ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗೌತಮ ಬುದ್ಧನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ.ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ. ಈತ ಜನಿಸುವ ಮೊದಲೇ ಜ್ಯೋತಿಷ್ಯರು
ಶುದ್ಧೋದನನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ, ಮಹಾಪುರುಷನಾಗಿ ಅಜರಾಮರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ. ಇದನ್ನು ತಿಳಿದುಕೊಂಡ ಶುದ್ದೋಧನನು ತನ್ನ ಮಗನು ಚಕ್ರವರ್ತಿ ಆಗಬೇಕೆಂದು ಬಯಸುತ್ತಾನೆ. ಯಾವ ದುಃಖ ನೋವುಗಳು ಈತನನ್ನು ಭಾಧಿಸದಿರಲಿ ಹಾಗೂ ಜಗತ್ತಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಂದ ಈತ ದೂರ ಇರಲಿ ಎಂದು ಪ್ರಯತ್ನಿಸುತ್ತಾನೆ ಹಾಗೂ ತನ್ನ ಮಗ ಇದಾವುದರ ವಿಚಾರಕ್ಕೆ ಸಿಲುಕಬಾರದೆಂದು ಯಾವುದೇ ಧಾರ್ಮಿಕ ಭೋಧನೆಯನ್ನು ಆತನಿಗೆ ಮಾಡುವುದಿಲ್ಲ. ಅಲ್ಲದೇ ಆತ ಯಾವುದೇ ಹೊರಗಿನ ಪ್ರಪಂಚಕ್ಕೆ ಮೋಹಿತನಾಗಬಾರದೆಂಬ ಭಯದಿಂದ ಶುದ್ಧೋದನನು ತನ್ನ ಮಗನಿಗಾಗಿ ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಒಳಗೊಂಡ ವೈಭವದಿಂದ ಕೂಡಿದ ಮೂರು ಅರಮನೆಗಳನ್ನು ಕಟ್ಟಿಸುತ್ತಾನೆ. ಹೀಗಾಗಿ ಗೌತಮ ಬುದ್ಧನು ಹೊರಗಿನ ಜಗತ್ತಿನ ಅರಿವಿಲ್ಲದೆಯೇ ಅರಮನೆಯಲ್ಲಿ ಬಂಧನಕ್ಕೆ ಒಳಗಾದಂತೆ ಬದುಕುತ್ತಾನೆ.
ಆದರೆ ಬುದ್ಧನು ಯಾವುದೇ ಧಾರ್ಮಿಕವಾದ ಭೋಧನೆಗಳನ್ನು ಪಡೆದುಕೊಳ್ಳದಿದ್ದರೂ ಕೂಡ ಒಂದು ದಿನ ಜಗತ್ತೇ ಮೆಚ್ಚುವಂತಹ ಮಹಾಪುರುಷನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುತ್ತಾನೆ. ಅತ್ಯಂತ ಸರಳ ಜೀವನವನ್ನು ನಡೆಸಿದ ಈತ ನೇಪಾಳದ ಶಾಕ್ಯ ಕುಲದ ರಾಜ ಶುದ್ಧೋದನ ಹಾಗೂ ರಾಣಿ ಮಾಯಾದೇವಿಯ ಪುತ್ರನಾದರೂ ಕೂಡ ಅಲ್ಲಿಯ ಜನರಿಗೆ ಈ ವಿಚಾರದ ಬಗೆಗೆ ಮಾಹಿತಿ ಇರುವುದಿಲ್ಲ. ನೇಪಾಳದ ಲುಂಬಿನಿ ಗ್ರಾಮದಲ್ಲಿ ಜನಿಸಿದ ಗೌತಮನು ಯಶೋಧರೆಯನ್ನು ಮದುವೆಯಾಗಿ ರಾಹುಲ ಎಂಬ ಪುತ್ರನ ತಂದೆಯಾಗುತ್ತಾನೆ.
ಆಧ್ಯಾತ್ಮದತ್ತ ಒಲವು
ತಾನು ಒಬ್ಬ ಮಹಾ ಯೋಗಿಯಾಗಬೇಕು, ಜ್ಞಾನಿಯಾಗಬೇಕೆಂಬ ತುಡಿತ ಇದ್ದುದರಿಂದ ಗೌತಮ ಬುದ್ದನು ಈ ವೈಭೋಗದ ಜೀವನದಿಂದ ಮುಕ್ತಿ ಪಡೆಯಲು ಹಾತೊರೆಯುತ್ತಾನೆ. ಅಲ್ಲದೇ ತಾನಿರುವ ಅರಮನೆಯ ಹೊರಗೆ ಏನಿದೆ ಎಂಬ ಕೌತುಕವೂ ತನ್ನಲ್ಲಿ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗಿರುವಾಗ ಒಂದು ದಿನ ತನ್ನ 29 ನೇ ವಯಸ್ಸಿನಲ್ಲಿ ವಾಯುವಿಹಾರಕ್ಕಾಗಿ ಅರಮನೆಯಿಂದ ಹೊರಗಡೆ ಬಂದಾಗ ಅಲ್ಲಿ ನಾಲ್ಕು ವಿಚಾರಗಳನ್ನು ನೋಡಿ ಜೀವನದಲ್ಲಿ ತನಗರಿವಿಲ್ಲದೆಯೇ ಮೊದಲ ಬಾರಿಗೆ ಜಿಗುಪ್ಸೆಗೊಳ್ಳುತ್ತಾನೆ.ಅದೇನೆಂದರೆ ಓರ್ವ ಮುದುಕ, ರೋಗಿ, ಶವಯಾತ್ರೆ ಹಾಗೂ ಅಲೆದಾಡುವ ಓರ್ವ ತಪಸ್ವಿಯನ್ನು ಕಂಡು ದಿವ್ಯದರ್ಶನವಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ಕೂಡಲೇ ಗೌತಮನು ಕುತೂಹಲಕ್ಕೆ ಒಳಗಾಗುತ್ತಾನೆ.ನಂತರ ಅರಮನೆಗೆ ಹಿಂತಿರುಗಿ ನಿಜ ಜೀವನದ ಬಗೆಗೆ ತಿಳಿದುಕೊಳ್ಳಲು ಗುರುಗಳ ಹುಡುಕಾಟ ಮಾಡಲು ಬಹಳಷ್ಟು ಕಷ್ಟಪಡುತ್ತಾನೆ.ಆದರೆ ಯಾರೂ ಕೂಡ ಗೌತಮನಿಗೆ ಜೀವನದ ಬಗೆಗೆ ಸತ್ಯ ವಿಚಾರಗಳನ್ನು ತಿಳಿಸದೇ ಇದ್ದುದರಿಂದ ಬೇಸರಗೊಂಡ ಬುದ್ಧ ಸಂಸಾರ ಹಾಗೂ ಅರಮನೆಯನ್ನು ತ್ಯಾಗ ಮಾಡಿ ಜೀವನದ ಬಗೆಗೆ ತನಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಒಂಟಿಯಾಗಿ ತೆರಳುತ್ತಾನೆ.
ಆಧ್ಯಾತ್ಮಕ್ಕಾಗಿ
ನಾಲ್ಕು ವಿಚಾರಗಳನ್ನು ಕಂಡ ನಂತರ ಬುದ್ಧನಿಗೆ ಜೀವನದ ಸತ್ಯತೆಯನ್ನು ತಿಳಿದುಕೊಳ್ಳುವ ಕುತೂಹಲ ಆತನ ಮನಸ್ಸನ್ನು ಬೆಂಬಿಡದೆ ಕಾಡಲಾರಂಭಿಸುತ್ತದೆ.ಹೀಗಾಗಿ ಜೀವನದ ಬಗೆಗೆ ಸಾಕ್ಷಾತ್ಕಾರ ಮಾಡಲು ತಾನು ಸನ್ಯಾಸಿಯಾಗುವ ವಿಚಾರವನ್ನು ತನ್ನ ತಂದೆ ಶುದ್ಧೋದನ ಹಾಗೂ ಮಡದಿ ಯಶೋಧರೆಗೆ ತಿಳಿಸಿ ಮನ ಒಲಿಸಲು ಪ್ರಯತ್ನಿಸುತ್ತಾನೆ.ಅಲ್ಲದೇ ಆತನ ಮಗ ರಾಹುಲನು ಕೂಡ ತನ್ನ ಏಳನೇಯ ವಯಸ್ಸಿಗೆ ಸನ್ಯಾಸಿಯಾಗಲು ತಂದೆಯೊಂದಿಗೆ ತೆರಳುತ್ತಾನೆ.
ಸತ್ಯ ಶೋಧಕ್ಕಾಗಿ ಪ್ರಪಂಚ ಪರ್ಯಟನೆ
ಜೀವನದ ಸತ್ಯತೆಯನ್ನು ತಿಳಿಯುವುದಕ್ಕಾಗಿ ಬುದ್ಧನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ನಿರಂತರವಾಗಿ ಮಾಡುತ್ತಾನೆ ಹಾಗೂ ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ.ವಿಮೋಚನೆಗಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ಧನು ಭೋಧಿಸಿದ ಮುಖ್ಯ ತತ್ವಗಳು.
ಬುದ್ಧನು ಇಹ ಲೋಕವನ್ನು ತ್ಯಜಿಸುವಾಗ ಎಂಭತ್ತು ವರುಷಗಳಾಗಿದ್ದರೂ ಕೂಡ ಯಾವುದೇ ದಣಿವಿಲ್ಲದೇ ಸತ್ಯ ದರ್ಶನಕ್ಕಾಗಿ ನಿರಂತವಾದ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಕೊನೆಗೆ ತನ್ನ ಅನುಯಾಯಿಗಳಿಗೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ.ಹಾಗಾಗಿ ನಿಮ್ಮ ವಿಮೋಚನೆಗಾಗಿ ಮಾತ್ರ ಕೆಲಸ ಮಾಡಿ ಎಂಬ ಕೊನೆಯ ನುಡಿಗಳನ್ನು ನೀಡಿ ಲೋಕದಲ್ಲಿ ಅಜರಾಮರನಾಗುತ್ತಾನೆ.
Published by : MAYOON N
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತವನ್ನು ಸುಮಾರು ಮುನ್ನೂರು ವರ್ಷ ಆಳಿದ ರಾಜರ ಕುಟುಂಬದ ಕೊನೆಯ ರಾಣಿ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ. ಭಾರತ ದೇಶವನ್ನು ಆಳಿದವರಲ್ಲಿ ಮೊಘಲರ ಪಾತ್ರ ಬಹು ದೊಡ್ಡದು. ಬಾಬರ್ ನಿಂದ ಹಿಡಿದು ಅಕ್ಬರ್, ಔರಂಗಜೇಬ್ ವರೆಗೂ ಅವರ ಆಳ್ವಿಕೆ ಇತ್ತು. 1526 ರಿಂದ 1857 ರವರೆಗೂ ನಮ್ಮ ದೇಶವನ್ನು ಆಳಿದರು. ಮೊಗಲ್ ರಾಜ್ಯ ಪತನದ ನಂತರ ಅವರ ವಂಶಸ್ಥರು ಎಲ್ಲಿಗೆ ಹೋದರು ಎಂದು ಗೊತ್ತಾಗಲಿಲ್ಲ. ಆದರೆ ಈಗ ಮೊಘಲ್ ವಂಶದ…
ಹಾಲಿವುಡ್ ನಟಿ ಆ್ಯಂಜಲೀನಾ ಜೋಲಿಯಂತೆ ಕಾಣಲು ಇರಾನಿನ ಯುವತಿಯೊಬ್ಬಳು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದಾರೆ.
ರೈತರ ಸಾಲಮನ್ನಾ ಮಾಡುವ ಬದಲು ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ನೀಡಲಿ ಸಾಕು, ಸಾಲವನ್ನು ರೈತರೇ ತೀರಿಸುತ್ತಾರೆ’ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇಂದು ನಗರದ ಬಿಐಟಿ ಕಾಲೇಜಿನಲ್ಲಿ ನಡೆದ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದರ್ಶನ್, ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ಬೇಡ. ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಕೊಟ್ರೆ ಸಾಕು. ರೈತರೇ ಸಾಲ…
ಡಾ. ತಿರುವೆಂಗಡಮ್ ಚೆನ್ನೈನ ವ್ಯಾಸಾರ್ಪಡಿನ ಶ್ರೀ ಕಲ್ಯಾಣಪುರಂನಲ್ಲಿ ವೀರರಾಘವನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನದಾಗಿ ಇವರು ಚಿಕಿತ್ಸೆಯನ್ನು ನೀಡುವುದು ಕಾರ್ಮಿಕ ವರ್ಗದ ಪ್ರದೇಶದಲ್ಲಿ ಜನರ ಸಾಂಕ್ರಾಮಿಕ ಕಾಯಿಲೆಗಳಿಗೆ.
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ (7)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900454448ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು 9900454448 ಶರೀರವನ್ನು ನೀರು ಮತ್ತು ಯೋಗದಿಂದ…
ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ.ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ ಬಿಸಿಬಿಸಿಯಾಗಿ ಕುರುಕಲು ತಿಂಡಿ ಬೇಕೇಬೇಕು. ಅದರಲ್ಲೂ ಪಕೋಡಾ, ಬಜ್ಜಿಯಂತಹ ಕುರುಕುಲ ಜತೆಗೆ ಒಂದು ಕಪ್ ಚಹಾನೋ, ಕಾಫಿನೋ ಇದ್ದುಬಿಟ್ಟರೆ ಅದಕ್ಕಿಂತ ಆಹ್ಲಾದಕರ ಇನ್ನೊಂದಿಲ್ಲ.ಆದರೆ ಹೀಗೆ ಚಳಿಗಾಲದಲ್ಲಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಕೆಲವು ತಪ್ಪು ಕಲ್ಪನೆಗಳೂ ಇವೆ. ಆ ತಪ್ಪು ಕಲ್ಪನೆಗಳು ಏನು? ಚಳಿಗಾಲದಲ್ಲಿ ಏನು ಆಹಾರ ಸೇವಿಸಬಹುದು? ಎಷ್ಟು ತಿನ್ನಬೇಕು…