ಸಾಮಾಜಿಕ ಜಾಲತಾಣ ಫೇಸ್ಬುಕ್’ನ್ನು ಉಪಯೋಗಿಸುವವರ ದಿನೇ ದಿನೇ ಹೆಚ್ಚಾಗುತ್ತಿದೆ.ಇದರ ಜೊತೆಗೆ ಅನೇಕ ಸುಳ್ಳು ಸುದ್ದಿಗಳು ಹರಡುವುದು ಸಾಮಾನ್ಯವಾಗಿದೆ.

ಇದಲ್ಲಿ ಇತ್ತೀಚಿಗೆ ಒಂದು ಸುದ್ದಿ ಫೇಸ್ಬುಕ್’ನಲ್ಲಿ ವೈರಲ್ ಆಗುತ್ತಿದೆ.ಇದು ಫೇಸ್ಬುಕ್’ಗೆ ಸಂಬಂದಪಟ್ಟ ವಿಷಯವೇ ಆಗಿದೆ.ಈ ಸುದ್ದಿಯ ನಿಜವಾದ ಸತ್ಯ ತಿಳಿಯದ ಫೇಸ್ಬುಕ್’ಸ್ನೇಹಿತರು ಒಬ್ಬರಿಂದ ಒಬ್ಬರಿಗೆ ಆ ಸಂದೇಶವನ್ನು ಕಳುಹಿಸುತ್ತಿದ್ದಾರೆ.

BFF ಮ್ಯಾಜಿಕ್
ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್’ರ್ಬರ್ಗ್ ಮತ್ತು ಟೀಮ್ ಅವವರವರ ಫೇಸ್ಬುಕ್ ಖಾತೆಗಳನ್ನು ಸುರಕ್ಷಿತವಾಗಿಡಲು BFF ಕಂಡು ಹಿಡಿದಿದ್ದಾರೆ ಎಂಬ ಸಂದೇಶಗಳು ಫೇಸ್ಬುಕ್ ಜಗತ್ತಿನಲ್ಲಿ ಓಡಾಡುತ್ತಿದ್ದು BFF ಮ್ಯಾಜಿಕ್ ಬಗ್ಗೆ ಪೋಸ್ಟ್ ಗಳು ವೈರಲಾಗುತ್ತಿವೆ.

ಏನಿದು ಸಂದೇಶ..?
ನಿಮಗೆ ಬರುವ ಕಾಮೆಂಟಿನಲ್ಲಿ ನೀವು BFF ಎಂದು ಟೈಪ್ ಮಾಡಬೇಕು.ಟೈಪ್ ಮಾಡಿದ ನಂತರ ಅದು ಹಸಿರು(ಗ್ರೀನ್) ಬಣ್ಣದಲ್ಲಿ ಬಂದ್ರೆ ನಿಮ್ಮ ಖಾತೆ ರಿಯಲ್ ಹಾಗೂ ಸುರಕ್ಷಿತವಾಗಿದೆ ಎಂಬ ಅರ್ಥವಾಗಿದ್ದು, ಒಂದು ವೇಳೆ ಹಸಿರು ಬಣ್ಣ ಬಂದಿಲ್ಲ ಅಂದ್ರೆ ನಿಮ್ಮ ಫೇಸ್ಬುಕ್ ಖಾತೆಯ ಪಾಸ್’ವರ್ಡ್ ಬದಲಿಸಬೇಕೆಂದು ಹೇಳಲಾಗುತ್ತಿದೆ.

ಇದು ನಿಜವೋ,ಸುಳ್ಳೋ…
ಅಸಲಿಗೆ BFFನ ಅರ್ಥ ಯಾರಿಗೂ ಗೊತ್ತಿಲ್ಲ.ಇದರ ನಿಜವಾದ ಅರ್ಥ ಬೆಸ್ಟ್ ಫ್ರೆಂಡ್ ಫಾರೆವರ್ ಅಥವಾ ಬೆಸ್ಟ್ ಫೇಸ್ಬುಕ್ ಫ್ರೆಂಡ್ ಎಂದು.ಇದೂ ಕೂಡ ಒಂದು ಫೇಸ್ಬುಕ್ ಫೀಚರ್ ಆಗಿದ್ದು, ಕೆಲವು ದಿನಗಳ ಹಿಂದಯೇ ಈ ಹೊಸ ಫೀಚರ್’ನ್ನು ಫೇಸ್ಬುಕ್ ಪರಿಚಯಿಸಿದ್ದು ಶುಭಾಶಯ ಕೋರಿದವರ ಕಮೆಂಟ್ ಕೇಸರಿ ಬಣ್ಣದಲ್ಲಿ ಬರುವ ಫೀಚರ್ ಇದಾಗಿದೆ.
ಹಾಗಾಗಿ ಫೇಸ್ಬುಕ್’ನಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಸುಳ್ಳು ಅಂತಲೇ ಹೇಳಲಾಗಿದೆ.