ಸ್ಪೂರ್ತಿ

ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ 7 ವರ್ಷದ ಪುಟ್ಟ ಬಾಲಕನೊಬ್ಬನ ಕಥೆ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

163

7 ವರ್ಷದ ಕ್ಸಿಯೋ ಚಾಂಗ್ ಜಿಯಾಂಗ್ ಚೀನಾದ ಕಿಂಗ್‍ಡಾವೋ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾನೆ. ಈತನ ವಿಡಿಯೋವನ್ನ ಮೊದಲು ಚೀನಾದ ವಿಡಿಯೋ ಹಂಚಿಕೆ ಜಾಲತಾಣ ಪೀರ್‍ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದ್ದು, ಅನಂತರ ವೈರಲ್ ಆಗಿದೆ.

ವರದಿಗಳ ಪ್ರಕಾರ ಬಾಲಕನ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ತಾಯಿ ಪುಟ್ಟ ಮಗನನ್ನು ಒಂಟಿಯಾಗಿ ಬಿಟ್ಟು ಹೋಗಿ ಬೇರೊಂದು ಮದುವೆಯಾಗಿದ್ದಾಳೆ. ನಂತರ ಬಾಲಕ ತನ್ನ ತಂದೆಯ ಮಾಜಿ ಸಹೋದ್ಯೋಗಿಯ ಬಳಿ ಬೆಳೆದಿದ್ದಾನೆ. ಅವರನ್ನ ಈತ ಅಂಕಲ್ ಅಂತಾ ಕರೀತಾನೆ. ಮೊದಮೊದಲು ತನ್ನ ಅಂಕಲ್‍ಗೆ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡಲು ಸಹಾಯ ಮಾಡುತ್ತಿದ್ದ.

ಆದ್ರೆ ನಂತರ ತನ್ನ ಕೆಲಸದ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು, ತಾನಾಗೇ ಪ್ಯಾಕೇಜ್‍ಗಳನ್ನ ಡೆಲಿವರಿ ಮಾಡುತ್ತಾನೆ. ಒಂದು ದಿನಕ್ಕೆ 30 ಪ್ಯಾಕೇಜ್‍ಗಳನ್ನ ತಲುಪಿಸುತ್ತಾನೆ. ಹಾಗೇ ಈತ ಈ ಪ್ರದೇಶದಲ್ಲಿ ಸಖತ್ ಫೇಮಸ್ ಆಗಿದ್ದು, ಜನ ಈ ಬಾಲಕನನ್ನ ಮಿನಿ ಸೆಲೆಬ್ರಿಟಿ ಅಂತ ಕರೀತಾರೆ. ಈ ಕೆಲಸ ಮಾಡೋದ್ರಲ್ಲಿ ನನಗೆ ಎಷ್ಟು ಸಂತೋಷವಿದೆ ಎಂದ್ರೆ ಮುಂದೆ ದೊಡ್ಡವನಾದ ಮೇಲೂ ಡೆಲಿವರಿ ಬಾಯ್ ಆಗಬೇಕು ಎಂದು ಬಾಲಕ ಹೇಳಿದ್ದಾನೆ.

ವಾಂಗ್ ಕಿಂಗ್ವೀ ಎಂಬವರು ಬಾಲಕನ ಫೋಟೋ ಹಂಚಿಕೊಂಡ ನಂತರ ಚಾಂಗ್ ನ ಕಥೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪುಟ್ಟ ಬಾಲಕ ಸ್ವಲ್ಪ ಕಷ್ಟ ಪಡುತ್ತಾ ನನಗೆ ಪ್ಯಾಕೇಜ್ ಡೆಲಿವರಿ ಮಾಡೋದನ್ನ ಕಂಡು ಆಶ್ಚರ್ಯವಾಯ್ತು ಎಂದು ಅವರು ಬರೆದುಕೊಂಡಿದ್ದಾರೆ.ಈ ಕೆಲಸ ಮಾಡೋದ್ರಲ್ಲಿ ನನಗೆ ಎಷ್ಟು ಸಂತೋಷವಿದೆ ಎಂದ್ರೆ ಮುಂದೆ ದೊಡ್ಡವನಾದ ಮೇಲೂ ಡೆಲಿವರಿ ಬಾಯ್ ಆಗಬೇಕು ಎಂದು ಬಾಲಕ ಹೇಳಿದ್ದಾನೆ.

ಬಾಲಕನ ಬಗ್ಗೆ ಸುದ್ದಿ ವರದಿಯಾದ ಬಳಿಕ ಸ್ಥಳೀಯ ಅಧಿಕಾರಿಗಳು ಆತನನ್ನು ವೆಲ್‍ಫೇರ್ ಅಸೋಸಿಯೇಷನ್‍ಗೆ ಕಳಿಸಿದ್ದು, ಬಾಲಕ ಅಲ್ಲಿ ತನ್ನ 7ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾನೆ. ಬಾಲಕನ ತಾಯಿಗಾಗಿ ಕೂಡ ಹುಡುಕಾಟ ನಡೆಸಲಾಗ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಈ ಚಿಕ್ಕ ಕೆಲಸವನ್ನ ಮಾಡಿದರೆ ಸಾಕು ಈ ಜನ್ಮದಲ್ಲಿ ಇಲಿಗಳು ನಿಮ್ಮ ಮನೆಗೆ ಸುಳಿಯುವುದಿಲ್ಲ, ಇಲಿಗಳ ಕಾಟಕ್ಕೆ ಮುಕ್ತಿ ಇಲ್ಲಿದೆ.

    ಯಾರ ಮನೆಯಲ್ಲಿ ಇಲಿಗಳು ಇಲ್ಲ ಹೇಳಿ, ಇನ್ನು ಇಲಿಗಳ ಕಾಟ ಕೇವಲ ಮನೆಯಲ್ಲಿ ಮಾತ್ರವಲ್ಲೇ ಹೊಲ ಗದ್ದೆಗಳಲ್ಲಿ ಕೂಡ ಇರುತ್ತದೆ, ಹೌದು ಹೊಲ ಗದ್ದೆಗಳಲ್ಲಿ ಇಲಿಗಳ ಕಾಟ ಆರಂಭವಾಯಿತು ಅಂದರೆ ರೈತರಿಗೆ ದಿಕ್ಕೇ ತೋಚದಂತೆ ಆಗುತ್ತದೆ. ಇಲಿಗಳು ಇಲ್ಲಿ ಇರುತ್ತದೆಯೋ ಅಲ್ಲಿ ಸರ್ವಶನಾಶ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ, ಯಾಕೆ ಅಂದರೆ ಇಲಿಗಳು ಕಚ್ಚದ ವಸ್ತುಗಳೇ ಇಲ್ಲ. ಎಷ್ಟೇ ಗಟ್ಟಿ ವಸ್ತುವಾದರೂ ಅದನ್ನ ತೂತು ಮಾಡುವ ಶಕ್ತಿಯನ್ನ ಹೊಂದಿರುತ್ತದೆ ಇಲಿಗಳು, ಮನೆಯ ವಸ್ತುಗಳನ್ನ ಹಾಲು ಮಾಡುತ್ತದೆ ಮತ್ತು…

  • ಸಿನಿಮಾ

    ‘ಹೆಬ್ಬುಲಿ’ ಜಾಗಕ್ಕೆ ‘ಚಕ್ರವರ್ತಿ’ ಎಂಟ್ರಿ! ‘ಸಂತೋಷ್’ ಯಾರಿಗೆ?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ…

  • ಗ್ಯಾಜೆಟ್

    ಜಿಯೋ ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್!ಮಾಹಿತಿಗೆ ಈ ಸುದ್ದಿ ನೋಡಿ

    ಜಿಯೋ ತನ್ನ ಲಕ್ಷಾಂತರ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಪ್ರತಿ ದಿನ 1.5 ಜಿಬಿ ಡೇಟಾದಿಂದ 4 ಜಿಬಿ ಡೇಟಾವರೆಗೆ ಬೇರೆ ಬೇರೆ ಸಿಂಧುತ್ವದ ಪ್ಲಾನ್ ಶುರು ಮಾಡಿದೆ. ಇದ್ರ ಜೊತೆ ಅನಿಯಮಿತ ಸ್ಥಳೀಯ ಹಾಗೂ ಎಸ್ಡಿಡಿ ಕರೆಗಳು ಲಭ್ಯವಾಗಲಿವೆ. ಜಿಯೋದ ಹೊಸ ಪ್ಲಾನ್ ಕಾಂಬೋ ಪ್ಯಾಕ್ ಆಗಿದೆ. ಇದ್ರಲ್ಲಿ 197 ರೂಪಾಯಿ ಪ್ಲಾನ್ ಗ್ರಾಹಕರನ್ನು ಸೆಳೆದಿದೆ. 197 ರೂಪಾಯಿ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದ್ದು, 2ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಸೌಲಭ್ಯದ…

  • ಸುದ್ದಿ

    ಮಳೆ ಆತಂಕದಲ್ಲಿರುವ ಕೊಡಗಿನ ಜನತೆಗೆ ನೋಟಿಸ್ ಶಾಕ್ ನೀಡಿದ ನಗರಸಭೆ….!

    ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ. ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ…

  • ಸುದ್ದಿ

    ದೇವಾಲಯಕ್ಕೆ ಹೋಗ್ತಿದ್ದ ವಿವಾಹಿತೆ ಮಹಿಳೆಯ ಮೇಲೆ ಅತ್ಯಾಚಾರವೆಸೆಗಿದ ಕಾಮುಕರು -ವಿಡಿಯೋ ಮಾಡಿ ಅಪ್ಲೋಡ್…!

    ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.30 ವರ್ಷದ ಸಂತ್ರಸ್ತೆ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ ನಂತರ ಸೋಮವಾರ ಐವರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ಸ್ನೇಹಿತೆಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಆಗ ಐವರು ಆರೋಪಿಗಳು ಬಂದು ಬಲವಂತವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಅತ್ಯಾಚಾರದ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಿದ್ದಾರೆ. ಬಳಿಕ…