ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಪ್ರಸಿದ್ದ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ,
ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿಸಿಬಿ ದಾಳಿ ವೇಳೆ ಐದು ಮಂದಿ ಸ್ಥಳದಲ್ಲಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳೆಲ್ಲ ಸ್ಲಂ ಭರತನ ಸಹಚರರು ಎಂದು ಗುರುತಿಸಲಾಗಿದೆ.
ಸ್ಲಂ ಭರತ ಪಡೆದಿದ್ದ ಸುಪಾರಿಯನ್ನ ತೀರಿಸಲು ಈ ನಾಲ್ವರು ಆರೋಪಿಗಳು ಮುಂದಾಗಿದ್ದರು. ಈ ವಿಷಯವನ್ನು ಸ್ವತಃ ಭರತ್ ಪೊಲೀಸರ ಮುಂದೆ ಹೇಳಿದ್ದ. ಭರತ್ ಗ್ಯಾಂಗ್ ನಟನ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದರು,
ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಹತ್ಯೆ ಮಾಡಲು ಭರತ್ ನಮಗೆ ಸುಪಾರಿ ನೀಡಿದ್ದ ಎಂದು ಆರೋಪಿಗಳು ಹೇಳಿದ್ದಾರೆ, ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸ್ಲಂ ಭರತ್ ಸುಫಾರಿ ಪಡೆದಿದ್ದ ಎಂದು ಹೇಳಲಾಗಿದೆ. ಆದರೆ ಪೊಲೀಸರು ಈ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪರ್ಣಾ ಲವಕುಮಾರ್ ಈ ಹೆಸರು ನೀವೆಂದಾದರೂ ಕೇಳಿದ್ದೀರಾ? ಬಹುಶಃ ಕ್ಯಾನ್ಸರ್ ಪೀಡಿತರಿಗೆ ನೈಸರ್ಗಿಕ ಕೂದಲಿನ ವಿಗ್ ಮಾಡಿಸುವ ಸಲುವಾಗಿ ಈ ಪೊಲೀಸ್ ಹಿರಿಯ ಅಧಿಕಾರಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಸದ್ಯ ಇವರ ಈ ಮನವೀಯ ನಡೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಕೇರಳ ತ್ರಿಶೂರ್ ಜಿಲ್ಲೆಯ ಇರಿಂಜಲಕೂಡಾದ ನಿವಾಸಿಯಾಗಿರುವ ಅಪರ್ಣಾ ತಮ್ಮ ಮೊಣಕಾಲುದ್ದದ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ಬೋಳಿಸಿಕೊಂಡಿರುವುದು ನೆಟ್ಟಿಗರ ಮನ ಗೆದ್ದಿದೆ ಇನ್ನು ತಮ್ಮ ತಲೆ ಕೂದಲು ಬೋಳಿಸುವ ಮೊದಲು ಇವರು ಈ ಬಗ್ಗೆ…
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಇನ್ನೂ ಹಲವಾರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸಾಲೂರು ಮಠದ ಸ್ವಾಮಿಗಳ ನಡುವಿನ ಒಳಜಗಳದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿಯ ಸ್ವಾಮೀಜಿ ಮಹಾದೇವಸ್ವಾಮಿ ಚಿತಾವಣೆ ಮೇರೆಗೆ ದೊಡ್ಡಯ್ಯ ಎಂಬಾತ…
ರಸ್ತೆ ಅಪಘಾತದ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಸ್ತೆಯಲ್ಲಿ ಸಂಚಾರ ಮಾಡುವಾಗ ಸುರಕ್ಷಿತವಾಗಿ ಇರಲು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕಳೆದ ವರ್ಷ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅಭಿಮಾನಿಯೊಬ್ಬರು ನಿಧನ ಹೊಂದಿದರು. ಈ ದುರ್ಘಟನೆಯನ್ನು ದರ್ಶನ್ ಇನ್ನು ಮರೆತಿಲ್ಲ. ಈ ವರ್ಷ ವಿನೀಶ್ ಹುಟ್ಟುಹಬ್ಬ ಹತ್ತಿರದಲ್ಲಿ ಇದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ. ”ಅಭಿಮಾನಿಗಳಲ್ಲಿ ಕಳಕಳಿಯ ಮನವಿ….
ಸಾಮಾನ್ಯವಾಗಿ ನವಜಾತ ಶಿಶುಗಳ ತೂಕ 2.5 ಕೆಜಿಯಿಂದ 4.3 ಕೆಜಿಯೊಳಗೆ ಇರುತ್ತದೆ. ಆದರೆ, ಇಲ್ಲೊಬ್ಬಳು ತಾಯಿ ಜನ್ಮ ನೀಡಿದ ಮಗುವಿನ ತೂಕ ಸುಮಾರು 6 ಕೆಜಿ…! ಈ ಕಂದನ ತೂಕ ನೋಡಿ ಸ್ವತಃ ತಾಯಿಯೇ ಅಚ್ಚರಿಗೊಂಡಿದ್ದು, `ನಾನು ಮಿನಿ ರೆರ್ಸ್ಲೆರ್ಗೆ ಜನ್ಮ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಸಿಡ್ನಿಯ ಎಮ್ಮಾ ಮಿಲ್ಲರ್ ಮತ್ತು ಡೇನಿಯರ್ ದಂಪತಿ ಕಳೆದ ವಾರ ರೆಮಿ ಫ್ರಾನ್ಸಿಸ್ ಮಿಲ್ಲರ್ನನ್ನು ಮನೆಗೆ ಸ್ವಾಗತಿಸಿದ್ದರು. ಆದರೆ, ರೆಮಿ ಎಲ್ಲಾ ಚಿಣ್ಣರಂತಿಲ್ಲ. ಇವಳ ದೇಹದ ತೂಕ ಸಹಜ ಮಕ್ಕಳ…
ಮನುಷ್ಯನಿಗೂ ರೋಮಾಂಚನ ಹುಟ್ಟಿಸುವ ಭಾರತದ ಈ 6 ದೆವ್ವದ ನಗರಗಳ ಬಗ್ಗೆ.
ಇಂದು ಮಹಾಶಿವರಾತ್ರಿ ಮಂಗಳವಾರ, 13/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…