ಇತಿಹಾಸ

ರಾಣಿ ಪದ್ಮಿನಿಗೂ ಮತ್ತು ಅಲ್ಲಾವುದ್ದೀನ್ ಖಿಲ್ಜಿಗೂ ಇದ್ದ ನಿಜವಾದ ಸಂಬಂದ ಏನು ಗೊತ್ತಾ..?ಪದ್ಮಾವತಿಯು ಬೆಂಕಿಗೆ ಹಾರಿ ಸತ್ತಿದ್ದು ಏಕೆ?ರೋಚಕವಾಗಿದೆ ರಾಣಿ ಪದ್ಮಿನಿಯ ರಿಯಲ್ ಸ್ಟೋರಿ…

1826

ರಾಣಿ ಪದ್ಮಿನಿ 13ನೇ ಶತಮಾನದ ರಾಜಸ್ಥಾನದ  ಮೇವಾಡ್ ಸಂಸ್ಥಾನ (ಈಗಿನ ಚಿತ್ತೋಡಗಢ, ರಾಜಸ್ಥಾನ) ರಾಜ ರಾವಲ್ ರತನ ಸಿಂಗ್ ನ ರಾಣಿಯಾಗಿದ್ದಳು.ರಾಣಿ ಪದ್ಮಿನಿಯು ತುಂಬಾ ಸೌಂದರ್ಯವತಿಯಾಗಿದ್ದಳು ಕೂಡ. ಆಗ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ದೊರೆಯಾಗಿ ದೆಹಲಿಯನ್ನಾಳುತ್ತಿದ್ದ, ಆತನೊಬ್ಬ ಹಿಂದೂ ವಿರೋಧಿ, ವಿಕೃತ ಕಾಮಿ & ಸಲಿಂಗಕಾಮಿಯೂ ಆಗಿದ್ದ.

ಅಲ್ಲಾವುದ್ದೀನ್ ಖಿಲ್ಜಿ ಬರೆದ ಆ ಪತ್ರದಲ್ಲಿ ಏನಿತ್ತು..?

ಆತನಿಗೆ ರಾಣಿ ಪದ್ಮಿನಿಯ ಸೌಂದರ್ಯದ ಬಗ್ಗೆ ಹೇಗೋ ತಿಳಿದು ಆಕೆಯನ್ನ ತನ್ನ ಕಾಮತೃಷೆಗಾಗಿ ಬಳಸಿಕೊಳ್ಳಬೇಕೆಂದು ಆಸೆಯಾದಾಗ ಆತ ಮಾಡಿದ ಕುತಂತ್ರವೆಂದರೆ ಆತ ಮೇವಾಡಕ್ಕೆ ಪತ್ರವೊಂದನ್ನ ಬರೀತಾನೆ. “ರಕ್ಷಾ ಬಂಧನ ಸದ್ಯದಲ್ಲೇ ಇರೋದ್ರಿಂದ ನಾನು ನಿನ್ನ(ರಾವಲ್ ರತನ ಸಿಂಗ್) ಹೆಂಡತಿ(ರಾಣಿ ಪದ್ಮಿನಿ)ಯನ್ನ ತಂಗಿಯಂತೆ ಸ್ವೀಕರಿಸಿದ್ದೇನೆ, ರಕ್ಷಾಬಂಧನಕ್ಕೆ ನಿನ್ನ ರಾಜ್ಯಕ್ಕೆ ಬಂದು ನಿನ್ನ ಹೆಂಡತಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತೇನೆ”

ಇದನ್ನ ಓದಿದ ರಾವಲ್ ಸಿಂಗ್ “ಸರಿ ಆಯಿತು ಆದರೆ ಒಂದು ಷರತ್ತು, ನನ್ನ ಹೆಂಡತಿ ಮುಖತಃ ನಿನ್ನ ಕೈಗೆ ರಾಖಿ ಕಟ್ಟಲ್ಲ ಆದರೆ ಆಕೆ ಅದಕ್ಕೆ ಪೂಜೆ ಮಾಡಿ ಇಟ್ಟಿರುತ್ತಾಳೆ ಅದನ್ನ ನಿನ್ನ ಕೈಗೆ ನಮ್ಮ ರಾಣಿಯ ಸಖಿಯರು ಕಟ್ತಾರೆ” ಅಂತ ವಾಪಸ್ ಪತ್ರ ಬರೀತಾನೆ.

ಅಲ್ಲಾವುದ್ದೀನ್ ಖಿಲ್ಜಿಯ ಷಡ್ಯಂತ್ರ:-

ಇದಕ್ಕೊಪ್ಪಿದ ಖಿಲ್ಜಿ ದೆಹಲಿಯಿಂದ ಹೊರಟು ಗುಪ್ತವಾಗಿ ತನ್ನ ದೊಡ್ಡ ಸೈನ್ಯವನ್ನ ಚಿತ್ತೋಡಗಢದಲ್ಲಿ ಬಿಡಾರ ಹೂಡಿಸಿ, ರಾವಲ್ ಸಿಂಗನ ಆಸ್ಥಾನಕ್ಕೆ ಒಂದಿಬ್ಬರು ಸಂಗಡಿಗರ ಜೊತೆ ಬರ್ತಾನೆ, ಬಂದ ಅತಿಥಿಗೆ ಆದರ ಆತಿಥ್ಯಗಳೂ ಸಿಕ್ಕವು, ಆತನ ಕೈಗೆ ರಾಖಿ ಕಟ್ಟಲು ಬಂದ ರಾಣಿಯ ಸಖಿಯನ್ನ ಕಂಡ ಅಲ್ಲಾವುದ್ದೀನ್ ಹೇಳ್ತಾನೆ “ನಾನು ಒಂದೇ ಒಂದು ಬಾರಿ ನನ್ನ ತಂಗಿ ಸಮಾನಳಾದ ಪದ್ಮಿನಿಯನ್ನ ನೋಡಬೇಕಲ್ಲ?”

ಇದಕ್ಕೆ ರಾಜ ಹೇಳ್ತಾನೆ “ಸರಿ ಆಯಿತು ಆದರೆ ಒಂದು ಷರತ್ತು, ರಾಣಿ ಮುಖತಃ ನಿಮಗೆ ತನ್ನ ಮುಖ ತೋರಿಸಲ್ಲ, ಆಕೆ ಆಕೆಯ ಅರಮನೆಯ ಹೊರಾಂಗಣದಲ್ಲಿ ನಿಂತಿರುತ್ತಾಳೆ, ಆಕೆಯ ಪ್ರತಿಬಿಂಬ ಒಂದು ರೂಮಿನ ಕನ್ನಡಿಯಲ್ಲಿ ಕಾಣುತ್ತೆ, ಆ ಪ್ರತಿಬಿಂಬದಲ್ಲಿ ನೀವು ಆಕೆಯ ಮುಖವನ್ನು ನೋಡಬಹುದು”ಇದಕ್ಕೊಪ್ಪಿದ ಖಿಲ್ಜಿ “ಆಯ್ತು ಸರಿ” ಅಂತಾನೆ.

ರಾಜ ರಾವಲ್ ರತನ ಸಿಂಗ್ ನ ಬುದ್ದಿವಂತಿಕೆ…

ಸರಿ ರಾಣಿ ಪದ್ಮಿನಿ ತನ್ನ ಮಹಲಿನ ಸರೋವರದ ಹತ್ತಿರ ಬಂದು ನಿಲ್ತಾಳೆ, ಅವಳ ಪ್ರತಿಬಿಂಬ ಆ ರೂಮಿನ ಕನ್ನಡಿಯ ಮೇಲೆ ಕಂಡ ಖಿಲ್ಜಿಗೆ ಆಕೆಯ ಸೌಂದರ್ಯ ದಂಗುಬಡಿಸಿತ್ತು, ಹೇಗಾದರೂ ಮಾಡಿ ಈಕೆಯನ್ನ ತನ್ನ ಪಟ್ಟದರಸಿ ಮಾಡಿಕೊಳ್ಳೇಬೇಕು ಅಂತ ಖಿಲ್ಜಿ ತೀರ್ಮಾನಿಸಿ ಒಮ್ಮಿಂದೊಮ್ಮೆಲೇ ರಾಜನ ಮೇಲೆ ದಾಳಿ ನಡೆಸಿ ರಾವಲ್ ಸಿಂಗನನನ್ನ ಯುದ್ಧ ಕೈದಿಯಾಗಿ ದೆಹಲಿಗೆ ಕರೆದುಕೊಂಡು ಹೋಗ್ತಾನೆ ಆದರೆ ರಾಣಿ ಪದ್ಮಿನಿ ಆತನ ಕೈಗೆ ಸಿಗಲ್ಲ.

ರಜಪೂತ ಇತಿಹಾಸಕಾರರು ಹೇಳುವುದೇನು?

(ಆದರೆ ರಜಪೂತ ಇತಿಹಾಸಕಾರರ ಪ್ರಕಾರ ಅಲ್ಲಿ ಬಂದು ಖಿಲ್ಜಿಗೆ ಮುಖ ತೋರಿಸಿದ್ದು ರಾಣಿ ಪದ್ಮಿನಿಯದ್ದಲ್ಲ, ಬದಲಾಗಿ ರಾಣಿಯ ಸಖಿ ಅಲ್ಲಿ ಬಂದು ನಿಂತದ್ದು, ಆದರೆ ಖಿಲ್ಜಿ ಒಂದು ಬಾರಿಯೂ ರಾಣಿ ಪದ್ಮಿನಿಯ ಮುಖ ನೋಡಿರದ ಕಾರಣ ರಾಣಿಯ ಸಖಿಯನ್ನೇ ಪದ್ಮಿನಿ ಅಂದುಕೊಳ್ತಾನಂತೆ)ನಿಜವಾಗಿಯೂ ಆತನಿಗೆ ಪದ್ಮಿನಿಯ ಸೌಂದರ್ಯ ಕಂಡು ಆಕೆಯನ್ನ ಮದುವೆ ಆಗೋ ಚಪಲವಿತ್ತೇ ಹೊರತು ಆಕೆಯನ್ನ ಆತ ತಂಗಿ ಅಂತ ಬಾಯಿಮಾತಿಗಷ್ಟೇ ತನ್ನ ಮಾಯಾಜಾಲ ಬೀಸಲು ಸುಳ್ಳು ಹೇಳಿದ್ದು.

ಅಲ್ಲಾವುದ್ದಿನ್ ಖಿಲ್ಜಿ ರಾಣಿ ಪದ್ಮಿನಿಗೆ ಬರೆದ ಪತ್ರದಲ್ಲಿದ್ದ ಆದೇಶ ಏನು..?

ರಾಜಾ ರಾವಲ್ ರತನ್ ಸಿಂಗ್ ಬಂಧಿಯಾಗಿ ದೆಹಲಿಯಲ್ಲಿದ್ದಾಗ ಅಲ್ಲಾವುದ್ದಿನ್ ಖಿಲ್ಜಿ ಚಿತ್ತೋಡಗಢಕ್ಕೆ ಪತ್ರ ಬರೆದು ಪದ್ಮಿನಿಗೆ ಹೀಗೆ ಹೇಳ್ತಾನೆ “ನಿನ್ನ ಗಂಡನನ್ನ ನೀನು ಜೀವಸಹಿತವಾಗಿ ನೋಡಬೇಕೆಂದರೆ ನೀನು ನನ್ನವಳಾಗಬೇಕು, ನೀ ನನ್ನ ಮದುವೆಯಾಗಿ ನನ್ನ ಜನಾನಾಗೆ ಬರಬೇಕು ಆಗ ಮಾತ್ರ ನಾ ನಿನ್ನ ಗಂಡನನ್ನ ಬಿಡುಗಡೆ ಮಾಡ್ತೀನಿ”

ಇದನ್ನೋದಿದ ರಾಣಿ ಪದ್ಮಿನಿಯ ರಕ್ತ ಕೊತ ಕೊತ ಕುದಿಯುತ್ತ ಆಕೆ ಖಿಲ್ಜಿಗೆ ಉತ್ತರ ಕೊಡ್ತಾ ಹೀಗೆ ಹೇಳ್ತಾಳೆ. “ನನಗೆ ನನ್ನ ಗಂಡನ ಕ್ಷೇಮ ಮುಖ್ಯ, ನಾನು ನಿನ್ನ ಷರತ್ತಿಗೆ ಒಪ್ಪುತ್ತೇನೆ, ಆದರೆ ನೀವು ಚಿತ್ತೋಡಗಢಕ್ಕೆ ಬರೋದು ಬೇಡ, ನಾನೇ ನಮ್ಮ ರಜಪೂತ ಪರಂಪರೆಯ ಪ್ರಕಾರ 100 ಪಲ್ಲಕ್ಕಿಗಳ ಜೊತೆಗೆ ನನ್ನ ಸಖಿಯರೊಂದಿಗೆ ನಿಮ್ಮ ಆಸ್ಥಾನಕ್ಕೆ ಬಂದು ನಿಮಗೆ ಶರಣಾಗ್ತೀನಿ”. ಇದನ್ನೋದಿದ ಖಿಲ್ಜಿಗೆ ಮತ್ತೂ ಖುಷಿಯಾಗಿ ಒಬ್ಬ ಸುರಸುಂದರಾಂಗಿ ಪದ್ಮಿನಿ ಸಿಗ್ತಾಳೆ ಅನ್ಕೊಂಡಿದ್ದೆ ಆದರೆ ಆಕೆ ಜೊತೆಗೆ ಇನ್ನೂ ನೂರು ಜನ ಸುಂದರ ಸಖಿಯರಿರ್ತಾರೆ ಅಂತ ಮನದಲ್ಲೇ ತನ್ನ ಕಾಮಾಗ್ನಿಯ ಬಯಕೆಯನ್ನು ಇಮ್ಮಡಿಗೊಳಿಸಿಕೊಳ್ತಾನೆ.

ರಾಣಿ ಪದ್ಮಿನಿಯು ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡಿಸಿದ್ದೇ ಒಂದು ರೋಚಕ್…

ಆ ದಿನ ಬಂದೇ ಬಿಟ್ಟಿತು, ರಾಣಿ ಪದ್ಮಿನಿ ನೂರು ಪಲ್ಲಕ್ಕಿಗಳ ಮೂಲಕ ಖಿಲ್ಜಿಯ ಆಸ್ಥಾನಕ್ಕೆ ಬಂದೇ ಬಿಟ್ಟಳು, ಆಗಲೂ ಆತ ಆಕೆಯ ನಿಜವಾದ ಮುಖ ಇನ್ನೂ ನೋಡಿರಲಿಲ್ಲ, ಯಾವಾಗ ಆತ ಪಲ್ಲಕ್ಕಿಯ ಹತ್ತಿರ ಹೊರಟು ಪದ್ಮಿನಿಯನ್ನ ನೋಡಲು ಬರುತ್ತಾನೋ ಆಗ ಪಲ್ಲಕ್ಕಿಗಳಿಂದ ಹರಹರಮಹಾದೇವ ಘೋಷಣೆಗಳನ್ನ ಕೂಗುತ್ತ ನೂರು ಜನ ರಜಪೂತ ಸೈನಿಕರು ಒಮ್ಮೆಲೆ ಅಲ್ಲಾವುದ್ದೀನ್ ಖಿಲ್ಜಿಯ ಮೇಲೆ ದಾಳಿ ಮಾಡ್ತಾರೆ. ಇದು ರಾಣಿ ಪದ್ಮಿನಿಯೇ ಖಿಲ್ಜಿಯ ಸೊಕ್ಕು ಮುರಿಯೋದಕ್ಕೆ ರಚಿಸಿದ್ದ ಪದ್ಮವ್ಯೂಹವಾಗಿತ್ತು, ನೂರು ಪಲ್ಲಕ್ಕಿಗಳಲ್ಲಿ ತನ್ನ ಸಖಿಯರಿರ್ತಾರೆ ಅಂತ ಹೇಳಿದ್ದ ಪದ್ಮಿನಿ ಅವುಗಳಲ್ಲಿ ತನ್ನ 100 ಬಲಾಢ್ಯ ರಜಪೂತ ಸೈನಿಕರನ್ನ ಕರೆತಂದಿರ್ತಾಳೆ. ಖಿಲ್ಜಿಗೆ ತನ್ನ ಆಸ್ಥಾನದಲ್ಲಿ ಏನ್ ನಡೀತಿದೆ ಅಂತ ಅರ್ಥವಾಗೋಕೂ ಮುಂಚೆಯೇ ರಾಣಿ ಪದ್ಮಿನಿ ಖಿಲ್ಜಿಯ ಹೆಡೆಮುರಿಕಟ್ಟಿ ಸೋಲಿಸಿ ತನ್ನ ಗಂಡ ರಾವಲ್ ರತನ್ ಸಿಂಗನನ್ನ ಬಿಡಿಸಿಕೊಂಡು ಚಿತ್ತೋಡಗಢಕ್ಕೆ ವಾಪಸ್ಸಾಗ್ತಾಳೆ.

ಅವಮಾನಿತನಾದ ಅಲ್ಲಾವುದ್ದೀನ್ ಖಿಲ್ಜಿಯಿಂದ ಚಿತ್ತೋಡಗಢದ ಮೇಲೆ ದಾಳಿ…

ಈ ಘಟನೆಯಿಂದ ಅದೂ ಒಂದು ಹೆಣ್ಣಿನ ಕೈಯಿಂದ ನಾನು ಸೋಲೋದಾ ಅಂತ ಪಿತ್ತ ನಿತ್ತಗೇರಿದ ಅಲ್ಲಾವುದ್ದೀನ್ ಖಿಲ್ಜಿ, ಈ ಬಾರಿ ಮತ್ತೆ ಚಿತ್ತೋಡಗಢದ ಮೇಲೆ ದಾಳಿ ಮಾಡ್ತಾನೆ, ಕೆಲ ದಿನಗಳ ಕಾಲ ರಜಪೂತರು ಖಿಲ್ಜಿಗೆ ಪ್ರತಿರೋಧ ತೋರುತ್ತಾರೆ ಆದರೆ ಖಿಲ್ಜಿಯ ಬೃಹತ್ ಸೈನ್ಯದೆದುರು ರಜಪೂತರು ಸೋಲುತ್ತಾರೆ. ಕೋಟೆಗಿದ್ದ ಒಂದೇ ಒಂದು ದ್ವಾರವನ್ನು ತನ್ನ ಸೈನಿಕರಿಂದ ಮುಚ್ಚಿಸಿ ರಜಪೂತ ಸೈನಿಕರಿಗೆ ಹೊರಗಿನಿಂದ ಯಾವ ಸಾಮಗ್ರಿಗಳು ಸಿಗದ ಹಾಗೆ ಮಾಡಿ ಚಿತ್ತೋಡವನ್ನ ಖಿಲ್ಜಿ ವಶಪಡಿಸಿಕೊಂಡು ರಾವಲ್ ರತನ್ ಸಿಂಹನ ತಲೆ ಕಡಿದು ಹಾಕ್ತಾನೆ.

ರಾಣಿ ಪದ್ಮಾವತಿ ತನ್ನ 16,000 ಸಖಿಯರೊಂದಿಗೆ ಬೆಂಕಿಗೆ ಹಾರಿದ್ದು..!

ಈಗ ಮುಂದೇನು? ಅಲ್ಲಾವುದ್ದೀನ್ ಎಂಬ ಕಾಮುಕ ಚಿತ್ತೋಡದಲ್ಲಿರೊ ಎಲ್ಲ ರಜಪೂತ ಮಹಿಳೆಯರನ್ನೂ ಸೆಕ್ಸ್ ಸ್ಲೇವ್ಸ್ಗಳಾಗಿ ಕರೆದುಕೊಂಡು ಹೋಗೋಕೆ ಕೋಟೆ ಒಳ ಬರಿಕೈಲಿ ಮುಂಚೆಯೇ ಈ ವಿಷಯ ಅರಿತ ರಾಣಿ ಪದ್ಮಿನಿ, ನಾವು ರಜಪೂತರು ಯಾವತ್ತೂ ನಮ್ಮ ಶೀಲವನ್ನ ಕಳೆದುಕೊಂಡವರಲ್ಲ, ಅಂಥದ್ರಲ್ಲಿ ಈ ಮುಸಲ್ಮಾನ ದೊರೆಗೆ ನಮ್ಮ ಶೀಲ ಅರ್ಪಿತವಾಗೋದೇ? ಛೀ ಹಾಗೇ ಮಾಡೋದಕ್ಕಿಂತ ವೀರಸ್ವರ್ಗ ಪ್ರಾಪ್ತಿ ಮಾಡಿಕೊಳ್ಳೋದೇ ಎಷ್ಟೋ ವಾಸಿ ಅಂತ ತಕ್ಷಣ ಆಕೆ ಚಿತ್ತೋಡದಲ್ಲಿದ್ದ ತನ್ನ 16,000 ರಜಪೂತನಿಯರೊಂದಿಗೆ ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡು ಬಿಡ್ತಾಳೆ.

ನಂತರ ಕೋಟೆಯ ಒಳಗೆ ಖಿಲ್ಜಿ ಬಂದು ನೋಡಿದಾಗ ಆತನಿಗೆ ಯಾವೊಬ್ಬ ಹೆಂಗಸೂ ಚಿತ್ತೋಡದಲ್ಲಿ ಸಿಗದೆ ಹೆಣಗಳನ್ನ ಹದ್ದು ಕುಕ್ಕುತ್ತ ಕೂತಿರೊ ದೃಶ್ಯಗಳೇ ಕಂಡು ಆತ ದೆಹಲಿಗೆ ವಾಪಸ್ ಆಗ್ತಾನೆ. ನೋಡಿ ತನ್ನ ಆತ್ಮ & ಶೀಲರಕ್ಷಣೆಗಾಗಿ ತನ್ನನ್ನ ತಾನು ಬೆಂಕಿಗಾಹುತಿ ಮಾಡಿಕಂಡ & ತಾನು ಸಾಯೋವರೆಗೂ ಖಿಲ್ಜಿಯ ವಿರುದ್ಧ ಹೊರಾಡಿದ್ದ ರಜಪೂತರಷ್ಟೇ ಯಾಕೆ ಇಡೀ ಭಾರತದ ಮಹಿಳೆಯರಿಗೆ ಆದರ್ಶಪ್ರಾಯವಾಗಿರೋ ವೀರವನಿತೆ ಪದ್ಮಿನಿ ರಾಣಿ ಬಗ್ಗೆ ಕೆಲವರು ಒಂದು ಚಿತ್ರದ ಮುಖಾಂತರ ಕೆಟ್ಟ ರೀತಿಯಲ್ಲಿ ತೋರಿಸಲು ಹೊರಟಿದ್ದಾರೆ.

ಮೂಲ:

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಹನುಮಂತ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

    ಮೇಷ ರಾಶಿ ಭವಿಷ್ಯ (Sunday, November 21, 2021) ಮೇಷ ರಾಶಿಯವರಿಗೆ ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ನೇಹಿತರು ಮತ್ತು ಸಂಬಂಧಿಗಳೊಡನೆ ಆನಂದಿಸಿ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ನೀವಿಂದು ತಾರೆಯಂತೆ ಪ್ರಕಾಶಿಸಿ – ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನಿಮ್ಮ ಸಂಗಾತಿ ಅವರ ಅದ್ಭುತವಾದ…

  • ಸುದ್ದಿ

    ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ಸುಮಲತಾ ಅವರ ಮುಂದಿನ ಪ್ಲಾನ್ ಏನು?

    ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…

  • ದೇವರು, ದೇವರು-ಧರ್ಮ

    ಹಿಂದೂ ಮಹಾ ಗಣಪತಿ – ಚಿತ್ರದುರ್ಗ ಕರ್ನಾಟಕದ ಅತಿ ಹೆಚ್ಚು ಜನ ಸೇರುವ ಗಣಪತಿ…

    2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.

  • ಗ್ಯಾಜೆಟ್

    ಈಗ ಬರುತ್ತಿದೆ jio DTH ಬೇರೆ DTH ಸರ್ವಿಸ್ ಗಳಿಗೆ ಶುರುವಾಗಿದೆ ಭಯ..!ತಿಳಿಯಲು ಈ ಲೇಖನ ಓದಿ…

    ಜಿಯೋ ಸೆಟ್‌ ಟಾಪ್‌ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್‌ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗ‌ಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗ‌ಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.

  • govt, ಉದ್ಯೋಗ

    IFFCO ನೇಮಕಾತಿ 2020

    ಇಫ್ಕೊ ನೇಮಕಾತಿ 2020 ಅಧಿಸೂಚನೆ ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ iffco.in ಇಫ್ಕೊ ನೇಮಕಾತಿ 2020: ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಭಾರತೀಯ ರೈತ ರಸಗೊಬ್ಬರ ಸಹಕಾರಿ (ಇಫ್ಕೊ) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇಫ್ಕೊ ಅಧಿಕೃತ ಅಧಿಸೂಚನೆ ಸೆಪ್ಟೆಂಬರ್ -2020 ಮೂಲಕ ಆಹ್ವಾನಿಸಿದೆ….

  • ಸುದ್ದಿ

    ಇದೇನಿದು ಶಾಕ್; ಬಿಗ್ ಬಾಸ್ ಮನೆಯಲ್ಲಿ ಎಂದು ನಡೆದಿಲ್ಲ,ಸ್ಪರ್ಧಿಗಳಿಬ್ಬರ ರೊಮ್ಯಾನ್ಸ್ ಯಾರು ಗೊತ್ತೇ?

     ಬಿಗ್ ಬಾಸ್ ಸೀಸನ್-13 ಹಿಂದಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಬ್ಬರು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಿದ್ದು, ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯವನ್ನು ಮತ್ತೊಬ್ಬ ಸ್ಪರ್ಧಿ ಶೆಹ್ನಾಜ್ ಗಿಲ್ ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಇದು ಟಾಸ್ಕ್ ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೆಹ್ನಾಜ್ ನಿರ್ದೇಶಕರಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಅವರಿಗೆ ರೊಮ್ಯಾನ್ಸ್ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾರೆ.ಪ್ರೋಮೋದಲ್ಲಿ ಧಾರವಾಹಿಗಾಗಿ ಕೆಲವು…