ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಗುರೂಜಿ, ಪ್ರಧಾನಿ ಈಗಾಗಲೇ ಎರಡು ದೊಡ್ಡ ಗಂಡಾಂತರಗಳಿಂದ ತಪ್ಪಿಸಿಕೊಂಡು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಎದುರಾಗುವ ಗಂಡಾಂತರವನ್ನು ತಪ್ಪಿಸಿಕೊಂಡರೆ ಮೋದಿ 12 ವರ್ಷಗಳ ಕಾಲ ದೇಶವನ್ನು ಸುರಕ್ಷಿತವಾಗಿ ಆಳುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಹಿಂದೊಮ್ಮೆ ಅಫ್ಘಾನಿಸ್ತಾನ ಪ್ರವಾಸದಲ್ಲಿದ್ದಾಗ ಮೋದಿಯವರಿದ್ದ ವಿಮಾನ ಪ್ರತಿಕೂಲ ಹವಾಮಾನದಿಂದ ತುರ್ತು ಭೂ ಸ್ಪರ್ಶ ಮಾಡಿತ್ತು. ನಂತರ ಪ್ರಧಾನಿ ದಿಢೀರ್ ಪಾಕಿಸ್ತಾನಕ್ಕೆ ತೆರಳಿ ನವಾಜ್ ಶರೀಫ್ ಅವರನ್ನು ಭೇಟಿಯಾಗಿ ಟೀಕೆ ಟಿಪ್ಪಣಿ ಎದುರಿಸದ್ದರು. ಇವು ಪ್ರಧಾನಿ ಎದುರಿಸಿದ ಎರಡು ಗಂಡಾಂತರಗಳು ಎಂದಿರುವ ಗುರೂಜಿ ಮೂರನೇ ಗಂಡಾಂತರ ಯಾವ ರೂಪದಲ್ಲಿ ಎದುರಾಗುತ್ತೆ ಎಂಬುದನ್ನು ಹೇಳಲಾಗದು ಎಂದಿದ್ದಾರೆ.

ಹಾಸನದ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ‘ಮೋದಿ ಅವರದು ವೃಶ್ಚಿಕ ರಾಶಿ, ಅವರಿಗೆ ಶನಿ ಚೆನ್ನಾಗಿಲ್ಲ. ಶನಿ ಕೂತಾಗ ಯಾರನ್ನೂ ಬಿಡಲ್ಲ. ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿದ್ದು ಯಶೋಕೀರ್ತಿ ಹೊಂದಿರುವ ಸಿನಿಮಾ ಸ್ಟಾರ್ ಅಥವಾ ರಾಜಕಾರಣಿಗೆ ಘೋರ ಅಪಮೃತ್ಯು ಕಾದಿದೆ’ ಎಂದರು.
ಪ್ರಧಾನಿಗೆ ಸ್ತ್ರೀ ದೋಷವಿದೆ. ಪತ್ನಿಯಿಂದ ದೂರವಿದ್ದಾರೆ. ತಾಯಿಯಿಂದ, ಹೆಣ್ಣಿಂದ( ಪತ್ನಿ) ದೂರ ಇರುವ ಪ್ರಧಾನಿಗೆ ಶುಕ್ರನಿಂದಲೂ ದೋಷ ಇದೆ. ಮೋದಿಯವರು ತಾಯಿಯನ್ನು ತಮ್ಮ ನಿವಾಸದಲ್ಲಿ ಇರಿಸಿಕೊಂಡು ಸೇವೆ ಮಾಡಿದರೆ ದೋಷಗಳಿಂದ ಮುಕ್ತವಾಗುವ ಸಾಧ್ಯತೆ ಇದೆ. ಜೊತೆಗೆ ಪಾರ್ಲಿಮೆಂಟ್‌ನ ವಾಸ್ತು ಸ್ಥಿತಿ ಕೂಡ ಪ್ರಧಾನಿಗೆ ಅನುಕೂಲಕರವಾಗಿಲ್ಲ ಎಂದು ಗುರೂಜಿ ಹೇಳಿದ್ದಾರೆ. ಅವರನ್ನು ಹೆಣ್ಣೊಬ್ಬಳು ಮೋಹಿಸಲಿದ್ದಾಳೆ. ಇದೇ ಮೋದಿಗೆ ಮುಳುವಾಗಲಿದೆ. ಗಾಂಧಿ ಕುಟುಂಬಕ್ಕೆ ಇಲ್ಲವೇ ಮೋದಿಗೆ ಸಾವು ಸಾವಿರ ಪರ್ಸೆಂಟ್ ಖಚಿತ ಎಂದರು.

ಈ ಗಂಡಾಂತರದಿಂದ ಪಾರಾಗಬೇಕಾದ್ರೆ ದಕ್ಷಿಣದ 6 ಕ್ಷೇತ್ರಗಳ ಸುಬ್ರಹ್ಮಣ್ಯ ದೇವರನ್ನು ಆರಾಧಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ನಾನೇ ಎಲ್ಲಾ ಅನ್ನೋ ಹಿಟ್ಲರ್ ಮನೋಧೋರಣೆಯನ್ನು ಮೋದಿ ಅವರು ಬಿಟ್ಟರೆ ಒಳ್ಳೆಯದು ಎಂದರು.

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬೆರಕೆ ಸರಕಾರ ಬರಲಿದೆ ಎಂದು ಭವಿಷ್ಯ ನುಡಿದ ಗುರೂಜಿ, ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಆಗುವುದರ ಜೊತೆಗೆ ಕಿಂಗ್’ಮೇಕರ್ ಆಗಲಿದ್ದಾರೆ ಎಂದರು. ಆದರೆ ಅವರು ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡು, ತಂದೆ ದೇವೇಗೌಡರ ಮಾತನ್ನು ಚಾಚೂತಪ್ಪದೆ ಕೇಳಬೇಕು. ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ಮುನ್ನಡೆಯಬೇಕು. ಕಾಂಗ್ರೆಸ್-ಬಿಜೆಪಿಗಿಂತ ಕುಮಾರಸ್ವಾಮಿ ಅವರ ಮೇಲೆ ಉತ್ತರ ಕರ್ನಾಟಕದ ಜನರು ನಂಬಿಕೆ ಇಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು ಅವರು ಅದನ್ನು ಉಳಿಸಿಕೊಳ್ಳಬೇಕು ಎಂದೂ ಕಿವಿಮಾತು ಹೇಳಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡದ ಖ್ಯಾತ ನಟ ಕಿಚ್ಚಾ ಸುದೀಪ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕಾಗಿ ವಿದೇಶಕೆ ತೆರಳಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದೆ.
ಹೆಚ್ಚಿನ ಜನರು ಫೋನ್ ಹ್ಯಾಂಗ್ಗಳ ಸಮಸ್ಯೆಯಿಂದ ಅಥವಾ ನಿಧಾನವಾಗಿರುವುದರಿಂದ ತೊಂದರೆಗೀಡಾಗುತ್ತಾರೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಸಹ ಈ ರೀತಿಯ ತೊಂದರೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡಲು ಐದು ಕ್ರಮಗಳನ್ನು ಅನುಸರಿಸಿ. ಈ ಕ್ರಮಗಳೊಂದಿಗೆ ನಿಮ್ಮ ಫೋನ್ ಸ್ಥಗಿತಗೊಳ್ಳುವುದನ್ನು ಅಥವಾ ನಿಧಾನಗೊಳಿಸುವುದನ್ನು ಸಹ ನೀವು ನಿಲ್ಲಿಸಬಹುದು. ಕೆಲವೊಮ್ಮೆ ಫೋನ್ನ ಮೆಮೊರಿ ತುಂಬಿರುತ್ತದೆ. ಆದ್ದರಿಂದ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಫೋನ್ನ ಆಂತರಿಕ ಸ್ಥಳದ ಹೊರತಾಗಿ, ಫೋನ್ ನಿಧಾನವಾಗಲು ಫೋನ್ನ RAM ಸಹ ಕಾರಣವಾಗಿದೆ. ನಿಮ್ಮ ಫೋನ್…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೆಲವು ದಿನಗಳ ಹಿಂದಯೇ ನಟಿ ಶ್ರೀರೆಡ್ಡಿ, ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ ಶ್ರೀರೆಡ್ಡಿ,ಹೈದರಾಬಾದ್’ನ ಫಿಲ್ಮ್ ಚೇಂಬರ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ವಿವಾದವಾಗಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ…
ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಇಂದು ತಮ್ಮ 28ನೇ ವರ್ಷದ ಹುಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಗರದ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಣಿತಾ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಹುಟ್ಟುಹಬ್ಬದಂದು ಪ್ರಣಿತಾ ಸರ್ಕಾರಿ ಶಾಲೆ ದತ್ತು ಪಡೆದುಕೊಂಡು, 5 ಲಕ್ಷ ರೂ. ಹಣವನ್ನು ನೀಡಿದ್ದರು. ಈ ಬಾರಿ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಣಿತಾ ಸಮಾಜಮುಖಿ ಕಾರ್ಯಕ್ರಮಗಳನ್ನು…
2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.
ಸಾರ್ವಜನಿಕ ಸ್ಥಳದಲ್ಲಿ ಯುವಕ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ 19 ವರ್ಷದ ಅಂಕಿತ್ ಎನ್ನುವ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ದೆಹಲಿಯ ತಿಲಕ್ ನಗರದಲ್ಲಿ ಈ ಘಟನೆ ಶನಿವಾರ ನಡೆದಿದ್ದು, ಮೃತ ಅಂಕಿತ್ ರಿಪೇರಿಗೆ ನೀಡಿದ್ದ ಮೊಬೈಲ್ ತೆಗೆದುಕೊಂಡು ಬರುವಾಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಲ್ಲಿದ್ದ ರವಿ ಎನ್ನುವ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರವಿ ಹಾಗೂ…