ಯಾರನ್ನೇ ಆಗಲಿ ಅಳಿಸುವುದು ತುಂಬಾ ಸುಲಭ, ಆದರೆ ನಗಿಸುವುದು ಕಷ್ಟ.ಜಾಸ್ತಿ ನಕ್ಕರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆಯಸ್ಸು ಜಾಸ್ತಿಯಾಗುತ್ತೆ ಅಂತ ಹೇಳುತ್ತಾರೆ.ಅದು ನಿಜಾ ಕೂಡ.ಆದರೆ ಅದೇ ನಗುವಿನಿಂದ ಸಾವಾಗಬಹುದೆಂದು ಎಂದರೆ ನೀವು ನಂಬುತ್ತೀರಾ! ನಂಬಲ್ಲ ಆಲ್ವಾ ಹಾಗಾದ್ರೆ ಮುಂದೆ ಓದಿ…

ಹೌದು. ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಶಿಕ್ಷಕಿಯೊಬ್ಬರು ಜೋರಾಗಿ ನಗುತ್ತಾ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಚಾರ್ಲ್ಸ್ ಎ ಹುಸ್ಟನ್ ಮಿಡ್ಲೆ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರುವ ಶಾರೋನ್ ರೆಗೋಲಿ ಸಿಫೆರ್ನೋ(50) ಸಾವನ್ನಪ್ಪಿದ ಶಿಕ್ಷಕಿ.

ಶಾರೋನ್ ಮೆಕ್ಸಿಕೋ ನಗರದ ಸ್ನೇಹಿತರ ಮನೆಗೆ ತನ್ನ ಮಗಳೊಂದಿಗೆ ಹೋಗಿದ್ದರು. ಈ ವೇಳೆ ಕಟ್ಟಡದ ಮೇಲೆ ನಿಂತು ಜೋರಾಗಿ ನಗುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ದೇಹ ಮತ್ತು ಮೆದುಳಿಗೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ಉಂಟಾಗಿತ್ತು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಶರೋನ್ ಕೊನೆಯುಸಿರೆಳೆದರು. ಸಾವಿಗೆ ಬರೀ ಮದ್ಯಪಾನ ಮಾಡಿರುವುದು ಕಾರಣವಲ್ಲ. ಬಿಲ್ಡಿಂಗ್‍ನ ಅಂಚಿಗೆ ಹೋದಾಗ ಆಯತಪ್ಪಿ ಬಿದ್ದಳು.

ಶಾರೋನಳನ್ನು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬದಲ್ಲಿ ದುಃಖ ಆವರಿಸಿದೆ ಎಂದು ಆಕೆಯ ಸಹೋದರ ಡೇವಿಡ್ ರೆಗೋಲಿ ದುಃಖ ವ್ಯಕ್ತಪಡಿಸಿದರು.

ತಮ್ಮ ನೆಚ್ಚಿನ ಶಿಕ್ಷಕಿಯ ಸಾವಿನ ವಿಷಯ ತಿಳಿದ ಮಕ್ಕಳು ರಜೆಯಿದ್ದರೂ ಸಹ ಶಾಲೆಗೆ ಬಂದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದರು. ಶಾರೋನ್ ಅವರು ಪತಿ ರೆಗೋಲಿ ಸಿಫೆರ್ನೋ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
