ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮದುವೆಯ ದಿನ ವರನ ಕುಟುಂಬದವರು ನಗದು, ಒಡವೆ ಸೇರಿದಂತೆ ಒಂದು ಕೋಟಿ ಮೌಲ್ಯದ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರಿಂದ ಯುವತಿಯೊಬ್ಬಳು, ವೈದ್ಯನೊಂದಿಗೆ ನಿಗದಿಯಾಗಿದ್ದ ತನ್ನ ಮದುವೆಯನ್ನೇ ಸ್ಥಗಿತಗೊಳಿಸಿದ್ದಾಳೆ. ಡಾ. ರಾಶಿ ವರದಕ್ಷಿಣೆ ವಿರುದ್ಧ ಹೀಗೆ ಸಿಡಿದೆದ್ದ ವಧು.

ಕೋಟಾದ ವೈದ್ಯಕೀಯ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಅನಿಲ್ ಸಕ್ಸೇನಾ ಅವರ ಮಗಳು ರಾಶಿ ಅವರ ಮದುವೆ, ಉತ್ತರ ಪ್ರದೇಶದ ಮೊರಾದಾಬಾದ್‌ನ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸಕ್ಷಮ್ ಮಧೋಕ್ ಅವರೊಂದಿಗೆ ನಡೆಯಬೇಕಿತ್ತು. ಮದುವೆಗೆ ಕೆಲವೇ ಗಂಟೆಗಳಿದ್ದಾಗ ವರನ ಕಡೆಯವರು ದಿಢೀರನೆ ಹೊಸ ಬೇಡಿಕೆ ಇಟ್ಟಿದ್ದರಿಂದ ರಾಶಿ ಕುಟುಂಬದವರು ಆಘಾತಕ್ಕೆ ಒಳಗಾದರು.

ನಿಶ್ಚಿತಾರ್ಥದಂದು ಕಾರು ಹಾಗೂ ತಲಾ 10 ಗ್ರಾಂನ 5 ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದೆವು. ಅಲ್ಲದೆ ಮದುವೆಯ ವ್ಯವಸ್ಥೆಗಾಗಿ ಅದಾಗಲೇ 30– 35 ಲಕ್ಷ ರೂಪಾಯಿ ವ್ಯಯಿಸಿದ್ದೆವು. ಅಷ್ಟಾದರೂ ಕೊನೇ ಕ್ಷಣದಲ್ಲಿ ಮತ್ತೆ ಹಣ ಮತ್ತು ಭಾರಿ ಮೊತ್ತದ ವಸ್ತುಗಳಿಗೆ ಬೇಡಿಕೆ ಇಟ್ಟಾಗ ನಾವು ಮಗಳಿಗೆ ವಿಷಯ ತಿಳಿಸಿದೆವು. ಆಕೆ ವರನೊಂದಿಗೆ ಫೋನ್‌ನಲ್ಲಿ ಮಾತನಾಡಿದಳು. ಆತ ಪಟ್ಟು ಸಡಿಲಿಸದಿದ್ದಾಗ, ಮದುವೆಯಾಗದಿರಲು ರಾಶಿ ನಿರ್ಧರಿಸಿದಳು’ ಎಂದು ಡಾ. ಅನಿಲ್ ಸಕ್ಸೇನಾ ತಿಳಿಸಿದ್ದಾರೆ.

ಬಳಿಕ ರಾಶಿ ಕುಟುಂಬದವರು ಸಕ್ಷಮ್, ಆತನ ಪೋಷಕರು, ಸಹೋದರಿ ಹಾಗೂ ಆಕೆಯ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇಷ್ಟೆಲ್ಲಾ ಆದರೂ, ಊಟ ಮುಗಿದ ಬಳಿಕವೇ ಅತಿಥಿಗಳಿಗೆ ಮದುವೆ ಮುರಿದುಬಿದ್ದ ವಿಷಯವನ್ನು ತಿಳಿಸಿದ ರಾಶಿ ಕುಟುಂಬದವರ ಅತಿಥಿ ಸತ್ಕಾರ ಶ್ಲಾಘನೆಗೆ ಪಾತ್ರವಾಗಿದೆ.

‘ಇಂತಹ ಘಟನೆ ಮತ್ತಷ್ಟು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಲಿ’ ಎಂದು ಅತಿಥಿಗಳು ವಧುವಿನ ನಿರ್ಧಾರವನ್ನು ಹೊಗಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡ್ರಗ್ಸ್, ಆಲ್ಕೋಹಾಲ್‌ನಂತಹ ಕೆಟ್ಟ ಚಟಗಳಿಗೆ ಅಡಿಕ್ಟ್ ಆಗಿರುವಂತೆ ಸ್ಮಾರ್ಟ್‌ಫೋನ್‌ಗಳಿಗೆ ಇಂದಿನ ಜನ ಅಡಿಕ್ಟ್ ಆಗುತ್ತಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ. ಆದರೆ, ಇದೀಗ ಬಿಡುಗಡೆಯಾಗಿರುವ ನೂತನ ವರದಿಯೊಂದು ಸ್ಮಾರ್ಟ್‌ಫೋನ್ ಬಳಕೆಗೂ ಒಂದು ಮಿತಿ ಎನ್ನುವುದನ್ನು ಸಾರಿಸಾರಿ ಹೇಳುತ್ತಿದೆ. ಹೌದು, ಜನರಿಗೆ ಸ್ಮಾರ್ಟ್‌ಪೋನ್ ಸಿಕ್ಕನಂತರವಂತೂ ಪ್ರಪಂಚವೇ ಮರೆತುಹೋಗಿದ್ದಾರೆ. ರಾತ್ರಿಹಗಲೂ ಎನ್ನದೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾ ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಅಮೆರಿಕಾದ ‘ಸ್ಯಾನ್ ಡೈಗೊ ಸ್ಟೇಟ್’ ಯೂನಿವರ್ಸಿಟಿಯ ಅಧ್ಯಯನವೊಂದು ಎಚ್ಚರಿಕೆ…
ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.
ಅಮೆರಿಕದ ಗೊಡಾರ್ಡ್ ನಗರದ ಪ್ರಾಥಮಿಕ ಶಾಲೆಯ ಏಳು ಶಿಕ್ಷಕಿಯರು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಏಳು ಶಿಕ್ಷಕಿಯರು 15 ರಿಂದ 1 ತಿಂಗಳ ಆಸುಪಾಸಿನಲ್ಲಿ ಏಕಕಾಲದಲ್ಲಿ ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾ ಮಹಿಳಾ ಸಹದ್ಯೋಗಿಗಳು ಏಕಕಾಲದಲ್ಲಿ ತಾಯಿ ಆಗುತ್ತಿದ್ದೇವೆ. ಏಳು ಶಿಕ್ಷಕಿಯರು ಒಂದೇ ಬಾರಿ ಗರ್ಭಿಣಿ ಆಗಬೇಕೆಂಬುವುದು ದೇವರ ಇಚ್ಛೆ. ಶಿಕ್ಷಕಿ ಟಿಫನಿ ಎಂಬವರು ಮೂರನೇ ಬಾರಿ ಗರ್ಭಿಣಿಯಾಗಿದ್ದು, ಅವರಿಗೆ 9 ಮತ್ತು 7 ವರ್ಷದ ಮಕ್ಕಳಿವೆ ಎಂದು ಶಿಕ್ಷಕಿ ಕೈಟಿ ಸಂತಸ ವ್ಯಕ್ತಪಡಿಸುತ್ತಾರೆ. ನನ್ನ 20 ವರ್ಷದ…
ಶನಿವಾರ ಬೆಳಗ್ಗೆ ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕೇದಾರನಾಥ ಮಂದಿರಕ್ಕೆ ತೆರಳಿದರು. ಸಮುದ್ರ ಮಟ್ಟದಿಂದ 11,755 ಅಡಿ ಎತ್ತರದಲ್ಲಿರುವ ಕೇದಾರನಾಥ ಮಂದಿರದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರವಾಹ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕೇದಾರನಾಥ ಕ್ಷೇತ್ರದ ಪುನರ್ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪ್ರಧಾನಿ ಪರಾಮರ್ಶಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಉತ್ತರಾಖಂಡದ ಕೇದಾರನಾಥಕ್ಕೆ ಶನಿವಾರ ಆಗಮಿಸಿದರು. ಸಾರ್ವತ್ರಿಕ ಚುನಾವಣೆಯ ಪ್ರಚಾರ ಕೊನೆಗೊಂಡ ಮರುದಿನವೇ ಪ್ರಧಾನಿ…
ಬೇಗ ಕೂದಲು ಬೆಳೆದರೆ ಯಾರು ತಾನೇ ಇಷ್ಟಪಡುವುದಿಲ್ಲ? ಹೊಳೆಯುವ, ದಪ್ಪವಾದ, ಬಲವಾದ ಮತ್ತು ಉದ್ದವಾದ ಕೂದಲನ್ನು ಹೊಂದವುದು ಪ್ರತಿ ಮಹಿಳೆಯ ಕನಸಾಗಿರುತ್ತೆ.ಆದರೆ ಎಷ್ಟು ಮಂದಿ ನಿಜವಾಗಿಯೂ ಆ ಉದ್ದವಾದ ಮತ್ತು ಗಟ್ಟಿಯಾದ ಕೂದಲನ್ನು ಹೊಂದಿದ್ದಾರೆ?
ಮಳೆ ಬಂದ್ರೆ ಸಾಕು ಬೆಂಗಳೂರಿಗರಿಗೆ ಭಯ.ಯಾಕೆಂದ್ರೆ ಎಲ್ಲಿ ಏನಾಗುತ್ತೆ ಗೊತ್ತಿಲ್ಲ. ಯಾವ ಮೋರಿಯಿಂದ ನೀರು ಹೊರಬಂದು ಮನೆಗಳಿಗೆ ನುಗ್ಗುತ್ತೋ ಎನ್ನುವ ಭಯ. ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತೋ ಅನ್ನೋ ಭಯ.ಇವೆಲ್ಲದರ ನಡುವೆ ಇನ್ನೊಂದು ಭಾಗ್ಯ ಬೆಂಗಳೂರಿಗರಿಗೆ ಸೇರಲಿದೆ.