ಸುದ್ದಿ

ಶಾಕಿಂಗ್ ನ್ಯೂಸ್!ಯಲಹಂಕ ಏರ್ ಶೋ ನೋಡಲು ಹೋದವರ 150ಕ್ಕೂ ಹೆಚ್ಚು ಕಾರುಗಳು ಭಸ್ಮ?ಬಂದ್ ಆಯ್ತು ಏರ್ ಶೋ

168

ಏರೋ ಇಂಡಿಯಾ 2019ರ ಏರ್ ಶೋ ನೋಡಲು ರಾಜಧಾನಿ ಬೆಂಗಳೂರಿನ ಯಲಹಂಕಕ್ಕೆ ಆಗಮಿಸಿದ್ದರು, ಎಲ್ಲರೂ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ವೈಮಾನಿಕ ಪ್ರದರ್ಶನವನ್ನು ನೋಡುವಲ್ಲಿ ಮುಳುಗಿ ಹೋಗಿದ್ದರು, ಆದರೆ ನೋಡು ನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಕಷ್ಟ ಪಟ್ಟು ತೆಗೆದುಕೊಂಡಿದ್ದ ಕಾರುಗಳು ಭಸ್ಮವಾದವು.

ಏರ್ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗೇಟ್ ನಂಬರ್ 5 ರ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ 10 ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿವೆ. ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಕಾರ್ ಪಾರ್ಕಿಂಗ್ ಗೇಟ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಕಾರ್ ಮಾಲಿಕರು ತಮ್ಮ ತಮ್ಮ ಕಾರ್ ಬಳಿ ಓಡಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರನ್ನು ಕಾರ್ ಬಳಿ ಬಿಟುತ್ತಿಲ್ಲವಾದ್ದರಿಂದ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದವೂ ಏರ್ಪಟ್ಟಿದೆ..

ಮೊದಲನೇ ಹಂತದ ವಿಮಾನ ಹಾರಾಟ ಮುಕ್ತಾಯಗೊಂಡಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಹುಲ್ಲಿಗೆ ಕೆಲ ಕಿಡಿಗೇಡಿಗಳು ಸಿಗರೇಟ್ ಹಾಕಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಯಲಹಂಕದ ಮೈದಾನದಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದ್ದು, ಈಗಾಗಲೇ ಅಗ್ನಿಶಾಮಕದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತನ್ನ ಗಂಡನಿಗೆ ಬುರ್ಖಾ ಹಾಕಿಸಿ ಉಟಕ್ಕೆ ಕರೆದುಕೊಂಡು ಹೋದ ಯುವತಿ!

    ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಮಹಿಳೆಯರು ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಇನ್ನು ಪಾಕಿಸ್ತಾನದಂತ ರಾಷ್ಟ್ರಗಳಲ್ಲಿ ಈ ನಿಯಮ ಕಡ್ಡಾಯ. ಆದರೆ ಇಲ್ಲೊಂದು ಜೋಡಿ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಊಟಕ್ಕೆ ತೆರಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾರೆ. ಹೌದು, ಪಾಕಿಸ್ತಾನ ಮೂಲದ ನವವಿವಾಹಿತ ಜೋಡಿಯೊಂದು ಊಟಕ್ಕೆ ತೆರಳಿದ್ದು, ಈ ವೇಳೆ ಯುವತಿ ಬುರ್ಖಾ ಧರಿಸಿಲ್ಲ. ಬದಲಿಗೆ ಆಕೆಯ ಪತಿ ಬುರ್ಖಾ ಧರಿಸಿದ್ದಾನೆ. ಪುರುಷ ಪ್ರಧಾನ ಸಮುದಾಯದಲ್ಲಿರುವ ಈ ರೀತಿಯ ಮೌಢ್ಯ ಹಾಗೂ ಮಹಿಳಾ ಸಬಲೀಕರಣ…

  • ಸಿನಿಮಾ

    ತನ್ನ ರಾಜಕೀಯ ಗುರು ಅಂಬರೀಶ್ ರವರನ್ನೇ ಮರೆತ್ರಾ ರಮ್ಯಾ!ಇನ್ನೂ ದರ್ಶನಕ್ಕೆ ರಮ್ಯಾ ಬಾರದಿರುವುದು ಏಕೆ?

    ಚಂದನವನದ ರೆಬೆಲ್, ಕಲಿಯುಗದ ಕರ್ಣ ಅಂಬರೀಶ್ ರವರಿಗೆ ಭಾರತೀಯ ಚಿತ್ರರಂಗ ಸೇರಿದಂತೆ, ರಾಜಕ್ಕಿಯ ನಾಯಕರು ಹಲವಾರು ದಿಗ್ಗಜರು ಕಂಬನಿ ಮಿಡಿದಿದ್ದಾರೆ.ಅಷ್ಟಲ್ಲದೇ ಕನ್ನಡ ಚಿತ್ರರಂಗದ ಪುನಿತ್, ಯಶ್, ಶಿವಣ್ಣ, ಸುದೀಪ್, ಉಪೇಂದ್ರ ದರ್ಶನ್ ಸೇರಿದಂತೆ ಎಲ್ಲಾ ಟಾಪ್ ಸ್ಟಾರ್ ಗಳು ಅಂತಿಮ ದರ್ಶನ ಮಾಡಿದ್ದಾರೆ. ಇದರ ಜೊತೆಗೆ ರಜನಿಕಾಂತ್ ಸೇರಿದಂತೆ ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶರತ್ ಕುಮಾರ್ ಇನ್ನೂ ಹಲವಾರು ಗಣ್ಯ ಮಿತ್ರರು ಅವರ ಅಗಲಿಕೆಗೆ ಕಂಬನಿ ಮಿಡಿದು ಅಂತಿಮ ನಮನ ಸಲ್ಲಿಸಿದ್ದಾರೆ. ಇದರ ನಡುವೆ ಮಾಜಿ…

  • ರಾಜಕೀಯ

    ಚಾಮರಾಜ ಕ್ಷೇತ್ರದಿಂದ ಈ ಬಾರಿ ಹರೀಶ್ ಗೌಡರು!ಇದುವರೆಗೂ ನಡೆದ ಚುನಾವಣೆಯಲ್ಲಿ ಗೆದ್ದವರು,ಸೋತವರ ವಿವರ ಇಲ್ಲಿದೆ ನೋಡಿ…

    ಇತ್ತೀಚೆಗೆ #CHS ಸಮೀಕ್ಷೆ ಹೊರಬಂದಿದ್ದು ಈ ಸಮೀಕ್ಷೆಯಲ್ಲಿ ಮೈಸೂರಿನ #11_ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಾಗಿದೆ.

  • ಉಪಯುಕ್ತ ಮಾಹಿತಿ

    ಪುರಿ ಜಗನ್ನಾಥ ದೇವಾಲಯದ ಕೆಲವು ಆಸಕ್ತಿದಾಯಕ ಸಂಗತಿಗಳು

    ಭಾರತದ ಪೂರ್ವ ಕರಾವಳಿಯಲ್ಲಿರುವ ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಚಾರ್‌ಧಾಮ ಕ್ಷೇತ್ರಗಳಲ್ಲೊಂದು. ಐತಿಹಾಸಿಕ ಹಿನ್ನೆಲೆಯಿರುವ ಈ ದೇವಸ್ಥಾನದಲ್ಲಿ ಇಂದಿಗೂ ನಡೆಯುವ ಅಚ್ಚರಿ ಸಂಗತಿಗಳು ವೈಜ್ಞಾನಿಕ ತಾರ್ಕಿಕತೆಗೂ ನಿಲುಕದ ಸಂಗತಿಗಳಾಗಿದೆ. ಭಾರತವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಜನರನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯವು ಒಂದು. ವಿಶಿಷ್ಟವಾದ ಹಿನ್ನೆಲೆ ಹಾಗೂ ದೈವ ಶಕ್ತಿಯನ್ನು…

  • ಜ್ಯೋತಿಷ್ಯ

    15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಒಂದೆ ಕೀ ಬಳಸಿ ಕದ್ದ ಪೋರ……!

    ತಾನೇ ಸಿದ್ದಪಡಿಸಿದ ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಮೆಕ್ಯಾನಿಕ್ ಒಬ್ಬಾತ ಸಿಕ್ಕಿ ಬಿದ್ದಿದ್ದಾನೆ. ರಾಜ್ಯ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ದ್ವಿಚಕ್ರ ವಾಹನ ಮತ್ತು ಮೊಪೆಡ್‌ಗಳ ಮೆಕ್ಯಾನಿಕ್‌ ಒಬ್ಬಾತ ತಾನೇ ಸಿದ್ದಪಡಿಸಿದ ಒಂದೇ ಒಂದು ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಸಿಕ್ಕಿ ಬಿದ್ದಿದ್ದಾನೆ. ಕೆಂಪೇಗೌಡ ಲೇಔಟ್‌ನ ನಿವಾಸಿ ನವೀನ್‌ ಅಲಿಯಾಸ್‌ ಡಿಯೋ ನವೀನ್‌ (19) ಸಿಕ್ಕಿ ಬಿದ್ದವ. ಈತನ ಸಹಚರ…

  • ಜ್ಯೋತಿಷ್ಯ

    ನರಸಿಂಹ ಸ್ವಾಮಿಯ ಕೃಪೆಯಿಂದ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(9 ಮಾರ್ಚ್, 2019) ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಪ್ರೇಮ ಜೀವನ…