ಆರೋಗ್ಯ

ವಿಟಮಿನ್ ನಮ್ಮ ದೇಹಕ್ಕೆ ಎಷ್ಟೋಂದು ಅವಶ್ಯಕವೆಂಬುದು ನಿಮಗೆ ಗೊತ್ತಾ?ತಿಳಿಯಲು ಈ ಲೇಖನ ಓದಿ..

1165

ಜೀವಸತ್ವಗಳು ಅರ್ಥಾತ್ ವಿಟಮಿನ್ ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆಂದು ವಿಂಗಡಿಸಲಾಗಿದೆ. ವಿಟಮಿನ್ ಎ, ಡಿ, ಇ, ಕೆಗಳನ್ನು ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ.

ಈ ಪೈಕಿ ಜೀವಸತ್ವ ‘ಎ’ ಹಾಲು, ಬೆಣ್ಣೆ, ಕೆನೆ, ಮೊಟ್ಟೆಯ ಹಳದಿ, ಹಸಿರು ಮತ್ತು ಹಳದಿ/ಕೇಸರಿ ಬಣ್ಣದ ಹಣ್ಣು, ತರಕಾರಿಗಳಾದ ಕ್ಯಾರೆಟ್, ಮಾವು, ಪಪ್ಪಾಯಿ, ಕುಂಬಳಕಾಯಿಯಲ್ಲಿ ಹೇರಳವಾಗಿದ್ದು ನಮ್ಮ ಕಣ್ಣಿನ ಆರೋಗ್ಯಕ್ಕೆ ಅತ್ಯವಶ್ಯ. ಕಣ್ಣಿನ ದೃಷ್ಟಿ ಬಲಗೊಳ್ಳಲು, ಕತ್ತಲು ಮತ್ತು ಬೆಳಕಿನಲ್ಲಿ ದೃಷ್ಟಿಯ ಸಮತೋಲನ ಕಾಪಾಡಲು ಚರ್ಮದ ಮೇಲ್ಮೈ ಆರೋಗ್ಯಕರವಾಗಿ ಕಾಂತಿಯುಕ್ತವಾಗಿರಲು, ಗಂಡಸರಲ್ಲಿ ಆರೋಗ್ಯಪೂರ್ಣ ವೀರ್ಯ ಉತ್ಪಾದನೆಯಾಗಲು ಮತ್ತು ಅನ್ನನಾಳ, ವಾಯುನಾಳ, ಮೂತ್ರನಾಳಗಳ ಆರೋಗ್ಯ ಕಾಪಾಡಲು ‘ಎ’ ಜೀವಸತ್ವ ಮಹತ್ವದ ಪಾತ್ರ ವಹಿಸುತ್ತದೆ.

ಜೀವಸತ್ವ ‘ಇ’ ಸೊಪ್ಪು, ಕಾಯಿ/ಬೀಜ, ತರಕಾರಿ, ಅಡುಗೆ ಎಣ್ಣೆ, ಮೊಟ್ಟೆಯಲ್ಲಿ ಹೇರಳವಾಗಿದೆ. ನಮ್ಮ ದೇಹದಲ್ಲಿ ನಡೆಯುವ ಹಲವಾರು ಪರಿವರ್ತನಾ ಕ್ರಿಯೆಗಳಿಂದ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಜೀವಕಣಗಳಿಗೆ ಹಾನಿಮಾಡಿ ಕ್ಯಾನ್ಸರ್ ಮತ್ತಿತರ ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ‘ಇ’ ಜೀವಸತ್ವ ಎಲ್ಲ ಜೀವಕಣ ಮತ್ತು ಅಂಗಗಳನ್ನು ಈ ವಿಷಕಾರಿ ಅಂಶಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ದೃಢಪಟ್ಟಿದೆ.

ಇನ್ನು ನೀರಿನಲ್ಲಿ ಕರಗುವ ಜೀವಸತ್ವಗಳ ಗುಂಪಿನಲ್ಲಿ ‘ಬಿ’ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ವಿವಿಧ ಜೀವಸತ್ವಗಳಿವೆ. ಈ ಪೈಕಿ ಜೀವಸತ್ವ ‘ಬಿ1’ ಪಾಲಿಷ್ ಮಾಡದ ಅಕ್ಕಿ, ಕಾಳುಗಳಲ್ಲಿ ಯಥೇಚ್ಚವಾಗಿದ್ದು, ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅತಿ ಮುಖ್ಯ ಪಾತ್ರ ವಹಿಸುತ್ತದೆ.

ಇನ್ನು ಮೊಟ್ಟೆ, ಮಾಂಸ, ಕಾಳು ಮತ್ತು ಹಾಲಿನಲ್ಲಿ ಹೇರಳವಾಗಿರುವ ‘ಬಿ2’ ಜೀವಸತ್ವ, ನಮ್ಮ ಆಹಾರದಲ್ಲಿನ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶ ಶಕ್ತಿಯಾಗಿ ಪರಿರ್ತನೆಗೊಳ್ಳಲು ಅತ್ಯವಶ್ಯ. ಈ ಜೀವಸತ್ವದ ಕೊರತೆಯುಂಟಾದಾಗ ಬಾಯಿ, ತುಟಿ, ನಾಲಗೆಯಲ್ಲಿ ಹುಣ್ಣುಗಳಾಗುತ್ತವೆ ಮತ್ತು ರೋಗಿಗಳು ಚರ್ಮಕ್ಕೆ ಸಬಂಧಪಟ್ಟ ಕಾಯಿಲೆಗಳಿಂದಲೂ ನರಳುತ್ತಾರೆ. ಜೀವಸತ್ವ ‘ಬಿ3’ ಬೇಳೆಕಾಳು, ಧಾನ್ಯಗಳು, ಹಾಲು, ಮಾಂಸದಲ್ಲಿ ಹೇರಳವಾಗಿದ್ದು; ಆಹಾರದಲ್ಲಿನ ಕಾರ್ಬೋಹೈಡ್ರೇಟ್, ಕೊಬ್ಬು ಮತ್ತು ಪ್ರೋಟೀನ್‌ಗಳ ಪರಿವರ್ತನೆಗೆ ಸಹಕಾರಿ. ‘ಬಿ3’ ಜೀವಸತ್ವದ ಕೊರತೆಯಾದಾಗ ಪರಿವರ್ತನಾ ಕಾರ್ಯಗಳಿಗೆ ಧಕ್ಕೆಯುಂಟಾಗಿ, ದೇಹದಲ್ಲಿ ಶಕ್ತಿಯ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಪರಿಣಾಮ ರೋಗಿಗಳು ಚರ್ಮ, ನರಮಂಡಲ ಮತ್ತು ಜೀರ್ಣಕ್ರಿಯೆಗೆ ಸಂಬಂಧಪಟ್ಟ ಕಾಯಿಲೆಗಳಿಂದ ನರಳುತ್ತಾರೆ.

ಬಯೊಟಿನ್ ಜೀವಸತ್ವವು ಕಾಳು, ಬೀಜ ಮತ್ತು ಮೊಟ್ಟೆಯಲ್ಲಿ ಹೇರಳವಾಗಿದ್ದು; ಇದು ಆಹಾರದಲ್ಲಿನ ಕೊಬ್ಬು ಮತ್ತು ಅಂಗಾರಕ ವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅವಶ್ಯ. ಬಯೊಟಿನ್‌ನ ಕೊರತೆಯುಂಟಾದಾಗ ತುಟಿ, ನಾಲಗೆ, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ತಲೆ ದೋರುತ್ತವೆ ಮತ್ತು ರೋಗಿಗಳು ಮಾಂಸಖಂಡಗಳ ನೋವು, ಅಜೀರ್ಣ, ಖಿನ್ನತೆಯಿಂದ ನರಳುತ್ತಾರೆ. ಹಸಿರು ತರಕಾರಿ, ಸೊಪ್ಪು, ಕಾಳುಗಳಲ್ಲಿ ಹೇರಳವಾಗಿರುವ ಫೋಲಿಕ್ ಆಮ್ಲವು ರಕ್ತಕಣಗಳು ಮತ್ತು ನರಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಜೀವಸತ್ವ ಬಿ12 ಮೊಟ್ಟೆ, ಮಾಂಸ ಮತ್ತು ಹಾಲಿನಲ್ಲಿ ಹೇರಳವಾಗಿದ್ದು, ರಕ್ತಕಣ ಮತ್ತು ನರಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೊರತೆಯುಂಟಾದರೆ ರಕ್ತಹೀನತೆ, ಕೈ-ಕಾಲು ಅದರಲ್ಲೂ ಅಂಗೈ-ಪಾದಗಳಲ್ಲಿ ಜೋಮು ಹಿಡಿಯುವುದು, ಸ್ಪರ್ಶಹೀನತೆ, ನರಗಳ ದೌರ್ಬಲ್ಯ, ವಿಪರೀತ ಕಿರಿಕಿರಿಯಿಂದ ರೋಗಿಗಳು ನರಳುತ್ತಾರೆ. ಜೀವಸತ್ವ ‘ಸಿ’ ಟೊಮೆಟೊ, ಬೆಟ್ಟದ ನೆಲ್ಲಿ, ಕಿವಿಹಣ್ಣು, ಇನ್ನಿತರ ಹುಳಿ ಹಣ್ಣು ಮತ್ತು ತರಕಾರಿಗಳಲ್ಲಿ ಹೇರಳವಾಗಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(17 ಏಪ್ರಿಲ್, 2019) ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ…

  • ಆಧ್ಯಾತ್ಮ, ಉಪಯುಕ್ತ ಮಾಹಿತಿ

    ದೇವರಿಗೆ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು ಏಕೆ ಗೊತ್ತಾ?ಇದರ ಹಿಂದೆ ಕಾರಣ…

    ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…

  • ವಿಸ್ಮಯ ಜಗತ್ತು

    ಈ ಬೆಕ್ಕು ಮಗುವನ್ನು ಪ್ರಾಣಪಾಯದಿಂದ ಕಾಪಾಡಿದೆ!ಹೇಗೆ ಅಂತೀರಾ?ಈ ಲೇಖನಿ ಓದಿ…

    ಸಾಕುಪ್ರಾಣಿಗಳು ತಮ್ಮ ಯಜಮಾನನ ಮತ್ತು ಅವರ ಮನೆಯವರನ್ನು ತಮ್ಮ ಪ್ರಾಣ ಒತ್ತೆ ಇಟ್ಟು ರಕ್ಷಣೆ ಮಾಡಿದ ಎಸ್ಟೋ ವಿಚಾರಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗಯೇ ಇಲ್ಲೊಂದು ಬೆಕ್ಕು ಮಗುವನ್ನು ರಕ್ಷಣೆ ಮಾಡಿ ಗಮನಸೆಳೆದಿದೆ.

  • ತಂತ್ರಜ್ಞಾನ

    ಶೌಚಾಲಯಗಳ ಸ್ವಚ್ಛತೆಗೆ ರೈಲ್ವೆ ಇಲಾಖೆ 42 ಕೋಟಿ ಮೌಲ್ಯದ ಹಸುವಿನ ಬೆರಣಿ ಖರೀದಿಸ್ತಿ ಏಕೆ..?ತಿಳಿಯಲು ಇದನ್ನು ಓದಿ..

    ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.

  • ಸುದ್ದಿ

    ರೈತರಿಗೆ ಬಂಪರ್ ಸುದ್ದಿ ಕೊಟ್ಟ ಕುಮಾರಣ್ಣ..!

    ಡಿಸೆಂಬರ್ ಒಳಗೆ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ, ಸಾಲಮನ್ನಾ ಫಲಾನುಭವಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದ ಸಿಎಂ, ಡಿಸೆಂಬರ್ ಒಳಗೆ ರೈತರ ಬೆಳೆ ಸಾಲಮನ್ನಾ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ. ಬ್ಯಾಂಕುಗಳಿಗೆ 4 ಕಂತುಗಳಲ್ಲಿ ರೈತರ ಸಾಲ ಮನ್ನಾದ ಮೊತ್ತವನ್ನು ಪಾವತಿಸಲು ಚಿಂತನೆ ನಡೆದಿತ್ತಾದರೂ, 2 ಕಂತುಗಳಲ್ಲಿ ಸಾಲಮನ್ನಾ ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಿ ಡಿಸೆಂಬರ್ ಒಳಗೆ ಸಂಪೂರ್ಣವಾಗಿ…

  • ಸ್ಪೂರ್ತಿ

    ಬಸ್ ನಲ್ಲಿ ಸಿಕ್ಕ ಒಂದು ಲಕ್ಷವನ್ನು ಕಂಡಕ್ಟರ್ ಮಾಡಿದ್ದೇನು ಗೊತ್ತಾ..?

    ಅಚಾನಕ್ಕಾಗಿ ಯಾರಾದರೂ ದುಡ್ ಸಿಕ್ರೆ ಏನ್ ಮಾಡ್ತಾರೆ? ಕಿಸೆಗೆ ಹಾಕಿಕೊಂಡು ನಡೆದೇ ಬಿಡ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ತನ್ನ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಭದ್ರ ಎಂಬ ಪ್ರಯಾಣಿಕರು ಎಸ್ಟೀಂ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಮರೆತು ಬಸ್ ನಲ್ಲಿ ಬಿಟ್ಟು ಇಳಿದಿದ್ದರು.ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಕಂಡಕ್ಟರ್ ಯಲ್ಲಪ್ಪ ಬೆಟಗೇರಿ, ಪರಿಶೀಲನೆ ನಡೆಸಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿದೆ. ಅಷ್ಟರಲ್ಲಾಗಲೇ ಆತಂಕಗೊಂಡಿದ್ದ ಸುಭದ್ರ…