ಜ್ಯೋತಿಷ್ಯ

ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾದ ಪ್ರೇಮಿಗಳು….!

27

75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್‍ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್‍ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್‍ರನ್ನು ಭೇಟಿ ಆಗಿದ್ದಾರೆ.

ಪ್ರೀತಿ ಶುರುವಾಗಿದ್ದು ಹೇಗೆ?
1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ ಶುರುವಾಗಿದೆ. 24 ವರ್ಷದಲ್ಲಿದ್ದಾಗ ಕೇಟಿ ರಾಬಿನ್ಸ್, ಜೇನಿನ್‍ನನ್ನು ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲೇ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ರಾಬಿನ್ಸ್ ಅಮೆರಿಕದಲ್ಲಿ ವಾಸಿಸುತ್ತಿದ್ದರೆ, ಜೇನಿನ್ ಫ್ರಾನ್ಸ್ ನಲ್ಲಿ ವಾಸಿಸುತ್ತಿದ್ದರು. ರಾಬಿನ್ಸ್ ಅಮೆರಿಕದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ 2ನೇ ವಿಶ್ವ ಯುದ್ಧ ನಡೆಯುತ್ತಿದ್ದ ಕಾರಣ ಬೇರೆ ಕಡೆ ಕಳುಹಿಸಲಾಗಿತ್ತು. ಯುದ್ಧ ಮುಗಿದ ನಂತರ ಎಲ್ಲ ಸೈನಿಕರು ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದರು. ಹಾಗೆಯೇ ರಾಬಿನ್ಸ್ ಕೂಡ ತಮ್ಮ ಮನೆಗೆ ಹಿಂದಿರುಗಿದ್ದರು.
ಹಿಂತಿರುಗಲಿಲ್ಲ ರಾಬಿನ್ಸ್:

ರಾಬಿನ್ಸ್ ನನ್ನನ್ನು ಬಿಟ್ಟು ಹೋಗಿದ್ದ ಸಂದರ್ಭದಲ್ಲಿ ನಾನು ತುಂಬಾ ಅತ್ತಿದ್ದೆ. ರಾಬಿನ್ಸ್ ಮತ್ತೆ ವಾಪಸ್ ಬರುತ್ತಾರೆ ಎಂಬ ಭರವಸೆಯಿಂದ ನಾನು ಆಂಗ್ಲ ಭಾಷೆ ಕೂಡ ಕಲಿತೆ. ಅವರು ಮತ್ತೆ ಬಂದಾಗ ನಾನು ಅವರ ಜೊತೆ ಆಂಗ್ಲ ಭಾಷೆ ಮಾತನಾಡಬೇಕು ಎಂದು ಆಸೆಯಿಂದ ಇದ್ದೆ. ಆದರೆ ಯುದ್ಧ ನಡೆದ ಬಳಿಕ ರಾಬಿನ್ಸ್ ಅಮೆರಿಕಗೆ ಹೊರಟೇ ಹೋದರು ಎಂದು ಜೇನಿನ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಹಿಂತಿರುಗಲಿಲ್ಲ ರಾಬಿನ್ಸ್:
ನಾನು ಕೂಡ ಜೇನಿನ್‍ನನ್ನು ಮರೆಯಲಿಲ್ಲ. ನಾನು ಈಗಲೂ ಸಹ ಜೇನಿನ್ ಫೋಟೋ ಇಟ್ಟುಕೊಂಡಿದ್ದೇನೆ. ನಾನು ಮತ್ತೆ ಹಿಂದಿರುಗಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಆ ಸಂದರ್ಭದಲ್ಲಿ ಹೇಳಿದ್ದೆ. ಆದರೆ ಆಗ ಅದು ಸಾಧ್ಯವಾಗಿಲ್ಲ ಎಂದು ರಾಬಿನ್ಸ್ ಹೇಳಿದ್ದಾರೆ. ಅಲ್ಲದೆ ಜೇನಿನ್ ಕೂಡ ನಾನು ರಾಬಿನ್ಸ್ ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಅವರನ್ನು ಎಂದಿಗೂ ಹೃದಯದಿಂದ ತೆಗೆಯಲಿಲ್ಲ ಎಂದು ಹೇಳಿದ್ದಾರೆ. ರಾಬಿನ್ಸ್ ಟ್ರಕ್‍ನಲ್ಲಿ ಯುದ್ಧಕ್ಕೆ ಹೊರಟಾಗ ನನಗೆ ತುಂಬಾ ದುಃಖ ಆಗಿತ್ತು. ನಾನು ತುಂಬಾ ಅತ್ತಿದ್ದೆ. ಯುದ್ಧ ನಡೆದ ಬಳಿಕ ಅವರು ಅಮೆರಿಕಗೆ ಹೋಗಬಾರದಿತ್ತು ಎಂದು ಜೇನಿನ್ ಹೇಳಿದ್ದಾರೆ.

ಸ್ವಲ್ಪ ವರ್ಷದ ಬಳಿಕ ಇಬ್ಬರು ಬೇರೆಯವರನ್ನು ಮದುವೆಯಾಗಿದ್ದು, ಈಗ ಇಬ್ಬರ ಸಂಗಾತಿ ಕೂಡ ನಿಧನರಾಗಿದ್ದಾರೆ. 75 ವರ್ಷಗಳ ಬಳಿಕ ಇಬ್ಬರು ಪರಸ್ಪರ ಭೇಟಿಯಾಗಿ ಭಾವುಕರಾಗಿದ್ದಾರೆ. ಅಲ್ಲದೆ ಇಬ್ಬರು ಕಿಸ್ ಮಾಡಿ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಬಳಿಕ ರಾಬಿನ್ಸ್ ನಾನು ಈಗ ಹೋಗಬೇಕು. ನಾನು ಮತ್ತೆ ಹಿಂದಿರುಗುತ್ತೇನೆ ಎಂದು ನಿನಗೆ ಮಾತು ನೀಡುತ್ತೇನೆ ಎಂದು ಹೇಳುತ್ತಾ ಜೇನಿನ್‍ಗೆ ಐ ಲವ್ ಯೂ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ