ಆಧ್ಯಾತ್ಮ, ವಿಜ್ಞಾನ

ವ್ಯಾಸ ಮಹರ್ಷಿಗಳು ಆ ಕಾಲದಲ್ಲೇ ಹೇಳಿದ್ದನ್ನು, ಕಂಡುಹಿಡಿಯುತ್ತಿರುವ ವಿಜ್ಞಾನಿಗಳು..!ನಿಜ..!ತಿಳಿಯಲು ಈ ಲೇಖನ ಓದಿ…

1041

ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.

ಸೂರ್ಯನ ಮೇಲಿರುವ ಜ್ವಾಲಾಮುಖಿ :-

ಮಹಾಭಾರತ ಯುದ್ಧವು ನಡೆಯುತ್ತಿರುವಾಗ ಸೂರ್ಯ ಗ್ರಹಣವಿತ್ತು. ಇದರ ಬಗ್ಗೆ ವ್ಯಾಸರು ‘ದ್ವಿಧಾಭೂತ ಇವ ಆದಿತ್ಯ: ‘ ಎಂದು ವರ್ಣಿಸಿದ್ದಾರೆ. ಅಂದರೆ ಸೂರ್ಯನು ಉದಯಿಸುತ್ತಲೇ ಇಭ್ಭಾಗವಾದನು. ವ್ಯಾಸರು ಮುಂದೆ ‘ಸೂರ್ಯನು ಎಂದಿನಂತೆ ಸುತ್ತುವುದನ್ನು ಬಿಟ್ಟು ಪ್ರಜ್ವಲಿತ ಜ್ವಾಲೆಯನ್ನು ಹೊರಹಾಕುತ್ತಿದ್ದಾನೆ’ ಎಂದು ಬರೆದಿದ್ದಾರೆ. ಇಂದಿನ ವೈಜ್ಞಾನಿಕ ಉಪಕರಣಗಳಿಂದ ವಿಜ್ಞಾನಿಗಳು ಸೂರ್ಯಗ್ರಹಣದ ಸಮಯದಲ್ಲಿ ಜ್ವಾಲಾಮುಖಿಯ ಉದ್ರೇಕವಾಗಿರುವುದನ್ನು ದೂರಚಿತ್ರವಾಹಿನಿಯಲ್ಲಿ ಬಿತ್ತರಿಸುತ್ತಾರೆ. ಇದರಿಂದ ವ್ಯಾಸರು ಹೇಳಿರುವುದು ಸತ್ಯ ಎಂಬುದು ಸಿದ್ಧವಾಗುತ್ತದೆ.

 

  • ಗೆಲಿಲಿಯೋನ ಕಾಲಕ್ಕಿಂತಲೂ ಸಾವಿರಾರು ವರ್ಷಗಳ ಮೊದಲು ಬರೆದಂತಹ ಋಗ್ವೇದದಲ್ಲಿ ಸೂರ್ಯನ ಕಲೆಗಳ ವರ್ಣನೆ ಇದೆ.
  • ಆಕಾಶಗಂಗೆಯು ಗೋಲವಿರುವುದು ವಿಜ್ಞಾನಕ್ಕೆ ಇತ್ತೀಚೆಗೆ ತಿಳಿದ ಸಂಗತಿ, ಇದು ವೇದ ಕಾಲದ ಹಿಂದೂಗಳಿಗೆ ತಿಳಿದಿತ್ತು. ಆಕಾಶಗಂಗೆಯು ಮೂಲಭೂತವಾಗಿದ್ದು ಅದರಿಂದ ಈ ಸೌರವ್ಯೂಹ ನಿರ್ಮಾಣವಾಗಿದೆ ಹಾಗೂ ನಮ್ಮ ಜಗತ್ತು ಅದರ ಮೇಲೆ ಅವಲಂಬಿಸಿದೆ ಎಂಬುದು ವೇದಕಾಲದ ಜ್ಞಾನ.

ಗ್ರಹಗಳು :-

ಎಲ್ಲ ಗ್ರಹಗಳು ಪ್ರಾಥಮಿಕ ಹಂತದಲ್ಲಿ ಕಾಯ್ದ ಸ್ಥಿತಿಯಲ್ಲಿದ್ದರೂ ಕಾಲಾಂತರದಲ್ಲಿ ತಂಪಾದವು. ಇದರ ಬಗ್ಗೆ ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆಧುನಿಕ ವಿಜ್ಞಾನವು ಅದನ್ನು ಇತ್ತೀಚೆಗೆ ಸಂಶೋಧಿಸಿದೆ.

ನಕ್ಷತ್ರ :-

ಸಾವಿರಾರು ವರ್ಷಗಳ ಹಿಂದೆ ವ್ಯಾಸರು ಇಂದಿನ ವಿಜ್ಞಾನಕ್ಕೆ ತಿಳಿದ ಅಗಣಿತ ನಕ್ಷತ್ರಗಳಲ್ಲಿ ಒಂದು ಅಭಿಜಿತ ನಕ್ಷತ್ರವು 12 ಸಾವಿರ ವರ್ಷಗಳ ಹಿಂದೆ ಉತ್ತರ ಧ್ರುವವಾಗಿದ್ದು, ಅದರ ಸ್ಥಾನಪಲ್ಲಟವಾಗಿರುವ ಬಗ್ಗೆ ಮಹಾಭಾರತದಲ್ಲಿ ಹೇಳಿದ್ದರು. ಆಧುನಿಕ ಶಾಸ್ತ್ರಜ್ಞರು ಈಗ ಆ ಸಮಯದಲ್ಲಿ ‘ವೇಗಾ’ ಎಂಬ ನಕ್ಷತ್ರವು ನಿಜವಾಗಿಯೂ ಉತ್ತರ ಧ್ರುವವಾಗಿತ್ತು ಎಂದು ದೃಢೀಕರಿಸಿದ್ದಾರೆ.

ಮೂಲ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ