ಕ್ರೀಡೆ

“ಭಾರತವೇ ಕ್ರಿಕೆಟ್ನಲ್ಲಿ” ಗೆಲ್ಲಲಿ ಎಂದು ಪ್ರಾರ್ಥಿಸುವ ‘ಪಾಕಿಸ್ತಾನಿ ಕ್ರಿಕೆಟ್’ ಅಭಿಮಾನಿ !!! ನೀವು ನಂಬಲೇಬೇಕು?

476

ಕ್ರಿಕೆಟ್ ನಮ್ಮ ಭಾರತೀಯ ಆಟವಲ್ಲದಿದ್ದರು, ಇಡೀ ಭಾರತೀಯರ ಮನ ಮನದಲ್ಲೂ ಮನೆ ಮಾಡಿದೆ.  ಅದರಲ್ಲೂ ಭಾರತ ಪಾಕಿಸ್ತಾನದ ನಡುವೆ ನಡೆಯುವ ಮ್ಯಾಚ್ ವೇಳೆ ಹೆಚ್ಚೂ ಕಡಿಮೆ ಇಡಿಯ ಭಾರತವೇ ಸ್ತಬ್ಧಗೊಳ್ಳುತ್ತದೆ. ಭಾರತವೇಕೆ ಈಡಿ ಕ್ರಿಕೆಟ್ ಜಗತ್ತು  ಕಣ್ಣುರೆಪ್ಪೆ ಮುಚ್ಚದೇ ಟಿವಿ ಮುಂದೆಯೇ ಕುಳಿತು ಬಿಡುತ್ತದೆ. ಸಹಜವಾಗಿ  ಭಾರತೀಯರೆಲ್ಲರೂ ಭಾರತದ ತಂಡವನ್ನು ಬೆಂಬಲಿಸಿದರೆ ಪಾಕಿಸ್ತಾನೀಯರು ಪಾಕಿಸ್ತಾನದ ತಂಡವನ್ನು ಬೆಂಬಲಿಸುತ್ತಾರೆ.

ಆದರೆ ಪ್ರತಿ ಬಾರಿ ಭಾರತ ಪಾಕಿಸ್ತಾನ ನಡುವೆ ನಡೆಯುವ ಪಂದ್ಯವನ್ನು ನೋಡಲು ತಪ್ಪದೇ ಪಾಕಿಸ್ತಾನಿ ಕ್ರೀಡಾಪ್ರೇಮಿಯೊಬ್ಬರು ಆಗಮಿಸುತ್ತಾರೆ.  ‘ಚಾಚಾ ಚಿಕಾಗೋ’ ಎಂಬ ಅನ್ವರ್ಥನಾಮವನ್ನು ಪಡೆದಿರುವ ಈ ವ್ಯಕ್ತಿ ಪ್ರಸಿದ್ಧಿ ಪಡೆದಿರುವುದು ಕೇವಲ ಈ ಒಂದು ಕಾರಣಕ್ಕಾಗಿ ಮಾತ್ರವಲ್ಲ, ಅಚ್ಚರಿ ಏನೆಂದರೆ ಈ ಕ್ರಿಕೆಟ್ ಪ್ರೇಮಿ ಬೆಂಬಲಿಸುವುದು ಪಾಕಿಸ್ತಾನ ತಂದವನ್ನಲ್ಲ, ಅಚ್ಚರಿಯಾದರೂ ನಿಜ ಅವರು ಬೆಂಬಲಿಸುವುದು  ಭಾರತದ ತಂಡವನ್ನು! ಅಷ್ಟೇ ಅಲ್ಲ, ಭಾರತವೇ ಗೆಲ್ಲಲಿ ಎಂದು ಇವರು ಪ್ರಾರ್ಥಿಸುತ್ತಾರೆ ಸಹಾ! 

ಚಾಚಾ ಶಿಕಾಗೋ ರವರ ನಿಜ ನಾಮಧೇಯ ಮುಹಮ್ಮದ್ ಬಶೀರ್ ಎಂದಾಗಿದೆ. ಮೊದಲು ಇವರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರೂ ಈಗ ಇವರು ಭಾರತದ ತಂಡವನ್ನು ಬೆಂಬಲಿಸುತ್ತಿದ್ದಾರೆ.

ಚಾಚಾ ಶಿಕಾಗೋರವರು ಮಹೇಂದ್ರ ಸಿಂಗ್  ಧೋನಿಯ ಅಪ್ಪಟ ಅಭಿಮಾನಿ :-

ಧೋನಿ ಇವರ ಅಚ್ಚುಮೆಚ್ಚಿನ ಆಟಗಾರನಾಗಿದ್ದು, ಇವರು ಧೋನಿಯವರ ಆಟದ ಸಮಯದಲ್ಲಿ ಭಾರತೀಯರ ನಡುವೆ ಕುಳಿತು ಭಾರೀ ಕರತಾಡನದ ಮೂಲಕ ಧೋನಿಯವರನ್ನು ಬೆಂಬಲಿಸುತ್ತಿದ್ದರು. ಹಲವು ವರ್ಷಗಳವರೆಗೆ ಇವರು ತಮ್ಮ ಸ್ವದೇಶದ ತಂಡವನ್ನು ಬೆಂಬಲಿಸಿದರೂ ಧೋನಿಯವರ ಆಟದ ವೈಖರಿಯನ್ನು ಮೆಚ್ಚದೇ ಇರಲು ಇವರಿಗೆ ಸಾಧ್ಯವೇ ಆಗಿರಲಿಲ್ಲ.

ಅಷ್ಟಕ್ಕೂ, ಇವರಿಗೆ ಭಾರತದ ತಂಡದ ಮೇಲೇಕೆ ಪ್ರೀತಿ ???

ನಾನು ಪಾಕಿಸ್ತಾನವನ್ನು ಇಂದಿಗೂ ಪ್ರೀತಿಸುತ್ತೇನೆ. ಆದರೆ ಈಗ ಭಾರತವನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ಹಿಂದೆ ನನಗೆ ಪಾಕಿಸ್ತಾನದ ತಂಡ ಗೆಲ್ಲಬೇಕಿತ್ತು. ಆದರೆ ಈಗ ನನಗೆ ಭಾರತದ ತಂಡ ಗೆಲ್ಲಬೇಕಾಗಿದೆ. 2011 ರಲ್ಲಿ ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಅನ್ನು ನೋಡಲು ಮೊದಲ ಬಾರಿ ಅಲ್ಲಿ ತೆರಳಿದ ಬಳಿಕ ನನ್ನ ಭಾವನೆ ಬದಲಾಗಿದೆ” ಎಂದು ಇವರು ತಿಳಿಸುತ್ತಾರೆ.

ಇವರು ಭಾರತ-ಪಾಕಿಸ್ತಾನದ ಯಾವ ಮ್ಯಾಚ್ ನೋಡದೇ ಬಿಟ್ಟಿಲ್ಲ :-

2011ರ ವಿಶ್ವಕಪ್ ಬಳಿಕ ನಡೆದ ಅಷ್ಟೂ ಪಂದ್ಯಗಳನ್ನು ಇವರು ನೋಡಿದ್ದಾರೆ. ಎಲ್ಲವನ್ನೂ ಇವರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು ನೋಡಿದ್ದುದೇ ವಿಶೇಷವಾಗಿದೆ. “ವರ್ಷವಿಡೀ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ನೋಡಲೆಂದು ನಾನು ಬರುತ್ತಲೇ ಇರುತ್ತೇನೆ ಹಾಗೂ ವರ್ಷದ ಹೆಚ್ಚಿನ ಸಮಯವನ್ನು ಭಾರತದಲ್ಲಿಯೇ ಕಳೆಯುತ್ತೇನೆ. ನನಗೆ ಭಾರತದಲ್ಲಿಯೇ ಹೆಚ್ಚಿನ ಭದ್ರತೆಯ ಅನುಭವವಾಗುತ್ತದೆ” ಎಂದು ಹೇಳಿಕೊಂಡಿದ್ದಾರೆ.

ಈ ಕ್ರೀಡಾಪ್ರೇಮಿಯ ಪ್ರಕಾರ ಕ್ರಿಕೆಟ್ ಕ್ರೀಡೆಯ ಅಪ್ಪಟ ಅಭಿಮಾನಿಯಾಗಿರುವ ಇವರ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ಪರ್ಧೆಯೇ ಇಲ್ಲ. ಕ್ರಿಕೆಟ್ ಆಟದ ಸೂಕ್ಷ್ಮತೆಗಳನ್ನು ಪಾಕಿಸ್ತಾನಕ್ಕಿಂತಲೂ ಹೆಚ್ಚು ಚೆನ್ನಾಗಿ ಅರಿತು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಹೆಚ್ಚಿನ ಸಾಧನೆಯನ್ನು ಸಾಧಿಸಲು ಸಾಧ್ಯವಾಗಿದೆ. ಏನೇ ಆಗಲಿ, ಈ ವ್ಯಕ್ತಿಯ ಅಪ್ಪಟ ಕ್ರೀಡಾಭಿಮಾನವನ್ನು ನಾವು ಅಭಿನಂದಿಸುತ್ತೇವೆ. ಚಾಚಾ ಶಿಕಾಗೋರವರೇ ನಿಮ್ಮ ಭಾರತದ ಮೇಲಿನ ಈ ಅಭಿಮಾನಕ್ಕೆ  ನಮ್ಮ  ಧನ್ಯವಾದಗಳು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಳೆ ಆತಂಕದಲ್ಲಿರುವ ಕೊಡಗಿನ ಜನತೆಗೆ ನೋಟಿಸ್ ಶಾಕ್ ನೀಡಿದ ನಗರಸಭೆ….!

    ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ. ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ…

  • ಸೌಂದರ್ಯ

    ಮನೆಯ ಡಬ್ಬಿಯಲ್ಲಿರುವ ಇದು ಈ 5 ಆರೋಗ್ಯ ಮತ್ತು ಸೌಂದರ್ಯ ತರುವ ಗುಣಗಳನ್ನು ಹೊಂದಿದೆ!!!

    ಅರಿಶಿನವು ಭಾರತೀಯ ಅಡುಗೆಮನೆಯಲ್ಲಿ ಬಳಸಲಾಗುವ ಪ್ರಸಿದ್ಧ ಮಸಾಲೆಯಾಗಿದೆ. ಆಹಾರಕ್ಕಾಗಿ ಸುವಾಸನೆಯನ್ನು ಮತ್ತು ರುಚಿಯನ್ನು ಸೇರಿಸುವುದರ ಜೊತೆಗೆ, ನಿಮಗೆ ಗೊತ್ತಿಲ್ಲದ ಅರಿಶಿನದ ಇನ್ನೂ 5 ಉಪಯೋಗಗಳಿವೆ.

  • ಸಿನಿಮಾ, ಸುದ್ದಿ

    ವಿಜಯ್ ದೇವರಕೊಂಡ ಖರೀದಿಸಿದ ಮನೆ ಬೆಲೆ ಎಷ್ಟು ಗೊತ್ತಾ..? ಕೇಳಿದರೆ ಶಾಕ್ ಆಗ್ತೀರಾ,.!

    ಸೌತ್​ ಸೆನ್ಸೇಷನಲ್​ ಹೀರೋ ವಿಜಯ್​ ದೇವರಕೊಂಡ ಖರೀದಿಸಿರೋ ಹೊಸ ಮನೆ ಟಾಲಿವುಡ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ. ಬರೋಬ್ಬರಿ 18 ಕೋಟಿಗೆ ವಿಜಯ್​, ಈ ಮನೆ ಖರೀದಿಸಿದ್ದಾರೆ ಅಂತ ಹೇಳಲಾಗ್ತಿದೆ ಇತ್ತೀಚೆಗೆ ವಿಜಯ್ ಅವರು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಇರುವ ತಮ್ಮ ಹೊಸಮನೆಯ ಗೃಹ ಪ್ರವೇಶವನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ವಿಜಯ್ ಗೃಹಪ್ರವೇಶದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕೇವಲ ನಾಲ್ಕೈದು ಹಿಟ್​ ಕೊಟ್ಟು, ಸೂಪರ್​ ಸ್ಟಾರ್​ ಪಟ್ಟಕ್ಕೇರಿದ…

  • inspirational

    ಭವಿಷ್ಯವನ್ನು ಮುನ್ನಡೆಸಲು ಶಿಕ್ಷಣ ಅತ್ಯಗತ್ಯ

    ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶ ಕೋವಿಡ್ – 19 ನ ಭೀತಿಯಿಂದ ಸಮಗ್ರ ಶಿಕ್ಷಣವು ಕುಂಠಿತಗೊಂಡಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಮಂದಗತಿಯಲ್ಲಿ ಮುಂದುವರೆಯುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು DRM Career Build ಮತ್ತು SSN Academy ಸಂಸ್ಥೆಯು ಅಲವಾರು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸಲು ಅತಿ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶವನ್ನು ಒದಗಿಸುತ್ತಿದೆ. 10ನೇ / SSLC ತರಗತಿ CBSC / NCRT ವಿದ್ಯಾರ್ಥಿಗಳಿಗೆ Offline video ತರಗತಿಗಳನ್ನು ನಡೆಸಲಾಗುತ್ತಿದೆ. 12ನೇ…

  • ಆರೋಗ್ಯ

    ಯುವಜನರು ಕುಡಿತದ ಪ್ರಮಾಣ ಸಾಕು ಎಂದು ನಿರ್ಧರಿಸುತ್ತಾರೆ, ಹೇಗೆ ಗೊತ್ತಾ???

    ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.

  • ಜ್ಯೋತಿಷ್ಯ

    ವಿಘ್ನ ವಿನಾಯಕನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿ ನಿಮ್ಮ…