ಚೆನ್ನೈನಲ್ಲಿ ಎದುರಾಗಿರುವ ನೀರಿನ ತೀವ್ರ ಕೊರತೆಯನ್ನು ನಿರ್ವಹಿಸಲು ನಿತ್ಯ 1 ಕೋಟಿ ಲೀಟರ್ ನೀರು ಪೂರೈಸುವುದಾಗಿ ಈ ಹಿಂದೆ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ 68 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಇದೀಗ ಈ ಯೋಜನೆಯ ಭಾಗವಾಗಿ ಚೆನ್ನೈಗೆ ಮೊದಲ ನೀರಿನ ರೈಲು ಆಗಮಿಸಿದೆ.
ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.ವೆಲ್ಲೂರು ಜಿಲ್ಲೆಯ ಜೋಲಾರ್ ಪೇಟೆಯಿಂದ ಬರೊಬ್ಬರಿ 25 ಲಕ್ಷ ಲೀಟರ್ ಕಾವೇರಿ ನೀರು ಹೊತ್ತ ಮೊದಲ ರೈಲು ಶುಕ್ರವಾರ ಮಧ್ಯಾಹ್ನ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ‘ವಿಶೇಷವಾಗಿ ರೂಪಿಸಲಾಗಿರುವ ವ್ಯಾಗನ್(ನೀರು ಸಂಗ್ರಹಿಸಿಕೊಳ್ಳುವ ರೈಲು) ಮೂಲಕ ತರಲಾಗುವ ಕಾವೇರಿ ನೀರು, ಚೆನ್ನೈ ನಗರದ ಜನರ ನೀರಿನ ದಾಹ ತಣಿಸಲಿದೆ. ವ್ಯಾಗನ್ಗಳನ್ನು ಒಳಗೊಂಡ ಎರಡು ರೈಲು ಗಾಡಿಗಳು ನಿತ್ಯ ನಾಲ್ಕು ಬಾರಿ ನೀರು ತರಲಿವೆ. ತಲಾ 50,000 ಲೀಟರ್ ಸಾಮರ್ಥ್ಯದ, 50 ಟ್ಯಾಂಕ್ ವ್ಯಾಗನ್ಗಳ ಮೂಲಕ ರೈಲಿನಲ್ಲಿ ನೀರು ಸಾಗಿಸಲಾಗುತ್ತದೆ. ಹೀಗೆ ಸಾಗಿಸಲಾದ ನೀರನ್ನು ವ್ಯಾಗನ್ಗಳಿಂದ ಶುದ್ಧೀಕರಣ ಘಟಕಕ್ಕೆ ಪೈಪ್ ಗಳನ್ನು ಅಳವಡಿಸಿ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಮೂಲಗಳ ಪ್ರಕಾರ ಈ ರೈಲು ದಿನಕ್ಕೆ 1 ಕೋಟಿ ಲೀಟರ್ ನಂತೆ ಆರು ತಿಂಗಳ ವರೆಗೂ ಚೆನ್ನೈಗೆ ತಲುಪಿಸಲಿದೆ. ಜೋಲಾರ್ ಪೇಟೆಯಿಂದ ಸುಮಾರು 215 ಕಿ.ಮೀ. ದೂರ ಸಂಚಾರ ಮಾಡಿ ಮಧ್ಯಾಹ್ನ 12ರ ವೇಳೆಗೆ ಚೆನ್ನೈ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿತು. ಅತ್ತ ರೈಲಿನಿಂದ ನೀರು ಪಂಪಿಂಗ್ ಸ್ಟೇಷನ್ ಗೆ ತಲುಪುತ್ತಿದ್ದಂತೆಯೇ ಇತ್ತ ಚೆನ್ನೈನಾದ್ಯಂತ ವಾಟರ್ ಟ್ಯಾಂಕರ್ ಗಳ ಸಮೀಪ ನೆರೆದಿದ್ದ ಜನ ಸರತಿ ಸಾಲಲ್ಲಿ ನಿಂತು ನೀರನ್ನು ಸಂಗ್ರಹಿಸಿಕೊಂಡು ಮನೆಗೆ ತೆರಳಿದರು.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಸ್ಮಾರ್ಟ್ ವಿದ್ಯಾರ್ಥಿಯೊಬ್ಬ ಸ್ಮಾರ್ಟ್ ಆಗಿ ನಕಲು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಎಂಐಟಿ ಕಾಲೇಜು ಎಂಜಿನಿಯರ್ ವಿದ್ಯಾರ್ಥಿ ಸ್ಮಾರ್ಟ್ ವಾಚ್ ಕಟ್ಟಿಕೊಂಡು ಹೋಗಿ ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ. ಸ್ಮಾರ್ಟ್ ವಾಚ್ ಕಟ್ಟಿದ್ದ ವಿದ್ಯಾರ್ಥಿಯನ್ನು ಪರೀಕ್ಷೆ ಹಾಲ್ ನಿಂದ ಎಬ್ಬಿಸಿ ಹೊರಗೆ ಕಳುಹಿಸಿದ್ದಾರೆ. ಈ ಸ್ಮಾರ್ಟ್ ವಾಚ್ ಎಷ್ಟು ತಂತ್ರಜ್ಞಾನದಿಂದ ಕೂಡಿದೆ ಎಂದರೆ ಇಡೀ ಪುಸ್ತಕವನ್ನು ಇದರೊಳಗೆ ಅಪ್ಲೋಡ್ ಮಾಡಬಹುದು. ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರೋಗ್ರಾಂಗಳು, ಅದರ ಸೂತ್ರಗಳು, ಕೆಲ ಉತ್ತರಗಳು ಮೆಮೋರಿ…
ಬೇಸಿಗೆಯಲ್ಲಿ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚು. ದೇಹಕ್ಕೆ ಆರೋಗ್ಯಕರ ಹಾಗೂ ಚೈತನ್ಯವನ್ನು ತುಂಬುವ ಶಕ್ತಿ ಈ ಪಾನೀಯಕ್ಕಿದೆ. ಮಿನರಲ್, ವಿಟಮಿನ್, ಕಾರ್ಬೋಹೈಡ್ರೇಟ್ ಇನ್ನು ಮುಂತಾದ ಅಂಶಗಳು ಎಳನೀರಿನಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಈ ಡ್ರಿಂಕ್ ಉತ್ತಮ ಎಂದು ಹೇಳಬಹುದು. * ಎಳನೀರಿನ ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯಬಹುದು. * ಬೇಸಿಗೆಯಲ್ಲಿ ಉಂಟಾಗುವ ಡಿಹೈಡ್ರೇಷನ್ ನಿಂದ ಮುಕ್ತಿ ಪಡೆಯಲು ಎಳನೀರನ್ನು ಸೇವಿಸಬೇಕು. * ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳನೀರಿಗಿದೆ. * ಎಳನೀರು ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಫ್ರೀ…
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನಿಮ್ಮ ಸಭ್ಯ…
ಆಕಾಶದಲ್ಲಿ ಅತೀ ವೇಗವಾಗಿ ಚಲಿಸುತ್ತಿದ್ದ ಒಂದು ವಿಮಾನದ ಮೇಲೆ ಹದ್ದುಗಳು ಒಮ್ಮೆಲೇ ದಾಳಿಮಾಡಿದವು. ಅದೂ ಸಹ ಒಂದಲ್ಲ ಎರಡಲ್ಲ ಹತ್ತಾರು ಸಂಖ್ಯೆಯಲ್ಲಿ ದಾಳಿ ಮಾಡಿ ಪೈಲೆಟ್ ಅನ್ನು ತಬ್ಬಿಬ್ಬುಗೊಳಿಸಿದವು. ಆತಂಕ ಗೊಂಡ ಪೈಲೆಟ್ ವಿಮಾನವನ್ನು ಆಕಡೆ, ಈಕಡೆ ಓಡಿಸತೊಡಗಿದ.
ಹಸಿವು, ಬಡತನ ಅನ್ನೋದು ಯಾರಿಂದ ಎಂಥ ಕೆಲಸ ಬೇಕಾದರೂ ಮಾಡಿಸುತ್ತೆ. ಕೀನ್ಯಾ ದೇಶಲ್ಲಿ ಬಡತನದಿಂದಾಗಿ ಕೆಲವರು ತಂತಮ್ಮ ಪತ್ನಿಯರನ್ನೇ ಬಾಡಿಗೆಗೆ ನೀಡುವಂಥ ದುಃಸ್ಥಿತಿ ಅಲ್ಲಿದೆ. ಕೀನ್ಯಾದಲ್ಲಿ ಬಡತನದ ಪ್ರಮಾಣ ಎಷ್ಟಿದೆಯೆಂದರೆ ನಮ್ಮಲ್ಲಿ ಗಂಡ ಹಾಗೂ ಹೆಂಡತಿ ಕೆಲಸಕ್ಕೆಂದು ಆಫೀಸಿಗೆ ಹೋದಂತೆ ಅಲ್ಲಿ ಪ್ರವಾಸಿಗರಿಗೆ ಮೈಮಾರಿಕೊಳ್ಳಲು ಹೋಗುತ್ತಾರೆ. ಶ್ರೀಮಂತ ವಿದೇಶಿ ಪ್ರವಾಸಿಗರಿಂದ ಸಾಕಷ್ಟು ಹಣ ಪಡೆದು ಹೊಟ್ಟೆ ಬಟ್ಟೆ ಕಟ್ಟಿಕೊಳ್ಳುತ್ತಾರೆ.ದುಡಿದು ಗಳಿಸುವ ಹಣ ಊಟಕ್ಕೂ ಸಾಲುತ್ತಿಲ್ಲವಾದಾಗ ಗಂಡನೇ ಪತ್ನಿಯನ್ನು ಈ ದಂಧೆಗೆ ಕಳುಹಿಸುವುದು ಅಲ್ಲಿ ಕಾಮನ್. ಹಾಗೆಯೇ ಪತ್ನಿಗೂ ಬೇರೆ…