ದೇಶ-ವಿದೇಶ

ಜಗತ್ತಿನ ಹತ್ತು ಸರ್ವಾಧಿಕಾರಿಗಳ ಶಾಸನದ ಬಗ್ಗೆ ನಿಮಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

1228

ಜಗತ್ತಿನ ಸರ್ವಾಧಿಕಾರಿಗಳಲ್ಲಿ 10 ಹತ್ತು ಮಂದಿ ಅಗ್ರ ಗಣ್ಯರು ಇವರೇ ವಿಶ್ವದ ಹತ್ತು ಸರ್ವಾಧಿಕಾರಿಗಳು ಅಲ್ಲಿ ಇವರು ಹೇಳಿದ್ದೇ ಶಾಸನ, ಮಾಡಿದ್ದೇ ಕಾನೂನು.

ಅಡಾಲ್ಫ್ ಹಿಟ್ಲರ್:-

ಜರ್ಮನಿಯ ನಾಜಿ ಪಾರ್ಟಿ ಮುಖ್ಯಸ್ಥರಾಗಿದ್ದ ಹಿಟ್ಲರ್ 1933ರಿಂದ 1945ರ ವರೆಗೆ ಜರ್ಮನಿ ಚಾನ್ಸಲರ್ಆಗಿದ್ದ. ಎರಡನೆ ಮಹಾಯುದ್ಧಕ್ಕೆ ಕಾರಣೀಭೂತನಾದ ವ್ಯಕ್ತಿ ಈತ. ಜರ್ಮನರೇ ಶ್ರೇಷ್ಠ ಎಂಬ ಅಭಿಪ್ರಾಯ ಹೊಂದಿದ್ದ ಹಿಟ್ಲರ್ ಯಹೂದಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿಸಿದ್ದ.

ಜೋಸೆಫ್ ಸ್ಟಾಲಿನ್:-

ಅವಿಭಜಿತ ರಷ್ಯದ ಅಧ್ಯಕ್ಷ ರಾಗಿದ್ದ ಸ್ಟಾಲಿನ್ ಜಗತ್ತು ಕಂಡ ಮತ್ತೊಬ್ಬ ಕಟು ಸರ್ವಾಧಿಕಾರಿ. ಎರಡನೆ ಮಹಾಯುದ್ಧದಲ್ಲಿ ಇವರ ಪಾತ್ರವೂ ಇತ್ತು. ಸ್ಟಾಲಿನ್ ಕೂಡ ತನ್ನ ರಾಜಕೀಯ ವಿರೋಧಿಗಳನ್ನು ಸದೆಬಡಿಯುವಲ್ಲಿ ನಿಸ್ಸೀಮನಾಗಿದ್ದ.

ಮಾವೊ ಜೆಡಾಂಗ್:-

ಚೀನಾದ ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷ ದ ಸಂಸ್ಥಾಪಕ. ಇವರ ರಾಜಕೀಯ ನೀತಿಗಳು ಮಾವೋಯಿಸಂ ಅಥವಾ ಮಾರ್ಕಿಸಮ್-ಲೆನಿನಿಸಮ್-ಮಾವೋಯಿಸಂ ಎಂದು ಖ್ಯಾತಿ ಗಳಿಸಿವೆ. ತಮ್ಮ ನೀತಿಗಳ ಅನುಷ್ಠಾನಕ್ಕೆ ದಮನಕಾರಿ ನೀತಿಯನ್ನು ಅಳವಡಿಸಿಕೊಂಡಿದ್ದ.

ಕಿಮ್ ಜಾಂಗ್ :-

ಉತ್ತರ ಕೊರಿಯಾದ ಸರ್ವಾಧಿಕಾರಿ. ಹಾಲಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ತಂದೆ. 1994 ರಿಂದ 2011 ರವರೆಗೆ ಅಧಿಕಾರದಲ್ಲಿದ್ದರು. ಹಿಟ್ಲರ್‌ಗಿಂತಲೂ ಕ್ರೂರ್ ಸರ್ವಾಧಿಕಾರಿ ಎಂದು ಬಣ್ಣಿಸಲಾಗುತ್ತದೆ.

ಸದ್ದಾಮ್ ಹುಸೇನ್:-

ಇರಾಕ್ ಅಧ್ಯಕ್ಷರಾಗಿದ್ದ ಸದ್ದಾಮ್ ಹುಸೇನ್ ಜಗತ್ತು ಕಂಡ ಮತ್ತೊಬ್ಬ  ಸರ್ವಾಧಿಕಾರಿ. ಅರಬ್ ಸೋಷಿಯಲಿಸ್ಟ್ ಪಾರ್ಟಿ ಬಾತ್‌ನ ಅಧ್ಯಕ್ಷ ರಾಗಿದ್ದ ಹುಸೇನ್ 1979ರಿಂದ 2003 ರವರೆಗೂ ಇರಾಕ್‌ನ ನಾಯಕನಾಗಿದ್ದ. ಸಮೂಹನಾಶಕ ಅಸ್ತ್ರಗಳನ್ನು ಹೊಂದಿದ್ದಾನೆಂದು ಆರೋಪಿಸಿ ಅಮೆರಿಕ ಇರಾಕ್ ಮೇಲೆ ಯುದ್ಧ ಮಾಡಿ ಸದ್ದಾಮ್‌ನನ್ನು ಸದೆಬಡಿಯಿತು.

ಇದಿ ಅಮಿನ್:-

 

ಉಗಾಂಡದ ಮೂರನೇ ಅಧ್ಯಕ್ಷ ಹಾಗೂ ಕ್ರೂರಿ ಸರ್ವಾಧಿಕಾರಿ. ಈತನ ಆಡಳಿತಾವಧಿಯಲ್ಲಿ 3 ಲಕ್ಷ ಕ್ಕೂ ಹೆಚ್ಚು ಕೊಲೆಗಳಾಗಿವೆ. ಸಾಮೂಹಿಕ ಹತ್ಯೆಗಳ ಹಿಂದಿನ ರೂವಾರಿಯೂ ಈತನೇ. ಉಗಾಂಡ ಎಂಬ ಚಿಕ್ಕ ರಾಷ್ಟ್ರ ಈತನ ಸರ್ವಾಧಿಕಾರದಿಂದಲೇ ಹೊರ ಜಗತ್ತಿಗೆ ಗೊತ್ತಾಗಿದ್ದು.

ಮೊಹಮ್ಮದ್ ಗಡ್ಡಾಫಿ:-

ಲಿಬಿಯಾದ ಸರ್ವಾಧಿಕಾರಿ. 42 ವರ್ಷಗಳು ಲಿಬಿಯಾದಲ್ಲಿ ಆಡಳಿತ ನಡೆಸಿದ ಗಡಾಫಿ ತನ್ನದೇ ಸ್ವಂತ ಜನರನ್ನು ಕೊಲೆ ಮಾಡಿಸಿದ್ದಾನೆ. ಈತನ ಆಡಳಿತದಲ್ಲಿ ಪ್ರತಿಭಟನೆಗಳಿಗೆ ಅವಕಾಶವೇ ಇರಲಿಲ್ಲ. ಆಧುನಿಕ ಜಗತ್ತು ಕಂಡ ಅತಿ ಕೆಟ್ಟ ಸರ್ವಾಧಿಕಾರಿ.

ಪೋಲ್ ಪಾಟ್:-

ಕಾಂಬೋಡಿಯಾದ ಸರ್ವಾಧಿಕಾರಿ. 1975 ರಿಂದ 1979 ರವರೆಗೆ ಅಧ್ಯಕ್ಷ ನಾಗಿದ್ದ. ಕಾಂಬೋಡಿಯಾದಲ್ಲಿ ನಡೆದ ಸಾಮೂಹಿಕ ಹತ್ಯೆಗೆ ಪಾಟ್ ಕಾರಣ. ಹಸಿವು, ಜೈಲು ಶಿಕ್ಷೆ, ಕೊಲೆಗಳಿಂದಾಗಿ ಕಾಂಬೋಡಿಯಾದಲ್ಲಿ 1೦ ಲಕ್ಷ ಜನರು ತಮ್ಮ ಪ್ರಾಣ ಬಿಟ್ಟಿದ್ದಾರೆ. ನಗರಗಳಿಂದ ಜನರನ್ನು ಓಡಿಸಿದ್ದಾನೆ.

ಆಗಸ್ಟೋ ಪಿನೊಚೆಟ್:-

ಚಿಲಿಯನ್ನು 20 ವರ್ಷ ಕ್ಕೂ ಹೆಚ್ಚು ಕಾಲ ಆಳಿದ್ದಾನೆ ಈ ಆಗಸ್ಟೋ. ಅಧಿಕಾರದ ಮೊದಲ ಮೂರು ವರ್ಷ ದಲ್ಲಿ 1 ಲಕ್ಷ ಕ್ಕೂ ಹೆಚ್ಚು ತನ್ನ ವಿರೋಧಿಗಳನ್ನು ಸೆರೆಮನೆಗೆ ತಳ್ಳಿದ. ತನ್ನ ರಾಜಕೀಯ ವಿರೋಧಿ ಗಳನ್ನು ಮುಲಾಜಿಲ್ಲದೇ ಕೊಲ್ಲುತ್ತಿದ್ದ.

ಗೆಂಘಿಸ್ ಖಾನ್:-

ಮಂಗೋಲ್ ಬುಡಕಟ್ಟು ತನ್ನ ಆಳ್ವಿಕೆಯಲ್ಲಿ ಕ್ರೂರ ಮತ್ತು ದಯೆಯಿಲ್ಲದ ಮಿಲಿಟರಿ ತಂತ್ರಗಳೊಂದಿಗೆ ಕೊಲ್ಲಿಸುತ್ತಾನೆ ಟಾಟರ್ ಸೈನ್ಯದಿಂದ ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ತೆಮುಜಿನ್ ಅವರು ಟಾಟರ್ ಪುರುಷನನ್ನು ಕೊಂದರು. ಗೆಂಘಿಸ್ ಖಾನ್ 1227 ರಲ್ಲಿ ನಿಧನರಾದರು.ಅವರ ಸಾವಿನ ಕಾರಣ ನಿಗೂಢವಾಗಿ ಉಳಿದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶಿರ್ವಾದದಿಂದ ಈ ರಾಶಿಗಳಿಗೆ ಶುಭಯೋಗ..ನಿಮ್ಮ ರಾಶಿಯೂ ಇದೆಯಾ ನೋಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಮಹತ್ವಾಕಾಂಕ್ಷೆಗಳನ್ನು ಸಿದ್ಧಪಡಿಸಿಕೊಳ್ಳಲು ಸಕಾರಾತ್ಮಕ ಶಕ್ತಿ ನಿಮ್ಮನ್ನು ಹುರಿದುಂಬಿಸಲಿದೆ. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ದೃಢ ನಿರ್ಧಾರ ನಿಮಗೆ ಮುಂದೆ ಒಳಿತನ್ನು ಮಾಡುವುದು.  .ನಿಮ್ಮ ಸಮಸ್ಯೆ.ಏನೇ .ಇರಲಿ…

  • ಸಿನಿಮಾ

    ಇವನ ಒಂದು ಸೆಲ್ಪಿ ಫೋಟೋಗಾಗಿ ಹುಡುಗಿಯರು ಗಂಟೆಗಟ್ಟಲೆ ಕ್ಯೂ ನಿಲ್ತಾರೆ!ಈ ಪುಣ್ಯಾತ್ಮ ಯಾರೂ ಗೊತ್ತಾ?

    ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.

  • ಸ್ಪೂರ್ತಿ

    ಶಿಕ್ಷಣ ಕೊಡುವದಷ್ಟೇ ಅಲ್ಲ, ಹುಡುಗಿಯರಿಗೆ ಮದ್ವೆ ಕೂಡ ಮಾಡಿಸುತ್ತೆ ಈ ಶಾಲೆ..!

    ವಿಶ್ವದಲ್ಲಿ ಅನೇಕ ಶಾಲೆಗಳು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿವೆ. ವಿದ್ಯಾಭ್ಯಾಸ ಹೇಳುವ ವಿಧಾನ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಂದ ಶಾಲೆ ಹೆಸರು ಮಾಡಿರುತ್ತದೆ. ಆದ್ರೆ ಈ ಶಾಲೆ ಎಲ್ಲಕ್ಕಿಂತ ಭಿನ್ನವಾಗಿದೆ. ಇಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸ ಹೇಳುವ ಜೊತೆಗೆ ಅವ್ರ ಮದುವೆ ಜವಾಬ್ದಾರಿಯನ್ನೂ ಶಾಲೆಯೇ ಹೊರುತ್ತದೆ. ಹೌದು, ಭಿನ್ನವಾಗಿರುವ ಈ ಶಾಲೆ ಗುಜರಾತಿನ ಅಹಮದಾಬಾದ್ ನಲ್ಲಿದೆ. ಈ ಶಾಲೆ ಹೆಸರು ‘ಬ್ಲೈಂಡ್ ಕನ್ಯಾ ಪ್ರಕಾಶ್ ಘರ್’. ನಾಲ್ಕು ಮಕ್ಕಳೊಂದಿಗೆ ಶಾಲೆ ತೆರೆಯಲಾಗಿತ್ತು. ಆದ್ರೀಗ ಶಾಲೆ ಹೆಸ್ರು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದಿವ್ಯಾಂಗ…

  • ಸುದ್ದಿ

    36 ಗಂಟೆಯಲ್ಲಿ ದುಬೈ ತೋರಿಸುವ ಹೊಸ ಸ್ಟಾಪ್‍ಓವರ್ ಪಾಸ್…!

    ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ…

  • ಆಟೋಮೊಬೈಲ್ಸ್

    ಬೈಕ್‌ಗಳ ಮಹಾರಾಜ ರಾಯಲ್ ಎನ್‌ಫೀಲ್ಡ್’ಗೆ ಗೇಲಿ ಮಾಡಿ ಟಾಂಗ್ ಕೊಟ್ಟ, ಬಜಾಜ್ ಡೊಮಿನರ್!

    ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್‌, ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಇದರ ಹೆಸರು ಕೇಳಿದ್ರೆ ಸಾಕು, ಮೈ ಜುಮ್ಮೆನ್ನುತ್ತಿತ್ತು. ಯಾಕೆಂದ್ರೆ ಈ ಬೈಕ್’ನ್ನು ಒಮ್ಮೆ ಆದ್ರೂ ಓಡಿಸಬೇಕು ಅಂತ ಮನಸ್ಸಿಗೂ ಬಂದ್ರೂ, ಸಾಮಾನ್ಯ ಜನರ ಕೈಗೆ ಇದು ಎಟುಕುತ್ತಿರಲಿಲ್ಲ.

  • ರೆಸಿಪಿ

    ಆಲೂಗಡ್ಡೆ ದೋಸೆ ಹೇಗೆ ತಯಾರಿಸುವುದು ಎಂದು ನಿಮಗೆ ಗೊತ್ತಾ….?ತಿಳಿಯಲು ಈ ಲೇಖನ ಓದಿ….

    ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ತುರಿಯಿರಿ . ಅದಕ್ಕೆ ಮೈದ ಹಿಟ್ಟು ಸೇರಿಸಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಹಸಿಮೆಣಸು , ಕೊತ್ತಂಬರಿ ಸೊಪ್ಪನು ಸಣ್ಣದಾಗಿ ಹೆಚ್ಚಿ ಹಿಟ್ಟಿಗೆ ಸೇರಿಸಿ. ರುಚಿಗೆ ತಕ್ಕಸ್ಟು ಉಪ್ಪು ಹಾಕಿ.