ಆಧ್ಯಾತ್ಮ

ನಿಮ್ಮ ಸಂತೋಷ ನಿಮ್ಮ ಕೈಯಲ್ಲಿಯೇ ಇದೆ!ಹೇಗೆ ಗೊತ್ತಾ? ಈ ಲೇಖನಿ ಓದಿ…..

1828

ಈ ಜಗತ್ತಿನಲ್ಲಿ ಮನುಷ್ಯ ಜೀವನ ಪ್ರಾಣಿ–ಪಕ್ಷಿಗಳಿಗಿಂತ ಉನ್ನತ ಹಾಗೂ ಅರ್ಥಪೂರ್ಣವಾದುದ್ದು. ಒಮ್ಮೆ ಮನುಷ್ಯ ಜೀವ ತಳೆದ ಮೇಲೆ ಇನ್ನೊಂದು ಜನ್ಮದಲ್ಲಿ ಮತ್ತೆ ಮನುಷ್ಯನಾಗೇ ಹುಟ್ಟುತ್ತಾನೆ ಎಂದು ಹೇಳಲಾಗದು. ಇರುವ ಒಂದೇ ಜನ್ಮದಲ್ಲಿ ಸಕಲ ಸಂತೋಷವನ್ನು ಕಾಣಬೇಕು. ಮನುಷ್ಯ ಆಧ್ಯಾತ್ಮಿಕ ಮಾರ್ಗಗಳಲ್ಲಿ ಸಾಗುವ ಮೂಲಕ ತನ್ನೊಳಗೆ ತಾನು ಸಂತೋಷವನ್ನು ಕಂಡುಕೊಳ್ಳಬಹುದು.

ಒಬ್ಬ ಮನುಷ್ಯ ಜೀವನದಲ್ಲಿ ಐದಾರು ಕಾರುಗಳನ್ನು ಕೊಳ್ಳಬಹುದು, ಐಷಾರಾಮಿ ಬಂಗಲೆಯನ್ನು ಕಟ್ಟಿಸಬಹುದು, ಚಿನ್ನ, ಬೆಳ್ಳಿಯನ್ನು ಹೊದ್ದು ಮಲಗಬಹುದು. ಆದರೆ ಇದನ್ನೆಲ್ಲ ಅನುಭವಿಸಲು ಇರುವುದು ಒಂದೇ ಜನ್ಮ. ಈ ಜನ್ಮದಲ್ಲಿ ಅರ್ಧ ಸುಖ ಅನುಭವಿಸಿ, ಇನ್ನರ್ಧ ಸುಖವನ್ನು ಮುಂದಿನ ಜನ್ಮದಲ್ಲಿ ಅನುಭವಿಸುತ್ತೇನೆ ಎಂದರೆ ಅದು ಆಗದು. ಒಮ್ಮೆ ಜೀವನ ಮುಗಿದ ಮೇಲೆ ಮತ್ತೆ ಇನ್ನೊಂದು ಜನ್ಮವನ್ನು ನಾವು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಮತ್ತೆ ಅಷ್ಟೇ ಸರಳ, ಸುಂದರ, ಪ್ರತಿಷ್ಠೆಯ ಜೀವನವನ್ನು ಪಡೆಯುತ್ತೇವೆ ಎಂದುಕೊಂಡರೆ ನಿಜಕ್ಕೂ ನಮ್ಮಷ್ಟು ಮೂರ್ಖರು ಯಾರು ಇಲ್ಲ.

ಆಧ್ಯಾತ್ಮಿಕ ಚಿಂತನೆಗಳು ನಮ್ಮ ಮನಸ್ಸಿಗೆ ಸಂತಸವನ್ನು ಹುಡುಕುವ ಮಾರ್ಗವನ್ನು ತೋರುತ್ತವೆ. ಜೀವನದಲ್ಲಿ ನಿರೀಕ್ಷೆಗಳಿಲ್ಲದೆ ಬದುಕಿದಾಗ ಸಂತೋಷದ  ಜೀವನವು ತಾನಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಧ್ಯಾತ್ಮಿಕ ಸತ್ಯಗಳನ್ನು ಕಂಡುಕೊಳ್ಳುವುದರಿಂದ ನಮ್ಮೊಳಗಿನ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬಹುದು. ತನ್ನ ಹಾಗೂ ಪರರ ಇಚ್ಛೆಗಳನ್ನು ಪೂರೈಸಲು ಕೂಡ ಈ ಚಿಂತನೆಗಳಿಂದ ಸಾಧ್ಯ.

ದೇವರು ನೀಡಿರುವ ಈ ಅಪರೂಪದ ಮಾನವ ಜೀವನವನ್ನು ಸಂತಸದಿಂದ ಕಳೆಯಬೇಕು. ಸದಾ ಕೊರಗುತ್ತಾ ಬದುಕಿ ಇರುವ ಒಂದೇ ಒಂದು ಜನ್ಮವನ್ನು ನೋವಿನಲ್ಲಿ ಕಳೆಯುವುದಕ್ಕಿಂತ ‘ಈ ಭೂಮಿ ಮೇಲೆ  ದೇವರು ನನಗೆ ನೀಡಿರುವ ಅಪರೂಪದ ಜನ್ಮ, ಮನುಷ್ಯ ಜನ್ಮ. ಇದು ನನಗೆ ಸಿಕ್ಕಿರುವ ಭಾಗ್ಯ. ನಾನೇ ಅದೃಷ್ಟವಂತ’ ಎಂದು ನಮಗೆ ನಾವೇ ಅಂದುಕೊಳ್ಳಬೇಕು. ಅಂತೆಯೇ  ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಪ್ರತಿ ಕ್ಷಣದಲ್ಲೂ ಸಂತೋಷವನ್ನು ಹುಡುಕಿ ಬದುಕಬೇಕು.

 

ಸಂತೋಷವನ್ನು ಕಂಡುಕೊಳ್ಳಲು ಕೇವಲ ಮೂರು ಸೂತ್ರಗಳನ್ನು ಅನುಸರಿಸಿ :-

  1. ಏನಾದರೂ ಮಾಡುತಿರು ತಮ್ಮ…

ಜೀವನದಲ್ಲಿ ನಾವು ಅನೇಕ ಬಾರಿ, ಹಲವು ಕಾರಣಗಳಿಗೆ ಬೇಸರಗೊಳ್ಳುತ್ತೇವೆ. ಕಾರಣವೇ ಇಲ್ಲದೆ ಮನಸ್ಸಿಗೆ ಖೇದವಾಗುತ್ತದೆ. ಅದೇ ನೋವಿನಲ್ಲೇ ನಾವು ಎಷ್ಟೋ ಅಮೂಲ್ಯ ಸಮಯವನ್ನು ಹಾಳುಮಾಡಿಕೊಂಡಿರುತ್ತೇವೆ. ನಮಗೆ ಬೇಸರವಾದಾಗ ಅದರಿಂದ ಹೊರಬರುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ‘ಬೇಸರವಾದಾಗ ನಾನು ಇಂತಹ ಕೆಲಸ ಮಾಡಬೇಕು’ ಎಂದುಕೊಂಡು ಅದೇ ದಾರಿಯಲ್ಲಿ ಸಾಗಬೇಕು. ನಮ್ಮ ಮನಸ್ಸು ಸಂತಸಗೊಳ್ಳುವ ಹಾದಿಯನ್ನು ಕಂಡುಕೊಂಡು ಆ ಹಾದಿಯಲ್ಲೇ  ಮುಂದುವರಿಯಬೇಕು. ಬೇಸರ ಕಳೆಯಲು ಏನಾದರೂ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಡುಗೆ ಮಾಡುವುದನ್ನು ಕಲಿಯಬೇಕು. ಪ್ರತಿ ದಿನ ಹೊಸ ಹೊಸ ಪ್ರಯೋಗಗಳಲ್ಲಿ  ತೊಡಗಿಸಿಕೊಳ್ಳಬೇಕು. ಇದು ನಿಮ್ಮ ಮನಸ್ಸು ದುಃಖ, ನಿರಾಸೆಯೆಡೆಗೆ ಸುಳಿಯದಂತೆ ಮಾಡುತ್ತದೆ, ಜೊತೆಗೆ ಮನಸ್ಸನ್ನು ಸಂತಸದಿಂದಿರುವಂತೆ ನೋಡಿಕೊಳ್ಳುತ್ತದೆ.

  1. ಪ್ರೀತಿ ಇರಲಿ ಸಕಲವಸ್ತುಗಳಲಿ…

ಸ್ನೇಹಿತರು ಮತ್ತು ಬಂಧುಗಳು ನಮ್ಮ ಸಂತೋಷದ ಪಾಲುದಾರರಾಗಿರುತ್ತಾರೆ. ನಮ್ಮ ಪ್ರತಿ ನೋವು, ನಲಿವಿನಲ್ಲೂ  ಜೊತೆಯಾಗುವುದು ನಮ್ಮ ಸ್ನೇಹಿತರೇ. ಕೆಲಸವಿಲ್ಲದೇ ಅಲೆಯುತ್ತಿದ್ದಾಗ, ಕಾಯಿಲೆ ಬಿದ್ದು ಹಾಸಿಗೆಯಲ್ಲಿ ಮಲಗಿದ್ದಾಗ, ಪರಮಾಪ್ತರು ನಮ್ಮಿಂದ ದೂರವಾದಾಗ, ಆ ನೋವನ್ನೆಲ್ಲ ನಮ್ಮಿಂದ ಭರಿಸಲು ಸಾಧ್ಯವಾಗುವುದು ನಮ್ಮ ಸ್ನೇಹಿತರು ಮತ್ತು ಬಂಧುಗಳಿಗೆ ಮಾತ್ರ. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸಿದರೆ ನಮ್ಮೊಳಗಿನ ನೋವುಗಳಲ್ಲಿ ಅವರು ಜೊತೆಯಾಗುತ್ತಾರೆ. ಮನುಷ್ಯರು ನಂಬಿಕೆಗೆ ಆರ್ಹರಲ್ಲ ಎನ್ನಿಸಿದರೆ – ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಬೇಕು. ಆ ಪ್ರೀತಿಗೆ ನೋವು ಮರೆಸುವ ಮಾಂತ್ರಿಕ ಶಕ್ತಿಯಿದೆ.

  1. ನಂಬಿ ಕೆಟ್ಟವರಿಲ್ಲವೋ…

ನಮ್ಮ ಜೀವನದಲ್ಲಿ ಏನಾದರೂ ಒಂದು ಹೊಸ ಸಂಗತಿ ಘಟಿಸುತ್ತದೆ ಎಂದು ನಂಬುವುದರಲ್ಲಿ ಸಂತೋಷದ ಗುಟ್ಟಿದೆ. ನಂಬಿಕೆ  ಸಂತೋಷದ ಬುನಾದಿ. ನಾವು ಅಂದುಕೊಂಡ ಗುರಿ ತಲುಪಲು ಕೂಡ ನಂಬಿಕೆಯಿಂದ ಸಾಧ್ಯ. ನಮ್ಮ ಪ್ರತಿ ಸಂತೋಷವೂ ಕೂಡ ನಾವು ಮಾಡಿದ ಕೆಲಸವನ್ನು ಅವಲಂಬಿಸಿದೆ.
ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೊಂದು ಗುರಿ ಇರಬೇಕು, ಆ ಗುರಿಯನ್ನು ಸಾಧಿಸಬೇಕು ಎಂಬ ಕನಸು ಇರಬೇಕು. ಆ ಗುರಿಯನ್ನು ನಾನು ಮುಟ್ಟಿಯೇ ತೀರುತ್ತೇನೆ ಎಂಬ ಛಲವಿರಬೇಕು. ನಾವು ಅಂದುಕೊಂಡ ಗುರಿ ಸಾಧಿಸದಿದ್ದರೆ ನಾವು ಸಂತೃಪ್ತರಾಗುವುದಿಲ್ಲ. ಸಂತೃಪ್ತಭಾವವು ಖುಷಿಯನ್ನು ಹರಡುವ ಮನೋಭಾವ. ನಾವು ಮಾಡುವ ಕೆಲಸ, ನಮ್ಮ ಸ್ನೇಹಿತರು ಹಾಗೂ ಬಂಧುಗಳ ನಡುವೆ ನಂಬಿಕೆಯನ್ನು ಕಳೆದುಕೊಂಡರೆ ನಮ್ಮೊಳಗಿನ ಸಂತೋಷವನ್ನು ನಾವೇ ಕಳೆದುಕೊಂಡಂತೆ.

ನಮ್ಮೊಳಗೇ ಇರುವ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ಸಂತೋಷವನ್ನು ಅನುಭವಿಸುವುದೆಂದರೆ, ಈ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿ, ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತ ಶ್ವಾನ.

    ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು, ಅವು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ. ಹೌದು. ಚೀನಾದ ವುಹಾನ್ ನಗರದಲ್ಲಿ ಮುದ್ದಿನಿಂದ ಸಾಕಿದ ಶ್ವಾನವೊಂದು ತನ್ನ ಯಜಮಾನನನ್ನು ಕಾಯುತ್ತಾ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಶ್ವಾನ ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿದೆ. ಹೀಗಾಗಿ ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತು ಆತನ ಬರುವಿಕೆಗಾಗಿ ಕಾಯುತ್ತಾ ಕುಳಿತಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ,…

  • ವ್ಯಕ್ತಿ ವಿಶೇಷಣ

    ತಮ್ಮ ಜೀವನದಲ್ಲಿ ಜಾಸ್ತಿ ಓದದೇ ಇದ್ರೂ ಯಶಸ್ಸು ಕಂಡ ಭಾರತೀಯರ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ಓದು ಜೀವನಕ್ಕೆ ತುಂಬಾನೇ ಮುಖ್ಯ., ವಿದ್ಯೆ ಮುಖ್ಯ ಆದ್ರೆ ವಿನಯ ಅತ್ಯಗತ್ಯ. ವಿನಯಾನ ಯಾವ ಶಾಲೇಲೂ ಹೇಳಿಕೊಡಲ್ಲ. ಯೋಗ ಎಲ್ಲರಿಗೂ ಬರಬಹುದು, ಆದ್ರೆ ಯೋಗ್ಯತೆ ಕೆಲವರಿಗೆ ಮಾತ್ರ ಇರತ್ತೆ.. ” ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಅಂತಾರೆ ದೊಡ್ಡವರು. ಹಾಗೆ ಎಲ್ಲಾ ಜ್ಞಾನಾನೂ ಪುಸ್ತಕದಿಂದಾನೆ ಸಿಗಲ್ಲ, ಅನುಭಾವಾನೂ ಅಷ್ಟೇ ಮುಖ್ಯ. 1. ಅಕ್ಷಯ್ ಕುಮಾರ್:- ಮಾರ್ಷಲ್ ಆರ್ಟ್ಸ್ ಮುಂದುವರಿಸಬೇಕು ಅಂತ ಕಾಲೇಜನ್ನ ಬಿಟ್ರು. ಇವ್ರೊಂಥರ ಮಲ್ಟಿ ಟ್ಯಾಲೆಂಟೆಡ್. ನಟನೆ ಮಾಡ್ತಾರೆ, ಅಡಿಗೆ ಮಾಡ್ತಾರೆ, ಫೈಟ್…

  • ಸಂಬಂಧ

    ಸೊಸೆ ಸದಾ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡ್ತಾಳೆ ಎಂದು ಅತ್ತೆ ಮಾಡಿದ್ದು ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಅತ್ತೆ-ಸೊಸೆಯರನ್ನು ಒಟ್ಟಿಗೆ ಕೂರಿಸಿಕೊಂಡು ಮಹಿಳಾ ಆಯೋಗದ ಸದಸ್ಯರು ಮಾತುಕತೆ ನಡೆಸುತ್ತಿದ್ದಾರೆ.ಸೊಸೆ ಸದಾ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡ್ತಾಳೆ. ಜೊತೆಗೆ ಪೋನ್ ನಲ್ಲಿ ತನ್ನ ತವರಿನವರ ಜೊತೆ ಮಾತನಾಡ್ತಾಳೆ.

  • ಜ್ಯೋತಿಷ್ಯ

    ಮನೆಯಲ್ಲಿ ಈ ಶಂಖ ಇದ್ದರೆ ಏನಾಗುತ್ತೆ ಗೊತ್ತಾ.!?

    ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು ಇಚ್ಛಿಸಿದಷ್ಟು ಪ್ರೀತಿ ಜೊತೆಗೆ ಹಣ ಸಿಗಲಿದೆ ಎಂಬ ವಿಷ್ಯ ನಿಮಗೆ ಗೊತ್ತಾ? ತಾಯಿ ಲಕ್ಷ್ಮಿ ಕೈನಲ್ಲಿ ಹಿಡಿದಿರುವ ಶಂಖ ದಕ್ಷಿಣಾವರ್ತಿ. ಇದನ್ನು ಲಕ್ಷ್ಮಿ ಶಂಖವೆಂದೂ ಕರೆಯುತ್ತಾರೆ. ಇದು ಬಲಮುರಿ ಶಂಖವಾಗಿದೆ. ಸಾಮಾನ್ಯವಾಗಿ ಸಿಗುವ ಶಂಖಗಳು ಎಡಮುರಿ ಶಂಖಗಳಾಗಿರುತ್ತವೆ. ದಕ್ಷಿಣಾವರ್ತಿ ಶಂಖವನ್ನು ತಾಯಿ ಲಕ್ಷ್ಮಿ ಎದುರು ಕೆಂಪು ಬಟ್ಟೆಯಲ್ಲಿಟ್ಟು…

  • ಸುದ್ದಿ

    ಅಪ್ಪಟ ರಾಪ್ಟ್ರೀಯವಾದಿ,ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇನ್ನಿಲ್ಲ….!

    ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮೋದಿ ಸಂಪುಟದಿಂದಲೂ ಹೊರಗೆ ಉಳಿದಿದ್ದರು.ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ಮೋದಿ ಸಂಪುಟದಿಂದಲೂ ಸ್ವರಾಜ್  ಹೊರಗೆ ಉಳಿದಿದ್ದರು. 1952 ರ ಫೆಬ್ರವರಿ 14 ರಂದು ಜನಿಸಿದ್ದ ಅವರಿಗೆ  67 ವರ್ಷ ವಯಸ್ಸಾಗಿತ್ತು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದಾಗ ಕ್ಯಾಬಿನೆಟ್ ನಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಕರ್ನಾಟಕದೊಂದಿಗೂ ನಿಕಟ ಸಂಪರ್ಕ ಹೊಂದಿದ್ದ ಸುಷ್ಮಾ…

  • ವಿಧ್ಯಾಭ್ಯಾಸ, ಸರ್ಕಾರದ ಯೋಜನೆಗಳು

    ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆ ..!ತಿಳಿಯಲು ಈ ಲೇಖನ ಓದಿ..

    ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಕಳೆದ ಮೂರು ವರ್ಷಗಳಲ್ಲಿ 2,14,160ರಷ್ಟು ಕುಸಿತವಾಗಿದೆ.