ಕರ್ನಾಟಕದ ಸಾಧಕರು

‘ತಿಮ್ಮಪ್ಪ ನಾಯಕ’ ಕನಕದಾಸರಾಗಿದ್ದು ಹೇಗೆ ಎಂದು ತಿಳಿಯ ಬೇಕಾ..!ಹಾಗದ್ರೆ ಈ ಲೇಖನ ಓದಿ..

1711

ಕನಕದಾಸರು ಕಾಲ:1508-1606

ಜನ್ಮನಾಮ :ತಿಮ್ಮಪ್ಪ ನಾಯಕ

ಸ್ಠಳ :ಬಾಡ ಸ್ಥಳ :ಕಾಗಿನೆಲೆ (ಹಾವೇರಿ ಜಿಲ್ಲೆ)

ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು.ಅಂದಿನಿಂದ ಕನಕದಾಸರೆಂದೇ ಪ್ರಕ್ಯತಿ ಹೊಂದಿದರು.

ಕುರುಬರು ಮೂಲತಃ ಶ್ರೀವೈಷ್ಣವ ಪಂಥವನ್ನು ಅವಲಂಬಿಸಿದ್ದರೂ, ಕನಕದಾಸರು ವ್ಯಾಸರಾಜರ ಶಿಷ್ಯವೃತ್ತಿಯನ್ನು ಪಡೆದು, ವೈಷ್ಣವ ಪಂಥವನ್ನು ಅವಲಂಬಿಸಿದ್ದರು. ಇವರ ಆರಾಧ್ಯದೇವ ಆದಿಕೇಶವ (ಬಾಡದಾದಿ)ಅಂಕಿತ – ಆದಿಕೇಶವ (ಬಾಡದಾದಿ)

ಮುಖ್ಯ ಗ್ರಂಥಗಳು:-

  1. ನಳಚರಿತ್ರೆ 481ಪದ್ಯಗಳುಳ್ಳ ನಳದಮಯಂತಿಯರ ಪ್ರೇಮ ಕಥೆ .
  2. ಹರಿಭಕ್ತಿಸಾರ 110 ಪದ್ಯಗಳ ಭಾಮಿನಿ ಷಟ್ಪದಿಯ ಪದ್ಯ ರೂಪ.
  3. ನೃಸಿಂಹಾವತಾರ – ನರಸಿಂಹಾವತಾರದ ಬಗ್ಯೆ ಒಂದು ಗ್ರಂಥ.
  4. ರಾಮಧ್ಯಾನಚರಿತ್ರೆ ರಾಗಿ -ಮತ್ತು ಅಕ್ಕಿಯ ಕುರಿತು ಗ್ರಂಥದಲ್ಲಿ ಪರಮಾತ್ಮನ ಶ್ಲಾಘನೆ.
  5. ಮೋಹನತರಂಗಿಣಿ ಒಂದು ಕಾವ್ಯ.

ಕನಕನಿಗಾಗಿ ತಿರುಗಿದ ಕೃಷ್ಣ: ಒಮ್ಮೆ ಕನಕದಾಸರು ಉಡುಪಿಗೆ ಬಂದು ಶ್ರೀಕೃಷ್ಣನ ದರ್ಶನಕ್ಕೆ ಹೋಗಿದ್ದರು, ಉಡುಪಿಯಲ್ಲಿ ಶ್ರೀಕೃಷ್ಣ ಪಶ್ಚಿಮದಿಕ್ಕಿಗೆ ಮುಖ ಮಾಡಿದ್ದಾನೆ.ಸಾಮಾನ್ಯವಾಗಿ ದೇವರು ಪೂರ್ವ ದಿಕ್ಕಿಗೆ ಇರುವುದು ವಾಡಿಕೆ. ಒಮ್ಮೆ ಕನಕದಾಸರು ಉಡುಪಿಯ ಕೃಷ್ಣನನ್ನು ಕಾಣಲು ಹೋದಾಗ ಅಲ್ಲಿನ ಪಂಡಿತರು ತಡೆದಿದ್ದು ಎಲ್ಲರಿಗೂ ಗೊತ್ತೇ ಇದೆ .ಆಗ  ಒಂದು ಸಣ್ಣ ಕಿಡಕಿಯಲ್ಲಿ ದೇವರೇ ತಿರುಗಿ ದರ್ಶನ ನೀಡಿದ್ದು ಅಲ್ಲಿನ ಇತಿಹಾಸ. ಆ ನೆನಪಿನಲ್ಲೇ ಕನಕದಾಸರ ಗೌರವಾರ್ಥ ನಾವು ಈಗಲೂ ಆ ಒಂದು ಸಣ್ಣ ಕಿಡಕಿಯಲ್ಲೇ ಶ್ರೀಕೃಷ್ಣನನ್ನು ನೋಡುವ ಒಂದು ವಾಡಿಕೆ.

ಕನಕ ಸಾಹಿತ್ಯಶೈಲಿ :- ಕನಕದಾಸರ ಹಲವಾರು ಸಾಹಿತ್ಯಗಳು ಬಲು ವಿಶೇಷವಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಗುರುಗಳ ಕರುಣೆಯಿಲ್ಲದೆ ಅಸಾಧ್ಯ.

ದಾಸ ಮುಂಡಿಗೆ ಪುಟ್ಟದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |

ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |

ಸುಡಗಾಡುದಾಸ ನಾನಲ್ಲ |ಕಷ್ಠದಾಸ ನಾನಲ್ಲ |

ಕೊಟ್ಟದಾಸ ನಾನಲ್ಲ |ಹೊಟ್ಟೆದಾಸ ನಾನಲ್ಲ |

ಇಟ್ಟಿಗೆ ದಾಸ ನಾನಲ್ಲ |ಶಿಷ್ಟದಾಸ ನಾನಲ್ಲ |

ನಿಷ್ಠದಾಸ ನಾನಲ್ಲ |ಭ್ರಷ್ಠದಾಸ ನಾನಲ್ಲ |

ಶ್ರೇಷ್ಠದಾಸ ನಾನಲ್ಲ |ವಿತ್ತದಾಸ ನಾನಲ್ಲ | ಹುತ್ತದಾಸ ನಾನಲ್ಲ |

ನಾನು ಈ ಷೋಡಶ ದಾಸರುಗಳ ದಾಸಾನು ದಾಸರ ದಾಸಿಯರ ಮನೆಯ ಮಂಕುದಾಸರ ಮನೆಯ ಶಂಕುದಾಸ ಬಾಡದಾದಿ ಕೇಶವ ||

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ