ :-

ಮನಸ್ಸು ಸಮಾಧಾನದ ಸ್ಥಿತಿಯನ್ನು ತರಲಾರದು. ಅನಾವಶ್ಯಕ ಕೋಪತಾಪಗಳು ಹೆಚ್ಚಲಿವೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಸರಕಾರಿ ವರ್ಗದವರಿಗೆ ಕಿರಿಕಿರಿ ಇರುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ ಹೊಂದಲಿದ್ದೀರಿ. ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧ ಉತ್ತಮಗೊಳ್ಳಲಿದೆ. ಪದೋನ್ನತಿಯ ವಿಚಾರ ಪ್ರಸ್ತಾಪವಾಗಿ ಸಂತಸ.

ಧನಸ್ಸು:

ಸಹೋದರನಿಗೆ ಉದ್ಯೋಗ ದೊರೆಯುವ ಸಾಧ್ಯತೆ. ಮುನ್ನಡೆಯುವ ದಿನಗಳಿಗೆ ಆಗಾಗ ಅಡಚಣೆಗಳು ಸ್ವಾಭಾವಿಕ. ನಿಮ್ಮ ಪ್ರಯತ್ನಬಲ ಹಾಗೂ ಕ್ರಿಯಾಶೀಲತೆಗೆ ಒತ್ತು ನೀಡಬೇಕಾಗುತ್ತದೆ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಮನೆಯಲ್ಲಿ ಸಂಭ್ರಮ ಮನೆಮಾಡಲಿದೆ. ನೆರೆಯವರೊಂದಿಗೆ ಹೆಚ್ಚಿನ ಕಾಲಹರಣ ಮಾಡಬೇಕಾದೀತು. ಮನಸ್ಸಿಗೆ ನೆಮ್ಮದಿ.

ಮಕರ :-

ಪ್ರವಾಸಾದಿಗಳಿಂದ ಸಂತಸ, ಸಹೋದ್ಯೋಗಿಗಳಿಂದ ಸಹಕಾರ, ಸಾಂಸಾರಿಕವಾಗಿ ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ಚಿನ್ನಾಭರಣಗಳನ್ನು ಖರೀದಿಸುವ ಸಾಧ್ಯತೆ. ತಾಂತ್ರಿಕ ಪರಿಣತರಿಗೆ ಮಾಧ್ಯಮಗಳಲ್ಲಿ ಕೆಲಸ –ಕಾರ್ಯಗಳು ದೊರೆತು ಉತ್ತಮ ಆದಾಯ ದೊರಕುವ ಸಾಧ್ಯತೆ. ಮಕ್ಕಳಿಂದ ಸಮಾಧಾನ, ದಿನಾಂತ್ಯ ಶುಭವಾರ್ತೆ ಇದೆ.

ಕುಂಭ:-

ನೇತ್ರ ಸಂಬಂಧಿ ವ್ಯಾಧಿಗಳಿಂದ ಮುಕ್ತರಾಗಲಿದ್ದೀರಿ. ಉತ್ತಮ ಸಮಯ. ರಾಹುಬಲ, ಗುರುಬಲ, ಶನಿಬಲ ಉತ್ತಮವಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ. ಹಿರಿಯರಿಗೆ ಕುಲದೇವತಾ ಭಾಗ್ಯವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ತಂದೀತು. ಮಕ್ಕಳ ವ್ಯವಹಾರಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮನೆಯವರೊಂದಿಗೆ ನೆಮ್ಮದಿಯ ದಿನವನ್ನಾಗಿಸಿಕೊಳ್ಳುವಿರಿ. ಉತ್ತಮ ಆರೋಗ್ಯ ಭಾಗ್ಯ.

ಮೀನ:-

ಲಾಭ ಸ್ಥಾನದ ಕೇತು ಆಗಾಗ ನಿಮ್ಮ ಮನೋಕಾಮನೆಗೆ ಅನುಗ್ರಹ ತಂದಾನು. ದಶಮದ ಶನಿ ನಾನಾ ರೀತಿಯ ಖರ್ಚುವೆಚ್ಚಗಳಿಗೆ ಕಾರಣನಾದಾನು. ಕಚೇರಿಯ ಸಹೋದ್ಯೋಗಿಗಳಿಂದ ಪ್ರಶಂಸೆಯ ಮಾತುಗಳೊಂದಿಗೆ ಭೋಜನ ಕೂಟದಲ್ಲಿ ಭಾಗಿಯಾಗುವಿರಿ. ಸರ್ಕಾರದಿಂದ ಬರಬೇಕಾದ ಹಣ ಕೈ ಸೇರುವ ನಿರೀಕ್ಷೆ. ಹಣ ಹೂಡಿಕೆಗಳ ಬಗ್ಗೆ ಜಾಗ್ರತೆ ವಹಿಸಬೇಕು.

About the author / 

Geetha Basavaraj

Leave a reply

Your email address will not be published. Required fields are marked *

Follow Us on Facebook

Categories

Categories