ಉಪಯುಕ್ತ ಮಾಹಿತಿ

ನಿಮ್ಮ ಮನೆಯ ಅಂಗಳದಲ್ಲಿ ಹಾವುಗಳು ಕಂಡು ಬರುತ್ತದೆಯೇ .?ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

3582

ಕೆಲವು ಗಿಡಗಳಿರುವಲ್ಲಿ ಹಾವುಗಳು ಬರುವುದಿಲ್ಲ. ಗೊಂಡೆಹೂವು, ಮಾಚಿಪತ್ರೆ, ಪಶ್ಚಿಮ ಭಾರತದ ಮಜ್ಜಿಗೆಹುಲ್ಲು, ಸರ್ಪಗಂಧ ಹಾಗೂ ಬೆಳ್ಳುಳ್ಳಿಯ ಗಿಡ ಬೆಳೆಯುವಲ್ಲಿ ಹಾವುಗಳು ಸುಳಿಯದಿರುವುದನ್ನು ಕೃಷಿಕರು ಗಮನಿಸಿದ್ದಾರೆ. ಇವುಗಳ ರುಚಿ ಹಾಗೂ ಪರಿಮಳದಲ್ಲಿ ಸರ್ಪಗಳನ್ನು ವಿಕರ್ಷಿಸುವ ಗುಣವಿದೆ.


ಈ ನೈಸರ್ಗಿಕ  ಹೂವುಗಳೇ  ಎಲ್ಲಾ ಬಗೆಯ ಹಾವುಗಳನ್ನು ದೂರವಿಡಬಲ್ಲುದು:-
ಹಾವುಗಳು ಮನೆಯ ಹೊರಗಿದ್ದೇ ರಕ್ಷಣೆ ಮಾಡಿದರೆ ಸಾಕು, ಮನೆಯ ಬೇಲಿ ದಾಟಿ ಒಳಗೆ ಬರುವುದು ಬೇಡ ಎಂಬುದೇ ಹೆಚ್ಚಿನವರ ಇಚ್ಛೆಯಾಗಿದ್ದು ಈ ಗಿಡಗಳನ್ನು ನೆಡುವ ಮೂಲಕ ಇದನ್ನು ಸಾಧಿಸಬಹುದು.

ಹಾವುಗಳನ್ನು ಓಡಿಸುವ ಕೆಲವು ಉತ್ಪನ್ನಗಳೇನೋ ಮಾರುಕಟ್ಟೆಯಲ್ಲಿವೆ. ಆದರೆ ಇವು ಕೆಲವು ವಿಶಿಷ್ಟ ಜಾತಿಗಳ ಹಾವುಗಳನ್ನು ಮಾತ್ರವೇ ಮನೆಯಿಂದ ದೂರವಿರಿಸುವ ಕಾರಣ ಅಷ್ಟೊಂದು ಪ್ರಯೋಜನಕಾರಿಯಲ್ಲ. ಬದಲಿಗೆ ಈ ನೈಸರ್ಗಿಕ ಹೂವುಗಳೇ ಎಲ್ಲಾ ಬಗೆಯ ಹಾವುಗಳನ್ನು ದೂರವಿಡಬಲ್ಲುದು.

ಚೆಂಡು ಹೂವು:-

ಚೆಂಡು ಹೂವು ಎಂದೂ ಕರೆಯಲ್ಪಡುವ ಈ ಗಾಢ ಹಳದಿ ಬಣ್ಣದ ಹೂವುಗಳ ವೈಜ್ಞಾನಿಕ ಹೆಸರು ‘ಕ್ಯಾಲೆಡುಲಾ ಅಫಿಷಿನಾಲಿಸ್’. ಈ ಹೂವುಗಳಿಗೆ ಬಹುತೇಕ ಎಲ್ಲಾ ಹಾವುಗಳ ಸಹಿತ ಇನ್ನಿತರ ಕ್ರಿಮಿಗಳನ್ನೂ ವಿಕರ್ಷಿಸುವ ಗುಣವಿದೆ.

ಈ ಗಿಡದಲ್ಲಿರುವ ಒಂದು ವಿಶಿಷ್ಟ ಪರಿಮಳ ಹಾವುಗಳಿಗೆ ಸಹಿಸಲು ಅಸಾಧ್ಯವಾಗಿದೆ. ಅಷ್ಟೇ ಅಲ್ಲ, ಈ ರಸ ರೆಪ್ಪೆಗಳೇ ಇಲ್ಲದಿರುವ ಹಾವಿನ ಕಣ್ಣಿಗೇನಾದರೂ ಬಿದ್ದರೆ ಇದು ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು.
ಹಾವಿನ ಸಸ್ಯ :-

ನೋಡಲು ಹಾವಿನ ಮೇಲೆ ಲಟ್ಟಣಿಗೆ ಉರುಳಿಸಿ ಚಪ್ಪಟೆಯಾಗಿಸಿದಂತೆ ಇರುವ ಎಲೆಗಳ ಸಸ್ಯಕ್ಕೆ ‘ಅತ್ತೆಯ ನಾಲಿಗೆ’ ಎಂದೇಕೆ ಕರೆದರೋ ಗೊತ್ತಿಲ್ಲ, ಆದರೆ ಇವುಗಳ ಹತ್ತಿರ ಹಾವುಗಳು ಮಾತ್ರ ಬರದೇ ಇರುವುದು ಖಂಡಿತಾ ಗೊತ್ತು. ಸಾಮಾನ್ಯವಾಗಿ ಹಾವುಗಳು ಇವುಗಳ ಆಕಾರವನ್ನು ನೋಡಿ ತಮ್ಮ ವೈರಿ ಎಂದೇ ಪರಿಗಣಿಸಿ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ.

ಗುಲಾಬಿ ಅಗಾಪಂಥಸ್:-

ಈರುಳ್ಳಿಯ ಜಾತಿಗೆ ಸೇರಿದ ಈ ಸಸ್ಯ ವಿವಿಧ ಬಣ್ಣದ ಹೂವುಗಳನ್ನು ಬಿಡುತ್ತದೆ.


ಇದರಲ್ಲಿ ಗುಲಾಬಿ ಬಣ್ಣದ ಹೂವು ಬಿಡುವ ‘ಝುಲಸ್ ಸಸ್ಯ’ ಎಂಬ ಸಸ್ಯಕ್ಕೆ ಹಾವುಗಳನ್ನು ವಿಕರ್ಷಿಸುವ ಗುಣವಿದೆ.
ಸರ್ಪಗಂಧ :-

ಇಂಡಿಯನ್ ಸ್ನೇಕ್ ರೂಟ್, ಇನ್ಸೇನಿಟಿ ಹರ್ಬ್ ಎಂಬ ಅನ್ವರ್ಥನಾಮಗಳಿರುವ ಈ ಗಿಡಕ್ಕೂ ಹಾವುಗಳನ್ನು ವಿಕರ್ಷಿಸುವ ಗುಣವಿದೆ.

ಮಜ್ಜಿಗೆಹುಲ್ಲು :-

ಹುಲ್ಲಿನ ಕಟ್ಟೊಂದನ್ನು ನೆಲದ ಮೇಲೆ ಎಸೆದಿರುವಂತೆ ಬೆಳೆಯುವ ಈ ಹುಲ್ಲಿನ ಎಳೆಯಿಂದ ಬಿಡುಗಡೆಯಾಗುವ ಪರಿಮಳವನ್ನು ಹಾವುಗಳು ಇಷ್ಟಪಡುವುದಿಲ್ಲ.

ಮಳೆಗಾಲ ಚಳಿಗಾಲದಲ್ಲಿ ಹಸಿರಾಗಿರುವ ಈ ಹುಲ್ಲು ಬೇಸಿಗೆಯಲ್ಲಿ ಒಣಗಿ ಕಂದುಬಣ್ಣಕ್ಕೆ ತಿರುಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ