ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಇವತ್ತು ಇಡೀ ಪ್ರಪಂಚದಲ್ಲೇ ವೇಗವಾಗಿ ಓಡೋನು ಅನುಸ್ಕೊಂಡಿರೋ ಉಸೇನ್ ಬೋಲ್ಟ್ ಸಹ, ಸೋತು, ಬಿದ್ದು ಎದ್ದು ಈಗ ಗೆಲ್ತಾ ಇರೋದು.. ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..!

ಜೀವನ ಹೆಂಗಿರುತ್ತೆ ಗೊತ್ತಾ..? ಎಂತವರನ್ನೆ ಕೇಳಿ ನೋಡಿ, ಸಾಕಾಗಿದೆ ಅನ್ನೋ ಉತ್ತರ ಕೊಡ್ತಾರೆ.. ಅವನು ರಸ್ತೇಲಿ ಭಿಕ್ಷೆ ಬೇಡೋನಾದ್ರೂ ಅಷ್ಟೆ, ಆಡಿ ಕಾರಲ್ಲಿ ಜುಮ್ ಅಂತ ಹೋಗೋನಾದ್ರೂ ಅಷ್ಟೆ..! ಅವರವರಿಗೆ ಅವರವರ ಸಮಸ್ಯೆಗಳು.. ಹಂಗಂತ ಸಮಸ್ಯೆಗಳನ್ನ ತಲೆ ಮೇಲೆ ಹೊತ್ಕೊಂಡು ಕೂತ್ರೆ ಸಮಸ್ಯೆ ಕಮ್ಮಿ ಆಗೋದೇ ಇಲ್ಲ..! ಸಮಸ್ಯೆ ಬರೋಕೆ ಮುಂಚೇನೇ ಅದನ್ನ ಹೆದರಿಸಿ ಓಡ್ಸೋ ಪ್ರಯತ್ನ ಮಾಡಬೇಕು. ಸಾಧ್ಯ ಆಗಲೇ ಇಲ್ಲ, ಸಮಸ್ಯೆ ಆಗೇ ಹೋಯ್ತು ಅಂದಾಗ ಅದನ್ನು ಎದುರಿಸೋ ತಾಕತ್ತು ಇರಬೇಕು.. ಐಸ್ ಕ್ರೀಮ್ ತಿನ್ನಬೇಕಾದ್ರೆ ಎಂಜಾಯ್ ಮಾಡ್ಕೊಂಡು ತಿನ್ನೋರು ಶೀತ ಆದ್ರೆ ಮಾತ್ರೆ ತಿನ್ನೋಕೂ ರೆಡಿ ಇರಬೇಕು..! ಬರೀ ಐಸ್ ಕ್ರೀಂ ಬೇಕು, ಶೀತ ಬೇಡ ಅಂದ್ರೆ ಆಗಲ್ಲ.. ಹಾಗೇನೇ, ಬರೀ ಗೆಲುವೇ ಬೇಕು, ಸೋಲು ಬರಲೇಬಾರದು ಅಂದ್ರೆ ಸಾಧ್ಯವೇ ಇಲ್ಲ..! ಇವತ್ತು ಗೆದ್ದವರೆಲ್ಲಾ ಸೋತು ಸೋತು ಸೋತು ಗೆದ್ದವರು..! ಗೆಲುವಿನ ಹಿಂದೆ ಸೋಲಿನ ಸರಮಾಲೆಗಳಿರುತ್ತೆ.

ಕೆಲವರು ಏನೋ ಮಾಡ್ಬೇಕು ಅಂತ ಹೋಗ್ತಾರೆ, ಆದ್ರೆ ಕೈ ಸುಟ್ಟುಕೊಂಡು ಸುಮ್ಮನಾಗಿಬಿಡ್ತಾರೆ.. ಒಂದು ಇಡ್ಲಿ ಅಂಗಡಿ ಓಪನ್ ಮಾಡೋನು ಮೊದಲ ದಿನವೇ 1000 ಇಡ್ಲಿ ಸೇಲ್ ಆಗಬೇಕು ಅಂತ ಯೋಚನೆ ಮಾಡೋದ್ರಲ್ಲಿ ತಪ್ಪಿಲ್ಲ..! ಆದ್ರೆ ಆಗಿಲ್ಲ ಅಂತ ಮಾರನೇ ದಿನವೇ ಅಂಗಡಿ ಮುಚ್ಚಿದ್ರೆ ಹೇಗೆ..? ಇವತ್ತು ಇಡ್ಲಿ ತಿಂದ ಹತ್ತಾರು ಜನ ನಾಳೆ ನೂರಾರು ಜನರಿಗೆ ಹೇಳಬೇಕು. ಅವರು ನಿಮ್ಮ ಹೋಟೆಲ್ ಹುಡುಕಿ ಬರಬೇಕು.. ಅವರಿಗೆ ನೀವು ಕೊಟ್ಟ ಇಡ್ಲಿ ಇಷ್ಟ ಆಗಬೇಕು. ಮತ್ತೆ ಅವರು ಮತ್ತಷ್ಟು ಜನರಿಗೆ ಹೇಳಬೇಕು.. ಹೀಗೆ ಮಾಡಿದಾಗ ಮಾತ್ರ ಸಾವಿರ ಇಡ್ಲಿ ಮಾರಬೇಕು ಅನ್ಕೊಂಡೋರು ಎರಡು ಸಾವಿರ ಇಡ್ಲಿ ಮಾರೋಕೆ ಸಾಧ್ಯ..! ಮೊದಲ ದಿನ ಅನ್ಕೊಂಡಷ್ಟು ಆಗದೇ ಇರಬಹುದು, ಆದ್ರೆ ಮುಂದೊಂದು ದಿನ ಅನ್ಕೊಂಡಿದ್ದಕ್ಕಿಂತ ಜಾಸ್ತಿ ಆಗುತ್ತೆ..! ಅಲ್ಲಿ ತನಕ ಕಾಯೋ ತಾಳ್ಮೆ ಇರಬೇಕು. ಫಸ್ಟ್ ಡೇ ಆಗಿಲ್ಲ ಅಂದಮಾತ್ರಕ್ಕೆ ಅದು ಸೋಲಲ್ಲ..!

ನೆನಪಿಟ್ಕೊಳಿ ಸೋಲು ನಿಮಗೆ ನಿಮ್ಮವರು ಯಾರು ಅನ್ನೊದು ಪರಿಚಯಿಸುತ್ತೆ..! ಸೋತಾಗ ನಿಮ್ಮ ಜೊತೆಗೆ ಯಾರಿರ್ತಾರೋ ಅವರು ಮಾತ್ರ ಸಾಯೋ ತನಕ ಜೊತೆಗಿರ್ತಾರೆ.. ನೀವು ಸೋತು ಗೆದ್ದಾಗ ಮಾತ್ರ ಪ್ರಪಂಚ ಏನು ಅಂತ ನಿಮಗೆ ಅರ್ಥ ಆಗೋದು.. ಗೆಲುವು ಈಸಿಯಾಗಿ ಸಿಕ್ಕಿದ್ರೆ ಅಷ್ಟೆ ಬೇಗ ಅದು ನಿಮ್ಮ ಕೈ ಜಾರಿ ಹೋಗುತ್ತೆ.. ಸೋತು ಗೆದ್ದವನಿಗೆ ಮಾತ್ರ ಗೆಲುವು ಉಳಿಸ್ಕೊಳೋ ಐಡಿಯಾ ಇರುತ್ತೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…
ಪ್ರತಿ ಸಂಡೇ, ಚಿಕನ್, ಮಟನ್, ಫಿಶ್ ತಿನ್ನುತ್ತೀರಾ. ಹೀಗಾಗಿ ಈ ವಾರ ಆರೋಗ್ಯಕ್ಕೆ ಉತ್ತಮವಾದ ಕಾಲ್ ಸೂಪ್ ಮಾಡಿ ಸವಿಯಿರಿ. ಮಕ್ಕಳಿಂದ ವೃದ್ಧರವೆಗೂ ಕಾಲ್ ಸೂಪನ್ನು ಕುಡಿಯುತ್ತಾರೆ. ಆದರೆ ಮಕ್ಕಳು ಕುಡಿಯಲು ಇಷ್ಟಪಡುವುದಿಲ್ಲ. ಅದಕ್ಕೆ ಮಸಲಾ ಹಾಕಿ ರುಚಿಕರವಾಗಿ ಮಾಡಿಕೊಟ್ಟರೆ ಕುಡಿಯುತ್ತಾರೆ. ಆದ್ದರಿಂದ ಎರಡು ವಿಧಾನದಲ್ಲಿ ಕಾಲ್ ಸೂಪ್ ಮಾಡುವ ವಿಧಾನ ನಿಮಗಾಗಿ… ಬೇಕಾಗುವ ಸಾಮಾಗ್ರಿಗಳು 1. ಮೇಕೆ ಕಾಲು – 2, 2. ಈರುಳ್ಳಿ – ಮೀಡಿಯಂ, 3. ಬೆಳ್ಳುಳ್ಳಿ – 2-3 ಎಸಳು4. ಶುಂಠಿ –…
ಆಗಸದಲ್ಲಿ ವಾಸಮಾಡಲು ಜನರು ನಿರ್ಧರಿಸುತ್ತಿರುವ ಈ ಆಂತರಿಕ ಯುಗದಲ್ಲಿ, ಇನ್ನೂ ಕೆಲುವು ಬುಡಕಟ್ಟು ಜನಾಂಗಗಳು ನೀರಿನಲ್ಲಿ ವಾಸ ಮಾಡುತ್ತಿರುವುದು ಆಚ್ಚರಿ ಸಂಗತಿ.
ಕನ್ನಡ ಕಿರುತೆರೆಯ ಇತಿಹಾಸದಲ್ಲಿ, ಇತಿಹಾಸವನ್ನೇ ಸೃಷ್ಟಿಸಿದ್ದ, ಸುರ್ವಣ ವಾಹಿನಿಯ ಬಹುದೊಡ್ಡ ರಿಯಾಲಿಟಿ ಶೋ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮತ್ತೆ ಬರ್ತಿದೆ.ಈ ಕಾರ್ಯಕ್ರಮ ಮೊದಲ ಬಾರಿಗೆ, 2008ರಲ್ಲಿ ಬಿಗ್ ಬಾಸ್ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬಂದಿತ್ತು. ಸುರ್ವಣ ವಾಹಿನಿಯ ಬಹುನಿರೀಕ್ಷಿತ ರಿಯಾಲಿಟಿ ಶೋ
ಇಂದು ಶನಿವಾರ 10/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಗಾಯಕ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ನಿಶ್ಚಿತಾರ್ಥ ಇಂದು (ಸೋಮವಾರ) ನಡೆಯಲಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ…