ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
‘ಬಿಗ್ ಬಾಸ್ ಕನ್ನಡ ಸಂಚಿಕೆ 5’ ಮುಕ್ತಾಯವಾಗಿದೆ. ಎಲ್ಲರೂ ಜಯರಾಂ ಕಾರ್ತಿಕ್(ಜೆಕೆ) ಅವರಿಗೆ ‘ಬಿಗ್ ಬಾಸ್ ಪಟ್ಟ ಸಿಗಬಹುದು, ಎಂದುಕೊಂಡಿದ್ದವರಿಗೆ ಶಾಕ್ ನೀಡಿದ್ದಾನೆ ಬಿಗ್ ಬಾಸ್.ತಮ್ಮ ಗಾಯನದಿಂದಲೇ ಮೋಡಿ ಮಾಡಿದ ಸಂಗೀತ ಮಾಂತ್ರಿಕ ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಜಯಗಳಿಸಿದ್ದಾರೆ.ಕಾಮಾನ್ ಮ್ಯಾನ್ ಆಗಿ ‘ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿವಾಕರ್ ರನ್ನರ್ ಆಪ್ ಆಗಿ ಹೊರಬಂದಿದ್ದಾರೆ.

ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿ ಜೀವನ ನಡೆಸುತ್ತಿದ್ದ ದಿವಾಕರ್ ಬಿಗ್ ಬಾಸ್ ನ ಕೊನೆಯವರೆಗೂ ಉಳಿದು ರನ್ನರ್ ಆಪ್ ಆಗುತ್ತಾರೆ ಎಂದು ಯಾರು ಕೂಡ ಮೊದಲಿಗೆ ಊಹಿಸಿರಲಿಲ್ಲ.

ಇಲ್ಲಿ ಓದಿ :-ದಿವಾಕರ್’ಗೆ ಕೇವಲ ಒಂದು ಲಕ್ಷ ಕೊಟ್ಟಿದ್ದು ಸರಿಯೇ..?ಯಾಕೆ ಹೀಗಾಯ್ತು ಗೊತ್ತಾ..?
ಒಂಬತ್ತು ವರ್ಷಗಳಿಂದ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದೇನೆ. ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದೇನೆ. ಜೀವನ ನಡೆಸಲು ಏನೇನು ಕೆಲಸ ಮಾಡಬೇಕೋ, ಎಲ್ಲವನ್ನೂ ಮಾಡಿದ್ದೇನೆ. ಎಮ್ಮೆ ಮೇಯಿಸಿದ್ದೇನೆ. ಕೂಲಿ, ಗಾರೆ ಕೆಲಸ ಮಾಡಿದ್ದೇನೆ. ಹೊಟ್ಟೆ ಹಸಿವು ಆದಾಗ ಭಿಕ್ಷೆ ಕೂಡ ಬೇಡಿದ್ದೇನೆ” ಎಂದು ದಿವಾಕರ್ ಹೇಳಿಕೊಂಡಿದ್ದರು.

ಆದ್ರೆ, ಬಿಗ್ ಬಾಸ್ ಬರುವುದಕ್ಕೆ ಮುಂಚೆ ಊರೂರು ಸುತ್ತಿ ಸೇಲ್ಸ್ ಮ್ಯಾನ್ ಆಗಿ ತೈಲ ಮಾರಾಟ ಮಾಡುತ್ತಿದ್ದ ದಿವಾಕರ್, ಸದ್ಯ ಇಡೀ ಕರ್ನಾಟಕಕ್ಕೆ ‘ಬಿಗ್ ಬಾಸ್’ ಮೂಲಕ ಚಿರಪರಿಚಿತರಾಗಿಬಿಟ್ಟಿದ್ದಾರೆ.
ಘಟಾನುಘಟಿಗಳನ್ನೇ ಹಿಂದೆ ಹಾಕಿ 106 ದಿನ ‘ಬಿಗ್ ಬಾಸ್’ ಮನೆಯಲ್ಲಿ ಇದ್ದು ಕೊನೆಗೆ ಖ್ಯಾತಿ, ಜನಪ್ರಿಯತೆ ಜೊತೆಗೆ ಒಂದು ಲಕ್ಷ ರೂಪಾಯಿ ಬಹುಮಾನ ಹಣ ಮತ್ತು ರನ್ನರ್-ಅಪ್’ಯೊಂದಿಗೆ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.

ಖುಷಿಯ ಅಲೆಯಲ್ಲಿ, ರನ್ನರ್ ಆಪ್ ಟ್ರೋಪಿ ಹಿಡಿದು ಮನೆಗೆ ಹೋದ ದಿವಾಕರ್’ಗೆ ಅವರ ಪತ್ನಿ ಮಮತಾ ಅವರ ಕಡೆಯಿಂದ ಶಾಕಿಂಗ್ ನ್ಯೂಸ್ ಕಾಡಿತ್ತು. ಒಂದು ಕಡೆ ವಿನ್ನರ್ ಆಗಬೇಕಿದ್ದ ದಿವಾಕರ್ ರನ್ನರ್ ಆಪ್ ಆಗಿದ್ದು ಬೇಸರ ತಂದಿದ್ದರೂ, ಅವರಿಗೆ ಬೇರೆಯದೇ ವಿಷಯದಲ್ಲಿ ತುಂಬಾ ಬೇಸರವಾಗಿತ್ತು.
ದಿವಾಕರ್ ರವರಿಗೆ ಈಗಾಗಲೇ ಒಬ್ಬ ಗಂಡು ಮಗು ಇದ್ದಾನೆ.ಆದ್ರೆ ದಿವಾಕರ್ ರವರಿಗೆ ಹೆಣ್ಣು ಮಕ್ಕಳೆಂದರೆ ಪಂಚಪ್ರಾಣ.ಈ ವಿಚಾರವಾಗಿಯೇ ಬೇರೆಯದೇ ಸುದ್ದಿ ನಿರೀಕ್ಷೆ ಮಾಡಿದ್ದ ದಿವಾಕರ್’ಗೆ ಅಲ್ಲಿ ಕಹಿ ಸುದ್ದಿ ಕಾಡಿತ್ತು..!ಅದು ಏನು ಗೊತ್ತಾ…

ದಿವಾಕರ್ ಬಿಗ್ ಬಾಸ್ ಮನೆಯೊಳಗೆ ಹೋಗುವ ಮುನ್ನ ಅವರ ಹೆಂಡತಿ ಮಮತಾ ಎರಡನೇ ಮಗುವಿಗಾಗಿ ಗರ್ಭಿಣಿ ಯಾಗಿದ್ದರು.ಆದರೆ ದಿವಾಕರ್ ಬಿಗ್ ಬಾಸ್ ಮನೆಯಲ್ಲಿದ್ದಾಗ , ಪತ್ನಿ ಮಮತಾರವರಿಗೆ ಅನಾರೋಗ್ಯ ಉಂಟಾಗಿ ಗರ್ಭಪಾತವಾಗಿತ್ತು.ಆದ್ರೆ ಈ ವಿಷಯ ದಿವಾಕರ್’ಗೆ ತಿಳಿಸಿರಲಿಲ್ಲ.ಪತ್ನಿ ಮಮತಾ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾಗ ಕೂಡ ಈ ವಿಷಯದ ಬಗ್ಗೆ ತಿಳಿಸಿರಲಿಲ್ಲ.

ಹೌದು,ದಿವಾಕರ್ ಬಿಗ್ ಬಾಸ್ ಮನೆಯಿಂದ ಬಂದಮೇಲೆ ಎರಡನೇ ಮಗುವಿನ ಕುರಿತಾಗಿ ಚರ್ಚೆ ನಡೆದಿದ್ದು, ಕೊನೆಗೂ ಮಮತಾರವರು ನಿಜ ವಿಷಯವನ್ನು ದಿವಾಕರ್’ಗೆ ಹೇಳಿದ್ದಾರೆ.ಎರಡನೇ ಮಗುವಿನ ಆಗಮನದ ಖುಷಿಯಲ್ಲಿದ್ದ ದಿವಾಕರ್’ಗೆ ಈ ಪತ್ನಿ ಮಮತಾಗೆ ಗರ್ಭಪಾತ ಆಗಿರುವ ವಿಷಯ ಕೇಳಿ ತುಂಬಾ ಬೇಸರವಾಗಿದೆಯಂತೆ.ಎರಡನೇ ಮಗುವಾಗಿ ಹೆಣ್ಣು ಮಗು ಹುಟ್ಟಲಿ ಎಂದು ಅಂದುಕೊಂಡಿದ್ದ ದಿವಾಕರ್ ರವರಿಗೆ ತುಂಬಾ ಬೇಜಾರಗಿದೆಯಂತೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂಗ್ಲೆಂಡ್ನ ಲೀಸೆಸ್ಟರ್ ಶೈರ್ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗ ಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮಅಂತ್ಯಸಂಸ್ಕಾರ ಹೇಗೆ ನಡೆಯ ಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು. ತಮ್ಮ ಮೃತ ದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟುಅಂತ್ಯ ಸಂಸ್ಕಾರ ಮಾಡಿ ಎಂದು ತಮ್ಮಆಸೆ…
ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಸ್ಕೆಚ್ ಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ಯಾಕಂದ್ರೆ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿಜೆಪಿ ಶಾಸಕ ಪ್ರೀತಂಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಬಿಜೆಪಿಯಲ್ಲಿ ಪುಕ್ಸಟ್ಟೆ ನಾಯಕನಾಗಲು ಮಂಜು ಹೊರಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಬಗ್ಗೆ ಕಾರ್ಯಕರ್ತನ ಬಳಿ ಪ್ರೀತಂ ಗೌಡ ಮಾತನಾಡಿದ್ದಾರೆನ್ನಲಾಗಿದೆ. ಹಾಸನದಲ್ಲಿ ಬಳ್ಳಾರಿ ಚುನಾವಣೆಯ ಫಲಿತಾಂಶ ಮರುಕಳಿಸುತ್ತದೆ. 10…
ಸುಂದರವಾದ ಹಾಗೂ ಸದೃಢವಾದ ಕೂದಲನ್ನು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಕೂದಲು ಉದುರುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯಾಗಿ ಬದಲಾಗಿದೆ. ನೀವು ಕೂದಲಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗ್ತಿದ್ದೇನೆ ಅಂತಾ ಅಮ್ಮನಿಗೆ ಪತ್ರ ಬರೆದು ಹೋದ ಮಗಳ ನಿಜವಾದ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಮುಂಬೈನಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಅಮ್ಮನಿಗೆ ಈ ರೀತಿ ಪತ್ರ ಬರೆದಿದ್ದಾಳೆ. “ಅಮ್ಮಾ ನಾನು ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಹಾಗಂತ ನಾನು ಯಾವುದೋ ಹುಡುಗನೊಂದಿಗೆ ಓಡಿ ಹೋಗುತ್ತಿಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತಾ ದೇವರ ಮೇಲೆ ಆಣೆ ಮಾಡು” ಎಂದು ಪತ್ರದಲ್ಲಿ…
ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ 256 ವರ್ಷ ಬದುಕಿದ್ದ.
ಜುಲೈ 2, 2019ರಂದು ಸಂಪೂರ್ಣ ಸೂರ್ಯ ಗ್ರಹಣ ಆಗಲಿದೆ. ಈ ಸೂರ್ಯ ಗ್ರಹಣವು ರಾತ್ರಿ 10.25ಕ್ಕೆ (ಭಾರತೀಯ ಕಾಲಮಾನ) ಸಂಭವಿಸಲಿದೆ. ಈ ಗ್ರಹಣವು 4.33 ನಿಮಿಷಗಳ ಕಾಲ ಸಂಭವಿಸಲಿದೆ. ಆ ಸಂದರ್ಭದಲ್ಲಿ ಸೂರ್ಯ ಸಂಪೂರ್ಣವಾಗಿ ಚಂದ್ರನ ನೆರಳಲ್ಲಿ ಮರೆಯಾಗುತ್ತದೆ. ಈ ಗ್ರಹಣವು ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಪೆಸಿಫಿಕ್ ಸಾಗರದಿಂದ ಗೋಚರವಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ವೇಳೆ ಭೂಮಿಯಲ್ಲಿ ವಾತಾವರಣ ಕಲುಷಿತ ಆಗುತ್ತದೆ. ಆದ್ದರಿಂದ ಯಾವುದೇ ನಕಾರಾತ್ಮಕ ಅಡ್ಡ ಪರಿಣಾಮಗಳು ಸಂಭವಿಸಬಾರದು ಅಂದರೆ ಕೆಲವು…