ಕೆಲವು ದೇಶಗಳಿರುತ್ತವೆ, ತನ್ನ ಪ್ರಜೆಗಳಿಗಾಗಿ ಏನನ್ನೂ ಮಾಡದಿದ್ದರೂ…ತಮ್ಮ ಚರಿತ್ರೆಯ ಬಗ್ಗೆ ಹೊಗಳುತ್ತಾ ಮೀಸೆ ತಿರುವುತ್ತವೆ. ಪ್ರಜೆಗಳು ಹಸಿವಿನಿಂದ ಸಾಯುತ್ತಿದ್ದರೂ. ತಮ್ಮ ದೇಶದ ಸಂಸ್ಕೃತಿ ಬಹಳ ದೊಡ್ಡದೆಂದು ಪ್ರಚಾರ ಮಾಡುತ್ತಿರುತ್ತವೆ.

ನಮ್ಮ ದೇಶದ ಶಿಲ್ಪಗಳನ್ನು, ತಾಳೆಗರಿಗಳನ್ನು ಬೇರೊಂದು ದೇಶ ಕದ್ದಿದೆಯೆಂದು… ಅವುಗಳನ್ನು ಮರಳಿ ತಮ್ಮ ದೇಶಕ್ಕೆ ತರುತ್ತೇವೆಂದು ಹೇಳುತ್ತಿರುತ್ತವೆ. ಪ್ರಜೆಗಳು ಸಾಯುತ್ತಿದ್ದರೂ ತಲೆ ಕೆಡಿಸಿಕೊಳ್ಳದೆ ಅದೇ ಮಾತುಗಳನ್ನಾಡುತ್ತವೆ.ಆಫ್ರಿಕಾ ದೇಶ ಇದಕ್ಕೆ ಭಿನ್ನ.ತನ್ನ ಪ್ರಜೆಗಳ ಸಂಕ್ಷೇಮಕ್ಕೇ ನಮ್ಮ ಆಧ್ಯತೆ.

‘ಸಿಯೆರ್ರಾ ಲಿಯೋನ್’ಒಂದು ಕಾಲದಲ್ಲಿ ಘರ್ಷಣೆಗಳಿಂದ ಕುಗ್ಗಿಹೋದ ದೇಶ. ಆದರೆ ಆದೀಗ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುತ್ತಿದೆ. ತನ್ನ ದೃಷ್ಟಿಯನ್ನು ತನ್ನ ಪ್ರಜೆಗಳ ಸಂಕ್ಷೇಮದ ಮೇಲೆ ಕೇಂದ್ರೀಕರಿಸಿದೆ.

ವಿವಿಧ ಸಂಕ್ಷೇಮ ಯೋಜನೆಗಳಿಗಾಗಿ ಹಣದ ಅವಶ್ಯಕತೆ ಬಂದಿತು. ಇದಕ್ಕಾಗಿ ಒಂದು ಸಂಚಲನಾತ್ಮಕ ನಿರ್ಣಯವನ್ನು ತೆಗೆದುಕೊಂಡಿತು. ಮೊದಲ ಬಾರಿಗೆ ತನ್ನ ದೇಶದಲ್ಲಿ ದೊರೆತ ವಜ್ರವನ್ನು ಮಾರಿತು .ಇದರಿಂದ 40 ಕೋಟಿ ರೂಪಾಯಿಗಳು ಬಂದವು.

ವಿಶ್ವದಲ್ಲೇ ಅತೀ ದೊಡ್ಡದೆನಿಸಿಕೊಂಡ ವಜ್ರಗಳಲ್ಲಿ ಒಂದಾಗಿರುವ ‘ ಪೀಸ್ ಡೈಮಂಡ್ ‘( ಶಾಂತಿ ವಜ್ರ) ಅನ್ನು ಬ್ರಿಟನ್ ದೇಶದ ಕುಬೇರನೆಂದೇ ಹೆಸರು ವಾಸಿಯಾಗಿರುವ ‘ಲಾರೆನ್ಸ್ ಗ್ರಾಫ್ ‘ ಕೊಂಡು ಕೊಂಡರು. 709 ಕ್ಯಾರೆಟ್ ತೂಕದ ಈ ವಜ್ರವನ್ನು ಇಂಟರ್ ನ್ಯಾಶನಲ್ ಡೈಮಂಡ್ ಟ್ರೇಡಿಂಗ್ ನೆಟ್ ವರ್ಕ್ ರಾಪ್ಪೋರ್ಟ್ ಗ್ರೂಪ್ ನ್ಯೂಯಾರ್ಕ್ ನಲ್ಲಿ ಬಹಿರಂಗವಾಗಿ ಹರಾಜು ಹಾಕಿತು.

‘ಸಿಯೆರ್ರಾ ಲಿಯೋನ್’ ಒಂದು ವಜ್ರವನ್ನು ಹರಾಜು ಮೂಲಕ ಮಾರಾಟ ಮಾಡಿರುವುದು ಇದೇ ಮೊದಲು. ಸರಕಾರವೇ ಮಾರಿಬಿಟ್ಟರೆ… ವಜ್ರಗಳ ಸ್ಮಗ್ಲಿಂಗ್ ಇರುವುದಿಲ್ಲವೆಂದು ಆ ದೇಶದ ನೇತಾರರು ಹೇಳುತ್ತಾರೆ.
