ಸುದ್ದಿ

ಕೋತಿಯನ್ನು ಈ ಶ್ರೀಮಂತ ದಂಪತಿಗಳು ತಮ್ಮ ಸ್ವಂತ ಮಗನಿಗಿಂತ ಹೆಚ್ಚಾಗಿ ಸಾಕುತ್ತಿದ್ದಾರೆ.!ಏಕೆ ಗೋತಾ.?ತಿಳಿಯಲು ಈ ಲೇಖನ ಓದಿ…

85

ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.

ಮಂಗಕ್ಕೆ ಎಸಿ ಕೊಠಡಿ ನಿರ್ಮಿಸಿ ಮಗನಂತೆ ನೋಡಿಕೊಳ್ಳುತ್ತಿರುವುದಕ್ಕೆ ಹಲವರು ನಮ್ಮನ್ನು ಹುಚ್ಚರೆಂದು ಕರೆಯುತ್ತಾರೆಂದು ಹೇಳುವ ದಂಪತಿಗಳು, ಇದಕ್ಕೆ ತಾವು ತಲೆ ಕೆಡಿಸಿಕೊಳ್ಳುವುದಿಲ್ಲವೆಂದಿದ್ದಾರೆ. ತಮ್ಮ ನಿಧನ ನಂತರವೂ ಚುನ್ಮುನ್ ಸುಖವಾಗಿರಬೇಕೆಂಬ ಕಾರಣಕ್ಕೆ ಈಗಲೇ ಅದಕ್ಕೆ ತಕ್ಕ ಸಿದ್ದತೆಗಳನ್ನು ಮಾಡಿಟ್ಟಿದ್ದಾರೆ. ಚುನ್ಮುನ್ ಗೆ ಚೈನೀಸ್ ಆಹಾರ ಇಷ್ಟವೆಂದು ಹೇಳುವ ದಂಪತಿಗಳು ಚುನ್ಮುನ್ ಗೆ ಸಂಗಾತಿಯನ್ನೂ ಹುಡುಕಿ ಕೊಟ್ಟಿದ್ದಾರೆ.

ಟ್ರಸ್ಟ್ ಒಂದನ್ನು ಸ್ಥಾಪಿಸಿರುವ ದಂಪತಿಗಳು ತಮ್ಮ ಮರಣದ ಬಳಿಕ ಎಲ್ಲಾ ಆಸ್ತಿಯನ್ನು ಈ ಟ್ರಸ್ಟ್ ಗೆ ಹೋಗುವ ವ್ಯವಸ್ಥೆ ಮಾಡಿದ್ದಾರೆ. ಅದರಿಂದ ಬರುವ ಹಣದಲ್ಲಿ ಮಂಗಗಳನ್ನು ಸಂರಕ್ಷಣೆ ಮಾಡಬೇಕೆಂಬುದು ಈ ದಂಪತಿಗಳ ಹೆಬ್ಬಯಕೆ. ತಮ್ಮ ದತ್ತು ಪುತ್ರ ಚುನ್ಮುನ್ ನನ್ನು ಹೆತ್ತ ಕಂದನಂತೆ ಪ್ರೀತಿಸುತ್ತಿರುವ ದಂಪತಿಗಳು ತಮ್ಮ ಸಿರಿ ಸಂಪತ್ತಿಗೆಲ್ಲ ಚುನ್ಮುನ್ ಕಾರಣವೆಂದು ಬಲವಾಗಿ ನಂಬಿದ್ದಾರೆ.

ಹಿಂದೂವಾದ ಬ್ರಿಜೇಶ್, ಮುಸ್ಲಿಂ ಯುವತಿ ಶಬೀಸ್ತಾ ಅವರನ್ನು ಮದುವೆಯಾದ ಕಾರಣಕ್ಕಾಗಿ ಇಬ್ಬರ ಕುಟುಂಬದವರೂ ಅವರನ್ನು ಹಲವಾರು ವರ್ಷಗಳ ಹಿಂದೆಯೇ ದೂರ ಮಾಡಿದ್ದರು. ಈ ವೇಳೆ ಈ ಮಂಗ ಅವರ ಪಾಲಿನ ಅದೃಷ್ಟದ ಸಂಕೇತದಂತೆ ಬಂದಿತಂತೆ. ಚುನ್ಮುನ್ ಎಂದು ಇದಕ್ಕೆ ದಂಪತಿಗಳು ಹೆಸರಿಟ್ಟಿದ್ದು ಚುನ್ಮುನ್ ಬಂದ ಮೇಲೆಯೇ ತಮಗೆ ಶ್ರೀಮಂತಿಕೆ ಬಂದಿತೆಂದು ದಂಪತಿಗಳು ಹೆಮ್ಮೆಯಿಂದ ಹೇಳುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ದಿನಸಿ ಅಂಗಡಿ ಮಾಲೀಕನ ಅಕ್ಷರದಾಸೋಹ : ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಪಾಠ…..!

    ಒಬ್ಬ ಅಂಗಡಿ ಮಾಲೀಕ ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೇ ಕಳೆದ ಎಂಟು ವರ್ಷಗಳಿಂದ 300 ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಮಾದರಿ ಎನಿಸಿದ್ದಾರೆ. ಅದೂ ಕೂಡ ದೆಹಲಿಯ ಯಮುನಾ ನದಿ ತಟದಲ್ಲಿರುವ ಮೆಟ್ರೋ ರೈಲು ಸೇತುವೆ ಕೆಳಗೆ….! ರಾಜೇಶ್ ಕುಮಾರ್ ಎಂಬ ಈ ವ್ಯಕ್ತಿ ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶವಿಟ್ಟುಕೊಂಡು ಈ ಶಾಲೆ ನಡೆಸುತ್ತಿದ್ದಾರೆ. ಉತ್ತರಪ್ರದೇಶ ಮೂಲದ ಇವರು ತಮ್ಮ…

  • ಸುದ್ದಿ

    ಇನ್ನು ಮುಂದೆ ದೇವಸ್ಥಾನಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಬಂದ್..!ಯಾಕೆ ಗೊತ್ತ?

    ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆ ನಿಷೇಧಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಇಲಾಖೆ ವ್ಯಾಪ್ತಿಯ ಕೆಲವು ದೇಗುಲಗಳಲ್ಲಿ ಕಲಬೆರಕೆ ಇಲ್ಲವೇ ರಾಸಾಯನಿಕ ಮಿಶ್ರಿತ ಕುಂಕುಮ ಬಳಕೆಯಾಗುತ್ತಿರುವ ಬಗ್ಗೆ ಭಕ್ತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ದೇಗುಲಗಳಲ್ಲಿ ಪೂಜಾ ಕಾರ್ಯಗಳಿಗೆ ನಿಯಮಿತವಾಗಿ ಕುಂಕುಮ ಖರೀದಿಸಿ ಬಳಸಲಾಗುತ್ತದೆ. ಅರ್ಚನೆಗೆ ಬಳಸಿದ ಕುಂಕುಮವನ್ನು ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ. ಜತೆಗೆ ಭಕ್ತರು ಪೂಜೆಗೆಂದು ಸಲ್ಲಿಸಿದ ಕುಂಕುಮವನ್ನೂ ವಿತರಿಸಲಾಗುತ್ತಿದೆ.ರಾಸಾಯನಿಕ ಕುಂಕುಮದ ಬಣ್ಣ ಗಾಢವಾಗಿರಲಿದ್ದು, ಚರ್ಮ…

  • ಉಪಯುಕ್ತ ಮಾಹಿತಿ

    ಈ 5 ಧಾನ್ಯಗಳನ್ನು ತಿಂದರೆ ಏನಾಗುತ್ತೆ ಗೊತ್ತಾ..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಪ್ರಯೋಜನವಾಗಲಿ

    ಮನುಷ್ಯ ಅಂದ ಮೇಲೆ ಕಾಯಿಲೆ ಬಂದೆ ಬರುತ್ತದೆ. ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಿ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತೇವೆ

  • ಸುದ್ದಿ

    ಮಳೆ ಆತಂಕದಲ್ಲಿರುವ ಕೊಡಗಿನ ಜನತೆಗೆ ನೋಟಿಸ್ ಶಾಕ್ ನೀಡಿದ ನಗರಸಭೆ….!

    ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆ ಸುರಿಯುತ್ತಿದೆ. ಕಳೆದ ಬಾರಿ ಸುರಿದ ರಣಭೀಕರ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿತ್ತು. ಪರಿಣಾಮ ಈಗ ಸಣ್ಣದಾಗಿ ಮಳೆ ಸುರಿದ್ರೂ ಜನರು ಆತಂಕಪಡುತ್ತಿದ್ದಾರೆ. ಇದೇ 20ರಿಂದ ಪುನಃ ನಿರಂತರ ಮಳೆ ಬೀಳುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳ ಜನರಿಗೆ ಮಡಿಕೇರಿ ನಗರಸಭೆ ನೋಟಿಸ್ ನೀಡಿದೆ. ಇದು ಜನರಲ್ಲಿ ಮತ್ತೆ ಆತಂಕ ಮೂಡುವಂತೆ ಮಾಡಿದೆ. ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವರುಣನ ಅಬ್ಬರ ಇಲ್ಲದಿದ್ದರೂ ಶಾಂತಾವಾಗಿಯೇ…

  • ವಿಚಿತ್ರ ಆದರೂ ಸತ್ಯ

    ಈಕೆ 23 ವರ್ಷದ ಯುವಕನನ್ನು ಮದ್ವೆಯಾಗಲು ಕೊಟ್ಟಿದ್ದು ಬರೋಬರಿ….?ಆಮೇಲೆ ಏನಾಯ್ತು ಗೊತ್ತಾ..?

    ಈ ಮದುವೆ ಅನ್ನುವುದೇ ವಿಚಿತ್ರ ನೋಡ್ರಿ.ಯಾರು ಯಾವಾಗ ಯಾರನ್ನ,ಏತಕ್ಕೆ ಮದ್ವೆ ಆಗ್ತಾರೆ ಅಂತ ಹೇಳೋದಕ್ಕೆ ಆಗಲ್ಲ.ಇದು ದೇಶ,ಭಾಷೆ ಸಂಸ್ಕೃತಿ ಎಲ್ಲವನ್ನು ಮೀರಿದ್ದು.

  • ಸುದ್ದಿ

    ಅಡುಗೆ ಸೋಡಾ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ..! ಸೋಡಾ ನೀರು ಕುಡಿದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ…?

    ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸುವುದರಿಂದ ಸಾಕಷ್ಟು ಕಾಯಿಲೆಗಳು ದೂರವಾಗುತ್ತವೆ.ನಿಮಗೆ ಆಮ್ಲದ ಸಮಸ್ಯೆ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿದ್ರೆ ಒಳ್ಳೆಯದು. ವಾಯು ಸಮಸ್ಯೆಗೂ ಇದು ಉತ್ತಮ ಮದ್ದು. ಹೊಟೇಲ್ ತಿಂಡಿ ಸೇವಿಸಿದ ನಂತ್ರ ಹೊಟ್ಟೆಯಲ್ಲಿ ವಾಯು ತುಂಬಿಕೊಂಡ ಅನುಭವವಾಗುತ್ತದೆ. ಆಗ ಅಡುಗೆ ಸೋಡಾ ಬೆರೆಸಿದ…