ಆರೋಗ್ಯ

ಕಿತ್ತಳೆ ಹಣ್ಣಿನ ಉಪಯೋಗಗಳನ್ನು ತಿಳಿಯ ಬೇಕಾ..? ಹಾಗದ್ರೆ ಈ ಲೇಖನವನ್ನು ಓದಿ…

1806

ಕಿತ್ತಳೆ ಹಣ್ಣು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ. ಇಂಥ ಸಿಹಿ ಕಿತ್ತಳೆ ಹಣ್ಣಿನಿಂದ ದೇಹ ಹಲವು ಉಪಯೋಗಗಳಿವೆ. ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಹೆಚ್ಚು ಇರುತ್ತೆ. ಇದನ್ನು ಪ್ರತಿದಿನ ಮಕ್ಕಳು ಹಾಗೂ ವಯಸ್ಸಾದವರು ಸೇವಿಸಿದ್ರೆ ಹೆಚ್ಚು ಉಪಯುಕ್ತ.

ಪ್ರತಿದಿನ ತಾಜಾ ಕಿತ್ತಳೆ ಹಣ್ಣಿನ ರಸವನ್ನು ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಆ್ಯಸಿಡಿಟಿ, ಕ್ಯಾನ್ಸರ್, ಹಾಗೂ ಹೃದಯ ಸಂಬಂಧಿ ರೋಗಗಳನ್ನು ದೂರವಿಡಬಹುದಾಗಿದೆ.

ಪ್ರತಿದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ವಯಸ್ಸಾದವರಲ್ಲಿ ರಕ್ತದ ಒತ್ತಡ ಹತೋಟಿಯಲ್ಲಿಡುತ್ತದೆ. ವಿಟಮಿನ್ ಸಿ ಹೆಚ್ಚು ಇರುವ ಕಿತ್ತಳೆ ಹಣ್ಣಿನ ರಸದಲ್ಲಿ ರೋಗದ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಹೀಗಾಗಿ ಆರೇಂಜ್ ಜ್ಯೂಸ್ ನೀಡಿದ್ರೆ ಹೆಚ್ಚು ಪ್ರಯೋಜನಕಾರಿ.ಇನ್ನು ಕಿತ್ತಳೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ. ಕಿತ್ತಳೆ ರಸ ಅಲ್ಸರ್ ರೋಗಕ್ಕೆ ರಾಮಭಾಣ.

ಅಜೀರ್ಣದ ತೊಂದರೆಯನ್ನು ನಿವಾರಿಸಲು:-

ಕಿತ್ತಳೆಯ ಸಿಪ್ಪೆಯಲ್ಲಿ ಸುಮಾರು ಶೇಖಡಾ ಹನ್ನೊಂದರಷ್ಟು ಕರಗದ ನಾರು ಇದೆ. ಇದು ಮಲಬದ್ದತೆಯಾಗುವುದನ್ನು ತಡೆಯುತ್ತದೆ. ಸುಲಲಿತ ಮಲವಿಸರ್ಜನೆ, ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಕಿತ್ತಳೆ ಸಿಪ್ಪೆಗಳನ್ನು ಸೇರಿಸಿ ತಯಾರಿಸಿದ ಟೀ ಸಹಾ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ನೆರವಾಗುತ್ತದೆ.
ತೂಕ ಕಡಿಮೆ ಮಾಡಲು:-

ಆರೇಂಜ್ ಜ್ಯೂಸ್ ತೂಕ ಕಡಿಮೆ ಮಾಡಲು ಸಹಾಯಮಾಡುತ್ತೆ. ಜೊತೆಗೆ ಹಾರ್ಟ್ ಅಟ್ಯಾಕ್ ಆಗುವುದನ್ನು ತಡೆಗಟ್ಟುತ್ತದೆ. ಅನಿಮೀಯಾದಿಂದ ಬಳಲುತ್ತಿರುವವರಿಗೆ ಕಿತ್ತಳೆ ರಸ ದಿವ್ಯೌಷಧ.

ಉಸಿರಾಟವನ್ನು ಸರಾಗಗೊಳಿಸುತ್ತದೆ :-

ಕಿತ್ತಳೆ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ವಿಶೇಷವಾಗಿ ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಮೊದಲಾದ ಉಸಿರು ಸಂಬಂಧಿ ರೋಗಗಳಿಂದ ರಕ್ಷಣೆ ಪಡೆಯಬಹುದು. ತನ್ಮೂಲಕ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಬಹುದು. ಶೀತ, ಫ್ಲೂ ಮೊದಲಾದ ತೊಂದರೆಗಳಿಂದಲೂ ಕಿತ್ತಳೆ ಸಿಪ್ಪೆ ರಕ್ಷಣೆ ನೀಡುತ್ತದೆ.

ಚರ್ಮವನ್ನು ಬೆಳ್ಳಗಾಗಿಸಲು :-

ಇನ್ನು ಪ್ರತದಿನ ಕಿತ್ತಳೆ ರಸವನ್ನು ಸೇವಿಸುವುದರಿಂದ ದೇಹದಲ್ಲಿನ ಟಾಕ್ಸಿನ್ ಕಡಿಮೆಯಾಗಿ ಚರ್ಮ ಸುಂದರವಾಗಿರುತ್ತೆ.  ಕಿತ್ತಳೆ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಿರುವ ಸಿ ವಿಟಮಿನ್ ಹೆಚ್ಚಾಗಿ ಇದೆ.

ಹೃದಯಘಾತ  ನಿಯಂತ್ರಣ:-

ಕಿತ್ತಳೆ ಹಣ್ಣನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ನಿಯಮಿತವಾಗಿ ಸೇವಿಸುವುದರಿಂದ ಹೃದಯಘಾತ ಸಂಭವಿಸುವುದಿಲ್ಲ ಮತ್ತು ರಕ್ತ ಹೆಚ್ಚುತ್ತದೆ. ಅರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಚರ್ಮದ ಕಾಂತಿ ಮತ್ತು ಕೇಶ ಕಾಂತಿಯನ್ನು ಹೆಚ್ಚುಸುತ್ತದೆ.

ಮತ್ತು ದೇಹಕ್ಕೆ ವಿಟಮಿನ್ ಸಿ ಅಂಶವನ್ನು ನೀಡುತ್ತದೆ.

ಕಿತ್ತಳೆ ಹಣ್ಣಿನ ಬೆಲೆ ತುಂಬಾ ಕಡಿಮೆ ದರದಲ್ಲಿ ದೊರೆಯುತ್ತದೆ. ಕಿತ್ತಳೆ ಹಣ್ಣಿನ ಸೇವನೆಯಿಂದ ಕೊಬ್ಬಿನ ನಿಯಂತ್ರಣ ಕಡಿಮೆ ಮಾಡುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ,…ಏನೆಂದು ತಿಳಿಯಿರಿ?

    ರಾಜ್ಯ ರಾಜಧಾನಿಯ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಕರೆ ಬಂದಿದ್ದು, ನಿಲ್ದಾಣದಲ್ಲಿದ್ದ ರೈಲಿನಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ.ಇಂದು ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ದುಷ್ಕರ್ಮಿಗಳು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಯನ್ನು ಮಾಡಿದ್ದರು. ಇದೇ ವೇಳೆ ನಿಲ್ದಾಣದಲ್ಲಿದ್ದ ಪಾಟ್ನಾ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದಲ್ಲಿ ಅನುಮಾನಾಸ್ಪದ ಬ್ಯಾಗೊಂದು ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪ್ರಯಾಣಿಕರು ಭಯಭೀತರಾಗಿದ್ದು, ಸ್ಥಳಕ್ಕೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಬಂದು ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಬಾಂಬ್ ಬೆದರಿಕೆ ಕರೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ,ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(23 ಮಾರ್ಚ್, 2019) ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು….

  • ಸುದ್ದಿ

    ಅರವತ್ತರ ವಯಸ್ಸದರು,ಸೂಪರ್ ಮಾಡೆಲ್….!

    ಅರವತ್ತರ ವಯಸ್ಸಿನಲ್ಲೂ ಕಟ್ಟುಮಸ್ತಾಗಿದ್ದು ಸೂಪರ್ ಮಾಡೆಲ್‌ನಂತಿರುವ ದಿನೇಶ್ ಮೋಹನ್ ಈಗ ಹಲವರ ಗಮನ ಸೆಳೆಯುತ್ತಿದ್ದಾರೆ. ಹರ್ಯಾಣ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಮೋಹನ್ ಅತಿಯಾದ ತೂಕದಿಂದ ಬಳಲಿ ಹಾಸಿಗೆ ಹಿಡಿದಿದ್ದರು. ಅಲ್ಲಿಂದ ಚೇತರಿಸಿಕೊಂಡರೂ ದಢೂತಿ ದೇಹ ಇಳಿಸಿಕೊಳ್ಳಲು 50 ಕೆ.ಜಿ. ತೂಕ ಕಡಿಮೆ ಮಾಡಿಕೊಂಡ ಅವರು 2016ರಲ್ಲಿ ಫೋಟೋಶೂಟ್ ಮಾಡಿದ ಬಳಿಕ ಅಂಗಸೌಷ್ಠವ ರಕ್ಷಣೆ ನಿರಂತರವಾಗಿಸಿಕೊಂಡರು. ಈಗ ಅವರಿಂದ ಯುವಕರು ಮಾತ್ರವಲ್ಲ ವಯಸ್ಸಾದವರೂ ಸೆಳೆಯಲ್ಪಡುತ್ತಿದ್ದಾರೆ. ಯಾವ ವಯಸ್ಸಿನಲ್ಲಿ ಬೇಕಿದ್ದರೂ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಅವರು…

  • ತಂತ್ರಜ್ಞಾನ, ವಿಸ್ಮಯ ಜಗತ್ತು

    ಇವಳೇ ರೋಬೋಟ್ ತಯಾರಿಸಿ, ಇವಳೇ ರೋಬೋಟ್ ಪ್ರೀತಿಯಲ್ಲಿ ಬಿದ್ದಿದ್ದಾಳೆ..!ಈ ಲೇಖನ ಓದಿ ಶಾಕ್ ಆಗ್ತೀರಾ… ..

    ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ.

  • ಉಪಯುಕ್ತ ಮಾಹಿತಿ

    ನಿಮ್ಮ ಪಾನ್‌ಕಾರ್ಡ್‌ ಆಧಾರ್‌ ಜೊತೆ ಲಿಂಕ್ ಆಗಿದೆಯೇ? ತಿಳಿಯೋದು ಹೇಗೆ? ಇಲ್ಲಿದೆ ವಿವರ

    ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. 31 ಮಾರ್ಚ್ 2022ರ ವರೆಗೆ ಇದ್ದ ಅವಧಿಯನ್ನು ಸರ್ಕಾರ ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಆದ್ದರಿಂದ  (ಏಪ್ರಿಲ್ 1ರಿಂದ) ಲಿಂಕ್ ಮಾಡುವವರಿಗೆ ಶುಲ್ಕ ಅಪ್ಲೈ ಆಗಲಿದೆ. ಅಂದರೆ ದಂಡ ಶುಲ್ಕ  1000 ರೂಪಾಯಿ ತನಕ ಬೀಳಲಿದೆ. ಹೀಗಾಗಿ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ. ಆದಾಯ ತೆರಿಗೆ ಕಾಯ್ದೆ 139 ಎಎ…