Uncategorized

ಬಿಸಿಲು ಬಿಸಿಲು ಬಿಸಿಲು…!!!

980

ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ.

ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ ಬಿರು ಬಸಿಲಿನ ಬೇಗೆ ತಟ್ಟತೊಡಗಿದೆ.

ಬೆಂಗಳೂರೇ ಹೀಗಾದರೆ ಇನ್ನು ಉತ್ತರ ಕನ್ನಡ, ಗಡಿ ನಾಡುಗಳ ಪರಿಸ್ಥಿತಿ ಹೇಳಲೂ ಆಗದ ಹಾಗಿದೆ. 10 ರಿಂದ 4 ಗಂಟೆಯವರೆಗೆ ಹೊರಗೆ ಬರಲಾಗದ ಸ್ಥಿತಿ ಈ ಊರುಗಳಲ್ಲಿದೆ. ಹಣ್ಣು ಹಾಗೂ ತಂಪು ಪಾನೀಯಗಳ ಮಾರಾಟ ಬಲು ಭರಾಟೆಯಿಂದ ಸಾಗಿದೆ.

ತಾಯಂದಿರ ಕಷ್ಟ ಹೇಳಲಿಕ್ಕಾಗದಷ್ಟಿದೆ. ಮಕ್ಕಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜಾ ಶುರುವಾಗಿದೆ. ಇನ್ನು ಪುಟ್ಟ ಕಂದಮ್ಮಗಳ ಗೋಳಂತೂ ಹೇಳಲಾಗದು. ಅಳು ಒಂದೇ ಗೋಳಾಗಿದೆ. ಇವೆಲ್ಲದರ ನಡುವೆ ಕರೆಂಟ್ ಹೋದರಂತೂ ಒಂದು ಕ್ಷಣ ಕೂಡ ಇರಲಿಕ್ಕೆ ಆಗಿಲ್ಲ.

ಇದು ಮಕ್ಕಳ ಕತೆಯಾದರೆ ವಯಸ್ಸಾದವರ ಕಷ್ಟ ಮತ್ತೊಂದು ಥರ. ಮಲಗಲೂ ಆಗದೆ, ಕೂರಲೂ ಆಗದ ಅವರ ಪರಿಸ್ಥಿತಿ ಹೇಳತೀರದು. ಮಾರ್ಚ್ ನಲ್ಲೇ ಈ ಗತಿಯಾದರೆ ಇನ್ನೂ ಮೇ ಜೂನ್ ನಲ್ಲಿ ಏನಾಗಬಹುದು ಹೇಳಿ.

ನಾವೆಲ್ಲರೂ ಇದಕ್ಕೆ ಪರಿಹಾರ ಏನೂ ಮಾಡದೇ ಬಿಸಿಲು, ಬೇಸಿಗೆ ಅಂತ ನಾವು ನಮ್ಮ ಕೆಲಸ ಮಾಡುತ್ತ ಸುಮ್ಮನೆ ಕುಳಿತುಕೊಳ್ಳುವುದು ಬಿಟ್ಟು ಮನೆಯಲ್ಲಿರೊ ಎಲ್ಲ ಸದಸ್ಯರಿಗೂ ಒಬ್ಬರಿಗೆ ಒಂದರಂತೆ ಗಿಡಗಳನ್ನು ನೆಟ್ಟು ಬೆಳೆಸಿ. ಮನೆ ಕಟ್ಟುವವರೆಲ್ಲರೂ ಮಳೆ ಕೋಯ್ಲ ಮಾಡಿ, ಊರಿನ ಸುತ್ತ ಮಳೆ ನೀರಿನ ಹೋರಟ ನಿರ್ಮಿಸಿ, ನಮ್ಮ ಕರ್ತವ್ಯ ಮಾಡಿದರೆ ಈ ಬಿಸಿ ಬಿಸಿ ಬೇಸಿಗೆಯಿಂದ ಸ್ವಲ್ಪವಾದರೂ ತಪ್ಪಿಸಿಕೊಳ್ಳಬಹುದು

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ವಿಘ್ನ ನಿವಾರಕ ಶ್ರೀ ಗಣೇಶನನ್ನು ನೆನೆಯುತ್ತಾ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 27 ಜನವರಿ, 2019 ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಮಗುವಿನ ಒಂದು…

  • govt

    ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ

    ಬೆಂಗಳೂರು:ಗೃಹಜ್ಯೋತಿ ಯೋಜನೆ ಜಾರಿಗೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದ್ದು,  ಒಟ್ಟು ಅಂದಾಜು ಸರಾಸರಿ 13ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು. ಬೆಸ್ಕಾಂ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದ್ದು, ಗೃಹಬಳಕೆದಾರರ ಸರಾಸರಿ ಒಂದು ವರ್ಷದ ವಿದ್ಯುತ್  ಬಳಕೆಯ ಪ್ರಮಾಣವನ್ನು  ಪಡೆದುಕೊಂಡ ಬಳಿಕ ಉಚಿತವಾಗಿ ವಿದ್ಯುತ್ ಪ್ರಮಾಣವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿಒಟ್ಟು 2.16 ಕೋಟಿ ಗ್ರಾಹಕರಿದ್ದು, ಈ ಪೈಕಿ 200 ಯೂನಿಟ್‌…

  • ಸುದ್ದಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆಯನ್ನು ಬಗೆಹರಿಸಿ ಅಂತೀರಾ… ಆಕ್ರೋಶದಿಂದ ಸಿಎಂ !

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು…

  • ಸಿನಿಮಾ

    ‘ಪದ್ಮಾವತಿ’ ಚಿತ್ರ ಬಿಡುಗಡೆ ತಡೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದ ರಾಜವಂಶಸ್ಥರು..!ತಿಳಿಯಲು ಈ ಲೇಖನ ಓದಿ …

    ಭಾರಿ ಚರ್ಚೆಗೆ ಕಾರಣವಾಗಿರುವ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಬಿಡುಗಡೆ ತಡೆ ನೀಡುವಂತೆ ಆಗ್ರಹಿಸಿ ಉದಯ್ ಪುರ ರಾಜವಂಶಸ್ಥರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

  • ಸುದ್ದಿ

    ಚಂದ್ರಯಾನ-2 ಉಪಗ್ರಹ ಹಠಾತ್ ರದ್ದು : ಕರಣ ಏನು ತಿಳಿಯಿರಿ…..?

    ರಾಕೆಟ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿದೆ.ಚಂದ್ರಯಾನ-2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು.ಮುಂಜಾಗರೂಕತೆ ಕ್ರಮವಾಗಿ ಚಂದ್ರಯಾನ-2ರ ಉಡ್ಡಯನವನ್ನು ಇಂದು ರದ್ದುಪಡಿಸಲು ನಿರ್ಧರಿಸಲಾಯಿತು. ಹೊಸ ದಿನಾಂಕಗಳನ್ನು ನಂತರ ಘೋಷಿಸಲಾಗುವುದು ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿತು. ಚಂದಿರನ ಮೇಲೆ ಇಳಿಯಲಿರುವ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯಾನಕ್ಕೆ ವಿಶ್ವವೇ ಕಣ್ಣರಳಿಸಿಕೊಂಡು ಕಾದಿತ್ತು.ಚಂದ್ರಯಾನ-2 ಗಗನನೌಕೆಯನ್ನು ಹೊತ್ತ ಬಾಹುಬಲಿ ಹೆಸರಿನ ಬೃಹತ್ ರಾಕೆಟ್…

  • ಜ್ಯೋತಿಷ್ಯ

    ಶನಿ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Saturday, December 4, 2021) ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಇಂದು ಸಂವಹನ ನಿಮ್ಮ ಬಲವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಇಂದು ವಿಶೇಷ ಗಮನ ಪಡೆಯುತ್ತೀರಿ. ಬಹಳ ಸಮಯದ ನಂತರ…