ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.

ಏಕೆಂದರೆ ಒಂದು ಹನಿ ಜೇನು ತುಪ್ಪ ತನ್ನಲ್ಲಿ ಅದೆಷ್ಟೋ ಆರೋಗ್ಯಕರ ಗುಣಗಳನ್ನು ಬಚ್ಚಿಟ್ಟುಕೊಂಡಿದೆ. ಸಾಮಾನ್ಯವಾಗಿ ಕಾಡುವ ಕೆಮ್ಮು, ತಲೆನೋವು, ಜ್ವರ, ಚರ್ಮತೊಂದರೆ, ಬಾಯಿಹುಣ್ಣುಗಳಂತಹ ನಾನಾ ಕಾಯಿಲೆಗಳಿಗೆ ರಾಮಬಾಣವಾಗಿದೆ. ಜೇನು ನಮ್ಮ ಆರೊಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ಈ ಮುಂದಿನ ಅಂಶಗಳೇ ಸಾರಿ ಹೇಳುತ್ತವೆ.

ಜೇನುತುಪ್ಪದ ಆರೋಗ್ಯಕರ ಅಂಶಗಳು ಉಷ್ಣ ದಿಂದ ಬಾಯೊಳಗೆ ಹುಣ್ಣಾಗಿದ್ದರೆ ಜೇನುತುಪ್ಪ ಹಚ್ಚುವುದರಿಂದ, ನೀರಿನೊಡನೆ ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು
ವಾಸಿಯಾಗುತ್ತದೆ.ಬೊಜ್ಜು ಕರಗಿಸುವುದಕ್ಕೆ ಕುದಿಸಿ ಆರಿಸಿದ 1 ಲೋಟ ನೀರಿಗೆ 2 ಚಮಚ ಜೇನುತುಪ್ಪ ಬೆರೆಸಿ ಕುಡಿಯತ್ತಿದ್ದರೆ ತೂಕ ಕಡಿಮೆಯಾಗುತ್ತದೆ.

ನೆಗಡಿ ಅಥವಾ ಶೀತದಿಂದ ಗಂಟಲು ಕಟ್ಟಿ ಧ್ವನಿ ಸರಿಯಾಗಿ ಹೊರಡದಿದ್ದರೆ ದಿನಕ್ಕೆ 3-4 ಸಲ ಅರ್ಧ ಚಮಚದಿಂದ ಒಂದು ಚಮಚದವರೆಗೆ ಜೇನುತುಪ್ಪ ಸೇವಿಸುತ್ತಿರಬೇಕು. ಶುಂಠಿಯನ್ನು ಜೇನುತುಪ್ಪದೊಡನೆ ಸೇರಿಸಿ ದಂತಗಳಿಗೆ ಉಜ್ಜಬೇಕು. ಇದರಿಂದ ವಸಡುಗಳಿಂದ ರಕ್ತ ಸೋರುವುದು ವಸಡು ಊದಿ ಕೊಳ್ಳುವುದು ಕಡಿಮೆಯಾಗುತ್ತದೆ.

ರಕ್ತದೊತ್ತಡ ಹೆಚ್ಚಾಗಿರುವವರು ಬೆಳಗ್ಗೆ ಖಾಲಿ ಹೊಟ್ಟೆಗೆ 3 ಚಮಚ ಜೇನನ್ನು ನೀರಿನಲ್ಲಿ ಸೇರಿಸಿ ಕುಡಿಯಬೇಕು. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರು
ಪೊಟ್ಯಾಷಿಯಂ ಮತ್ತು ಖನಿಜಗಳು ಅಧಿಕ ಪ್ರಮಾಣದಲ್ಲಿರುವ ಜೇನುತುಪ್ಪವನ್ನು ದಿನಕ್ಕೆ 2 ಬಾರಿ 2 ಚಮಚದಷ್ಟು ಸೇವಿಸಬೇಕು. ಪ್ರತಿದಿನ ಜೇನುತುಪ್ಪ ಸೇವಿಸಿದರೆ ಮೆದುಳಿನ ದೌರ್ಬಲ್ಯ ನಿವಾರಣೆಯಾ ಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪ ಉತ್ತಮ ಆರೋಗ್ಯವರ್ಧಕ ಹಾಗೂ ಚರ್ಮಕ್ಕೆ ಪ್ರಯೋಜನವಾದ ಅಂಶಗಳನ್ನು ಒಳಗೊಂಡಿದೆ ಎಂಬ ಅಂಶ ಅನಾದಿಕಾಲದಿಂದಲೂ ತಿಳಿದು ಬಂದಿದೆ.

ವಿಟಮಿನ್, ಪ್ರೊಟೀನ್ ಮತ್ತು ರೋಗನಿರೋಧಕ ಜೀವಸತ್ವಗಳಿಂದ ಸಂವೃದ್ದವಾಗಿರುವ ಜೇನುತುಪ್ಪ ನಿಸ್ಸಂಶಯವಾಗಿಯೂ ಪ್ರಯೋಜನಕಾರಿ.ಜೇನಿನಲ್ಲಿರುವ ವಿಟಮಿನ್ ಸಿ
ವಿಕಿರಣಗಳಿಂದ ಹಾನಿಗೀಡಾದ ಚರ್ಮದ ಪದರಗಳನ್ನು ಸರಿಪಡಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ5 ಚರ್ಮದಲ್ಲಿ ಉತ್ಪತ್ತಿಯಾಗುವ ಎಣ್ಣೆಯ ಅಂಶವನ್ನು ತಡೆಯುವುದಲ್ಲದೆ ಒಣ ಚರ್ಮವನ್ನು ಮೃದುಗೊಳಿಸುತ್ತದೆ.

ಜೇನಿನಲ್ಲೇನಿದೆ: –
ತೇವಾಂಶ : ಶೇ.17ರಿಂದ 25 ಫಲಸಕ್ಕರೆ : ಶೇ.34 ರಿಂದ 4೦ ಗ್ಲೂಕೋಸ್ : ಶೇ.32 ರಿಂದ ೩8 ಅಂಟು : ಶೇ.1 ರಿಂದ 2 ಖನಿಜಗಳು : ಕಬ್ಬಿಣ, ಮ್ಯಾಗ್ನೀ ಶಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್, ತಾಮ್ರ. ಪೋಷಕ ದ್ರವ್ಯಗಳು : ವಿಟಮಿನ್ ಬಿ೧ ಬಿ೨ ಬಿ೩ ಬಿ೧೨ ಸಿ ಮುಂತಾದವುಗಳಿವೆ. ಮಕ್ಕಳು ಸೇರಿದಂತೆ ಯಾವುದೇ ವಯಸ್ಸಿನವರು ಕೂಡ ಕೆಮ್ಮಿಗೆ ಜೇನುತುಪ್ಪವನ್ನು ಬಳಸಬಹುದು. ಕೆಮ್ಮು ಪ್ರಾರಂಭಿಕ ಹಂತದಲ್ಲಿರುವಾಗ ಜೇನುತುಪ್ಪ ಸೇವಿಸಿದರೆ ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.