ದೇವರು-ಧರ್ಮ

ಬಡ ರಾಷ್ಟ್ರ ಭಾರತದ ಈ ದೇವಾಸ್ಥಾನಗಳಲ್ಲಿ ಎಷೆಷ್ಟು ಚಿನ್ನ ಇದೆ ಗೊತ್ತಾ..!ಈ ಲೇಖನ ಓದಿ ಶಾಕ್ ಆಗ್ತೀರಾ…

962

ಜಗತ್ತಿನ ದೇವರುಗಳಿಗಿಂತ ಭಾರತೀಯ ದೇವರ ಸನ್ನಿಧಿಯಲ್ಲಿ ಕೋಟಿ ಕೋಟಿ ರೂಪಾಯಿ ಅಡಗಿ ಕುಳಿತಿದೆ. ದೇವರ ಖಜಾನೆಯಲ್ಲಿ ಲೆಕ್ಕವಿಲ್ಲದಷ್ಟು ಬಂಗಾರ ಬೇಕಾ ಬಿಟ್ಟಿಯಾಗಿ ಬಿದ್ದಿದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಒಟ್ಟು ಸುಮಾರು 54 ಬಿಲಿಯನ್‌ ರೂಪಾಯಿಗಳಷ್ಟು ಮೌಲ್ಯವುಳ್ಳ ಬಂಗಾರ ದೇವರ ಪಾದಕ್ಕೆ ಸೇರಿದೆ ಎಂದರೆ ಇದು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಂಗತಿ.

ಭಕ್ತರು ತಮ್ಮ ಭಕ್ತಿಗೆ ತಕ್ಕಂತೆ, ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಹೀಗೆ ಸಲ್ಲಿಸಿದ ಕಾಣಿಕೆಗಳಲ್ಲಿ ಭಾಗಶಃ ಚಿನ್ನದ ಕಾಣಿಕೆಯೇ ಹೆಚ್ಚಗಿದೆ ಎಂದು ಅಂದಾಜಿಸಲಾಗಿದೆ. ತಿರುಪತಿಯ ತಮ್ಮಪ್ಪನ ದೇವಾಲಯ, ಜಮ್ಮು ಕಾಶ್ಮೀರದ ವೈಷ್ಣೋ ದೇವತೆಯ ದೇವಾಲಯ, ಅನಂತ ಪದ್ಮನಾಭ ಸ್ವಾಮಿ ದೇವಾಲಯ, ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶೇಖರಣೆಗೊಂಡಿರುವ ಒಟ್ಟು ಚಿನ್ನದ ಮೌಲ್ಯ, ಬರೋಬ್ಬರಿ 50 ಬಿಲಿಯನ್‌ ರೂಪಾಯಿಗಳು.

 

  •  ತಿರುಪತಿ ತಿಮ್ಮಪ್ಪನ ದೇವಾಲಯ

ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿ ಪ್ರಸಿದ್ಧ ವೈದಿಕ ದೇವಾಲಯ ಆಗಿದೆ .ಇದು ಹೈದರಾಬಾದ್ ನಿಂದ ಸುಮಾರು 600 ಕಿ ( 370 ಮೈಲಿ) , ಚೆನೈ ನಿಂದ 138 ಕಿ ( 86 ಮೈಲಿ) ಮತ್ತು ಬೆಂಗಳೂರಿನಿಂದ 291 ಕಿಮೀ ( 181 ಮೈಲು) ದುರದಲ್ಲಿದೆ. ತಿರುಮಲ ಬೆಟ್ಟ ಸಮುದ್ರ ಮಟ್ಟದಿಂದ 853m ಮತ್ತು ಪ್ರದೇಶದಿಂದ 10,33 ಚದರ ಮೈಲಿ ( 27 ಕಿಮಿ 2 ) ಇದೆ .  ತಿರುಪತಿ ತಿಮ್ಮಪ್ಪ ಎಷ್ಟು ಶ್ರೀಮಂತ ದೇವರು ಎಂದರೆ, ಪ್ರತಿ ತಿಂಗಳು 80 ರಿಂದ 100ಕಿಲೋ ಚಿನ್ನವನ್ನು ಭಕ್ತರು ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡ್ತಾರಂತೆ. ಒಟ್ಟಾರೆಯಾಗಿ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಸುಮರು 70,000 ಕೋಟಿ ಮವಲ್ಯದ ಚಿನ್ನ ಅಡಗಿ ಕುಳಿತಿದೆ.ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿರುವ ಚಿನ್ನವನ್ನು ಕೆಲವು ಬ್ಯಾಂಕಿನಲ್ಲಿ ಇಡಲಾಗಿದೆ. ಇದರ ಬಡ್ಡಿಯೇ ಸುಮಾರು ಕೋಟಿಗಟ್ಟಲೇ ಬರುತ್ತದೆ ಎಂದು ಎಂದು ಮೂಲಗಳು ಅಂದಾಜಿಸಿವೆ. ಇಂಡಿಯನ್‌ ಓವರ್‌ಸಿಸ್‌‌ ಬ್ಯಾಂಕಿನಲ್ಲಿ 1353 ಕಿಲೋ, ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 2275 ಕಿಲೋ ಚಿನ್ನವನ್ನು ಠೇವಣಿ ಮಾಡಿ ಇಡಲಾಗಿದೆ.

  • ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯ

ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಸಾಸ್ತಾ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರು ಮೂರು ನಾಲ್ಕು ದಶಲಕ್ಷದಷ್ಟು ಯಾತ್ರಿಗಳು ಪ್ರತಿ ವರ್ಷ ಸೆಳೆಯುತ್ತದೆ. ಪರ್ವತಗಳನ್ನು ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಬಹುಶಃ ಕೇರಳದೆ ಅತ್ಯುತ್ತಮ ತೀರ್ಥಯಾತ್ರಾ ಸ್ಥಳವಾಗಿದೆ ಶಬರಿಮಲೆ ಆಗಿದೆ. ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಜನವರಿ ಕೊನೆಯಾಗುತ್ತದೆ . ದೇವಾಲಯದ ಭಾರತದ ದಕ್ಷಿಣ ರಾಜ್ಯಗಳ ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.  ಶಬರಿಮಲೆ ಸ್ವಾಮಿಯ ಒಟ್ಟು ಆರ್ಥಿಕ ವರಮಾನ ಎಷ್ಟು ಗೊತ್ತೇ? ಬರೋಬ್ಬರಿ 105 ಕೋಟಿಗಳು. ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 15 ಕಿಲೋಗಳಷ್ಟು ಚಿನ್ನ ಇದೆ ಎಂದು ಹೇಳಲಾಗುತ್ತದೆ.

  • ವೈಷ್ಣೋ ದೇವಿ ದೇವಾಲಯ

ಕಟ್ರಾ ಅಥವಾ ಕಟ್ರಾ ವೈಷ್ಣೋ ದೇವಿ ಜಮ್ಮು ಮತ್ತು ಕಾಶ್ಮೀರದ ಉಧಮ್‍ಪುರ್ ಜಿಲ್ಲೆಯ ಒಂದು ಸಣ್ಣ ಪಟ್ಟಣ ಮತ್ತು ವೈಷ್ಣೋ ದೇವಿ ಪವಿತ್ರ ದೇವಾಲಯ ನೆಲೆಗೊಂಡಿರುವ ತ್ರಿಕೂಟ ಬೆಟ್ಟಗಳ ತಪ್ಪಲಿನಲ್ಲಿ ಸ್ಥಿತವಾಗಿದೆ. ಅದು ಜಮ್ಮು ನಗರದಿಂದ ೪೨ ಕಿ.ಮಿ. ದೂರದಲ್ಲಿ ನೆಲೆಗೊಂಡಿದೆ. ಭಾರತದ ಮುಂಚೂಣಿಯಲ್ಲಿರುವ ತಾಂತ್ರಿಕ ವಿಶ್ವವಿದ್ಯಾಲಯಗಳ ಪೈಕಿ ಒಂದಾದ ಶ್ರೀ ಮಾತಾ ವೈಷ್ಣೋ ದೇವಿ ವಿಶ್ವವಿದ್ಯಾಲಯವೂ ಇಲ್ಲಿ ನೆಲೆಗೊಂಡಿದೆ.

ಅತಿ ಶ್ರೀಮಂತ ದೇವಾಲಯಗಳಲ್ಲಿ 5 ನೇ ಸ್ಥಾನದಲ್ಲಿ ಇರುವ ದೇವಾಲಯ ಜಮ್ಮು ಕಾಶ್ಮೀರದ ವೈಷ್ಣೋ ದೇವಯಿ ದೇವಾಲಯ. ಇಲ್ಲಿಗೆ ನವರಾತ್ರಿ ಸಮಯದಲ್ಲಿ ಕನಿಷ್ಟ ಸುಮಾರು 80 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವೈಷ್ಣೋ ದೇವಿಯ ಸನ್ನಿಧಿಯಲ್ಲಿರುವ  ಒಟ್ಟು ಚಿನ್ನ ಎಂದರೆ 20,000 ಟನ್‌ ಎಂದು ಅಂದಾಜಿಸಲಾಗಿದೆ.

  • ಅನಂತ ಪದ್ಮನಾಭ ಸ್ವಾಮಿ ದೇವಾಲಯ

ಕೇರಳದ ತಿರುವನಂತಪುರದಲ್ಲಿರುವ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯ 108 ವಿಷ್ಣು ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಇಲ್ಲಿ ನೀವು ಶೇಷ ಶಯನ ಅನಂತ ಪದ್ಮನಾಭನ ದಿವ್ಯ ಮೂರ್ತಿಯನ್ನು ಕಾಣಬಹುದು. ಮಲಗಿದ ರೂಪದಲ್ಲಿರುವ ಇಂತಹ ಬೃಹತ್‌ ಮೂರ್ತಿಯನ್ನು ನೀವು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಇಲ್ಲಿ ವಿಷ್ಣು ತಾವರೆಯ ಮೇಲೆ ಮಲಗಿರುವುದರಿಂದ ಪದ್ಮನಾಭ ಎಂದು ಕರೆಯಲಾಗುತ್ತದೆ. ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯವು ಭಾರತದ ಅತಿ ಶ್ರೀಮಂತ ದೇವಾಲಯ ಎಂಬುದಾಗಿ ಗುರ್ತಿಸಿಕೊಂಡಿದೆ. ಈ ದೇವಾಲಯದಲ್ಲಿನ ಒಟ್ಟು ಚಿನ್ನದ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗಳು..

 

  • ಗುರುವಾಯೂರಿನಲ್ಲಿರುವ ಶ್ರೀ ಕೃಷ್ಣನ ದೇವಾಲಯ.

ಗುರುವಾಯೂರು, ಗುರುಪಾವನಪುರಿ ಎಂದೂ ಪರಿಚಿತವಾಗಿದೆ, ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಒಂದು ಪುರಸಭಾ ಪಟ್ಟಣ. ಇದು, ದೈನಂದಿನ ಭಕ್ತಾದಿಗಳ ಸಂಖ್ಯೆಯ ದೃಷ್ಟಿಯಿಂದ, ಭಾರತದ ನಾಲ್ಕನೆ ಅತಿ ದೊಡ್ಡ ದೇವಸ್ಥಾನವೆನಿಸಿರುವ ಗುರುವಾಯೂರು ಶ್ರೀ ಕೃಷ್ಣ ದೇವಾಲಯದ ನೆಲೆಯಾಗಿದೆ. ಗುರುವಾಯೂರು, ದಂತಕಥೆಗಳ ಪ್ರಕಾರ, ಗುರುವಾಯೂರು ದೇವಸ್ಥಾನದ ಮೂರ್ತಿಯಷ್ಟು ಅಂದರೆ, 5000 ವರ್ಷಗಳಷ್ಟು ಹಳೆಯದಿರಬಹುದು.

ಕೇರಳಾದಲ್ಲಿ ಇರುವ ಖ್ಯಾತ ಹಿಂದೂ ದೇವಾಲಯ ಗುರುವಾಯೂರು ದೇವಾಲಯ. ಶ್ರೀಕೃಷ್ಣನ ಆವಾಸ ಸ್ಥಾನವಾಗಿರುವ ಗುರುವಾಯೂರು ದೇವಾಲಯದ ಒಟ್ಟು ಆದಾಯ 50 ಕೋಟಿಗಳು. ಭಕ್ತರಿಂದ ಕೆಜಿಗಟ್ಟಲೇ ಚಿನ್ನ ಉಡುಗೊರೆಯಾಗಿ ಶ್ರೀಕೃಷ್ಣನ ಪಾದಕ್ಕೆ ಬಂದು ಬೀಳುತ್ತದೆ. ಈ ದೇವಾಲಯದಲ್ಲಿ ಸುಮಾರು 600ಕಿಲೋಗಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ಇದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 500 ಕಿಲೋ ಚಿನ್ನವನ್ನು ಭಾರತೀಯ ಸ್ಟೇಟ್ ಬ್ಯಾಂಕಿನ ಮುಂಬೈ ಶಾಖೆಯಲ್ಲಿ ಠೇವಣಿ ಮಾಡಿ ಇಡಲಾಗಿದೆ. ಇನ್ನುಳಿದ ಚಿನ್ನ ದೇವಾಲಯದ ವಶದಲ್ಲಿ ಇದೆ ಎಂದು ಹೇಳಲಾಗುತ್ತದೆ.

  • ಸಿದ್ದಿ ವಿನಾಯಕ ದೇವಾಲಯ ಮುಂಬೈ.

ಮುಂಬೈನ ಖ್ಯಾತ ದೇವಾಲಯ ಶ್ರೀ ಸಿದ್ದಿ ವಿನಾಯಕ ದೆವಾಲಯ. ಗಣೇಶ ಹಬ್ಬವನ್ನು ಇಲ್ಲಿನ ಜನರು ಭಕ್ತಿಯಿಂದ, ವಿಜೃಂಭಣೆಯಿಂದ ಅಚರಿಸುತ್ತಾರೆ. ಈ ದೇವಾಲಯದಲ್ಲಿ ಒಟ್ಟಾರೆಯಾಗಿ 150 ಕಿಲೋ ಚಿನ್ನ ಇದ್ದು, ಅದರಲ್ಲಿ ಕೇವಲ 10 ಕಿಲೋ ಚಿನ್ನವನ್ನು 10 ನಲ್ಲಿ ಇಡಲಾಗಿದೆ. ಇನ್ನುಳಿದ 140 ಕಿಲೋ ಚಿನ್ನವು ದೇವಸ್ಥಾನದ ಖಜಾನೆಯಲ್ಲಿ ಭದ್ರವಾಗಿದೆ ಅಂತ ಹೇಳಲಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಅಪ್ಪಿ ತಪ್ಪಿಯೂ ಬೆಳಗಿನ ‘ವಾಕಿಂಗ್’ ವೇಳೆ ಈ ತಪ್ಪುಗಳನ್ನು ಮಾಡಬೇಡಿ..?ಇದರಿಂದ ಆರೋಗ್ಯಕ್ಕಿಂತ ಅನಾರೋಗ್ಯವೇ ಹೆಚ್ಚು…

    ಫಿಟ್ನೆಸ್ ಕಾಯ್ದುಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉತ್ತಮ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಫಿಟ್ನೆಸ್ ಗೆ ಸಹಕಾರಿ. ಬೆಳಿಗ್ಗಿನ ವಾಕ್ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜಿಮ್, ಯೋಗಕ್ಕಿಂತ ವಾಕಿಂಗ್ ಬೆಸ್ಟ್ ಎನ್ನುವವರಿದ್ದಾರೆ. ಆದ್ರೆ ಈ ವಾಕ್ ವೇಳೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮ ಆರೋಗ್ಯವನ್ನು ಸುಧಾರಿಸುವ ಬದಲು ಹಾಳು ಮಾಡುತ್ತವೆ. ವಾಕಿಂಗ್ ಮಾಡಲು ವಾಹನ ಓಡಾಡದ ಹಾಗೂ ಹಸಿರು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಅನೇಕರು ತಡವಾಗಿ ಏಳ್ತಾರೆ. ಪಾರ್ಕ್ ಗೆ ಹೋಗಲು ಸಮಯವಿರುವುದಿಲ್ಲ….

  • ದೇವರು-ಧರ್ಮ

    ಪ್ರತಿಯೊಬ್ಬ “ಹಿಂದೂ ಧರ್ಮ”ದವರು ಕೂಡ ತಿಳಿಯಲೇಬೇಕಾದ ಈ ವಿಷಯಗಳು..!ಏನೆಂದು ತಿಳಿಯಬೇಕಾದ್ರೆ ಈ ಲೇಖನ ಓದಿ…

    ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.

  • ಸಿನಿಮಾ

    ವಿಷ್ಣು-ಸೌಂದರ್ಯ ಸಾವಿಗೆ ಇವಳೇ ಕಾರಣನಾ..!ಮತ್ತೆ ಸುದ್ದಿಯಾಗುತ್ತಿದೆ ನಾಗವಲ್ಲಿ..!ತಿಳಿಯಲು ಈ ಲೇಖನ ಓದಿ…

    ನಾಗವಲ್ಲಿ ಪಾತ್ರ ಜನಪ್ರಿಯವಾದ ಕಾರಣ ಅದೇ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ಆದರೆ, ಚಿತ್ರರಂಗದವರು ಅಷ್ಟಕ್ಕೇ ಬಿಡುವ ಹಾಗೆ ಕಾಣುತ್ತಿಲ್ಲ. ವಿಷ್ಣುವರ್ಧನ್ ಮತ್ತು ಸೌಂದರ್ಯ ಅವರ ಸಾವಿಗೆ ಅದೇ ನಾಗವಲ್ಲಿ ಕಾರಣನಾ ಎಂಬ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನ ಸದ್ದಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಆಗಿದೆ.

  • ಸುದ್ದಿ

    ಈ ಬ್ಯುಸಿನೆಸ್ಸನ್ನು ಶುರು ಮಾಡಿದರೆ ತಿಂಗಳಿಗೆ ಕಚಿತವಾಗಿ ನೀವು 1 ಲಕ್ಷ ರೂ. ಗಳಿಸಬಹುದು…!

    ಅನೇಕರು ನಿಯಮಿತ ಆದಾಯ ಗಳಿಸುವ ದಾರಿ ಹುಡುಕುತ್ತಾರೆ. ನೌಕರಿ ಬಿಟ್ಟು ಸ್ವಂತ ಬ್ಯುಸಿನೆಸ್ ಶುರು ಮಾಡಿ, ಕೈತುಂಬ ಲಾಭ ಗಳಿಸುವ ಬ್ಯುಸಿನೆಸ್ ಹುಡುಕಾಟ ನಡೆಸುತ್ತಾರೆ. ಅಂತವರಿಗೆ ಮೊಟ್ಟೆ ಮಾರಾಟಕ್ಕಾಗಿ ಕೋಳಿ ಸಾಕಣಿಕೆ ಬೆಸ್ಟ್. 1,500 ಕೋಳಿಗಳನ್ನು ಸಾಕಿ ಸಣ್ಣ ಮಟ್ಟದಲ್ಲಿಯೂ ನೀವು ಮೊಟ್ಟೆ ಮಾರಾಟ ಶುರು ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ 7-9 ಲಕ್ಷ ರೂಪಾಯಿಯಷ್ಟು ಖರ್ಚು ಬರುತ್ತದೆ. ಒಮ್ಮೆ ಕ್ಲಿಕ್ ಆದ್ರೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಉತ್ತಮ…

  • ಸುದ್ದಿ

    ಸೀಮಂತ ಸಂಭ್ರಮದಲ್ಲಿ ಸಿಂಡ್ರೆಲ್ಲಾರಂತೆ ಸ್ಯಾಂಡಲ್ ವುಡ್ ರಾಧಿಕಾ….!

    ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ.ರಾಕಿಂಗ್ ಸ್ಟಾರ್ ಪತ್ನಿ ಸೀಮಂತ ಸಂಭ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಅಂತಾನೆ ಖ್ಯಾತಿಗಳಿಸಿರುವ ರಾಧಿಕಾ ಸೀಮಂತ ಸಂಭ್ರಮದಲ್ಲಿ ಸಿಂಡ್ರೆಲ್ಲಾ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ರಾಧಿಕಾ ಪಂಡಿತ್ ಸ್ನೇಹಿತರು ರಾಧಿಕಾಗೆ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ. ಈ ಬಗ್ಗೆ ರಾಧಿಕಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ನನ್ನ ಸ್ನೇಹಿತರು ನನಗೆ ಅದ್ಭುತವಾದ ಬೇಬಿ ಶವರ್…