ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನಲ್ಲಿ ಡಿಜಿಟಲ್ ಕ್ರಾಂತಿ ಏನೆಲ್ಲಾ ಪ್ರಭಾವ ಬೀರಿದೆಯೆಂದರೆ, ಆಟವಾಡುವ ಮಕ್ಕಳು ಕೂಡ ಕೋಟಿಗಳ ಅಧಿಪತಿಗಳಾಗಿದ್ದಾರೆ ಎಂದರೆ ನೀವು ನಂಬಲೇಬೇಕು.ಇದಕ್ಕೆ ವಯಸ್ಸಿನ ಮಿತಿಯಿಲ್ಲ, ವಿಧ್ಯಾಭ್ಯಾಸದ ಅವಶ್ಯಕತೆಯಿಲ್ಲ, ಎಲ್ಲಾ ಅವರವರ ಬುದ್ದಿವಂತಿಕೆಯ ಮೇಲೆ ನಡೆಯುತ್ತದೆ.
ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು.

ಹೌದು, ಈ ಬಾಲಕನ ಹೆಸರು ರಯಾನ್. ಅವನು ತಾನು ಆಟವಾಡುವ ವಿಡಿಯೋಗಳನ್ನು ಯುಟ್ಯೂಬ್ನಲ್ಲಿ ಹಾಕುತ್ತಲೇ ಸುಮಾರು 70 ಕೋಟಿ ರೂ. ಸಂಪಾದನೆ ಮಾಡಿದ್ದಾನೆ.
ರಿಯಾನ್ ಟಾಯ್ಸ್ ರಿವ್ಯೂ’ ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದಾನೆ. 2017ರಲ್ಲಿ ಈ ಯುಟ್ಯೂಬ್ ಚಾನೆಲ್ ನಿಂದ ಸುಮಾರು 11 ಮಿಲಿಯನ್ ಡಾಲರ್ ಹಣ ಗಳಿಸಿದ್ದಾನೆ. ಫೋರ್ಬ್ಸ್ ಪಟ್ಟಿ ಮಾಡಿರೋ ಅತಿ ಹೆಚ್ಚು ಹಣ ಗಳಿಸಿರೋ ಯುಟ್ಯೂಬ್ ಸೆಲೆಬ್ರಿಟಿಗಳಲ್ಲಿ ಇವನೂ ಒಬ್ಬ.

ಫೋರ್ಬ್ಸ್ ನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲಿ ರಯಾನ್ 8 ನೇ ಸ್ಥಾನದಲ್ಲಿದ್ದಾನೆ. ಯೂಟ್ಯೂಬ್‍ನಲ್ಲಿ “ರಯಾನ್ ಟಾಯ್ಸ್ ರಿವೀವ್” ಚಾನೆಲ್ ನನ್ನು ಈತನ ಪೋಷಕರು ಆರಂಭಿಸಿದ್ದು, ಹಲವಾರು ಟಾಯ್ಸ್ ಗಳ ವಿಮರ್ಶೆ ಮಾಡಿ ಅದರ ವಿಡಿಯೋಗಳನ್ನು ಯೂಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.

ಈ ಬಾಲಕನಿಗೆ ಕಾರ್‍ಗಳು, ರೈಲುಗಳು, ಥಾಮಸ್ ಅಂಡ್ ಫ್ರೆಂಡ್ಸ್, ಲೀಗೋ, ಸೂಪರ್‍ಹೀರೋಸ್, ಡಿಸ್ನಿ ಆಟಿಕೆ ಇತ್ಯಾದಿಗಳನ್ನು ತುಂಬಾ ಪ್ರೀತಿಸುತ್ತಾನೆ. ಜೊತೆಗೆ ಕುಟುಂಬದ ಮೋಜು, ಸಾಹಸಗಳನ್ನು ಇಷ್ಟಪಟ್ಟಿದ್ದಾನೆ. ಅಷ್ಟೇ ಅಲ್ಲದೇ ಮಕ್ಕಳಿಗಾಗಿ ಮೋಜು ಮತ್ತು ಸುಲಭವಾದ ವಿಜ್ಞಾನ ಪ್ರಯೋಗಳನ್ನು ಮಾಡುತ್ತಾನೆ.

‘2015ರ ಮಾರ್ಚ್ ನಲ್ಲಿ ಈ ಚಾನೆಲ್ ಆರಂಭಿಸಲಾಗಿತ್ತು. ಆಗ ರಯಾನ್ ಗೆ ಕೇವಲ ನಾಲ್ಕು ವರ್ಷ. ಜುಲೈನಲ್ಲಿ ಈತನ ವಿಡಿಯೋ ಒಂದು ವೈರಲ್ ಆಗಿತ್ತು. ಆಗಿನಿಂದ್ಲೂ ರಯಾನ್ ಯುಟ್ಯೂಬ್ ಸ್ಟಾರ್ ಆಗಿಬಿಟ್ಟಿದ್ದಾನೆ. ಇವನ ಹೆತ್ತವರೇ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ಇವನ ಚಾನೆಲ್ ಗೆ 10 ಮಿಲಿಯನ್ ಚಂದಾದಾರರಿದ್ದಾರೆ.ಅವನು ಅಪ್ಲೋಡ್ ಮಾಡಿದ ಡಜನ್ಸ್ ವಿಡಿಯೋಗಳನ್ನು ಸುಮಾರು 1,600 ಕೋಟಿ (16 ಬಿಲಿಯನ್) ಬಾರಿ ವೀಕ್ಷಣೆ ಮಾಡಲಾಗಿದೆ.
ಈಗ ಈ ಕುಟುಂಬ “ರಯಾನ್ ಫ್ಯಾಮಿಲಿ ರಿವೀವ್” ಎಂಬ ಎರಡನೇ ಚಾನೆಲ್ ಪ್ರಾರಂಭಿಸಿದ್ದಾರೆ. ಇದು ಕುಟುಂಬದ ಪ್ರತಿದಿನ ಸಾಹಸ ಮತ್ತು ರಯಾನ್ ಸಹೋದರಿಯರಾದ ಎಮ್ಮಾ ಮತ್ತು ಕೇಟ್ ಅವರ ಮೇಲೆ ಕೇಂದ್ರಿಕರಿಸಲಾಗಿದೆ. 10 ಲಕ್ಷಕ್ಕೂ ಅಧಿಕ ಮಂದಿ ಚಾನೆಲ್ ಸಬ್ಸ್ ಸ್ಕ್ರೈಬ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳು ಪ್ರವಾದಿಂದ ತತ್ತರಿಸಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದೇ ಬೆನ್ನಲ್ಲೇ ರಾಜಧಾನಿ ಬೆಂಗಳೂರಿಗೆ ಕಾದಿದೆ ಅಪಾಯ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಸೂಕ್ತ ಎಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ 2 ಸೆ.ಮೀಟರ್ ನಿಂದ 6 ಸೆಂಟಿ ಮೀಟರ್ ವರೆಗೂ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು…
ಭಾರತವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ್ ಅಭಿಯಾನದ ಹೆಸರಿನಲ್ಲಿ ವರ್ಷಗಳಿಂದ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ ವರ್ಷ ಭಾರತದಲ್ಲೆ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೆ ಸ್ಥಾನ ಪಡೆದುಕೊಂಡ ಛತ್ತೀಸ್ಗಢದ ಅಂಬಿಕಾಪುರ ಹೊಸತೊಂದು ಪ್ರಯತ್ನದ ಮೂಲಕ ವಿಶ್ವದ ಗಮನ ಸೆಳೆದಿದೆ. ಹೌದು ಛತ್ತಿಸ್ಗಢದ ಅಂಬಿಕಾಪುರ ಸ್ವಚ್ಛತಾ ಕಾರ್ಯಗಳಲ್ಲಿ ಬೇರೆ ನಗರಗಳಿಗಿಂತ ಬಹಳ ಮುಂದುವರೆದಿದೆ. ಕಳೆದ ವರ್ಷ ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಗಳಿಸಿದೆ, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ನಗರದಲ್ಲಿ…
ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಹಳಷ್ಟು ನೋವನ್ನ ಅನುಭವಿಸುತ್ತಾರೆ, ಈ ನೋವನ್ನ ಹೇಗೆ ಕಾಪಾಡಿ ಕೊಳ್ಳ ಬಹುದು ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರದಲ್ಲಿಯೂ ನಾವು ಬದಲಾವಣೆಯನ್ನ ಮಾಡಿಕೊಳ್ಳ ಬೇಕು, ಹಾಗೂ ದಿನದ ಆಗು ಹೋಗುಗಳನ್ನ ಬದಲಾವಣೆ ಮಾಡಿಕೊಳ್ಳ ಬೇಕು.
ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನ ಸುದ್ದಿ ಕೇಳಿ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಚಿತ್ರೀಕರಣವನ್ನು ನಿಲ್ಲಿಸಿ ಬಹಳ ಅಡೆ ತಡೆಗಳನ್ನು ದಾಟಿ ಬೆಂಗಳೂರಿಗೆ ಬಂದಿದ್ದಾರೆ. ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ ,”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಬಹುಶಃ ದರ್ಶನ್ ಅವರು ಭಯ ಪಡುವ…
21 ವರ್ಷದ ತಿರುಪುರ್ ಮೂಲಕದ ಅಂಬುಲೆನ್ಸ್ ಚಾಲಕ ಆಕಾಶ್ ಜ್ವರದಿಂದ ಬಳಲುತ್ತಿದ್ದ ಬಾಲಕ ಸಂತೋಷ್ನನ್ನು ಗುರುವಾರ ರಾತ್ರಿ ವೆಲ್ಲಾಕೋಯಿಲ್ನಿಂದ ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೇವಲ 70 ನಿಮಿಷದಲ್ಲಿ 90 ಕಿ.ಮೀ ಸಂಚರಿಸಿ ತಲುಪಿದ್ದಾರೆ. ಆಕಾಶ್ 3 ವರ್ಷದ ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದ ಬಳಿಕ ಅಂಬುಲೆನ್ಸ್ ಮುಂದೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ವೈರಲ್ ಆಗಿದ್ದು ಇವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರದಿಗಳ ಪ್ರಕಾರ, ಸಂತೋಷ್ ತೀವ್ರ ಜ್ವರದಿಂದ ಬಳಲುತ್ತಿದ್ದು,…
ಆಸ್ತಿ ವಹಿವಾಟಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.