ಉಪಯುಕ್ತ ಮಾಹಿತಿ

ಕಾಲಿನ ಬೆರಳುಗಳು ನೋಡಿ ವ್ಯಕ್ತಿತ್ವ ತಿಳಿದುಕೊಳ್ಳುವುದು ಹೇಗೆ ಎಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

2099

ನಮ್ಮ ದೇಹದ ಆಕಾರವನ್ನು ನೋಡಿ ಒಬ್ಬರ ವ್ಯಕ್ತಿತ್ವವನ್ನು ಅಳೆಯಬಹುದು. ಯಾರೇ ಆಗಲಿ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಎಂತಹ ವ್ಯಕ್ತಿ ಎಂಬುದನ್ನು ಹಾಗೆಯೇ ತಿಳಿಯಬಹುದು. ಅದೇ ರೀತಿ ಪಾದವನ್ನು ನೋಡಿ ವ್ಯಕ್ತಿತ್ವವನ್ನು ತಿಳಿಯುವ ಪದ್ಧತಿ ಭಾರತ ಮತ್ತು ಚೀನಾದಲ್ಲಿ ಬಹಳ ವರ್ಷಗಳಿಂದ ಇದೆ. ನಮ್ಮ ಪಾದಗಳು ನಮ್ಮ ದೇಹ ಮತ್ತು ವ್ಯಕ್ತಿತ್ವಕ್ಕೆ ಕನ್ನಡಿ ಇದ್ದ ಹಾಗೆ ಎಂದು ನಂಬಲಾಗಿದೆ. ಕಾಲಿಗೆ ಏನೇ ತೊಂದರೆ ಆದರೂ ಅದು ದೇಹದಲ್ಲಿ ಏನೋ ಆಗಿದೆ ಎಂಬುದಕ್ಕೆ ಸೂಚನೆ. ಪಾದದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ನೀವು ಖಂಡಿತ ಬೆನ್ನುನೋವಿನಿಂದ ನರಳುತ್ತಿದ್ದೀರಿ ಎಂದರ್ಥ. ಇದೇ ರೀತಿ ನಮ್ಮ ಮನಸ್ಸಿನ ಸ್ಥಿತಿಯನ್ನೂ , ವ್ಯಕ್ತಿತ್ವವನ್ನೂ ಪಾದ ನೋಡಿ ತಿಳಿದುಕೊಳ್ಳಬಹುದು

ಹೆಬ್ಬೆರಳು:-


ಉಳಿದ ಬೆರಳುಗಳಿಗಿಂತ ಹೆಬ್ಬರಳು ಉದ್ದವಾಗಿದ್ದರೆ ಇವರು ತುಂಬಾ ಸ್ಮಾರ್ಟ್, ಬುದ್ಧಿವಂತರು ಹಾಗೂ ಸೃಜನಶೀಲ ವ್ಯಕ್ತಿತ್ವ ವುಳ್ಳವರಾಗಿರುತ್ತಾರೆ. ಯಾವುದೇ ಸಮಸ್ಯೆ ಬರಲಿ ಹಾಗೆಯೇ ಪರಿಹರಿಸಿಕೊಳ್ಳುತ್ತಾರೆ. ಒಂದು ವೇಳೆ ಇದು ಉಳಿದ ಬೆರಳುಗಳಿಗಿಂತ ಚಿಕ್ಕದಾಗಿದ್ದರೆ ಇವರು ಮಲ್ಟಿಟಾಸ್ಕಿಂಗ್ ವ್ಯಕ್ತಿತ್ವವುಳ್ಳವರು. ಬೇರೆಯವರನ್ನು ಪ್ರಭಾವಿಸುವ ಗುಣವುಳ್ಳವರು.

ಎರಡನೇ ಬೆರಳು:-

ಎರಡನೇ ಬೆರಳು ಉದ್ದವಾಗಿದ್ದರೆ ಇವರಲ್ಲಿ ನಾಯಕತ್ವ ಗುಣಗಳಿರುತ್ತವೆ. ಇವರಲ್ಲಿ ಬಾಸಿಸಂ ಜಾಸ್ತಿ. ಒಂದು ವೇಳೆ ಉದ್ದವಾಗಿ ಇಲ್ಲದಿದ್ದರೆ ಸಾಮರಸ್ಯದ ಜೀವನ ನಡೆಸುತ್ತಾರೆ. ಹೊಂದಿಕೊಂಡು ಹೋಗುತ್ತಾರೆ.

ಮೂರನೇ ಬೆರಳು:-
ಈ ಬೆರಳು ಉದ್ದವಾಗಿದ್ದರೆ ಇವರು ಕೆಲಸದಲ್ಲಿ ನಾವೀನ್ಯತೆ, ಸಂಪನ್ಮೂಲ ವ್ಯಕ್ತಿಯಾಗಿರುತ್ತಾರೆ. ತಮ್ಮ ಸಾಮರ್ಥ್ಯ ಮತ್ತು ದೃಢಸಂಕಲ್ಪದಿಂದ ಗುರಿ ತಲುಪುತ್ತಾರೆ.

ಆದರೆ ಇವರು ಕುಟುಂಬ ಮತ್ತು ಮನರಂಜನೆಗೆ ಅಷ್ಟಾಗಿ ಪ್ರಾಮುಖ್ಯತೆ ನೀಡಲ್ಲ. ಒಂದು ವೇಳೆ ಇದು ಕಿರಿದಾಗಿದ್ದರೆ ಜೀವನವನ್ನು ಎಂಜಾಯ್ ಮಾಡುತ್ತಾರೆ, ಕುಟುಂಬದ ಕಡೆಗೂ ಗಮನಹರಿಸುವವರಾಗಿತ್ತಾರೆ.

ನಾಲ್ಕನೇ ಬೆರಳು:-
ಈ ಬೆರಳು ಉದ್ದವಾಗಿದ್ದರೆ ಇವರ ಮೊದಲ ಆದ್ಯತೆ ಕುಟುಂಬ. ಈ ಬೆರಳು ತುಂಬಾ ಬಗ್ಗಿದ್ದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ಸುಖವಾಗಿ ಇರಲ್ಲ.

ಆದರೆ ಇವರು ಏನನ್ನೇ ಆಗಲಿ ಗಮನವಿಟ್ಟು ಕೇಳುತ್ತಾರೆ. ಒಂದು ವೇಳೆ ಈ ಬೆರಳು ಕಿರಿದಾಗಿದ್ದರೆ ಇವರು ಜೀವನದಲ್ಲಿ ಕುಟುಂಬ ಹೊರತಾಗಿ ಬೇರೆ ಏನೋ ಒತ್ತಡವನ್ನು ಎದುರಿಸುತ್ತಿರುತ್ತಾರೆ.

ಕಿರುಬೆರಳು:-
ಈ ಬೆರಳು ಚಿಕ್ಕದಾಗಿದ್ದರೆ ಇವರದು ಹುಡುಗಾಟಿಕೆ ವ್ಯಕ್ತಿತ್ವ. ಜವಾಬ್ದಾರಿಗಳಿಂದ ತುಂಬಾ ದೂರ ಇರುತ್ತಾರೆ. ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವವರು. ಈ ಕಿರುಬೆರಳನ್ನು ನಾಲ್ಕನೆ ಬೆರಳಿನಿಂದ ಅಂತರ ಕಾಪಾಡಿದರೆ ಸಾಕಷ್ಟು ಲಾಭಗಳಿವೆ. ಇದರಿಂದ ಹುಡುಗಾಟಿಕೆ ಎಲ್ಲವೂ ಹೋಗುತ್ತವೆ ಎನ್ನುತ್ತಾರೆ ರಿಫ್ಲೆಕ್ಸಾಲಜಿಸ್ಟ್‌ರು.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಧ್ಯಾನ ಊಟದ ನಂತರ ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ಶಾಲಾ ಮಕ್ಕಳು….!

    ಮಧ್ಯ ಪ್ರದೇಶದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವುದು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಕ್ಕಳು ಚರಂಡಿ ನೀರಿನಲ್ಲಿ ತಮ್ಮ ತಟ್ಟೆಗಳನ್ನು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ತಲೆ ತಗ್ಗಿಸುವಂತಹ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮಾಕ್ರೋನಿಯಾ ಪ್ರದೇಶದಲ್ಲಿ ನಡೆದಿದೆ. ಮಕ್ಕಳಿಗೆ ಬಿಸಿಯೂಟವನ್ನು ಪೂರೈಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳೇ ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಎಲ್ಲಾ ನೈರ್ಮಲ್ಯ ಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು….

  • ಆರೋಗ್ಯ

    ನೆಲ್ಲಿಕಾಯಿಯಲ್ಲಿರುವ ಔಷದಿ ಗುಣಗಳ ಬಗ್ಗೆ ..! ತಿಳಿಯಲು ಈ ಲೇಖನ ಓದಿ…

    ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ. ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ. ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ…

  • ಸುದ್ದಿ

    ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಯ ಪ್ರಪೋಸ್. ಪ್ರೇಮ ಕುರುಡೋ? ಪ್ರೇಮಿ ಕುರುಡೋ? ದೇವರೇ ಬಲ್ಲ..

    ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

    ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮದೇ ಆದ ಭಾವನಾಲೋಕದಲ್ಲಿರುವ ನಿಮಗೆ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಪರಾಕ್ರಮದ ಕೆಲಸ ಅಥವಾ ಸಂವಹನ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸಬೇಕಾಗುವುದು..ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ…

  • ಸುದ್ದಿ

    ಬಿಜೆಪಿಯಿಂದ ‘ಆಪರೇಷನ್ ಆಷಾಢ’ ಸ್ಟಾರ್ಟ್..! ರಾಜೀನಾಮೆಗೆ ತಯಾರಾದ 8 ರಿಂದ 13 ಮಂದಿ ಶಾಸಕರು..!

    ಶಾಸಕ ಆನಂದ್‍ಸಿಂಗ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್‍ನಲ್ಲಿ ಅಸಮಾಧಾನಗೊಂಡಿರುವ ಇನ್ನಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರದೊಳಗೆ 8ರಿಂದ 13 ಮಂದಿ ಶಾಸಕರು ಯಾವುದೇ ಕ್ಷಣದಲ್ಲಾದರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಆಪರೇಷನ್ ಕಮಲ ಆಷಾಢ ಪರ್ವ ಆರಂಭವಾಗಿದೆ. ಶಾಸಕರಾದ ಪ್ರತಾಪ್‍ಗೌಡ ಪಾಟೀಲ್(ಮಸ್ಕಿ), ಬಸವರಾಜ್ ದದ್ದಲ್ (ರಾಯಚೂರು ಗ್ರಾಮೀಣ), ಬಿ.ಸಿ.ಪಾಟೀಲ್ (ಹಿರೇಕೆರೂರು), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್‍ಕುಮಟಳ್ಳಿ (ಅಥಣಿ), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ), ಜೆ.ಗಣೇಶ್ (ಕಂಪ್ಲಿ),…

  • ಉಪಯುಕ್ತ ಮಾಹಿತಿ, ಸೌಂದರ್ಯ

    ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಲೋಳೆಸರ, ಇದು ಅಲೋವೇರ ಎಂದು ಕರೆಯುವ ಈ ಗಿಡದ ಮೂಲ ಸ್ಥಳ ಆಫ಼್ರಿಕಾ ಖಂಡ. ಅಲೋ ವೆರಾ ಎಂಬುದು ಅನ್ನಿಯ ಕುಲದ ಸಸ್ಯ ಜಾತಿಯಾಗಿದೆ.ಇದು ಪ್ರಪಂಚದಾದ್ಯಂತ ಉಷ್ಣವಲಯದ ಹವಾಮಾನಗಳಲ್ಲಿ ಕಾಡು ಬೆಳೆಯುತ್ತದೆ