ಕರ್ನಾಟಕ

ಗೋವಾ ನಿರಾಶ್ರಿತ ಕನ್ನಡಿಗರಿಗೆ, ರಾಜ್ಯದಿಂದ ಸಿಕ್ಕ ಭಾಗ್ಯ ಏನು ಗೊತ್ತಾ..?

137

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ನಿವೇಶನ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಯವರ‌ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಬೈನಾ ಬೀಚ್‌ನಲ್ಲಿ  ಜೆಸಿಬಿ, ಟಿಪ್ಪರ್‌ಗಳೊಂದಿಗೆ  ಸ್ಥಳೀಯಾಡಳಿತದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, 55 ಮನೆ ಹಾಗೂ ಗುಡಿಸಲುಗಳನ್ನು ತೆರವು ಮಾಡಿದ್ದರು, ಗೋವಾ ಸರ್ಕಾರದ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಕನ್ನಡಿಗರನ್ನು ರಕ್ಷಿಸುವಂತೆ ಮನವಿ ಮಾಡಿದ್ದವು.

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರ ಸಂಖ್ಯೆ ಎಷ್ಟು, ಎಲ್ಲರಿಗೂ ನಿವೇಶನ ಒದಗಿಸಲು ಬೇಕಾದ ಭೂಮಿ ಮತ್ತಿತರ ವಿಷಯಗಳನ್ನು ಒಳಗೊಂಡಂತೆ ಮೂರು ದಿನದಲ್ಲಿ ವರದಿ ನೀಡಲು ಗಡಿ ಅಭಿವೃದ್ಧಿ  ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ.

ಗೋವಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗೆ ಮರು ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮೊದಲ ಹಂತದಲ್ಲಿ ಅವರಿಗೆ ನಿವೇಶನದ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಅ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಈ ಬ್ಯಾಗ್ ಬೆಲೆಗೆ ಒಂದು ಮನೆಯನ್ನು ಖರೀದಿ ಮಾಡ್ಬಹುದು…!

    ಕೈ ಚೀಲ ( ಹ್ಯಾಂಡ್ ಬ್ಯಾಗ್) ಮಹಿಳೆಯರ ಅಚ್ಚುಮೆಚ್ಚಿನ ವಸ್ತುಗಳಲ್ಲಿ ಒಂದು. ಸುಂದರ ಹ್ಯಾಂಡ್ ಬ್ಯಾಗ್ ಖರೀದಿ ಮಾಡಲು ಮಹಿಳೆಯರು ಇಷ್ಟಪಡ್ತಾರೆ. ಹಣವುಳ್ಳವರು ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯಾಂಡ್ ಬ್ಯಾಗ್ ಖರೀದಿ ಮಾಡ್ತಾರೆ. ಆದ್ರೆ ಈ ಬ್ಯಾಗ್ ಬೆಲೆ ಕೇಳಿದ್ರೆ ದಂಗಾಗ್ತಿರಾ. ಈ ಕೈಚೀಲ ಸಾವಿರ, ಎರಡು ಸಾವಿರಕ್ಕಲ್ಲ, ಒಂದು ಕೋಟಿ 44 ಲಕ್ಷ ರೂಪಾಯಿಗೆ ಹರಾಜಾಗಿದೆ. ವಿಶ್ವದ ಅತ್ಯಂತ ದುಬಾರಿ ಕೈಚೀಲಗಳಲ್ಲಿ ಒಂದಾಗಿರುವ ಇದಕ್ಕೆ ದಿ 2015 ಹಿಮಾಲಯ್ ನಿಲೋಟಿಕಸ್ ಕ್ರೊಕೊಡಯಲ್ ಬರ್ಕಿನ್ 35 ಎಂದು…

  • ದೇಶ-ವಿದೇಶ

    ಇತಿಹಾಸ ನಿರ್ಮಿಸಿದ ಇಸ್ರೋ…..

    ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ

  • ವಿಜ್ಞಾನ

    ಐಐಟಿ ಪ್ರಯೋಗ ಯಶಸ್ವಿಗೊಂಡಿದ್ದು, ಇನ್ಮುಂದೆ ಕೋಳಿಯ ಬದಲು ಗಿಡದಲ್ಲಿ ಮೊಟ್ಟೆಗಳು ಬೆಳೆಯಲಿವೆ ,.!

    ನವದೆಹಲಿ, ಇಷ್ಟು ದಿನ ಮೊಟ್ಟೆ ಮಾಂಸಾಹಾರಿಯೋ,ಸಸ್ಯಾಹಾರಿಯೋ ಎಂಬ ವಾದ, ಪ್ರತಿವಾದಗಳು ಯಥೇಚ್ಚವಾಗಿ ನಡೆಯುತ್ತಿದ್ದವು. ಕೆಲವರು ಕೋಳಿಯ ಭ್ರೂಣವಾಗಿರುವುದರಿಂದ ಇದು ಮಾಂಸಾಹಾರ ಎಂದು ಹೇಳಿದರೆ, ಅದುಪೂರ್ತಿ ಕೋಳಿಯ ರೂಪು ಪಡೆದುಕೊಳ್ಳದ ಕಾರಣ ಅದು ಸಸ್ಯಾಹಾರಿ ಎಂದು ವಾದಿಸುವವರು ಅಧಿಕ ಸಂಖ್ಯೆಯಲ್ಲಿದ್ದರು. ಆದರೆ ಈಗ ಈ ಎಲ್ಲ ವಾದ ಪ್ರತಿವಾದಗಳಿಗೆ ಬ್ರೇಕ್​ ಹಾಕುವ ಮೂಲಕ ಶುದ್ಧ ಸಸ್ಯ ಜನ್ಯ ಮೊಟ್ಟೆಯನ್ನು ಬೆಳೆಯಬಹುದಾಗಿದೆ! ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ಟೆಕ್ನಾಲಜಿಯ (ಐಐಟಿ) ಸಂಶೋಧಕರು ಗಿಡದಲ್ಲಿಮೊಟ್ಟೆಯನ್ನು ಬೆಳೆದಿದ್ದಾರೆ. ನಾನ್​ ಸಾಯ್​, ಗ್ಲುಟೆನ್​ಮುಕ್ತವಾಗಿರುವ ಈ ಮೊಟ್ಟೆಯನ್ನು…

  • ಸುದ್ದಿ

    ಇನ್ಪೋಸಿಸ್ ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಮಿತಾಬ್ ಬಚ್ಚನ್, ಕಾರಣ ಗೊತ್ತಾ,.!

    ಕೆಲವು ದಿನಗಳ ಹಿಂದೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಬಾಲಿವುಡ್ ನಟ ಅಭಿತಾಬ್ ಬಚ್ಚನ್ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಸುಧಾಮೂರ್ತಿ ಅವರು ‘ಕೌನ್ ಬನೇಗ ಕರೋಡ್ ಪತಿ’ ಗೆ ಸ್ಪರ್ಧಿಯಾಗಿ ಹೋಗಿದ್ದಾರಾ ಅಥವಾ ಅತಿಥಿಯಾಗಿ ಹೋಗಿದ್ದಾರಾ ಎಂಬ ಗೊಂದಲ ಮೂಡಿತ್ತು. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದೆ. ಸುಧಾಮೂರ್ತಿ ಅವರು ನಟ ಅಭಿತಾಬ್ ಬಚ್ಚನ್ ನಿರೂಪಣೆಯ ‘ಕೌನ್…

  • ಸುದ್ದಿ

    ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಈ ಗ್ರಾಮಕ್ಕಿಲ್ಲ ವಿದ್ಯುತ್, ಆದರೆ ವಿದ್ಯುತ್ ಬಿಲ್ಮಾತ್ರ ತಲುಪುತ್ತದೆ, ಹೇಗೆ ಗೊತ್ತಾ, ಇದನ್ನೊಮ್ಮೆ ಓದಿ,.!

    ಸ್ವಾತಂತ್ರ್ಯಪಡೆದ 72 ವರ್ಷಗಳಾದರೂ ಬಲರಾಂಪುರ್ ಜಿಲ್ಲೆಯ ಗ್ರಾಮಕ್ಕೆ ವಿದ್ಯುತ್ತಲುಪಿಲ್ಲ. ಆದರೆ ವಿದ್ಯುತ್ ಬಿಲ್ಮಾತ್ರ ತಲುಪಿದೆ. ಈ ಗ್ರಾಮಸ್ಥರು ರಾತ್ರಿವೇಳೆ ಲ್ಯಾಂಟರ್ನ್ ಮತ್ತು ಧಿಬ್ರಿಗಳನ್ನು ಬಳಸುತ್ತಾರೆ.ಇದು ಬಿಜೆಪಿ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ರಾಮ್‌ವಿಚಾರ್ನೇತಮ್‌ಗೆ ಸೇರಿದ ಗ್ರಾಮವಾಗಿದೆ. ರಾಜ್ಯಸಭಾ ಸಂಸದ ರಾಮ್‌ವಿಚಾರ್ ನೇತಮ್ಅವರ ಮನೆ ಇಲ್ಲಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂದು ಪತ್ರಿ ಪಾರಿಗ್ರಾಮಸ್ಥರು ಹೇಳುತ್ತಾರೆ. ಇಲ್ಲಿಯವರೆಗೆ ವಿದ್ಯುತ್‌ ನೀಡುವ ಬಗ್ಗೆ ಕೇವಲ ಭರವಸೆ ದೊರೆತಿದೆ ಅಷ್ಟೇ, ಆದರೆ ವಿದ್ಯುತ್ಮಾತ್ರ ತಲುಪಿಲ್ಲ ಎಂದು ಅವರು…