ಉಪಯುಕ್ತ ಮಾಹಿತಿ

ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯೇ?ಹಾಗಿದ್ದರೆ ಈ ಯೋಜನೆಯಿಂದ ನಿಮಗೆ ಸಿಗುತ್ತೆ 2000!ಈಗಲೇ ಈ ಮಾಹಿತಿ ನೋಡಿ

421

ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ನಿಧಿ ಯೋಜನೆಯಡಿ ಸಣ್ಣ ರೈತರಿಗೆ ಇದೇ ತಿಂಗಳಿಂದ ಹಣ ನೀಡಲು ಶುರು ಮಾಡಲಿದೆ. ಈ ಯೋಜನೆಯಡಿ 2 ಹೆಕ್ಟೆರ್ ನಷ್ಟು ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ. ವರ್ಷಕ್ಕೆ 6 ಸಾವಿರ ರೂಪಾಯಿ ಖಾತೆಗೆ ಬರಲಿದೆ. ಮೂರು ಕಂತಿನಲ್ಲಿ ಹಣ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಾರ್ಚ್ ತಿಂಗಳಿನಲ್ಲಿ ಮೊದಲ ಕಂತಿನ ಹಣ 2000 ರೂಪಾಯಿ ಸಿಗಲಿದೆ. ಆದ್ರೆ ಇದಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಮೊದಲ ಕಂತಿನ ಹಣ ಆಧಾರ್ ಇಲ್ಲದೆ ಸಿಗಲಿದೆ. ಆದ್ರೆ ಎರಡನೇ ಕಂತಿನ ಹಣ ಪಡೆಯುವ ಮೊದಲು ರೈತ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಈವರೆಗೂ ಆಧಾರ್ ಕಾರ್ಡ್ ಹೊಂದಿರದ ರೈತರು ತಕ್ಷಣ ಆಧಾರ್ ಕಾರ್ಡ್ ಮಾಡಿಸಿಕೊಂಡಲ್ಲಿ ಯೋಜನೆ ಲಾಭ ಪಡೆಯಬಹುದಾಗಿದೆ.

ಆಧಾರ್ ಕಾರ್ಡ್ ಪಡೆಯುವುದು ದೊಡ್ಡ ಕೆಲಸವೇನಲ್ಲ. ವೆಬ್ ಸೈಟ್ ನಲ್ಲಿ ನಿಮಗೆ ಫಾರ್ಮ್ ಸಿಗಲಿದೆ. https://appointments.uidai.gov.in ವೆಬ್ ಸೈಟ್ ಗೆ ಹೋಗಿ ನೀವು ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಬೇಕು. ಫಾರ್ಮ್ ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದೇ ವೆಬ್ ಸೈಟ್ ನಲ್ಲಿ ಹತ್ತಿರ ಯಾವ ಯಾವ ಆಧಾರ್ ಕಾರ್ಡ್ ಸೆಂಟರ್ ಇದೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿಗೆ ಹೋಗಿ ಅರ್ಜಿ ಜೊತೆ ದಾಖಲೆ ನೀಡಿ ಆಧಾರ್ ಗೆ ಅರ್ಜಿ ಸಲ್ಲಿಸಬಹುದು.

ಆಧಾರ್ ಕಾರ್ಡ್, ಅಂಚೆ ಕಚೇರಿ ಮೂಲಕ ನಿಮ್ಮ ಮನೆಗೆ ಬರಲಿದೆ. ಒಂದು ವೇಳೆ ಅಂಚೆ ಕಚೇರಿ ಮೂಲಕ ಆಧಾರ್ ಕಾರ್ಡ್ ಮನೆಗೆ ಬರದೆ ಹೋದಲ್ಲಿ ವೆಬ್ ಸೈಟ್ ನಲ್ಲಿರುವ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ