News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಆಧ್ಯಾತ್ಮ, ದೇವರು-ಧರ್ಮ

ಶನಿವಾರ ನಾವೇಕೆ ಆಂಜನೇಯನನ್ನು ಆರಾಧಿಸಬೇಕು.?ಹನುಮನಿಗೆ ಶನಿ ದೇವ ಕೊಟ್ಟ ಆ ವರಗಳೇನು.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

1831

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು.

ಶನಿವಾರ ನಾವೇಕೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇವೆ ಗೊತ್ತಾ..?

ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ…

ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವನ ವರ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದಿದ್ದನು. ಅಲ್ಲದೆ ಆತ ನವಗ್ರಹಗಳನ್ನು ಜಯಿಸಿ, ತನ್ನ ಸಿಂಹಾಸವನ್ನೇರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಂಡನು. ಹೀಗೆ ಇದ್ದಾಗ ರಾವಣನ ಪತ್ನಿ ಮಂಡೋದರೆ ರಾವಣನ ಮಗನಾದ ಮೇಘನಾದನಿಗೆ ಜನ್ಮ ನೀಡುವ ಕಾಲ ಬಂದಿತು. ಆಗ ಮಹಾ ಜ್ಯೋತಿಷ್ಯಜ್ಞನಾದ ರಾವಣನು ಎಲ್ಲಾ ಗ್ರಹಗಳನ್ನು ಆತನ ಜನ್ಮಕುಂಡಲಿಯ 11ನೇ ಮನೆಯಲ್ಲಿ ಹೋಗಿ ನೆಲೆಸುವಂತೆ ಆದೇಶ ನೀಡಿದನು. ಇದರಿಂದ ತನ್ನ ಮಗ ಅಮರನಾಗುತ್ತಾನೆ ಎಂಬ ಆಸೆ ರಾವಣನದಾಗಿತ್ತು.

ಆದರೆ ಇದು ದೇವತೆಗಳಲ್ಲಿ ಭಯವನ್ನುಂಟು ಮಾಡಿತು. ಆಗ ಇದನ್ನು ಅರಿತು, ಮಗು ಜನಿಸುವಾಗ ಶನಿ ಉಚ್ಛ ಸ್ಥಾನದಲ್ಲಿ ಕೂರುವ ಬದಲು ಮೇಘನಾದನ ಕುಂಡಲಿಯಲ್ಲಿ ನೀಚ ಸ್ಥಾನನಾಗಿ ಕುಳಿತು, 12ನೆಯ ಮನೆಯವರೆಗು ಕಾಲು ಚಾಚಿ ಬಿಟ್ಟನು.

ಇದನ್ನೂ ಓದಿ:ಪಂಚಮುಖಿ ಆಂಜನೇಯನ ಅವತಾರದ ಹಿಂದೆ ಇದೆ ರೋಚಕ ಕತೆ…

ಇದು ರಾವಣನಿಗೆ ತಿಳಿಯಲು ಹೆಚ್ಚು ಸಮಯವಾಗಲಿಲ್ಲ, ಏಕೆಂದರೆ ಶನಿಯ ಈ ನಡೆ ತನ್ನ ಮಗನ ಸಾವಿಗೆ ಕಾರಣನಾಗುತ್ತೆ ಎಂದು ಆತ ಗ್ರಹಿಸಿದನು. ಈ ಕಾರಣವಾಗಿ ಶನಿಯನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಇದರಿಂದ ಶನಿಯ ಮುಖವನ್ನು ಯಾರೂ ನೋಡುವುದಿಲ್ಲ ಎಂಬುದು ಆತನ ಅನಿಸಿಕೆಯಾಗಿತ್ತು. ಆದರೆ ಸೀತೆಯನ್ನು ಹುಡುಕುಲು ಬಂದ ಆಂಜನೇಯನು ಆ ಕತ್ತಲ ಕೋಣೆಯಲ್ಲಿ ಇಣುಕಿ ನೋಡಿ ಶನಿಯ ಕಣ್ಣಿಗೆ ಬಿದ್ದು ಬಿಟ್ಟನು.

ಆದರೆ ಶನಿಯ ಕಣ್ಣಿಗೆ ಬಿದ್ದನಲ್ಲ ಎಂಬ ಅಳುಕು ಹನುಮಂತನಿಗೂ ಸಹ ಕಾಡಿತು. ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿ, ಎಲ್ಲರನ್ನು ಹನುಮಂತ ಬಿಡುಗಡೆಗೊಳಿಸಿದ. ಇದನ್ನು ಶನಿ ಕೇಳಿದಾಗ, ನಿನ್ನನ್ನು ಬಿಡಿಸಿದರೆ ನೀನು ನನ್ನ ತಲೆಯ ಮೇಲೆ ಕೂರುವೆ ಎಂದು ಹನುಮಂತ ಹೇಳಿದ.

ಇಲ್ಲಿ ಓದಿ :ಅಬ್ಬಬ್ಬಾ..!62 ಅಡಿ ಆಂಜನೇಯನ ಏಕಶಿಲಾವಿಗ್ರಹ,300 ಚಕ್ರದ ಲಾರಿ, ಮುಂದೆ ಓದಿ…

ಇದರಿಂದ ಶನಿಯು ಆತನಿಗೆ ಅಭಯವನ್ನು ನೀಡಿದ. ನಾನು ನಿನಗೆ ಸಹಾಯ ಮಾಡುವೆ ಎಂದು, ಆದರೂ ನೀನು ನನ್ನ ದೃಷ್ಟಿಗೆ ಬಿದ್ದಿದ್ದರಿಂದ, ನೀನು ಮನೆ, ಹೆಂಡತಿ ಮತ್ತು ಮಕ್ಕಳಿಂದ ದೂರವಾಗುವೆ ಎಂದು ಶನಿ ಹೇಳಿದನು. ಹಾಗಾದರೆ ಬಾ ನಾನು ನಿನ್ನನ್ನು ಬಿಡಿಸುವೆ ನನಗೆ ಮನೆ,ಮಠ, ಹೆಂಡತಿ ಮತ್ತು ಮಕ್ಕಳು ಯಾರೂ ಇಲ್ಲ. ನನಗೆ ರಾಮನ ಅಡಿದಾವರೆ ಮತ್ತು ಆತನ ನಾಮ ಬಿಟ್ಟರೆ ಬೇರೆ ಸಂಪತ್ತಿಲ್ಲ ಎಂದು ಶನಿಯನ್ನು ಬಂಧ ಮುಕ್ತಗೊಳಿಸಿದನು.

ಹೀಗೆ ಶನಿ ಕೃತಜ್ಞತಾಪೂರ್ವಕವಾಗಿ ಹನುಮಂತನನ್ನು ಯಾರೂ ಪೂಜಿಸುವರೋ, ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತೇನೆ ಎಂದು ಮಾತುಕೊಟ್ಟನು. ಒಂದು ನಂಬಿಕೆಯ ಪ್ರಕಾರ ಆಂಜನೇಯ ಲಂಕಾದಹನವನ್ನು ಸರಿಯಾಗಿ ಮಾಡಲಾಗಲಿಲ್ಲವಂತೆ, ಆಗ ಹನುಮಂತನ ಸಹಾಯಕ್ಕೆ ಬಂದ ಶನಿ ಲಂಕೆಯನ್ನು ನೋಡಿದ್ದರಿಂದ ಸ್ವರ್ಣಲಂಕ, ಭಸ್ಮವಾಗಿ ಕಪ್ಪು ಲಂಕಾವಾಯಿತಂತೆ.

ಇಲ್ಲಿ ಓದಿ :ಉಗ್ರ ಹನುಮಂತನ ಚಿತ್ರ ಬಂದಿದ್ದು ಹೇಗೆ ಗೊತ್ತಾ..?

ಆಂಜನೇಯನ ಹೆಗಲೇರಿದ ಶನಿ ದೇವ…

ಮತ್ತೊಂದು ರೋಚಕ ಕತೆ ಶನಿ ಮತ್ತು ಆಂಜನೇಯನ ನಡುವೆ ನಡೆಯಿತು. ರಾಮಾಯಣ ಯುದ್ಧ ಮುಗಿದು, ಹನುಮಂತನು ಒಮ್ಮೆ ಗುಹೆಯಲ್ಲಿ ರಾಮಧ್ಯಾನ ಮಾಡುತ್ತ ಕುಳಿತಿದ್ದನು. ಆಗ ಶನಿ ಇದೇ ಸಮಯವೆಂದು ಆಂಜನೇಯನ ಹೆಗಲೇರಿದನು. ಇದರಿಂದ ರಾಮ ಧ್ಯಾನಕ್ಕೆ ಭಂಗ ಬಂದಿತು ಎಂದು ಆಂಜನೇಯನಿಗೆ ಸಿಟ್ಟು ಬಂದಿತು.

ಆದರು ಅದನ್ನು ನಿಗ್ರಹಿಸಿಕೊಂಡು, ಆಂಜನೇಯ ಹೀಗೆ ಹೇಳಿದ: ಹೇ ಶನಿದೇವ, ನಿಮ್ಮ ತಂದೆಯಾದ ಸೂರ್ಯ ದೇವನು ನನಗೆ ಅನೇಕ ವರ ನೀಡಿದ್ದಾನೆ. ಆತ ನನ್ನ ಗುರು, ಗುರುವಿನ ಮಗನನ್ನು ಶಿಕ್ಷಿಸುವ ಕೆಲಸ ನನಗೆ ನೀಡಬೇಡ. ಇಳಿದು ಹೋಗಿಬಿಡು ಎಂದು ಹೇಳಿದನು. ಅದಕ್ಕೆ ಶನಿಯು ಆಂಜನೇಯ, ಇದು ನನ್ನ ಸರದಿ, ಅದರ ಪ್ರಕಾರ ನಾನು ನಿನ್ನ ಹೆಗಲೇರಬೇಕು, ಇದು ವಿಧಿ ನಿಯಮ ಎಂದನು. ಮಾತಿಗೆ ಮಾತು ಬೆಳೆಯಿತು, ಶನಿ ಸೋಲಲಿಲ್ಲ.

ಆಗ ಆಂಜನೇಯನು ಉಗ್ರ ಸ್ವರೂಪವನ್ನು ತಾಳಿ ತನ್ನ ದೇಹವನ್ನು ಬೆಳೆಸಿದನು. ಇದರಿಂದ ಹೆಗಲ ಮೇಲಿದ್ದ ಶನಿ ಗುಹೆಯ ಛಾವಣಿ ಮತ್ತು ಆಂಜನೇಯನ ದೇಹದ ನಡುವೆ ಸಿಲುಕಿ ಅಪ್ಪಚ್ಚಿಯಾಗಿ ಹೋದನು. ಆ ನೋವನ್ನು ತಾಳಲಾರದೆ ಶನಿ ಸೋತು ಆಂಜನೇಯನನ್ನು ಅಂಗಲಾಚಿದನು. ಆಗ ಆಂಜನೇಯನು ರಾಮ ನಾಮ ಜಪ ಮಾಡುವವರ ತಂಟೆಗೆ ಹೋಗುವುದಿಲ್ಲ ಎಂದು ಮಾತು ನೀಡಿದರೆ ಮಾತ್ರ ನಿನ್ನನ್ನು ಬಿಡುತ್ತೇನೆ ಎಂದನು. ಇದಕ್ಕೆ ಶನಿಯು ಸಹ ಅಸ್ತು ಎಂದನು.

ಎಷ್ಟಾದರು ಆಂಜನೇಯನನ್ನು ಸ್ಮರಿಸಿದರೆ ರಾಮನನ್ನು ಸ್ಮರಿಸಿದಂತೆ ಅಲ್ಲವೇ, ಹೀಗೆ ಹನುಮಂತನನ್ನು ನಾವು ಶನಿವಾರದಂದು ಪೂಜಿಸಲು ಆರಂಭಿದೆವು. ಇನ್ನೂ ಒಂದು ವಿಚಾರ ಏನಪ್ಪಾ ಎಂದರೆ ಆಂಜನೇಯ ಸಹ ಹುಟ್ಟಿದ್ದು, ಶನಿವಾರವಂತೆ!

ಕೃಪೆ : ಶ್ರೀದರ್ ಭಟ್

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ