ಆರೋಗ್ಯ

ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದ್ರೆ ಇವತ್ತೇ ಬಿಟ್ಬಿಡಿ..!ಯಾಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

5192

ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆಯೇ? ಅದೂ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ?ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಭಾರತದ ಹಲವು ಕಡೆಗಳಲ್ಲಿ ಒಂದು ಸಂಪ್ರದಾಯವೇ ಆಗಿದೆ. ಹಿಂದೆ ಬ್ರಿಟಿಷರು ಭಾರತದಲ್ಲಿದ್ದಾಗ ಬೆಡ್ ಟೀ ಎಂದು ಟೀ ಹೀರುತ್ತಿದ್ದರು.

ಟೀ ಸೇವನೆಯೂ ಒಂದು ವ್ಯಸನವಾಗಿದ್ದು ಹೀಗೇ ಮುಂಜಾನೆಯ ಪ್ರಥಮ ಆಹಾರವಾಗಿ ಟೀ ಸೇವಿಸುವ ಅಭ್ಯಾಸವಿರುವವರಿಗೆ ಇದು ವ್ಯಸನವೇ ಆಗಿ ಹೋಗಿರುತ್ತದೆ. ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಟ್ಯಾನಿನ್ ಎಂಬ ಪೋಷಕಾಂಶಗಳು ಅಥವಾ ಕ್ಯಾಟೆಚಿನ್ ಎಂಬ ಕಣಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತವೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಕೊಬ್ಬು ಕರಗಿಸುವ ನೈಸರ್ಗಿಕ ‘ಚಹಾ’:-

ಬೆಡ್ ಟೀ ಎಂಬ ಹೆಸರಿನಲ್ಲಿ ಖಾಲಿಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ಬಾಧಿಸುತ್ತದೆ. ಮೊದಲಿಗೆ ಇದರಲ್ಲಿರುವ ಕೆಫೀನ್ ಜಠರ ರಸವನ್ನು ಹೆಚ್ಚಾಗಿ ಸ್ರವಿಸಲು ಪ್ರಚೋದಿಸುತ್ತದೆ ಹಾಗೂ ಇದು ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ.

ಟೀ ಸೇವನೆಯಿಂದ ಮನೋಭಾವ ಉಲ್ಲಸಿತಗೊಂಡರೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಈ ಅಭ್ಯಾಸವನ್ನು ಬಿಡುವುದೇ ಒಳ್ಳೆಯದು..

ಹೊಟ್ಟೆಯುಬ್ಬರಿಕೆ ಉಂಟಾಗುತ್ತದೆ :-

ಒಂದು ವೇಳೆ ಖಾಲಿಹೊಟ್ಟೆಯಲ್ಲಿ ಹಾಲಿರುವ ಟೀ ಕುಡಿದಾಗ ಹೊಟ್ಟೆಯುಬ್ಬರಿಕೆಯುಂಟಾಗುತ್ತದೆ. ಏಕೆಂದರೆ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲ್ಯಾಕ್ಟೋಸ್ ಖಾಲಿಹೊಟ್ಟೆಯಲ್ಲಿ ಜೀರ್ಣರಸಗಳೊಂದಿಗೆ ಪ್ರತಿಕ್ರಿಯೆಗೆ ಒಳಗಾದಾದ ವಾಯು ಉತ್ಪತ್ತಿಯಾಗುತ್ತದೆ. ಇದು ಹೊಟ್ಟೆಯುಬ್ಬರಿಕೆ, ವಾಯುಪ್ರಕೋಪ ಹಾಗೂ ಮಲಬದ್ಧತೆಗೆ ಕಾರಣವಾಗುತ್ತದೆ.

ಹಲ್ಲುಗಳು ಹೆಚ್ಚು ಸವೆಯುತ್ತವೆ:-

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲ್ಲುಗಳ ಹೊರಕವಚ ಶೀಘ್ರವಾಗಿ ಸವೆಯುತ್ತದೆ. ಏಕೆಂದರೆ ರಾತ್ರಿಯ ಸಮಯದಲ್ಲಿ ಬಾಯಿಯಲ್ಲಿ ಹೆಚ್ಚೇ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿದ್ದು ಸಕ್ಕರೆಯನ್ನು ಒಡೆದು ಚಿಕ್ಕದಾಗಿಸಿರುತ್ತವೆ. ಪರಿಣಾಮವಾಗಿ ಬಾಯಿಯ ಆಮ್ಲೀಯತೆ ಹೆಚ್ಚಿರುತ್ತದೆ.

ಈ ಸಮಯದಲ್ಲಿ ಬಿಸಿ ಟೀ ಕುಡಿಯುವುದರಿಂದ ಆಮ್ಲೀಯತೆಯಿಂದ ಸಡಿಲವಾಗಿದ್ದ ಹಲ್ಲುಗಳ ಹೊರಪದರದ ಕಣಗಳು ಸುಲಭವಾಗಿ ತೊಳೆದುಹೋಗುತ್ತವೆ. ಇದು ಹಲ್ಲುಗಳ ಸವೆಯುವಿಕೆಗೆ ಕಾರಣವಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    2ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಕ್ಕೆ ಹೊಗುವಮುನ್ನ ನರೇಂದ್ರ ಮೋದಿ ಮೃತ ಯೋಧರ ಸ್ಮಾರಕಗಳಿಗೆ ಭೇಟಿ…….

    ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಗುರುವಾರ ನರೇಂದ್ರ ಮೋದಿಯವರು ಸಾಯಂಕಾಲ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇದಕ್ಕೂ ಮುನ್ನ ಇಂದು ಮುಂಜಾನೆ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ನಂತರ ಹುತಾತ್ಮರಾದ ಯೋಧರಿಗೆ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ನರೇಂದ್ರ ಮೋದಿಯವರ ಜೊತೆ ನಿರ್ಗಮಿತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಆರ್…

  • ಸುದ್ದಿ

    ನಕಲಿ ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರ್ ಗಳ ಮೇಲೆ ದಾಳಿಮಾಡಿ ನಕಲಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ,.!!

    ನಕಲಿ ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರ್‍ಗಳ ಮೇಲೆ ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಗಿರೀಶ್ ಅವರು ದಾಳಿಮಾಡಿ ನಕಲಿ ವೈದ್ಯರನ್ನು ತರಾಟೆಗೆತೆಗೆದುಕೊಂಡಿದ್ದಾರೆ ಅರಕಲಗೂಡುಪಟ್ಟಣದಲ್ಲಿ ನಕಲಿ ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್‍ಗಳನ್ನು ತೆರೆಯಲಾಗಿದೆ ಎಂಬ ಮಾಹಿತಿ ಮೇರೆಗೆ ಇಂದು ಬೆಳ್ಳಂಬೆಳಗ್ಗೆ ಗಿರೀಶ್ ಅವರು ದಾಳಿಮಾಡಿದರು. ಆಯುರ್ವೇದ ಕ್ಲಿನಿಕ್‍ನಲ್ಲಿ ಇಂಗ್ಲೀಷ್ ಮೆಡಿಸೆನ್ಸ್ ಮಾರುತ್ತಿರುವ  ಆರೋಪದ ಹಿನ್ನೆಲೆಯಲ್ಲಿ ಇವುಗಳಮೇಲೆಯೂ ದಾಳಿ ಮಾಡಿದರು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಈ ಮೆಡಿಕಲ್‍ಗಳಲ್ಲಿ ಔಷಧಿ ಪಡೆದುಕೊಂಡ ಹಲವರ ಪೈಕಿ ಐದಾರುಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಆರೋಪ ಸಹ ಕೇಳಿ…

  • ರಾಜಕೀಯ

    ರಾಜ್ಯದಲ್ಲಿ ಯಾವ ಯಾವ ಪಕ್ಷ ಮುನ್ನಡೆ…?

    ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…

  • ಆರೋಗ್ಯ

    ನೇರಳೆಹಣ್ಣು ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ…!

    ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಪರಸ್, ಸೋಡಿಯಂ, ವಿಟಮಿನ್ ಸಿ, ಥಿಯಾಮಿನ್, ಫೋಲಿಕ್ ಆಸಿಡ್, ನಾರಿನಂಶ, ಕೆರೋಟಿನ್ ಮತ್ತು ಪ್ರೋಟೀನ್ ಗಳು ಹೇರಳವಾಗಿದೆ. ಮಧುಮೇಹ ಇರುವವರಿಗೆ ನೇರಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ. ಜೀರ್ಣ ವ್ಯವಸ್ಥೆಗೆ ನೇರಳೆ ಹಣ್ಣು ಬಹಳ ಸಹಾಯ ಮಾಡುತ್ತದೆ. ದೇಹದಲ್ಲಿನ…

  • ಉಪಯುಕ್ತ ಮಾಹಿತಿ

    ವೋಟರ್ ಲಿಸ್ಟ್’ನಲ್ಲಿ ನಿಮ್ಮ ಮತ್ತು ಊರಿನವರ ಹೆಸರು ಇದೆಯೇ,ಇಲ್ಲವೆಂಬುದನ್ನು ನಿಮ್ಮ ಮೊಬೈಲ್’ನಲ್ಲೇ ಚೆಕ್ ಮಾಡೋದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದೆ.ನಮ್ಮಲ್ಲಿ ವೋಟರ್ ಕಾರ್ಡ್ ಇದ್ರೂ ಕೂಡ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ,ಇಲ್ಲವೋ ಎಂಬ ಅನುಮಾನ ಕಾಡುವುದು ಸಹಜ.

    ಆದ್ರೆ ನಿಮಗೆ ಅನುಮಾನ ಬೇಡ.ನಿಮ್ಮ ಹೆಸರು ಅಥವಾ ಬೇರೆ ಯಾರದೇ ಹೆಸರಾಗಲಿ ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೆಂಬುದನ್ನು ನಿಮ್ಮ ಮೊಬೈಲ್’ನಲ್ಲಿ ನೀವೇ ನೋಡಬಹುದು.

  • ಮನರಂಜನೆ

    ರಿಲಯನ್ಸ್‌ ಬಿಗ್‌ ಟಿವಿ, ಬಿಗ್ ಆಫರ್..ಎಲ್ಲಾ ಚಾನೆಲ್ 5 ವರ್ಷ ಉಚಿತ.!ಇವತ್ತಿನಿಂದಲೇ ಪ್ರೀ ಬುಕ್ಕಿಂಗ್‌ ಶುರು..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಇಂದಿನಿಂದ ಡೈರೆಕ್ಟ್ ಟು ಹೋಮ್‌ ರಿಲಯನ್ಸ್‌ ಬಿಗ್‌ ಟಿವಿ ಸೆಟ್ ಆಪ್ ಬಾಕ್ಸ್ ಪ್ರೀ ಬುಕ್ಕಿಂಗ್‌ ಆರಂಭಗೊಂಡಿದೆ. ರಿಲಯನ್ಸ್‌ ಬಿಗ್‌ ಟಿವಿ ಸುಮಾರು 500ಕ್ಕೂ ಹೆಚ್ಚು ಫ್ರೀ-ಟು-ಏರ್‌ ಚ್ಯಾನಲ್‌ಗ‌ಳನ್ನು 5 ವರ್ಷಗಳ ಕಾಲ ಉಚಿತವಾಗಿ ವೀಕ್ಷಿಸಬಹುದಾಗಿದೆ.