ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಮುಂದೆ ಸಾಗಬೇಕೆ ಹೊರತು ಹಿಂದಡಿ ಇಡಬಾರದು. ಅಂಗವೈಕಲ್ಯ ಇದೆ ಎಂದು ನೋವನುಭವಿಸಬಾರುದು. ಅದನ್ನು ಜಯಿಸಬೇಕು. ಯಶಸ್ಸಿನಿಂದ ಮುಂದೆ ಸಾಗಬೇಕು.

ಮಾಳವಿಕಾ ಅಯ್ಯರ್ ಯುವತಿ ತನ್ನ 13ನೇ ವರ್ಷ ಬಾಂಬ್ ಬ್ಲಾಸ್ಟ್‌ನಲ್ಲಿ ಎರಡೂ ಕೈಗಳನ್ನು ಕಳೆದುಕೊಂಡರೂ ಈಗ ಪಿಎಚ್‍ಡಿ ಮಾಡಿದ್ದಾರೆ. ತನ್ನಂತಹ ಅದೆಷ್ಟೋ ಮಂದಿಗೆ ಪ್ರೇರಣೆಯಾಗಿದ್ದಾರೆ. ಆಕೆ ಬಿಕನೀರ್ ಮೂಲದವರು.

ಮಾಳವಿಕಾ ಅಯ್ಯರ್‌ದು ತಮಿಳುನಾಡಿನ ಕುಂಭಕೋಣ ಪ್ರದೇಶ. ಅಲ್ಲೇ ಬೆಳದಳು. ಆದರೆ ತಂದೆಗೆ ಬಿಕನೀರ್‌ಗೆ ಟ್ರಾನ್ಸ್‌ಫರ್ ಆಯಿತು. ಆತ ವಾಟರ್ ವರ್ಕ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಹಾಗಾಗಿ ಆತನಿಗೆ ಬಿಕನೀರ್‌ಗೆ ಟ್ರಾನ್ಸ್‌ಫರ್ ಆದ ಮೇಲೆ ಆಕೆ ಸಹ ತಂದೆತಾಯಿಯ ಜತೆಗೆ ಬಿಕನೀರ್ ಹೋದಳು.

ಅಲ್ಲೇ ಓದುಕೊಳ್ಳುತ್ತಿರಬೇಕಾದರೆ 2002, ಮೇ 26ರಂದು ತಮ್ಮ ಮನೆ ಬಳಿ ನಡೆದ ಬಾಂಬ್ ಬ್ಲಾಸ್ಟ್‌ನಲ್ಲಿ ಮಾಳವಿಕಾ ತನ್ನ ಎರಡೂ ಕೈಗಳನ್ನು ಕಳೆದುಕೊಂಡಳು. ಆಗ ಆಕೆಗೆ 13 ವರ್ಷ ವಯಸ್ಸು. ಆ ಘಟನೆ ಕಾರಣದಿಂದ 18 ತಿಂಗಳ ಕಾಲ ಆಸ್ಪತ್ರೆಯಲ್ಲಿ ಆಕೆ ಇದ್ದಳು.

ಆದರೆ ಆಸ್ಪತ್ರೆಯಿಂದ ಬಂದರೂ ತನ್ನೆರಡು ಕೈಗಳು ಹೋದವೆಂದು ಆಕೆ ಎಂದಿಗೂ ಕೊರಗುತ್ತಾ ಕೂರಲಿಲ್ಲ. ತನಗೆಂದು ಒಂದು ಗುರಿಯನ್ನು ಇಟ್ಟುಕೊಂಡಳು. ಅದಕ್ಕಾಗಿ ಶ್ರಮಿಸಿದರು. ಎರಡು ಕೈಗಳು ಇಲ್ಲದಿದ್ದರೂ ಬರೆಯುವುದು, ಟೈಪ್ ಮಾಡುವುದನು ಪ್ರಾಕ್ಟೀಸ್ ಮಾಡಿದಳು. ಅದಕ್ಕಾಗಿ ಆಕೆ ಸಾಕಷ್ಟು ಕಷ್ಟಪಟ್ಟಳು. ಆದರೆ ಕೊನೆಗೆ ಆಕೆ ತನ್ನ 28ನೇ ವರ್ಷದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು.

ಕೊನೆಗೂ ತನ್ನ ಗುರಿಯನ್ನು ಸಾಧಿಸಿದರು. ಆದರೆ ಆಕೆ ಪಿಎಚ್‌ಡಿ ಪೂರ್ಣಗೊಳಿಸಿದ್ದಷ್ಟೇ ಅಲ್ಲದೆ, ತನ್ನಂತಹವರಿಗೆ ಸ್ಫೂರ್ತಿಯಾಗಿ ಸಹ ಇದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಅಂಗವೈಕಲ್ಯ ಇರುವವರಿಗೆ ಸ್ಫೂರ್ತಿಯನ್ನು ತುಂಬುವಂತೆ ಆಕೆ ಉಪನ್ಯಾಸಗಳನ್ನು ಸಹ ಮಾಡುತ್ತಿದ್ದಾರೆ.
