ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್‍ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್‍ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್‍ರನ್ನು ಭೇಟಿ ಆಗಿದ್ದಾರೆ.

ಪ್ರೀತಿ ಶುರುವಾಗಿದ್ದು ಹೇಗೆ?
1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ ಶುರುವಾಗಿದೆ. 24 ವರ್ಷದಲ್ಲಿದ್ದಾಗ ಕೇಟಿ ರಾಬಿನ್ಸ್, ಜೇನಿನ್‍ನನ್ನು ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲೇ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ರಾಬಿನ್ಸ್ ಅಮೆರಿಕದಲ್ಲಿ ವಾಸಿಸುತ್ತಿದ್ದರೆ, ಜೇನಿನ್ ಫ್ರಾನ್ಸ್ ನಲ್ಲಿ ವಾಸಿಸುತ್ತಿದ್ದರು. ರಾಬಿನ್ಸ್ ಅಮೆರಿಕದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ 2ನೇ ವಿಶ್ವ ಯುದ್ಧ ನಡೆಯುತ್ತಿದ್ದ ಕಾರಣ ಬೇರೆ ಕಡೆ ಕಳುಹಿಸಲಾಗಿತ್ತು. ಯುದ್ಧ ಮುಗಿದ ನಂತರ ಎಲ್ಲ ಸೈನಿಕರು ತಮ್ಮ ತಮ್ಮ ಮನೆಗೆ ಹಿಂದಿರುಗಿದ್ದರು. ಹಾಗೆಯೇ ರಾಬಿನ್ಸ್ ಕೂಡ ತಮ್ಮ ಮನೆಗೆ ಹಿಂದಿರುಗಿದ್ದರು.
ಹಿಂತಿರುಗಲಿಲ್ಲ ರಾಬಿನ್ಸ್:

ರಾಬಿನ್ಸ್ ನನ್ನನ್ನು ಬಿಟ್ಟು ಹೋಗಿದ್ದ ಸಂದರ್ಭದಲ್ಲಿ ನಾನು ತುಂಬಾ ಅತ್ತಿದ್ದೆ. ರಾಬಿನ್ಸ್ ಮತ್ತೆ ವಾಪಸ್ ಬರುತ್ತಾರೆ ಎಂಬ ಭರವಸೆಯಿಂದ ನಾನು ಆಂಗ್ಲ ಭಾಷೆ ಕೂಡ ಕಲಿತೆ. ಅವರು ಮತ್ತೆ ಬಂದಾಗ ನಾನು ಅವರ ಜೊತೆ ಆಂಗ್ಲ ಭಾಷೆ ಮಾತನಾಡಬೇಕು ಎಂದು ಆಸೆಯಿಂದ ಇದ್ದೆ. ಆದರೆ ಯುದ್ಧ ನಡೆದ ಬಳಿಕ ರಾಬಿನ್ಸ್ ಅಮೆರಿಕಗೆ ಹೊರಟೇ ಹೋದರು ಎಂದು ಜೇನಿನ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಹಿಂತಿರುಗಲಿಲ್ಲ ರಾಬಿನ್ಸ್:
ನಾನು ಕೂಡ ಜೇನಿನ್‍ನನ್ನು ಮರೆಯಲಿಲ್ಲ. ನಾನು ಈಗಲೂ ಸಹ ಜೇನಿನ್ ಫೋಟೋ ಇಟ್ಟುಕೊಂಡಿದ್ದೇನೆ. ನಾನು ಮತ್ತೆ ಹಿಂದಿರುಗಿ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಆ ಸಂದರ್ಭದಲ್ಲಿ ಹೇಳಿದ್ದೆ. ಆದರೆ ಆಗ ಅದು ಸಾಧ್ಯವಾಗಿಲ್ಲ ಎಂದು ರಾಬಿನ್ಸ್ ಹೇಳಿದ್ದಾರೆ. ಅಲ್ಲದೆ ಜೇನಿನ್ ಕೂಡ ನಾನು ರಾಬಿನ್ಸ್ ನನ್ನು ತುಂಬಾ ಪ್ರೀತಿಸುತ್ತೇನೆ. ನಾನು ಅವರನ್ನು ಎಂದಿಗೂ ಹೃದಯದಿಂದ ತೆಗೆಯಲಿಲ್ಲ ಎಂದು ಹೇಳಿದ್ದಾರೆ. ರಾಬಿನ್ಸ್ ಟ್ರಕ್‍ನಲ್ಲಿ ಯುದ್ಧಕ್ಕೆ ಹೊರಟಾಗ ನನಗೆ ತುಂಬಾ ದುಃಖ ಆಗಿತ್ತು. ನಾನು ತುಂಬಾ ಅತ್ತಿದ್ದೆ. ಯುದ್ಧ ನಡೆದ ಬಳಿಕ ಅವರು ಅಮೆರಿಕಗೆ ಹೋಗಬಾರದಿತ್ತು ಎಂದು ಜೇನಿನ್ ಹೇಳಿದ್ದಾರೆ.
ಸ್ವಲ್ಪ ವರ್ಷದ ಬಳಿಕ ಇಬ್ಬರು ಬೇರೆಯವರನ್ನು ಮದುವೆಯಾಗಿದ್ದು, ಈಗ ಇಬ್ಬರ ಸಂಗಾತಿ ಕೂಡ ನಿಧನರಾಗಿದ್ದಾರೆ. 75 ವರ್ಷಗಳ ಬಳಿಕ ಇಬ್ಬರು ಪರಸ್ಪರ ಭೇಟಿಯಾಗಿ ಭಾವುಕರಾಗಿದ್ದಾರೆ. ಅಲ್ಲದೆ ಇಬ್ಬರು ಕಿಸ್ ಮಾಡಿ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಬಳಿಕ ರಾಬಿನ್ಸ್ ನಾನು ಈಗ ಹೋಗಬೇಕು. ನಾನು ಮತ್ತೆ ಹಿಂದಿರುಗುತ್ತೇನೆ ಎಂದು ನಿನಗೆ ಮಾತು ನೀಡುತ್ತೇನೆ ಎಂದು ಹೇಳುತ್ತಾ ಜೇನಿನ್‍ಗೆ ಐ ಲವ್ ಯೂ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ತೆಲುಗು ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿಬಾಬು, ಅನುಷ್ಕಾ ಶೆಟ್ಟಿ, ನಯನ ತಾರಾ, ತಮನ್ನಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ರಾಮ್ ಚರಣ್ ತೇಜ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುಧೀಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಈಗಾಗಲೇ ‘ಸೈರಾ ನರಸಿಂಹ…
ಕನ್ನಡ ಚಿತ್ರ ರಂಗದ ನಟ ಉಪೇಂದ್ರರವರ ರಾಜಕೀಯ ಸುದ್ದಿಗಳು ದಿನಕ್ಕೊಂದಂತೆ ತಿರುವು ಪಡೆದುಕೊಳ್ಳುತ್ತಿವೆ.ಈಗ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿಮಗೆಲ್ಲ ಗೊತ್ತಿರುವಂತೆ ಅವರು ಸ್ಥಾಪಸಲು ಹೊರಟಿರುವ ಪಕ್ಷದ ಹೆಸರು ಪ್ರಜಾಕೀಯ ಎಂದು. ಆದ್ರೆ ಮೂಲಗಳ ಪ್ರಕಾರ ಅವರ ಪಕ್ಷದ ಹೆಸರು ಪ್ರಜಾಕೀಯ ಅಲ್ಲ..!
ತನ್ನ ತಂದೆ ಒಬ್ಬ ಸಾಮಾನ್ಯ ರೈತ ಹೊಲದ ದಾಖಲೆಗಳನ್ನು ಸಹಿ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿದಿನ ಅಲೆದಾಡುತ್ತಿದ್ದರು, ಬಿಸಿಲು ಗಾಳಿ ಮಳೆ ಎನ್ನದೆ ಪ್ರತಿದಿನ ತಮ್ಮ ಕೆಲಸ ಆಗಲಿ ಅನ್ನೋ ಕಾರಣಕ್ಕೆ ಓಡಾಡುತ್ತಿದ್ದರು, ಆದ್ರು ಕೆಲಸ ಆಗದೆ ಮರಳಿ ಮನೆಗೆ ಬರುತ್ತಿದ್ದರು ಇದೆಲ್ಲ ಗಮನಿಸಿದ ಈ ಬಾಲಕಿ ಅಂದ್ರೆ ಈಗ ಐಎಎಸ್ ಅಧಿಕಾರಿ ಆಗಿರುವಂತ ರೋಹಿಣಿಯವರು ಆಗ 9ನೇ ವಯಸ್ಸಿನ ಬಾಲಕಿಯಾಗಿದ್ದರು. ಒಂದು ದಿನ ಈ ಬಾಲಕಿ ತಮ್ಮ ತಂದೆಯನ್ನು ಕೇಳುತ್ತಾರೆ ಅಪ್ಪ ನೀವು ಪ್ರತಿದಿನ ಬಿಸಿಲು…
ನಾವು ಕರ್ನಾಟಕದ ಯಾವುದೇ ನಗರ, ಊರುಗಳಿಗೆ ಹೋಗಬೇಕಾದ್ರೆ, ನಮಗೆ ಯಾವ ಬಸ್ ಯಾವ ಸಮಯಕ್ಕೆ ಸಿಗುತ್ತೆ,ಎಷ್ಟೊತ್ತಿಗೆ ಬಸ್ ನಿಲ್ದಾಣ ಬಿಡುತ್ತೆ ಎಂಬುದರ ಬಗ್ಗೆ ಎಷ್ಟೋ ಜನಕ್ಕೆ ಮಾಹಿತಿ ಇರುವುದಿಲ್ಲ.
ಚಿನ್ನ ಎಂದರೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ?. ಗಂಡಸರಿಗಿಂತ ಹೆಂಗಸರಿಗೇ ಚಿನ್ನದ ಮೇಲೆ ಹೆಚ್ಚಿನ ಆಸೆ ಇರುತ್ತದೆ. ಸಾಮಾನ್ಯ ದಿನಗಳಲ್ಲೇ ಅಪಾರ ಆಸಕ್ತಿ ತೋರುವ ಹೆಂಗಸರು ಮದುವೆಯಂತಹ ಶುಭಕಾರ್ಯಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ತೋರುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್ವುಡ್ ಸ್ಟಾರ್ ಗಳ ಬಾಕ್ಸ್ ಆಫೀಸ್ ಯುದ್ಧ ಇದೀಗ ಕ್ಯಾನ್ಸಲ್ ಆಗಿದೆ.ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಾದ ‘ಮುನಿರತ್ನ ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಒಂದೇ ದಿನ ಅಂದರೆ ಆಗಸ್ಟ್ 9ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಆದರೆ ಈಗ ಆಗಸ್ಟ್ 9ರಂದು ಬಿಡುಗಡೆ ಆಗಬೇಕಿದ್ದ ಕುರುಕ್ಷೇತ್ರ ಚಿತ್ರ ಆಗಸ್ಟ್ 2ರಂದು ಬಿಡುಗಡೆ ಆಗಲಿದೆ. ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರ ಕೂಡ ಆಗಸ್ಟ್ 9ರಂದು ರಿಲೀಸ್ ಆಗಲಿದೆ…