ಸುದ್ದಿ

ಮಂಗಳಸೂತ್ರ ನುಂಗಿದ ಹೋರಿ… ಮಂಗಳ ಸೂತ್ರದ ಬೆಲೆಯೆಷ್ಟು ಗೊತ್ತಾ?

274

ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹೋರಿಯೊಂದು ಮಹಿಳೆಯ ಮಂಗಳಸೂತ್ರವನ್ನು ನುಂಗಿರುವ ಘಟನೆ ನಡೆದಿದ್ದು, ಸಗಣಿಯ ಮೂಲಕ ಹೊರಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ವಾಘಪುರ್‌ನಲ್ಲಿ ನಡೆದಿದ್ದು, ಹೋರಿಗಳ ಹಬ್ಬದ ವೇಳೆ ಈ ರೀತಿ ಸರವನ್ನು ಹೋರಿ ನುಂಗಿತ್ತು ಎನ್ನಲಾಗಿದೆ.

ಆ.30ರಂದು ನಡೆದ ಹಬ್ಬದ ವೇಳೆ ರಾಸುಗಳಿಗೆ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ರಾಸುಗಳಿಗೂ ಅಲಂಕಾರ ಮಾಡಲಾಗಿತ್ತು. ಪೂಜೆ ಮಾಡುವ ವೇಳೆ ಕೊರಳಲ್ಲಿದ್ದ 1.5ಲಕ್ಷ ಮೌಲ್ಯದ ಮಂಗಳಸೂತ್ರ ಹೋರಿಯ ಕೊಂಬಿಗೆ ಸಿಕ್ಕಿಹಾಕಿಕೊಂಡು ಹರಿದಿದ್ದರಿಂದ ಸರವನ್ನು ತಟ್ಟೆಯಲ್ಲಿ ಇಟ್ಟಿದ್ದಾರೆ.

ಇದೇ ತಟ್ಟೆಯಲ್ಲಿದ್ದ ಸಿಹಿ ಚಪಾತಿಯನ್ನು ಹೋರಿ ತಿಂದಿದೆ. ಬಳಿಕ ತಟ್ಟೆ ಖಾಲಿಯಾಗಿರುವುದು ಗಮನಿಸಿದಾಗ ಸರ ಕಾಣೆಯಾಗಿರುವುದು ಗೊತ್ತಾಗಿದೆ.

ಸಗಣಿಯಲ್ಲಿ ಈ ಸರ ಬರುತ್ತದೆ ಎಂದು ಹಲವು ದಿನ ಕಾದು ಬಳಿಕ ಪಶುವೈದ್ಯರ ಬಳಿ ದಂಪತಿ ಹೋಗಿದ್ದಾರೆ. ಈ ವೇಳೆ ಸಗಣಿಯಲ್ಲಿ ಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ಸರವನ್ನು ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರಿಂದ ಡ್ರೈವಿಂಗ್ ಟೆಸ್ಟ್‌ಗೆ ನಿರ್ಬಂಧ ಮಾಡಿದ ಆರ್‌ಟಿಓ ಅಧಿಕಾರಿಗಳು…!

    ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರೆಂದು ಅವರ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡದಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಮಹಿಳಾ ಟೆಕ್ಕಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆಗೆ ಕೆಕೆ ನಗರ್ ಆರ್‌ಟಿಓ ಡ್ರೈವಿಂಗ್ ಟೆಸ್ಟ್ ಗೆ ನಿರಾಕರಣೆ ಮಾಡಿದೆ. ಪವಿತ್ರಾ ಧರಿಸಿರುವ ಬಟ್ಟೆಯಿಂದಾಗಿಯೇ ಆಕೆಗೆ ನಿರ್ಬಂಧ ಹೇರಲಾಗಿತ್ತು. ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿದ್ದೆ. ನನಗೆ ಅರ್ಜೆಂಟಾಗಿ ಲೈಸೆನ್ಸ್ ಬೇಕಿತ್ತು. ಹೀಗಾಗಿ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡಲ್ಲ ಎಂದಾಗ ಕೂಡಲೇ ಮನೆಗೆ ತೆರಳಿ ಚೂಡಿದಾರ…

  • ದೇಶ-ವಿದೇಶ

    ಈ ಮಹಿಳೆ ಪ್ರಧಾನಿ ಮೋದಿಯನ್ನೇ ಮದುವೆಯಾಗ್ಬೇಕಂತೆ..!ಎಷ್ಟು ತಿಂಗಳಿಂದ ಧರಣಿ ಕುಳಿತ್ತಿದ್ದಾರೆ ಗೊತ್ತಾ..?

    ಪ್ರಧಾನಿ ನರೇಂದ್ರ ಮೋದಿಅವರನ್ನು ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು,ಸೆಪ್ಟೆಂಬರ್ 8ರಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.

  • ಸುದ್ದಿ

    ಅಂದ ಹೆಚ್ಚಿಸಿಕೊಳ್ಳಲು ಹೋದ ವೈದ್ಯೆ ಆಸ್ಪತ್ರೆ ಪಾಲು ….! ಬ್ಯೂಟಿಪಾರ್ಲರ್​ಗೆ ಹೋಗುವ ಹೆಂಗಸರೇ ಎಚ್ಚರ…ಎಚ್ಚರ!!

    ಹಬ್ಬ ಬಂತು ಅಂದ್ರೆ ಖುಷಿ ಖುಷಿಯಿಂದ ಆಚರಣೆಗೆ ಸಿದ್ಧವಾಗೋ ಹೆಣ್ಣುಮಕ್ಕಳು ಏನೇ ವಿಶೇಷ ಕಾರ್ಯಕ್ರಮ ಇದ್ದರೂ ಬ್ಯೂಟಿಪಾರ್ಲರ್​ಗೆ ಒಮ್ಮೆ ಭೇಟಿ ಕೊಟ್ಟು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಆದರೆ ಇಂತಹದ್ದೆ ಆಸೆಯಿಂದ ಬ್ಯೂಟಿಪಾರ್ಲರ್​ಗೆ ಹೋಗಿದ್ದ ವೈದ್ಯೆಯೊಬ್ಬರು ತಮ್ಮ ಮುಖವನ್ನು ಶಾಶ್ವತವಾಗಿ ಹಾಳುಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಎಂಎಚ್​ ರಸ್ತೆಯಲ್ಲಿರುವ ಕ್ಲಬ್​ ಸಿಟ್ರಸ್​​ ಸಲೂನ್​ನಲ್ಲಿ ಈ ಘಟನೆ ನಡೆದಿದೆ. ಯಶೋಧಾ ಎಂಬ ವೈದ್ಯೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೇಶಿಯಲ್ ಮಾಡಿಸಿಕೊಳ್ಳಲು ಪಾರ್ಲರ್​ಗೆ ತೆರಳಿದ್ದರು. ಈ ವೇಳೆ…

  • ಸುದ್ದಿ

    ಮಗು ಬಿದ್ದಿದ್ದು ಆಗುಂಬೆ ಘಾಟಿಯಲ್ಲಿ, ಗೊತ್ತಾಗಿದ್ದು ಕೊಪ್ಪದಲ್ಲಿ, ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ ಕಂದಮ್ಮ.

    ಗುರುವಾರ ರಾತ್ರಿ 9.30ರ ಸಮಯದಲ್ಲಿ ಕಾರು ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದಾಗ ಘಾಟಿಯಲ್ಲಿ ಐದು ವರ್ಷದ ಹೆಣ್ಣು ಮಗುವೊಂದು ಅಳುತ್ತಾ ನಿಂತಿತ್ತು. ಇದನ್ನು ಗಮನಿಸಿದ ಚಾಲಕ ತಕ್ಷಣ ಕಾರಿನಿಂದ ಇಳಿದು ಮಗುವನ್ನು ಕರೆ ತಂದು ಆಗುಂಬೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗು ಆಗುಂಬೆ ಠಾಣೆಯಲ್ಲಿ ಸುರಕ್ಷಿತವಾಗಿತ್ತು. ಮಗುವಿನ ಪೋಷಕರು ಯಾರು ಎಂದು ಪೊಲೀಸರು ಪತ್ತೆ ಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಮೂಲದವರಾದ ಬೀನು ಎಂಬವರು ಕುಟುಂಬ …

  • ಸುದ್ದಿ

    ‘ಬಿಗ್ ಬಾಸ್’ ಮನೆಯಿಂದ ರಶ್ಮಿ ಔಟ್ : ಒಪನ್ ಮೈಂಡೆಡ್ ವೈಲ್ಡ್ ಕಾರ್ಡ್ ವ್ಯಕ್ತಿ ಯಾರು ಗೊತ್ತಾ?

    ‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮದಲ್ಲಿ ಮೂರನೇ ವಾರದ ಎಲಿಮಿನೇಶನ್ ಆಗಿದೆ. ‘ಬಿಗ್ ಬಾಸ್’ ಮನೆಯಿಂದ ಗುರುಲಿಂಗ ಸ್ವಾಮೀಜಿ, ಆಂಕರ್ ಚೈತ್ರ ವಾಸುದೇವನ್ ಹೊರ ಬಂದ ಬಳಿಕ ಇದೀಗ ಚಿತ್ರನಟಿ ದುನಿಯಾ ರಶ್ಮಿ ಔಟ್ ಆಗಿದ್ದಾರೆ. ‘ದುನಿಯಾ’ದಂತಹ ಸೂಪರ್ ಹಿಟ್ ಚಿತ್ರವನ್ನು ನೀಡಿದ ಬಳಿಕ ರಶ್ಮಿ ಅಷ್ಟಾಗಿ ಸಿನಿ ಲೋಕದಲ್ಲಿ ಕಾಣಿಸಿಕೊಂಡಿರಲಿಲ್ಲ. ‘ಬಿಗ್ ಬಾಸ್’ ಮೂಲಕ ಅದೃಷ್ಟ ಪರೀಕ್ಷೆಗೆ ದುನಿಯಾ ರಶ್ಮಿಇಳಿದಿದ್ದರು. ‘ಬಿಗ್ ಬಾಸ್’ ಶೋದಿಂದ ಸ್ಯಾಂಡಲ್ ವುಡ್ ನಲ್ಲಿ ಭಾಗ್ಯದ ಬಾಗಿಲು ತೆರೆಯ ಬಹುದು ಎಂದು ದುನಿಯಾ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 19 ಜನವರಿ, 2019 ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ನಿಮಗೆ ಗೊತ್ತಿದ್ದ…