ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ.

ಅಲ್ಲದೆ, ಈ ಮಕ್ಕಳ ಹೋಂ ವರ್ಕ್ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡಬಾರದು ಎಂದು ಮೇ 3ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್ಸಿಇಆರ್ಟಿ) ರಾಜ್ಯ ಸರ್ಕಾರಕ್ಕೆ ಹೊಸ ನಿರ್ದೇಶನ ನೀಡಿದೆ. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವ ಹಾಗೂ 1ರಿಂದ 5ನೇ ತರಗತಿ ಮಕ್ಕಳಿಗೆ ಎನ್ಸಿಇಆರ್ಟಿ ನಿಗದಿಪಡಿಸಿದ ಪಠ್ಯ ಹೊರತುಪಡಿಸಿ ಇನ್ಯಾವುದೋ ಪಠ್ಯ ಬೋಧನೆ ಮಾಡುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬಹುದು ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಎನ್ಸಿಇಆರ್ಟಿ ನಿಗದಿಪಡಿಸಿರುವ ಭಾಷೆ ಮತ್ತು ಗಣಿತ ವಿಷಯ ಹಾಗೂ 3ರಿಂದ 5ನೇ ತರಗತಿ ಮಕ್ಕಳಿಗೆ ಭಾಷೆ, ಪರಿಸರ ವಿಜ್ಞಾನ ಹಾಗೂ ಗಣಿತ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.

ಎನ್ಸಿಇಆರ್ಟಿ ನಿಗದಿಪಡಿಸಿರುವ ಪಠ್ಯ ವಿಷಯಗಳನ್ನು ಹೊರತುಪಡಿಸಿ, ಇನ್ಯಾವುದೇ ಪಠ್ಯಕ್ರಮ ನಿಗದಿಪಡಿಸಿಕೊಂಡು ಬೋಧಿಸುವ ಶಾಲೆಗಳ ಬಗ್ಗೆ ನಿಗಾ ವಹಿಸಲು ಹಾಗೂ ಶಾಲೆಗೆ ಭೇಟಿ ನೀಡಿ ಈ ಬಗ್ಗೆ ತಪಾಸಣೆ ನಡೆಸಲು ವಿಶೇಷ ತಂಡ ರಚನೆ ಮಾಡಿಕೊಳ್ಳಬೇಕು ಎಂದು ಇಲಾಖೆಯ ಆಯುಕ್ತರಿಗೆ, ಯೋಜನಾ ನಿರ್ದೇಶಕರಿಗೆ, ಉಪ ನಿರ್ದೇಶಕರಿಗೆ ಸರ್ಕಾರ ಸೂಚಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ…
ಗುರು ಅಂದರೆ ಬರಿ ಶಿಕ್ಷಣವನ್ನು ನೀಡುವವರು ಮಾತ್ರ ಅಲ್ಲ. ತಂದೆ ತಾಯಿಗಳ ರೀತಿಯಲ್ಲಿ ಸಹಕರಿಸುವವರು ಎನ್ನಲಾಗುತ್ತದೆ. ಪ್ರತಿಯೊಂದು ಹಂತಕ್ಕೂ ದಾರಿಯನ್ನು ತೋರಿಸುವವರು ಹಾಗು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕ ಬೇಕು ಅನ್ನೋದನ್ನ ಕಲಿಸಿ ಕೊಡುವವರು. ಈ ಪ್ರಪಂಚದಲ್ಲಿ ಶಿಕ್ಷಕರಿಗೆ ಒಂದು ಸ್ಥಾನವಿದೆ.
ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ನಮ್ಮ ಭಾರತೀಯ ಹಿಂದೂ ದೇವಾಲಯಗಳು ತನ್ನದೆಯಾದ ವಿಶೇಷತೆಯನ್ನು ಹೊಂದಿದೆ. ಹಾಗು ಈ ದೇವಾಲಯ ಹಲವಾರು ಮಹತ್ವವನ್ನು ಹೊಂದಿದೆ, ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಪ್ರಸಿದ್ದಿ ಪಡೆದಿದೆ.
ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮಿ ಹಬ್ಬವೂ ಸಹ ಈ ಮಾಸದಲ್ಲೇ ಬರುತ್ತದೆ. ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು.